32 ಇಂಚಿನ ಇಂಫಿನಿಕ್ಸ್ (infinix) ಸ್ಮಾರ್ಟ್ ಟಿವಿ, ಕೇವಲ 9,499 ರೂ ಗಳಿಗೆ.
ಕಾಲ ಬದಲಾದಂತೆ ಜನರು ಜೀವಿಸುವ ಶೈಲಿಯೂ ಕೂಡ ಬದಲಾಗುತ್ತಾ ಬಂದಿದೆ. ಡಿಜಿಟಲೀಕರಣ ಮಾಯವಾಗಿದೆ. ಜಗತ್ತು ತಂತ್ರಜ್ಞಾನಗಳೊಂದಿಗೆ (technology) ಹೊಸ ಹೊಸ ಅನ್ವೇಷಣೆಗಳನ್ನು ಮಾಡುತ್ತಾ ಬಂದಿದೆ. ಹಾಗೆ ಕೀಪ್ಯಾಡ್ ಮೊಬೈಲ್ ಗಳೆಲ್ಲ ಇಂದು ಸ್ಮಾರ್ಟ್ ಫೋನ್ ಗಳಾಗಿ ಜಗತ್ತನ್ನೇ ಆಳುತ್ತಿವೆ. ಇನ್ನೂ ನೋಡುವುದಾದರೆ, ಹಳೆಯ ಕಾಲದ ದೂರದರ್ಶನ ಅಥವಾ ಟಿವಿ ಇಂದು ಸ್ಮಾರ್ಟ್ ಟಿವಿ ಗಳಾಗಿ ಬದಲಾಗಿದೆ. ಎಲ್ಲರ ಮನೆಯಲ್ಲಿ ಕೂಡ ಟಿವಿ ಇದ್ದೆ ಇದೆ. ಹೆಚ್ಚು ಜನರು ಸ್ಮಾರ್ಟ್ ಟಿವಿ (smart TV) ಗಳನ್ನು ಬಳಸಲು ಪ್ರಾರಂಭಿಸಿದ್ದಾರೆ. ಉತ್ತಮ ಬೆಲೆಯಲ್ಲಿ ಉತ್ತಮ ಫ್ಯೂಚರ್ ಗಳನ್ನು ಒಳಗೊಂಡಂತಹ ಸ್ಮಾರ್ಟ್ ಟಿವಿಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿದೆ. ಹಾಗೆ ಇದೀಗ ಮಾರುಕಟ್ಟೆಗೆ ಸ್ಮಾರ್ಟ್ ಟಿವಿ ಒಂದು ಕಡಿಮೆ ಬೆಲೆಗೆ ಬಿಡುಗಡೆ ಯಾಗಲು ಸಜ್ಜಾಗಿದೆ. ಆ ಟಿವಿ ಯಾವದು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಅತಿ ಕಡಿಮೆ ಬೆಲೆಗೆ ಇಂಫಿನಿಕ್ಸ್ ಕಂಪನಿಯ ಸ್ಮಾರ್ಟ್ ಟಿವಿ (low budget smart TV) :
ಇದೀಗ ಮಾರುಕಟ್ಟೆಗೆ ಲಗ್ಗೆ ಇಟ್ಟ ಇಂಫಿನಿಕ್ಸ್ ಕಂಪನಿಯ ಸ್ಮಾರ್ಟ್ ಟಿವಿಯು ಅತಿ ಕಡಿಮೆ ಬೆಲೆಗೆ ಅಂದರೆ ಜಸ್ಟ್ 9,499 ರೂ.ಗೆ 32 ಇಂಚಿನ ಸ್ಮಾರ್ಟ್ ಟಿವಿ ಮಾರುಕಟ್ಟೆಗೆ ಎಂಟ್ರಿ ಕೊಡಲು ಸಜ್ಜಾಗಿದೆ. ಹೊಸ ಟಿವಿ ಖರೀದಿಸಲು ಬಯಸುವವರಿಗೆ ಇದು ಬೆಸ್ಟ್ ಟೈಮ್! ಉತ್ತಮ ಫೀಚರ್ ಗಳೊಂದಿಗೆ 32 ಇಂಚಿನ ಅತೀ ಕಡಿಮೆ ಬೆಲೆಯ ಈ ಸ್ಮಾರ್ಟ್ ಟಿವಿ ಯನ್ನು ಗ್ರಾಹಕರು ಮಾರುಕಟ್ಟೆಯಲ್ಲಿ ಖರೀದಿಸಬಹುದು.
ಜೂನ್ 24 ರಿಂದ (June 24th) ಇನ್ ಫೀನಿಕ್ಸ್ ಕಂಪನಿಯ ಈ ಹೊಸ ಸ್ಮಾರ್ಟ್ ಟಿವಿ ಗ್ರಾಹಕರಿಗೆ ಲಭ್ಯವಿದೆ :
ಈಗಾಗಲೇ ಇನ್ಫಿನಿಕ್ಸ್ (Infinix) ಕಂಪನಿಯು ತನ್ನ ಹೊಚ್ಚ ಹೊಸ ಸ್ಮಾರ್ಟ್ ಟಿವಿಯನ್ನು ಮಾರುಕಟ್ಟೆಗೆ ಬಿಡುಗಡೆ ಬಿಡಲು ಸಜ್ಜಾಗಿದೆ. ಇದೇ ಜೂನ್ ತಿಂಗಳಿನಲ್ಲಿ (ಜೂನ್ 24 ರಿಂದ) ಇನ್‌ಫೀನಿಕ್ಸ್ ಕಂಪನಿಯ ಈ ಹೊಸ ಸ್ಮಾರ್ಟ್ ಟಿವಿ ಗ್ರಾಹಕರಿಗೆ ಲಭ್ಯವಾಗಲಿದೆ. Infinix ಕಂಪನಿಯು ಈ ಸ್ಮಾರ್ಟ್ ಟಿವಿಯನ್ನು ಅತಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿದೆ. ಈ ಸ್ಮಾರ್ಟ್ ಟಿವಿ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಿರಲಿದೆ. ಇದು Infinixಯ ಹೊಸ ಉತ್ಪನ್ನವಾಗಿದೆ.
ರೂ 9,499ಕ್ಕೆ ಲಭ್ಯವಿದೆ ಈ ಸ್ಮಾರ್ಟ್ ಟಿವಿ :
ಮಾರುಕಟ್ಟೆಯಲ್ಲಿ ಇಂದು ಹಲವಾರು ಕಂಪನಿಗಳ ಸ್ಮಾರ್ಟ್ ಟಿವಿ ಗಳು ಬಿಡುಗಡೆಯಾಗುತ್ತದೆ ಸ್ಮಾರ್ಟ್ ಟಿವಿಗಳ ಕಂಪನಿಗಳ ನಡುವೆ ಪೈಪೋಟಿ ಇದ್ದೇ ಇರುತ್ತದೆ ಹಾಗೆ ಇದೀಗ ತನ್ನ ಹೊಸ ಸ್ಮಾರ್ಟ್ ಟಿವಿಯನ್ನು ಪರಿಚಯಿಸಿದ್ದು ಈ ಸ್ಮಾರ್ಟ್ ಟಿವಿ ಅತಿ ಕಡಿಮೆ ಬೆಲೆಗೆ ಗ್ರಾಹಕರಿಗೆ ಲಭ್ಯವಿದೆ. Infinix ಮಾರುಕಟ್ಟೆಗೆ 32 ಇಂಚಿನ 32Y1 Plus Smart TVಯನ್ನು ಪರಿಚಯಿಸಿದ್ದು, ಈ ಸ್ಮಾರ್ಟ್ ಟಿವಿಯು ಅತಿ ಕಡಿಮೆ ಬೆಲೆ ಅಂದರೆ, 9,499 ರೂ.ಗೆ ಮಾರಾಟವಾಗಲಿದೆ.
32Y1 ಪ್ಲಸ್ ಸ್ಮಾರ್ಟ್ ಟಿವಿಯ ವೈಶಿಷ್ಟ್ಯಗಳು (features) :
ಡಿಸ್ಪ್ಲೇ ಮತ್ತು ಆಡಿಯೋ (Display and Audio) :
32Y1 Plus ಸ್ಮಾರ್ಟ್ ಟಿವಿಯು LED ಡಿಸ್ಪ್ಲೇ ಹೊಂದಿದೆ. ಇದರ HD-ready, 250nits ವರೆಗಿನ ಗರಿಷ್ಠ ಬ್ರೈಟ್‌ನೆಸ್ ಸ್ಪಷ್ಟವಾದ ಪ್ರದರ್ಶನವನ್ನು ಒದಗಿಸುತ್ತದೆ. ಸ್ಮಾರ್ಟ್ ಟಿವಿ ಉತ್ತಮ ಆಡಿಯೋ ಸಿಸ್ಟಮ್ ಅನ್ನು ಒಳಗೊಂಡಿದೆ. ಹಾಗೆಯೇ ಇದು 16 ವ್ಯಾಟ್ ಗಳ ಆಡಿಯೋ ಔಟ್‌ಪುಟ್ ಮತ್ತು ಸ್ಟಿರಿಯೋ ಸ್ಪೀಕರ್‌ಗಳೊಂದಿಗೆ ಡಾಲ್ಬಿ ಆಡಿಯೋ ಅನ್ನು ಬೆಂಬಲಿಸುತ್ತದೆ.
ಪ್ರೊಸೆಸರ್ (processor) :
32Y1 Plus Smart TVಯು ಕ್ವಾಡ್-ಕೋರ್ ಪ್ರೊಸೆಸರ್ ಮೂಲಕ 4GB ಮೆಮೊರಿಯೊಂದಿಗೆ ಸುಗಮ ಮತ್ತು ಸ್ಪಂದಿಸುವ ಕಾರ್ಯಕ್ಷಮತೆಯನ್ನು ಹೊಂದಿದೆ. ಇನ್ನು ಸಂಪರ್ಕದ ವಿಷಯದಲ್ಲಿ, ಇದು ಎರಡು HDMI ಪೋರ್ಟ್‌ಗಳು, ಎರಡು USB ಪೋರ್ಟ್‌ಗಳು, LAN ಸಂಪರ್ಕ, ಹೆಡ್ ಫೋನ್ ಜ್ಯಾಕ್ ಹೊಂದಿದೆ. HDMI ಪೋರ್ಟ್‌ಗಳಲ್ಲಿ ಒಂದು HDMI ARC ಅನ್ನು ಬೆಂಬಲಿಸುತ್ತದೆ. ವೈರ್ ಲೆಸ್ ಸಂಪರ್ಕಕ್ಕಾಗಿ Miracast ಅನ್ನು ಅಳವಡಿಸಲಾಗಿದೆ.
ಇತರ ಫಿಚರ್ಸ್ ಗಳು (other features) :
ಇದರಲ್ಲಿ Jio Cinema, Hotstar, Prime Video, YouTube ನಂತಹ ಜನಪ್ರಿಯ ಸ್ಟ್ರೀಮಿಂಗ್ ಅಪ್ಲಿಕೇಶನ್ ಗಳನ್ನು (streaming applications) ಪ್ರವೇಶಿಸಲು ಹಾಟ್ ಕೀ ಕೂಡ ನೀಡಲಾಗಿದೆ. ಸಾಮಾನ್ಯ ಜನರಿಗೆ ಅಂದರೆ ದುಡಿಯುವ ಕುಟುಂಬದವರಿಗೆ ಅತಿ ಕಡಿಮೆ ಬೆಲೆಗೆ ಉತ್ತಮ ಫೀಚರ್ ಗಳ ಹೊಂದಿದ ಸ್ಮಾರ್ಟ್ ಟಿವಿ ಇದಾಗಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.