ರಾಜ್ಯದಲ್ಲಿ HSRP ನಂಬರ್ ಪ್ಲೇಟ್ ನೊಂದಣಿ ಮಾಡುವ ಕುರಿತಂತೆ ಈಗಾಗಲೇ ಸರ್ಕಾರ ಮೂರು ಬಾರಿ ದಿನಾಂಕವನ್ನು ವಿಸ್ತರಣೆ ಮಾಡಿದ್ದು ಈಗ ಕೊನೆಯದಾಗಿ ಮೇ 31ರ ಒಳಗೆ ಪ್ರತಿಯೊಬ್ಬರು ತಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ಗಳನ್ನು ಅಳವಡಿಸಲು ಸರ್ಕಾರ ಸೂಚನೆ ನೀಡಿದೆ. ತಪ್ಪಿದಲ್ಲಿ ಭಾರಿ ದಂಡ ಬೀಳುವ ಸಾಧ್ಯತೆ ಇದ್ದು, ವಾಹನ ಇರುವ ಪ್ರತಿಯೊಬ್ಬರು ತಪ್ಪದೆ ಈ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
HSRP ನಂಬರ್ ಪ್ಲೇಟ್ ಕಡ್ಡಾಯ:
ವಾಹನಗಳ ಸುರಕ್ಷತೆಗಾಗಿ ಮೋಟಾರು ವಾಹನ ಕಾಯ್ದೆ 1989 ಸೆಕ್ಷನ್ 90 ಹಾಗೂ 51ರ ಅನ್ವಯ ಎಲ್ಲಾ ವಾಹನಗಳಿಗೆ HSRP ನೋಂದಣಿ ಕಡ್ಡಾಯವಾಗಿರುತ್ತದೆ. ರಾಜ್ಯದಲ್ಲಿ ಈಗಾಗಲೇ ಸುಮಾರು 52 ಲಕ್ಷ ವಾಹನಗಳು ನೋಂದಣಿ ಮಾಡಿಕೊಂಡಿದ್ದು ಇನ್ನು ಸರಿಸುಮಾರು 1.48 ಕೋಟಿ ವಾಹನಗಳು ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕಿದೆ. ಹಾಗೂ 2019ರ ಏಪ್ರಿಲ್ 1 ರ ಮೊದಲು ವಾಹನ ಖರೀದಿ ಮಾಡಿದ ಪ್ರತಿಯೊಬ್ಬರೂ ಕಡ್ಡಾಯವಾಗಿ HSRP ನಂಬರ್ ಪ್ಲೇಟ್ಗಳನ್ನು ಅಳವಡಿಸಿಕೊಳ್ಳಬೇಕು.
ಮೇ 31ರ ನಂತರ ದಂಡ ಗ್ಯಾರಂಟಿ
ಸರ್ಕಾರ ಈಗಾಗಲೇ ಸತತವಾಗಿ ಮೂರು ಬಾರಿ HSRP ನೋಂದಣಿಗೆ ಅವಕಾಶ ನೀಡಿದ್ದು, ಬರುವ ಮೇ 31ರ ಒಳಗಾಗಿ ಎಲ್ಲಾ ಬಾಕಿ ಇರುವ ಹೆಚ್.ಎಸ್.ಆರ್.ಪಿ ನೊಂದಣಿಗೆ ಕೊನೆಯ ಅವಕಾಶವಿದ್ದು ಒಂದು ವೇಳೆ ತಪ್ಪಿದಲ್ಲಿ ಜೂನ್ ಒಂದರ ನಂತರ HSRP ನೋಂದಣಿ ಆಗದ ವಾಹನಗಳಿಗೆ ಬರೋಬ್ಬರಿ 500 ರಿಂದ 1000 ರೂಪಾಯಿ ದಂಡ ವಿಧಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಈ ನಂಬರ್ ಪ್ಲೇಟ್ ಅಳವಡಿಕೆಯ ಮುಖ್ಯ ಉದ್ದೇಶ :
ಈ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡುವುದರಿಂದ ಕಳ್ಳರು ಅಥವಾ ಇತರೆ ಕಾನೂನು ಬಾಹಿರ ಚಟುವಟಿಗೆ ನಂಬರ್ ಪ್ಲೇಟ್ ಬದಲಾಯಿಸುವವರನ್ನು ಗುರುತಿಸಲು ಪೋಲಿಸರಿಗೆ ಸಹಾಯವಾಗುತ್ತದೆ. ನೀವು ಹಾಕುವ HSRP ನಂಬರ್ ಪ್ಲೇಟ್‌ನಲ್ಲಿ ನಿಮ್ಮ ವಾಹನದ (ಕಾರು/ಬೈಕ್ ಸಂಪೂರ್ಣ ಮಾಹಿತಿ) ಎಲ್ಲ ಮಾಹಿತಿ ಅಡಕವಾಗಿರುತ್ತದೆ. ಈ ವಾಹನದ ಮಾಹಿತಿಗಳು ಸರ್ಕಾರದ ಕಚೇರಿಯಲ್ಲಿ (ಡೆಟಾಬೇಸ್) ಸಂಗ್ರಹವಾಗಿರುತ್ತದೆ. ನಿಮ್ಮ ವಾಹನ ಕಳ್ಳತನವಾದರೆ ಇದರ ಸಹಾಯದಿಂದ ಬೇಗನೇ ಹುಡುಕಲು ಅನುಕೂಲವಾಗುತ್ತದೆ.
ಕಳ್ಳತನದ ಬೈಕ್ ಅಪರಾಧ ಕೃತ್ಯಕ್ಕೆ ಬಳಕೆ ಆಗುವುದನ್ನು ತಡೆಯಬಹುದು. ವಾಹನಕ್ಕೆ ಹಾಕಿರುವ ನಂಬರ್ ಪ್ಲೇಟ್ ಅನಧಿಕೃತ ಬದಲಾವಣೆ ಅಸಾಧ್ಯವಾಗಿದೆ.
ಈ ನಂಬರ್ ಪ್ಲೇಟ್‌ನಲ್ಲಿ ಮಾಹಿತಿ ತಿದ್ದಲು ಆಗುವುದಿಲ್ಲ. ಈ ಪ್ಲೇಟ್‌ನ ಮರುಬಳಕೆಯು ಸಾಧ್ಯವಿಲ್ಲ.
ಏನಿದು HSRP ನಂಬರ್ ಪ್ಲೇಟ್ ?
HSRP ನಂಬರ್ ಪ್ಲೇಟ್ ಎಂದರೆ, ಹೈ ಸೆಕ್ಯುರಿಟಿ ರಿಜಿಸ್ಟರ್ ಪ್ಲೇಟ್ ಟ್ಯಾಮ್ ಪರ್ ಪ್ರೊಫ್ ಎಂಬುದಾಗಿದೆ. ಮುಖ್ಯವಾಗಿ ಈ ನಂಬರ್ ಪ್ಲೇಟ್ ನಲ್ಲಿ ಮತ್ತೆ ಬಳಕೆ ಮಾಡಲಾಗದ ಲಾಕ್ ಗಳನ್ನು ನೀಡಲಾಗಿದೆ. ಒಂದು ಬಾರಿ ಈ ನಂಬರ್ ಪ್ಲೇಟ್ ಅನ್ನು ಹಾಕಿದರೆನಮ್ಮ ವಾಹನಕ್ಕೆ ಅಳವಡಿಸಿದರೆ ಮತ್ತೆ ಅದನ್ನು ಸುಲಭವಾಗಿ ತೆಗೆದುಹಾಕಲು ಆಗುವುದಿಲ್ಲ. ಹಾಗೇನಾದರೂ ಈ ನಂಬರ್ ಪ್ಲೇಟ್ ಅನ್ನು ಬದಲಾಯಿಸಲು ಪ್ರಯತ್ನಿಸಿದರೆ ಈ ನಂಬರ್ ಪ್ಲೇಟ್ ಹಾಳಾಗುತ್ತದೆ. ಮತ್ತೆ ಅದನ್ನು ಮರು ಬಳಕೆ ಮಾಡಲು ಸಾಧ್ಯವಿಲ್ಲ.
HSRP ನಂಬರ್ ಪ್ಲೇಟ್ ಗಳಿಗೆ ನೀಡಿದ ಶುಲ್ಕಗಳು ಹೀಗಿವೆ :
ಕೇಂದ್ರ ಸರ್ಕಾರವು ಇನ್ನೂ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಬೆಲೆಯನ್ನು ನಿಗದಿಪಡಿಸಿಲ್ಲ. ಆದ್ದರಿಂದ ವಿವಿಧ ರಾಜ್ಯಗಳಲ್ಲಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಬೆಲೆ ಬೇರೆ ಬೇರೆ ರೀತಿಯಲ್ಲಿ ಇರುತ್ತವೆ. ಇನ್ನು ದ್ವಿಚಕ್ರ ವಾಹನಗಳಿಗೆ ಹೆಚ್ಚಿನ ಭದ್ರತಾ ನಂಬರ್ ಪ್ಲೇಟ್ ಶುಲ್ಕಗಳು ಸುಮಾರು ರೂ. 400, ಇದು ಅವರು ಸೇರಿರುವ ವರ್ಗವನ್ನು ಆಧರಿಸಿ ನಾಲ್ಕು-ಚಕ್ರ ವಾಹನಗಳಿಗೆ ರೂ.1,100 ವರೆಗೆ ಮೀರಬಹುದು. ಕಡ್ಡಾಯವಾಗಿರುವ ಬಣ್ಣ-ಕೋಡೆಡ್ ಸ್ಟಿಕ್ಕರ್ ಅನ್ನು ಪಡೆದುಕೊಳ್ಳಲು ನಿಮಗೆ ರೂ 100 ವೆಚ್ಚವಾಗುತ್ತದೆ.
ಸರ್ಕಾರ ಹೊರಡಿಸಿದ ನಿಯಮ ಪಾಲಿಸದಿದ್ದರೆ ದಂಡ ( Penalty ) ವಿಧಿಸಲಾಗುತ್ತದೆ :
ಸರ್ಕಾರ ನೀಡಿದ ಮಾಹಿತಿಯ ಪ್ರಕಾರ , ಮೂರು ವರ್ಷಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಗಳನ್ನು ಹೊಂದಿರದ ವಾಹನಗಳನ್ನು ಗುರುತಿಸಿ ಒಟ್ಟು 71,796 ಪ್ರಕರಣಗಳನ್ನು ದಾಖಲಿಸಲಾಗಿದೆ.
HSRP ನಂಬರ್ ಪ್ಲೇಟ್ ಅಳವಡಿಕೆಗೆ ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗಿನಂತಿದೆ :
ವಾಹನ ಸವಾರರು ಹೊಸ ನಂಬರ್ ಪ್ಲೇಟ್‌ಗಾಗಿ www.siam.in ಭೇಟಿ ನೀಡಿ ನಂತರ https://bookmyhsrp.com/ ಗೆ ಭೇಟಿ ನೀಡಬೇಕು.
– ಡಿಸ್ಪ್ಲೇ ಮೇಲೆ ಕೇಳಲಾಗುವ ಎಚ್‌ಎಸ್‌ಆರ್‌ಪಿ ಬುಕ್ ಮೇಲೆ ಕ್ಲೀಕ್ ಮಾಡಬೇಕು.
– ನಂತರ ತೆರೆದುಕೊಳ್ಳುವ ಬುಕ್ಕಿಂಗ್ ಡಿಟೇಲ್ಸ್ ಕಾಲಂನಲ್ಲಿ ವಾಹನ ತಯಾರಿಕ ಕಂಪನಿ ಆಯ್ಕೆ ಮಾಡಿಕೊಳ್ಳಬೇಕು.
– ಕರ್ನಾಟಕ ರಾಜ್ಯ ಆಯ್ಕೆ ಮಾಡಿಕೊಂಡು ನಿಮ್ಮ ವಾಹನದ ನಂಬರ್, ಚೆಸ್ಸಿ ಮತ್ತು ಇಂಜಿನ್ ನಂಬರ್ ಕ್ಯಾಪ್ಚಾ ನಮೂದಿಸಿ.
– ವಿವರ ಭರ್ತಿ ಆದ ನಂತರ ನಂಬರ್ ಪ್ಲೇಟ್‌ಗಾಗಿ ಹತ್ತಿರ ಡೀಲರ್ ಸ್ಥಳ ಆಯ್ಕೆ ಮಾಡಿಕೊಳ್ಳಿ.
– ನಂತರ ಕೇಳಲಾಗುವ ನಿಗದಿತ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕು.
– ನಿಮ್ಮ ಮೊಬೈಲ್‌ಗೆ ಬರುವ ಸಂದೇಶದ ಆಧಾರದಲ್ಲಿ ನೀವು ಸಮಯಕ್ಕೆ ಸರಿಯಾಗಿ ಹತ್ತಿರದ ಡೀಲರ್ ಸ್ಥಳಕ್ಕೆ ಭೇಟಿ ನೀಡಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಿ.
ಹೊಸ ನಂಬರ್ ಪ್ಲೇಟ್ ಅಳಡಿಕೆಗೆ ನೋಂದಾಯಿಸಿಕೊಂಡ ಮೇಲೆ ಅದನ್ನು ಟ್ರ್ಯಾಕ್ ಸಹ ಮಾಡಬಹುದು.
ಸಾರ್ವಜನಿಕರು ಆನ್ ಲೈನ್(online) ಮೂಲಕ ಹೆಚ್.ಎಸ್.ಆರ್.ಪಿ. ಪಡೆಯಲು ತೊಂದರೆಗಳಾದಲ್ಲಿ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದು. 9449863429,9449863426
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಏಪ್ರಿಲ್ ತಿಂಗಳ 680/- ರೂ. ಅಕ್ಕಿ ಹಣ ಈಗ ಜಮಾ. ಅಕೌಂಟ್ ಹೀಗೆ ಚೆಕ್ ಮಾಡಿಕೊಳ್ಳಿ..!
- ಹೊಸ ಪಾನ್ ಕಾರ್ಡ್ ಕೇವಲ ಹತ್ತು ನಿಮಿಷದಲ್ಲಿ ಮೊಬೈಲ್ ನಲ್ಲೆ ಪಡೆಯಿರಿ, ಹೀಗೆ ಅರ್ಜಿ ಸಲ್ಲಿಸಿ
- ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಗೆ ಅರ್ಜಿ ಸಲ್ಲಿಸಿ, ಉಚಿತ ವಿದ್ಯುತ್ ಪಡೆಯಿರಿ
- ರಾಜ್ಯದಲ್ಲಿ ಏ.17 ರವರೆಗೆ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
- 2024ರ ಹೊಸ ಮತದಾರರ ಪಟ್ಟಿ ಬಿಡುಗಡೆ, ನಿಮ್ಮ ಹೆಸರು ಸೇರ್ಪಡೆಗೆ ಎರಡೇ ದಿನ ಬಾಕಿ.
- ಪಿಯುಸಿ ನಂತರ ಈ ಶಾರ್ಟ್ ಟರ್ಮ್ ಕೋರ್ಸ್ ಮಾಡಿ ಹೆಚ್ಚು ವೇತನ ಪಡೆಯಿರಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ..