ಇಂದಿನ ದಿನಮಾನಗಳಲ್ಲಿ ಯಾರಿಗೆ ಸ್ಮಾರ್ಟ್ ಫೋನ್ (smart phones) ಅವಶ್ಯಕ ಇಲ್ಲಾ ಹೇಳಿ, ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸ್ಮಾರ್ಟ್ ಫೋನ್ ಬಳಕೆ ಸಾಮಾನ್ಯವಾಗಿ ಇರುವುದು ನಮಗೆಲ್ಲ ತಿಳಿದೇ ಇದೆ. ಮತ್ತು ಅಷ್ಟೇ ಹೊಸ ಹೊಸ ಸ್ಮಾರ್ಟ್ ಫೋನ್ ಗಳು ಹೊಸ ಹೊಸ ಫೀಚರ್ ಗಳನ್ನು ಹೊಂದುವ ಮೂಲಕ ಮಾರುಕಟ್ಟೆಯಲ್ಲಿ ಬಿಡುಗಡೆ ಕೂಡಾ ಆಗುತ್ತಿವೆ. ಜನರನ್ನು ಕೂಡಾ ತಮ್ಮತ್ತಾ ಸೇಳುದುಕೊಳ್ಳುತ್ತಿದೆ ಈ ಸ್ಮಾರ್ಟ್ ಫೋನ್ ಜಗತ್ತು ಎಂದೇ ಹೇಳಬಹುದು. ಇದೀಗ ಮಾರುಕಟ್ಟೆಯಲ್ಲಿ ಬಜೆಟ್ ಸ್ನೇಹಿ ದರದಲ್ಲಿ ಸ್ಮಾರ್ಟ್ ಫೋನ್ ಖರೀದಿ ಮಾಡುವವರಿಗೆ ಒಂದು ಹೊಸ ಸುದ್ದಿ ಬಂದಿದೆ. ಹೌದು ಅದೇನೆಂದರೆ ಚೀನಾ ಮೂಲದ ಹಾನರ್ ಕಂಪನಿಯು ಹೊಸ ಹಾನರ್ ಸರಣಿಯ ಹಾನರ್ X8B (Honor X8B) ಸ್ಮಾರ್ಟ್‌ಫೋನ್ ಅನ್ನು ಸದ್ಯ ಸೌದಿ ಅರೇಬಿಯಾದಲ್ಲಿ ಬಿಡುಗಡೆ ಮಾಡಿದೆ. ಮತ್ತು ಕೇವಲ 20,000ರೂ. ಗಳು ಎಂದು ಅಂದಾಜಿಸಲಾಗಿದೆ. ಬನ್ನಿ ಹಾಗಾದರೆ ಈ ಸ್ಮಾರ್ಟ್ ಫೋನ್ ಸಂಪೂರ್ಣ ಫೀಚರ್ ಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹಾನರ್ X8B (Honor X8B) ಸ್ಮಾರ್ಟ್‌ಫೋನ್ ನ ವೈಶಿಷ್ಟ್ಯಗಳು :
ಡಿಸ್ಪ್ಲೇ (Display):
ಮೊದಲನೆಯದಾಗಿ, ಹಾನರ್ X8B ಸ್ಮಾರ್ಟ್‌ಫೋನ್ 6.7-ಇಂಚಿನ ಪೂರ್ಣ HD+ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ 90 Hz ನ ರಿಫ್ರೆಶ್ ದರದಿಂದ (refresh rate) ಕೂಡಿದೆ. ಸ್ನಾಪ್‌ಡ್ರಾಗನ್ 680 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಈ ಫೋನ್ ಆಂಡ್ರಾಯ್ಡ್ 14(Android 14OS) ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ.
ಕ್ಯಾಮೆರಾ (Camera):
ಈ ಹಾನರ್ X8B ಸ್ಮಾರ್ಟ್ ಫೋನ್ ಕ್ಯಾಮೆರಾದ ಬಗ್ಗೆ ಮಾಹಿತಿಯನ್ನು ತಿಳಿಯುವುದಾದರೆ, ಈ ಸ್ಮಾರ್ಟ್‌ಫೋನ್ 108mp ಟ್ರಿಪಲ್ ಕ್ಯಾಮೆರಾ ಸೆಟಪ್(Triple camera setup) ಅನ್ನು ಹೊಂದಿದೆ. ಇದು ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗದ ಒಂದೇ 50mp ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಬ್ಯಾಟರಿ (Battery):
ಇನ್ನು ಬ್ಯಾಟರಿ ಸಾಮರ್ಥ್ಯವನ್ನು ನೋಡುವುದಾದರೆ,4500 mAh ಬ್ಯಾಟರಿಯನ್ನು ಹೊಂದಿದೆ. 33 watt ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಮ್ಯಾಜಿಕ್ ಕ್ಯಾಪ್ಸೂಲ್ಸ್ ನೋಟಿಫಿಕೇಶನ್(Magic capulus notification) ಫೀಚರ್ ಈ ಸ್ಮಾರ್ಟ್‌ಫೋನ್‌ನ ವಿಶೇಷತೆ ಎಂದು ಹೇಳಬಹುದು.
ಸ್ಟೋರೇಜ್ (Storage):
ಈ ಹಾನರ್ X8B ಸ್ಮಾರ್ಟ್ ಫೋನ್ ಸ್ಟೋರೇಜಗೆ ಸಂಬಂಧಿಸಿದಂತೆ, ಮೂರು ರೂಪಾಂತರಗಳಲ್ಲಿ ಬಿಡುಗಡೆ ಕಂಡಿದೆ. 8GB RAM, 128GB ಸ್ಟೋರೇಜ್, 8GB RAM, 256GB ಸ್ಟೋರೇಜ್, 8GB RAM, 512GB ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ ಎಂದು ತಿಳಿದು ಬಂದಿದೆ.
ಫೀಚರ್ (Features):
ಇನ್ನೂ ಹೆಚ್ಚಿನ ಫೀಚರ್ ಗಳ ಬಗ್ಗೆ ಮಾಹಿತಿಯನ್ನು ತಿಳಿಯುವುದಾದರೆ, ಈ ಸ್ಮಾರ್ಟ್ ಫೋನ್ ಸೈಡ್ ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ (side facing fingureprint scanner) ಕೂಡ ಹೊಂದಿದೆ.ಇದು ಡ್ಯುಯಲ್ ಸಿಮ್(Dual sim), 4G ವೋಲ್ಟ್, ವೈ-ಫೈ (Wifi), ಬ್ಲೂಟೂತ್(Bluetooth), GPS, USB ಟೈಪ್ C ಪೋರ್ಟ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
ಬೆಲೆ (Price):
ಈ ಹಾನರ್ X8B (Honor X8B )ಸ್ಮಾರ್ಟ್ ಫೋನ್ ಬೆಲೆಯ ಬಗ್ಗೆ ಮಾಹಿತಿಯನ್ನು ತಿಳಿಯುವುದಾದರೆ, ಭಾರತದಲ್ಲಿ ಈ ಫೋನ್‌ನ ಮೂಲ ರೂಪಾಂತರದ ಬೆಲೆ ರೂ. 20 ಸಾವಿರ ಎಂದು ಅಂದಾಜಿಸಲಾಗಿದೆ. ಹಾನರ್ X8B ಸ್ಮಾರ್ಟ್‌ಫೋನ್ ,
ಮಿಡ್‌ನೈಟ್ ಬ್ಲಾಕ್,
ಟೈಟಾನಿಯಂ ಸಿಲ್ವರ್ ಮತ್ತು
ಗ್ಲಾಮರಸ್ ಗ್ರೀನ್ ಬಣ್ಣಗಳಲ್ಲಿ ಲಭ್ಯವಿದೆ.
ಈ ಫೋನ್ ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬುದರ ಕುರಿತು ಕಂಪನಿಯು ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ ಎಂದು ಎನ್ನುವುದು ಈ ಸ್ಮಾರ್ಟ್ ಫೋನ್ ಕುರಿತು ಮಾಹಿತಿ ಹೊಂದಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಸ್ಮಾರ್ಟ್‌ಫೋನ್‌ನ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.