“ಕೋಟ್ಯಂತರ ತಾಯಂದಿರ ಆಶೀರ್ವಾದವೇ ನನ್ನ ಶ್ರೀಮಂತಿಕೆ” – ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ (International women’s day) ಸಂದರ್ಭದಲ್ಲಿ ಗುಜರಾತ್‌ನ ನವಸಾರಿಯಲ್ಲಿ ಆಯೋಜಿಸಿದ್ದ ವಿಶೇಷ ಸಮಾರಂಭದಲ್ಲಿ ಮಹಿಳಾ ಸಬಲೀಕರಣದ ಮಹತ್ವವನ್ನು ಪುನರುಚ್ಚರಿಸಿದ್ದಾರೆ . ಅವರು ಲಕ್ಷಾಂತರ ಮಹಿಳೆಯರೊಂದಿಗೆ ಸಂವಾದ ನಡೆಸಿ, ತಮ್ಮ ರಾಜಕೀಯ ಮತ್ತು ವೈಯಕ್ತಿಕ ಜೀವನ(Politics and personal life) ದಲ್ಲಿ ಮಹಿಳೆಯರ ಪಾತ್ರವನ್ನು ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ನಾನು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ಇದಕ್ಕೆ ಕಾರಣ ಕೋಟ್ಯಂತರ ತಾಯಂದಿರು ಮತ್ತು ಸಹೋದರಿಯರ ಆಶೀರ್ವಾದ,” ಎಂದು ತಿಳಿಸಿದರು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಮಹಿಳಾ ಸಬಲೀಕರಣ ಮತ್ತು ಅಭಿವೃದ್ದಿಯ ದೃಷ್ಟಿಕೋನವು (The vision of women empowerment and development) ಭಾರತದ ಸಮಗ್ರ ಅಭಿವೃದ್ಧಿಗೆ ಪ್ರಮುಖ ಅಂಶವೆಂದು ಪರಿಗಣಿಸಿರುವ ಪ್ರಧಾನಿ ಮೋದಿ, ಮಹಿಳೆಯರನ್ನು ಗೌರವಿಸುವುದೇ ಅಭಿವೃದ್ಧಿ ಹೊಂದಿದ ಭಾರತಕ್ಕೆ ಹೆಮ್ಮೆ ಎಂದು ಹೇಳಿದರು. ಮಹಿಳೆಯರು (Women’s) ತಾವು ತನ್ನ ಸ್ವಾತಂತ್ರ್ಯವನ್ನು, ಸ್ವಾಯತ್ತತೆಯನ್ನು ಹಾಗೂ ಹಕ್ಕುಗಳನ್ನು ಒತ್ತಿಹೇಳಿದಾಗ ಮಾತ್ರ ದೇಶವು ನಿಜವಾದ ಪ್ರಗತಿಯ ಹಾದಿಯಲ್ಲಿ ಸಾಗುತ್ತದೆ.
ಮುಸ್ಲಿಂ ಮಹಿಳೆಯರ ಹಕ್ಕುಗಳ ರಕ್ಷಣೆ ಮತ್ತು 370ನೇ ವಿಧಿ ರದ್ದು :
ಮುಸ್ಲಿಂ ಮಹಿಳೆಯರ ಸುರಕ್ಷತೆ ಮತ್ತು ನ್ಯಾಯಕ್ಕಾಗಿ ಕೈಗೊಂಡ ನಿರ್ಧಾರಗಳ ಬಗ್ಗೆ ಮಾತನಾಡಿದ ಮೋದಿ, ಮುಸ್ಲಿಂ ಮಹಿಳೆಯರು ತ್ರಿಪಲ್ ತಲಾಕ್ (Triple Talaq) ನಿಷೇಧಕ್ಕೆ ಬೆಂಬಲ ಸೂಚಿಸಿದರು, ಮತ್ತು 2019ರಲ್ಲಿ ಈ ಕಾಯ್ದೆ ಜಾರಿಗೆ ತಂದ ನಂತರ ಅವರ ಜೀವನದಲ್ಲಿ ಹೆಚ್ಚಿನ ಭದ್ರತೆ ಮತ್ತು ಗೌರವ ಒದಗಿದೆ ಎಂದು ಹೇಳಿದರು.
ಅದೇ ರೀತಿ, ಕಾಶ್ಮೀರದ 370ನೇ (Kashmir act 370) ವಿಧಿಯನ್ನು ರದ್ದು ಮಾಡುವುದು ಮಹಿಳೆಯರ ಹಕ್ಕುಗಳ ದೃಷ್ಟಿಯಿಂದ ಬಹಳ ಮಹತ್ವದ್ದಾಗಿತ್ತು. “370ನೇ ವಿಧಿ ಜಾರಿಯಲ್ಲಿದ್ದಾಗ, ಕಾಶ್ಮೀರದ ಮಹಿಳೆಯರು ಅನೇಕ ಹಕ್ಕುಗಳಿಂದ ವಂಚಿತರಾಗಿದ್ದರು. ಅವರು ರಾಜ್ಯದ ಹೊರಗೆ ಮದುವೆಯಾದರೆ, ಅವರಿಗೆ ಆಸ್ತಿಯ ಹಕ್ಕು ಸಿಗುತ್ತಿರಲಿಲ್ಲ. ಆದರೆ ಈಗ, ದೇಶದ ಇತರ ಮಹಿಳೆಯರಂತೆ ಸಮಾನ ಹಕ್ಕುಗಳನ್ನು ಪಡೆಯುತ್ತಿದ್ದಾರೆ” ಎಂದು ಅವರು ಹೇಳಿದರು.
ಮಹಿಳಾ ಸಬಲೀಕರಣದ ವಿವಿಧ ಹಂತಗಳು:
ಮೋದಿಯವರ ಆಡಳಿತದ ಅವಧಿಯಲ್ಲಿ ಹಲವಾರು ಮಹಿಳಾ ಕೇಂದ್ರಿತ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಉದಾಹರಣೆಗೆ, “ಇಜ್ಜತ್ ಘರ್” (ಶೌಚಾಲಯ ನಿರ್ಮಾಣ) ಯೋಜನೆಯ ಮೂಲಕ ಲಕ್ಷಾಂತರ ಮಹಿಳೆಯರಿಗೆ ಗೌರವಯುತ ಜೀವನವನ್ನು ಒದಗಿಸಲಾಗಿದೆ. ಜನಧನ ಖಾತೆಗಳ (Jandhan Khata) ಮೂಲಕ ಮಹಿಳೆಯರು ಆರ್ಥಿಕ ಸ್ವಾವಲಂಬನ ಪಡೆಯುತ್ತಿದ್ದಾರೆ. ಉಜ್ವಲಾ ಯೋಜನೆಯಡಿ ಅವರಿಗೆ ಉಚಿತ ಗ್ಯಾಸ್ ಸಂಪರ್ಕ ನೀಡಲಾಗಿದೆ, ಇದರ ಪರಿಣಾಮ ಆರೋಗ್ಯ ಮತ್ತು ಪರಿಸರದ ಮೇಲೆ ಸಕಾರಾತ್ಮಕ ಬದಲಾವಣೆ ಕಂಡುಬಂದಿದೆ” ಎಂದು ಅವರು ವಿವರಿಸಿದರು.
ಹೆರಿಗೆ ರಜೆಯ ಅವಧಿ (Maternity leave period) ಯನ್ನು 12 ವಾರಗಳಿಂದ 26 ವಾರಗಳಿಗೆ ಹೆಚ್ಚಿಸಿರುವುದರ ಪ್ರಯೋಜನವನ್ನು ಪ್ರಧಾನಿಯವರು ಪ್ರಸ್ತಾಪಿಸಿದರು. “ಈ ನಿರ್ಧಾರವು ಕೆಲಸ ಮಾಡುತ್ತಿರುವ ಮಹಿಳೆಯರ ಆರೋಗ್ಯ ಮತ್ತು ಕುಟುಂಬದ ಸಮೃದ್ಧಿಗೆ ದೊಡ್ಡ ಆಶಾಕಿರಣವಾಗಿದೆ ಎಂದು ಹೇಳಿದರು.
ಭಾರತೀಯ ಮಹಿಳೆಯರ ಸಾಧನೆ(Achievements of Indian Women) :
ಪೈಲಟ್‌ಗಳ ಸಂಖ್ಯೆಯಲ್ಲಿ ಮುಂಚೂಣಿ:
ಭಾರತದ ಮಹಿಳೆಯರು ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ. “ವಿಶ್ವದಲ್ಲೇ ಅತಿ ಹೆಚ್ಚು ಮಹಿಳಾ ಪೈಲಟ್‌ಗಳು (Women pilots) ಭಾರತದಲ್ಲಿದ್ದಾರೆ, ಇದು ನಮ್ಮ ಹೆಮ್ಮೆ” ಎಂದು ಮೋದಿ ತಿಳಿಸಿದರು. ಅವರು ರಾಜಕೀಯ, ಕ್ರೀಡೆ, ನ್ಯಾಯಾಂಗ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳನ್ನು ಪ್ರಸ್ತಾಪಿಸಿ, ಈ ಬೆಳವಣಿಗೆಯು ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಗುಜರಾತ್‌ನ ಹೊಸ ಯೋಜನೆಗಳು:
ಈ ಸಮಾರಂಭದಲ್ಲಿ “ಗುಜರಾತ್ ಸಫಲ್” (“Gujarat Safal”) ಮತ್ತು “ಗುಜರಾತ್ ಮೈತ್ರಿ” (“Gujarat Maitri”) ಎಂಬ ಎರಡು ಮಹತ್ವದ ಯೋಜನೆಗಳನ್ನು ಘೋಷಿಸಲಾಯಿತು. “ಈ ಯೋಜನೆಗಳ ಮೂಲಕ ಸರಕಾರದ ಅನೇಕ ಯೋಜನೆಗಳ ಹಣವನ್ನು ನೇರವಾಗಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ಇದರಿಂದ ಅವರ ಆರ್ಥಿಕ ಸ್ಥಿರತೆ ಮತ್ತು ನಿರ್ಧಾರಾತ್ಮಕತೆ ಹೆಚ್ಚಳವಾಗಲಿದೆ” ಎಂದಿದ್ದಾರೆ.
ಇನ್ನು, ಅವರ ಭಾಷಣದ ಕೊನೆಯಲ್ಲಿ , “ಮಹಿಳೆಯರ ಸಬಲೀಕರಣದ ಬೆಳಕಿನಲ್ಲಿ ಮಾತ್ರ ಭಾರತ ವಿಶ್ವಗುರು (India Vishwaguru) ಆಗಬಲ್ಲದು” ಎಂಬ ಸಂದೇಶವನ್ನು ಪ್ರಧಾನಿಯವರು ನೀಡಿದರು. ದೇಶದ ಪ್ರತಿಯೊಬ್ಬ ನಾಗರಿಕನೂ ಮಹಿಳಾ ಸಬಲೀಕರಣದ ಹಾದಿಯಲ್ಲಿ ಸಾಥ್ ನೀಡಬೇಕೆಂದುಕೆಂದು ತಿಳಿಸಿದರು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.