ಇರುವ ಮೊಬೈಲ್ ನಂಬರ್ ನಲ್ಲಿಯೇ ಜಿಯೋ ಆಫರ್ (jio offer) ಗಳನ್ನು ಬಳಸಬೇಕೆ? ಹಾಗಿದಲ್ಲಿ ಜಿಯೋ ನಂಬರ್ ಗೆ ಪೋರ್ಟ್ (port) ಮಾಡಬೇಕು ಅಷ್ಟೆ.!
ಭಾರತದಲ್ಲಿಯೇ ನಂಬರ್ ಒನ್(No. 1) ಟೆಲಿಕಾಂ ಸಂಸ್ಥೆಯಾಗಿರುವ ರಿಲಯನ್ಸ್ ಜಿಯೋ ಗೆ (Reliance Jio) ದೇಶದಲ್ಲಿಯೇ ಹಲವಾರು ಮಂದಿ ಗ್ರಾಹಕರಿದ್ದಾರೆ. ಇನ್ನಿತರೆ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ ರಿಲಯನ್ಸ್ ಜಿಯೋ ಗ್ರಾಹಕರಿಗಾಗಿ ಕಡಿಮೆ ಬೆಲೆಗೆ ಡೇಟಾ ಹಾಗೂ ಅನಿಯಮಿತಿ ಕರೆ (unlimited calls) ಆಫರ್(offer) ನೀಡುತ್ತಿದೆ. ಇದರ ಜೊತೆಗೆ ಹೊಸ ಪ್ಲಾನ್ ಗಳನ್ನು (new plans) ಕೂಡ ಬಿಡುಗಡೆ ಮಾಡುತ್ತಾ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಹಾಗೂ 5ಜಿ ಕೊಡುಗೆ ನೀಡುವ ಮೂಲಕ ಗ್ರಾಹಕರ ಮನಸ್ಸನ್ನು ಗೆದ್ದಿದೆ. ಆದ್ದರಿಂದ ಹಲವು ಮಂದಿ ಜಿಯೋ ಕಡೆಗೆ ಹೋಗುವ ಮನಸ್ಸು ಮಾಡಿದ್ದಾರೆ. ಜಿಯೋ ನೀಡುವ ಆಫರ್ ಗಳ ಬಗ್ಗೆ ಇನ್ನೂ ಹಲವಾರು ಮಂದಿ ಸರಿಯಾಗಿ ತಿಳಿದುಕೊಂಡಿಲ್ಲ. ಇನ್ನು ಇದರ ಜೊತೆಯಲ್ಲಿ ಜಿಯೋ ಸಿಮ್ ಕೂಡ ಪಡೆದುಕೊಂಡಿಲ್ಲ. ಆದರೆ ಇದಕ್ಕಾಗಿ ಹೊಸ ಸಿಮ್ (SIM) ಅನ್ನು ಖರೀದಿಸುವ ಅವಶ್ಯಕತೆಯೂ ಇಲ್ಲ. ಅಂದರೆ ಈಗಿರುವ ನಂಬರನ್ನು ಉಳಿಸಿಕೊಂಡೆ ಜಿಯೋ ಆಫರ್ ಗಳನ್ನು ಪಡೆಯಬಹುದು. ಆದರೆ ಜಿಯೋ ನಂಬರ್ ಗೆ ಪೋರ್ಟ್(port) ಮಾಡಿಸಬೇಕಷ್ಟೇ. ನೀವು ಇರುವ ಜಾಗದಲ್ಲಿಯೇ ಕುಳಿತುಕೊಂಡು ನಿಮ್ಮ ಮೊಬೈಲ್ ಫೋನ್ ಗಳಿಂದ ಜಿಯೋ ನಂಬರ್ ಗೆ ಪೋರ್ಟ್ ಮಾಡಿಸಬಹುದು. ಇದಕ್ಕಾಗಿ ಯಾವುದೇ ಏಜೆಂಟ್ ಅಥವಾ ಥರ್ಡ್ ಪಾರ್ಟಿ ಅಪ್ಲಿಕೇಶನ್ (Third party application) ಅಗತ್ಯವಿಲ್ಲ. ಆದರೆ ಡಾಕ್ಯುಮೆಂಟ್ ಪರಿಶೀಲನೆಗಳು (document checking) ಅಥವಾ ಬಯೋಮೆಟ್ರಿಕ್‌ಗಳಿಗಾಗಿ (biometric) ನೀವು ಒಮ್ಮೆ ಜಿಯೋ ಸ್ಟೋರ್‌ಗೆ (jio store) ಭೇಟಿ ನೀಡಬೇಕಾಗುತ್ತದೆ. ನೀವೇನಾದರೂ ನಿಮ್ಮ ಮೊಬೈಲ್ ಸಂಖ್ಯೆಯನ್ನು ಜಿಯೋಗೆ ಪೋರ್ಟ್ ಮಾಡಲು ಬಯಸಿದರೆ ನೀವು ಇದ್ದಲ್ಲಿಯೇ ಅರ್ಜಿಗಳನ್ನು (Application) ಸಲ್ಲಿಸಬಹುದು. ಅರ್ಜಿ ಸಲ್ಲಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.
ನಮ್ಮ ಮೊಬೈಲ್ ಸಂಖ್ಯೆಯನ್ನು ಜಿಯೋ ಸಂಖ್ಯೆಗೆ ಪೋರ್ಟ್ ಮಾಡುವುದು ಹೇಗೆ ?
ಮೊದಲಿಗೆ ಈಗಾಗಲೇ ಇರುವ ನಿಮ್ಮ ಮೊಬೈಲ್ ಸಂಖ್ಯೆಯಿಂದ <PORT<space>> ಗೆ ಹೋಗಿ ನಿಮ್ಮ 10 ಅಂಕಿಯ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.
ತದನಂತರ ನೀವು 1900 ಗೆ ಮೆಸೇಜ್ ಕಳುಹಿಸಬೇಕು. ಮೆಸೇಜ್ ಕಳುಹಿಸಿದ ನಂತರ ನಿಮಗೆ ಯೂನಿವರ್ಸಲ್ ಪ್ರಾಡಕ್ಟ್ ಕೋಡ್ ಎಂಬ ಸಂದೇಶ ಬರುತ್ತದೆ, ಅದರಲ್ಲಿ UPC ಕೋಡ್ ನೀಡಲಾಗುತ್ತದೆ. ಪ್ಲೇ ಸ್ಟೋರ್‌ಗೆ (play store) ಭೇಟಿನೀಡಿ, MyJio ಅಪ್ಲಿಕೇಶನ್ ಡೌನ್‌ಲೋಡ್ ಮಾಡಬೇಕು.
MyJio ಅಪ್ಲಿಕೇಶನ್ ಓಪನ್ ಮಾಡಿ, ಜಿಯೋ ಕೂಪನ್ ಕೋಡ್ ಅನ್ನು ರಚಿಸಬೇಕು.
ತದನಂತರ ಯುಪಿಸಿ ಕೋಡ್ ಮತ್ತು ಜಿಯೋ ಕೂಪನ್ ಕೋಡ್‌ನೊಂದಿಗೆ ರಿಲಯನ್ಸ್ ಜಿಯೋ ಸ್ಟೋರ್‌ಗೆ ಭೇಟಿನೀಡಬೇಕು. ವಿಳಾಸ ಪುರಾವೆಗಾಗಿ ಆಧಾರ್ ಕಾರ್ಡ್ ಹಾಗೂ ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳನ್ನು ನೀಡಿ, eKYC ಪರಿಶೀಲನೆಯನ್ನು ಮಾಡಿಸಬೇಕು.
eKYC ಪರಿಶೀಲಿಸಿದ ನಂತರ ಜಿಯೋ ಸಂಪರ್ಕವನ್ನು ಸಕ್ರಿಯಗೊಳಿಸಲಾಗುತ್ತದೆ.
ಇದರ ನಂತರ ನಿಮ್ಮ ಮೊಬೈಲ್ ಸಂಖ್ಯೆ ಸಕ್ರಿಯಗೊಳ್ಳುತ್ತದೆ.
ವಿಶೇಷ ಸೂಚನೆ (important notice) :
ನೀವೇನಾದರೂ ಹೊಸ ಸಿಮ್(New SIM) ಪಡೆಯಬೇಕೆಂದರೆ ನೀವು ಅಂಗಡಿ ಗೆ ಹೋಗಬೇಕಾಗುತ್ತದೆ. ಏಕೆಂದರೆ ಹೊಸ ಸಿಮ್ ನ (SIM) ಪ್ರಕ್ರಿಯೆ ಭಿನ್ನವಾಗಿರುತ್ತದೆ. ಆದ್ದರಿಂದ ನೀವು ಜಿಯೋ ಸ್ಟೋರ್ ಗೆ ಹೋಗಬೇಕು. ಇದರ ಜೊತೆಗೆ ಪ್ರತಿ ಗ್ರಾಹಕನು ಕೆವೈಸಿ (KYC) ಯನ್ನು ಕಡ್ಡಾಯವಾಗಿ ಮಾಡಿಸಬೇಕು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ