Cibil Score – ಸಾಲಕ್ಕೆ ಅರ್ಜಿ ಸಲ್ಲಿಸುವಾಗ, ಸಿಬಿಲ್ ಸ್ಕೋರ್ ಹೆಚ್ಚು ಮಾಡುವ ಸೀಕ್ರೆಟ್ ಟ್ರಿಕ್ಸ್ ಇಲ್ಲಿದೆ

cibil

ನಾವು ಸಾಲ ಕೇಳಲು ಬ್ಯಾಂಕಿಗೆ ಹೋದಾಗ ಅಥವಾ ಕಾರು ಬೈಕ್ ಖರೀದಿಗೆ ಲೋನ್ (Loan) ಕೇಳಲು ಫೈನಾನ್ಸ್ ಗಳಿಗೆ ಹೋದಾಗ ಅಲ್ಲಿ ಅವರು ಕೇಳುವ ಮೊದಲ ಪ್ರಶ್ನೆ ಸಿಬಿಲ್ ಸ್ಕೋರ್ ಬಗ್ಗೆ (Cibil Score).  ಸಾಮಾನ್ಯವಾಗಿ ಎಲ್ಲರಿಗೂ ಈ ಸಿಬಿಲ್ ಅಥವಾ ಕ್ರೆಡಿಟ್ ಸ್ಕೋರ್ (Credit Sciore) ಬಗ್ಗೆ ಗೊತ್ತಿರುವುದಿಲ್ಲ. ಹೌದು, ನಾವು ಸಾಲ ಪಡೆಯಲು ಯಾವುದೇ ಬ್ಯಾಂಕಿಗೆ ಅಥವಾ ಫೈನಾನ್ಸ್ ಗಳಿಗೆ ಹೋದಾಗ ಸಿಬಿಲ್ ಸ್ಕೋರ್ ಬಗ್ಗೆ ಖಂಡಿತ ಗಮನ ಹರಿಸಲೇ ಬೇಕಾಗುತ್ತದೆ. ಏನು ಸಿಬಿಲ್ ಸ್ಕೋರ್?, ಯಾಕೆ ನಾವು ಕ್ರೆಡಿಟ್ ಸ್ಕೋರ್ ಗೆ ಅಷ್ಟು ಇಂಪಾರ್ಟೆನ್ಸ್ ಕೊಡ್ಬೇಕು? ಒಂದು ವೇಳೆ ಕಡಿಮೆ ಕ್ರೆಡಿಟ್ ಸ್ಕೋರ್ ಇದ್ದರೆ ಅದನ್ನ ಹೇಗೆ ಸುಲಭವಾಗಿ ಹೆಚ್ಚು ಮಾಡಬೇಕು ಎನ್ನುವುದರ ಬಗ್ಗೆ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

Cibil or Credit score: 

ನೀವು ಸಾಲ(loan) ಪಡೆದುಕೊಂಡರೆ ಅದನ್ನು ಪರಿಪೂರ್ಣವಾಗಿ ಮರುಪಾವತಿ ಮಾಡುವ ಸಾಮರ್ಥ್ಯ ನಿಮ್ಮಲ್ಲಿ ಇದೆಯೇ ಅನ್ನುವುದನ್ನಾ ನೋಡುವುದಕ್ಕೆ ಕ್ರೆಡಿಟ್ ಸ್ಕೋರ್ ಎಂದು ಕರೆಯುತ್ತಾರೆ. CIBIL ಸ್ಕೋರ್ ಮೂರು-ಅಂಕಿಯ ಸಂಖ್ಯಾ ಪ್ರಾತಿನಿಧ್ಯವನ್ನು (Numerical Representation ) ಹೊಂದಿರುತ್ತದೆ. ಭಾರತದಲ್ಲಿ ಸಾಮಾನ್ಯವಾಗಿ ಸಿಬಿಲ್ ಸ್ಕೋರ್ 300 ರಿಂದ 900 ಶ್ರೇಣಿಯವರೆಗೆ ಇರುತ್ತದೆ.

ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವುದು ಖಂಡಿತವಾಗಿಯೂ ಅದರ ಪ್ರಯೋಜನಗಳನ್ನು ಹೊಂದಿದೆ. ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ನಿಮಗೆ ಬೇಕಾದ ರೀತಿಯ ಸಾಲ(loan)ಗಳು ಅಥವಾ ಹೊಸ ಸಾಲಗಳಿಗೆ ಅನುಮೋದನೆ(Approval) ಪಡೆಯುವುದನ್ನು ಸುಲಭವಾಗಿ ಕಂಡುಕೊಳ್ಳುತ್ತೀರಿ. ಕ್ರೆಡಿಟ್ ಸ್ಕೋರ್ 750 ಕ್ಕಿಂತ ಹೆಚ್ಚಿದ್ದರೆ ಅದನ್ನು ಉತ್ತಮ ಸ್ಕೋರ್ ಎಂದು ಪರಿಗಣಿಸಲಾಗುತ್ತದೆ. ಉತ್ತಮ ಕ್ರಿಡಿಟ್ ಸ್ಕೋರ್ ವೇಗವಾಗಿ ಸಾಲವನ್ನು ಅನುಮೋದಿಸುವುದಲ್ಲದೆ, ನಿಮ್ಮ ಸಾಲದಾತರೊಂದಿಗೆ ಕೈಗೆಟುಕುವ ಬಡ್ಡಿ ದರ ಮತ್ತು ಮರುಪಾವತಿ(Repayment)ಗೆ ಸೇರಿದಂತ ನಿಯಮಗಳು ಮತ್ತು ಷರತ್ತುಗಳಿಗಾಗಿ ಮಾತುಕತೆ ನಡೆಸುವ ಪವರ್ ಸಹ ಒದಗಿಸುತ್ತದೆ. ಇನ್ನು ಕಡಿಮೆ ಕ್ರೆಡಿಟ್ ಸ್ಕೋರ್(Low credit score )ಹೊಂದಿದ್ದರೆ ಅವರಿಗೆ ಸಾಲ ಪಡೆಯುವ ಸಂಧರ್ಭದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

tel share transformed

ನಿಮ್ಮ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಅನ್ನು ಹೇಗೆ ಮೇಂಟೇನ್ ಮಾಡುಬಹುದು ?

ನಿಗದಿತ ಸಮಯಕ್ಕೆ ಬಿಲ್‌ಗಳನ್ನು ಪಾವತಿಸಿ:

ಕ್ರೆಡಿಟ್ ಕಾರ್ಡ್ ಬಿಲ್‌ಗಳು ಮತ್ತು ಲೋನ್ EMIಗಳ ಸಕಾಲಿಕ ಪಾವತಿಯನ್ನು ಖಚಿತಪಡಿಸಿಕೊಳ್ಳಿ. ವಿಳಂಬವಾದ ಪಾವತಿಗಳು ನಿಮ್ಮ ಸ್ಕೋರ್ ಮೇಲೆ ಪರಿಣಾಮ ಬೀರಬಹುದು. ಮೊಬೈಲ್‌ನಲ್ಲಿ ರಿಮೈಂಡರ್‌ಗಳನ್ನು ಹೊಂದಿಸುವ ಮೂಲಕ ಅಥವಾ ಸ್ವಯಂಚಾಲಿತ ಮರುಪಾವತಿ(Automatic payments)ಯನ್ನು ಸಕ್ರಿಯಗೊಳಿಸಿ ಇದು ಪಾವತಿಯನ್ನು ಕಳೆದುಕೊಳ್ಳುವುದನ್ನು ತಪ್ಪಿಸಲು ನಿಮಗೆ ಸಹಾಯ ಮಾಡುತ್ತದೆ. ಈ ಮೂಲಕ ಬಿಲ್‌ಗಳನ್ನು ನಿಗದಿತ ಸಮಯಕ್ಕೆ ಪಾವತಿಸಬಹುದು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಕ್ರೆಡಿಟ್ ಬಳಕೆಯನ್ನು ಕಡಿಮೆ ಮಾಡಿ:

ತುರ್ತು ಪರಿಸ್ಥಿತಿಗಾಗಿ ಕ್ರೆಡಿಟ್ ಕಾರ್ಡ್ ಕಂಪನಿಗಳು ಕ್ರೆಡಿಟ್ ಕಾರ್ಡಗಳಲ್ಲಿ ಹೆಚ್ಚುವರಿ ಬ್ಯಾಲೆನ್ಸ್ ಅನ್ನು ಒದಗಿಸುತ್ತಾರೆ. ಹೀಗಿರುವಾಗ ಆರೋಗ್ಯಕರ ಕ್ರೆಡಿಟ್ ಸ್ಕೋರ್ ಅನ್ನು ಕಾಪಾಡಿಕೊಳ್ಳಲು ನಿಮ್ಮ ಕ್ರೆಡಿಟ್ ಬಳಕೆಯನ್ನು 30% ಕ್ಕಿಂತ ಕಡಿಮೆ ಇರಿಸಿಕೊಳ್ಳಲು ಪ್ರಯತ್ನಿಸಿ. ಉದಾಹರಣೆಗೆ, ಒಂದುವೇಳೆ ₹5 ಲಕ್ಷ ರೂಗಳ ಕ್ರೆಡಿಟ್ ಲಿಮಿಟ್ ಇರುವಂತ ಕಾರ್ಡ್ ಇದ್ದು, ಅದನ್ನು ನೀವು 4.50 ಲಕ್ಷ ಅಥವಾ 5 ಲಕ್ಷದ ವರೆಗೂ ಖರ್ಚು ಮಾಡಿದ್ದೆ ಆದಲ್ಲಿ ಅದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬಿರುತ್ತದೆ. ಹಾಗಾಗಿ ಕ್ರೆಡಿಟ್ ಲಿಮಿಟ್(Credit limit)ಅನ್ನು 30% ಕ್ಕಿಂತ ಕಡಿಮೆ ಇರಿಸಿಕೊಳ್ಳಲು ಪ್ರಯತ್ನಿಸಬೇಕು.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಸಾಲ ಮರುಪಾವತಿ(loan repayment) ಮಾಡಿ:

ಈಗಾಗಲೇ ನೀವು ಯಾವದೇ ರೀತಿಯ ಸಾಲವನ್ನು ಪಡೆದಿದ್ದರೆ ಸಾಲವನ್ನು ಸಕಾಲಿಕ ಸಮಯಕ್ಕೆ ಮರುಪಾವತಿಸಿ, ಇಲ್ಲವಾದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಸಾಲವನ್ನು ಪಡೆಯುವ ಮುನ್ನ ನೀವು ಸಾಲವನ್ನು ಮರುಪಾವತಿಸುವ ಸಮರ್ಥ್ಯವನ್ನು ಹೊಂದಿದ್ದರೆ ಮಾತ್ರ ಸಾಲವನ್ನು ಪಡೆಯಿರಿ, ಇಲ್ಲವೇ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಆಗುವ ಸಾಧ್ಯತೆ ಇರುತ್ತದೆ.

ಕಠಿಣ ವಿಚಾರಣೆ(Hard enquirie)ಗಳನ್ನು ಮಿತಗೊಳಿಸಿ:

ಸಾಮಾನ್ಯವಾಗಿ ನೀವು ಕ್ರೆಡಿಟ್ ಕಾರ್ಡ್ ಅಥವಾ ಸಾಲಕ್ಕಾಗಿ ಅರ್ಜಿ ಸಲ್ಲಿಸಿದಾಗ ಕ್ರೆಡಿಟ್ ಕಾರ್ಡ್ ವಿಚಾರಣೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ, ಇದನ್ನು ಕಠಿಣ ವಿಚಾರಣೆ ಎಂದು ಹೇಳಲಾಗಿತ್ತದೆ. ಪದೇ ಪದೇ ಕಠಿಣ ವಿಚಾರಣೆಗಳು ಸಲ್ಲಿಸಿದರೆ ಅದು ಕ್ರೆಡಿಟ್ ಸ್ಕೋರ್ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹಾಗಾಗಿ ಅಗತ್ಯವಿದ್ದರೆ ಮಾತ್ರ ವಿಚಾರಣೆ ಅರ್ಜಿ ಸಲ್ಲಿಸಬೇಕು. ಅನಾವಶ್ಯಕವಾಗಿ ಪ್ರತಿ ಬಾರಿಯೂ ಕ್ರೆಡಿಟ್ ಕಾರ್ಡ್ ವಿಚಾರಣೆಗೆ ಅರ್ಜಿ ಸಲ್ಲಿಸುವದನ್ನು ತಪ್ಪಿಸಿ.

ಎಲ್ಲಾ ಕ್ರೆಡಿಟ್ ಕಾರ್ಡ್‌ಗಳನ್ನು ನಿರ್ವಹಿಸಿ

ನೀವು ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಒಂದಕ್ಕಿಂತ ಜಾಸ್ತಿ ಕ್ರೆಡಿಟ್ ಕಾರ್ಡ್‌ಗಳನ್ನು ಅನ್ವಯಿಸಬಹುದು, ಅದು ಈ ಕ್ರೆಡಿಟ್ ಕಾರ್ಡ್‌ಗಳನ್ನು ನಿರ್ವಹಿಸಲು ನಿಮ್ಮಲ್ಲಿ ಸಾಮರ್ಥ್ಯವಿದ್ದರೆ ಮಾತ್ರ. ಇಲ್ಲವಾದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಋಣಾತ್ಮಕ ಪರಿಣಾಮ ಬಿರುತ್ತದೆ. ಹಳೆಯ ಕ್ರೆಡಿಟ್ ಕಾರ್ಡ್‌ಗಳ ನಿರ್ವಹಣೆ ತಪ್ಪಿಸಿದಲ್ಲಿ, ನಿಮ್ಮ ಹಳೆಯ ಕ್ರೆಡಿಟ್ ಕಾರ್ಡ್‌ನ ಇತಿಹಾಸವನ್ನು ವಿಶ್ಲೇಷಿಸುವ ಮೂಲಕ ಕ್ರೆಡಿಟ್ ಕಾರ್ಡ್ ಕಂಪನಿಯು ನಿಮ್ಮ ಸ್ಕೋರ್ ಅನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಒಂದಕ್ಕಿಂತ ಹೆಚ್ಚು ಕಾರ್ಡಗಳನ್ನು ಅನ್ವಯಿಸವುದನ್ನು ತಪ್ಪಿಸಿ, ನಿಮ್ಮ ಸಾಮರ್ಥ್ಯಕ್ಕೆ ಮೀರಿ ಹೆಚ್ಚಿನ ಕ್ರೆಡಿಟ್ ಕಾರ್ಡಗಳನ್ನು ತೆಗೆದುಕೊಳ್ಳಬೇಡಿ.

ಈ ಮೇಲಿನ ಟಿಪ್ಸ್ ಗಳನ್ನು ಅನುಸರಿಸುವ ಮೂಲಕ ಮತ್ತು ಜವಾಬ್ದಾರಿಯುತ ಕ್ರೆಡಿಟ್ ಅಭ್ಯಾಸಗಳನ್ನು ನಿರ್ವಹಿಸುವ ಮೂಲಕ, ನಿಮ್ಮ ಕ್ರೆಡಿಟ್ ಅರ್ಹತೆಯನ್ನು ನೀವು ಸ್ಥಿರವಾಗಿ ಹೆಚ್ಚಿಸಬಹುದು ಮತ್ತು ಉತ್ತಮ ಹಣಕಾಸಿನ ಅವಕಾಶಗಳನ್ನು ಪ್ರವೇಶಿಸಬಹುದು. ಹಾಗೆಯೇ ಇಂತಹ ಉತ್ತಮ ಮಾಹಿತಿಯನ್ನು ಹೊಂದಿರುವ ಈ ವರದಿಯನ್ನು ನಿಮ್ಮೆಲ್ಲ ಸ್ನೇಹಿತರೊಂದಿಗೆ ಶೇರ್ ಮಾಡಿ, ಧನ್ಯವಾದಗಳು.

whatss

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!