DBT Karnataka ಆಪ್ ಮೂಲಕ ಪಾವತಿ ಸ್ಥಿತಿ ಪರಿಶೀಲಿಸಿ: ಗೃಹಲಕ್ಷ್ಮೀ ಯೋಜನೆಯ(Gruhalahkshmi Yojana) ಹಣ ನಿಮ್ಮ ಖಾತೆಗೆ ಜಮಾ ಆಗಿದೆಯೇ?
ರಾಜ್ಯ ಸರ್ಕಾರದಿಂದ(State Government) ಗೃಹಲಕ್ಷ್ಮೀ ಯೋಜನೆಯ ಬಾಕಿ ಉಳಿದ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿದೆ. ರಾಜ್ಯದ ಲಕ್ಷಾಂತರ ಯಜಮಾನಿ ಮಹಿಳೆಯರು ನಿರೀಕ್ಷಿಸುತ್ತಿದ್ದ ಈ ಯೋಜನೆಯ ಹಣವು ಹಂತ ಹಂತವಾಗಿ ವಿತರಣೆ ಆಗುತ್ತಿದ್ದು, ನಿನ್ನೆ ಸಾವಿರಾರು ಮಹಿಳೆಯರ ಬ್ಯಾಂಕ್ ಖಾತೆಗೆ(Bank account) ₹2000 ರೂ. ಜಮಾ ಮಾಡಲಾಗಿದೆ. ಇನ್ನೂ ಬಾಕಿ ಇರುವ ಫಲಾನುಭವಿಗಳಿಗೆ ಇಂದು ಅಥವಾ ಮುಂದಿನ ದಿನಗಳಲ್ಲಿ ಹಣ ಜಮಾ ಆಗುವ ನಿರೀಕ್ಷೆಯಿದೆ. ಯಾವ ಜಿಲ್ಲೆಯ ಫಲಾನುಭವಿಗಳಿಗೆ ಹಣ ಪಾವತಿಯಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಗದಗ ಜಿಲ್ಲೆಯ(Gadag district) ಗೃಹಲಕ್ಷ್ಮೀ ಯೋಜನೆ: ಅರ್ಜಿಗಳು ಮತ್ತು ಪಾವತಿ ವಿವರ ಹೀಗಿದೆ :
ಗದಗ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಅಕ್ಟೋಬರ್(October) ಮತ್ತು ನವೆಂಬರ್(November) 2024 ತಿಂಗಳಲ್ಲಿ ಒಟ್ಟಾರೆ 2,48,525 ಅರ್ಜಿಗಳು ಸ್ವೀಕರಿಸಲ್ಪಟ್ಟಿದ್ದು, ಅವುಗಳ ಪೈಕಿ 2,44,398 ಅರ್ಜಿಗಳು ಮಂಜೂರಾತಿ ಪಡೆದಿವೆ.
ತಾಲೂಕಾವಾರು ಪಾವತಿ ವಿವರ ನೋಡುವುದಾದರೆ :
ಗದಗ: 77,191
ಗಜೇಂದ್ರಗಡ: 26,057
ಲಕ್ಷ್ಮೇಶ್ವರ: 25,897
ಮುಂಡರಗಿ: 34,007
ನರಗುಂದ: 23,162
ರೋಣ: 35,625
ಶಿರಹಟ್ಟಿ: 22,459
ಗೃಹಲಕ್ಷ್ಮಿ ಯೋಜನೆಯ ಹಣ ಪಾವತಿ ಪ್ರಕ್ರಿಯೆ ರಾಜ್ಯಾದ್ಯಂತ ಹಂತ ಹಂತವಾಗಿ ನಡೆಯುತ್ತಿದ್ದು, ಗದಗ ಜಿಲ್ಲೆಯ ಫಲಾನುಭವಿಗಳಿಗೂ ಅಕ್ಟೋಬರ್ ಮತ್ತು ನವೆಂಬರ್ 2024 ತಿಂಗಳ ಪಾವತಿಯನ್ನು ಸರ್ಕಾರದಿಂದ ಹಂಚಿಕೆ ಮಾಡಲಾಗಿದೆ ಎಂದು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ(Ashoka Mandali) ತಿಳಿಸಿದ್ದಾರೆ.
ನಿಮಗೆ ಗೃಹಲಕ್ಷ್ಮೀ ಯೋಜನೆ ಹಣ ಜಮಾ ಆಗಿರುವುದನ್ನು ಪರಿಶೀಲಿಸುವುದು ಹೇಗೆ?:
ಪಾವತಿ ಸ್ಥಿತಿಯನ್ನು ಆನ್‌ಲೈನ್(online) ಮೂಲಕ ತಪಾಸಣೆ ಮಾಡುವುದು ಸುಲಭವಾಗಿದೆ. ಹೀಗಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆಯೇ ಎಂಬುದನ್ನು ಹೀಗೆ ಚೆಕ್ ಮಾಡಬಹುದು:
DBT Karnataka ಆಪ್ ಬಳಸಿ ಪಾವತಿ ಪರಿಶೀಲನೆ ಮಾಡುವ ವಿಧಾನ:
ಹಂತ 1: Google Play Store ಗೆ ಹೋಗಿ DBT Karnataka ಅಂತಾ ಹುಡುಕಿ, ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ
ಹಂತ 2: ಆಪ್ಲಿಕೇಶನ್‌ನ್ನು ತೆರೆದು, ಆಧಾರ್ ಸಂಖ್ಯೆ ನಮೂದಿಸಿ Get OTP ಮೇಲೆ ಕ್ಲಿಕ್ ಮಾಡಿ
ಹಂತ 3 : ನಿಮ್ಮ ಆಧಾರ್ ಸಂಖ್ಯೆಗೆ ಬಂದ OTP ಯನ್ನು ನಮೂದಿಸಿ, Verify OTP ಮೇಲೆ ಕ್ಲಿಕ್ ಮಾಡಿ.
ಹಂತ 4 : ನಂತರ, ನಿಮ್ಮ ಖಾತೆಗೆ MPIN (4 ಅಂಕಿ ಪಾಸ್‌ವರ್ಡ್) ರಚಿಸಿ ಮತ್ತು Submit ಮಾಡಿ.
ಹಂತ 5 : Home Page ನಲ್ಲಿ Payment Status ಆಯ್ಕೆ ಮಾಡಿ, ಇದರಿಂದ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಪಾವತಿ ಸ್ಥಿತಿ ತಿಳಿದುಕೊಳ್ಳಬಹುದು.
ಹಂತ 6: ಪಕ್ಕದಲ್ಲಿರುವ Seeding Status of Aadhaar in Bank Account ಮೂಲಕ ನಿಮ್ಮ ಆಧಾರ್-ಬ್ಯಾಂಕ್ ಲಿಂಕ್ ಮಾಹಿತಿ ಕೂಡಾ ಪರಿಶೀಲಿಸಬಹುದು.
ಈ ಹಂತಗಳನ್ನು ಅನುಸರಿಸಿ ನೀವು ಗೃಹಲಕ್ಷ್ಮೀ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯೇ ಎಂಬುದನ್ನು ಸುಲಭವಾಗಿ ಪರಿಶೀಲಿಸಬಹುದು.
ಯೋಜನೆಯ ಮುಖ್ಯ ಅಂಶಗಳು:
ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯ ಸರ್ಕಾರ(State government) ಪ್ರತಿಮಾಸ ₹2000/- ನೇರವಾಗಿ ಮಹಿಳಾ ಫಲಾನುಭವಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತದೆ.
ಈ ಹಣದ ಪಾವತಿ ಹಂತ ಹಂತವಾಗಿ ಪ್ರಗತಿಯಲ್ಲಿದ್ದು, ಎಲ್ಲ ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸಲಾಗುತ್ತಿದೆ.
ಫಲಾನುಭವಿಗಳು DBT Karnataka ಆಪ್ ಅಥವಾ ಬ್ಯಾಂಕ್ SMS ಮೂಲಕ ಹಣ ವರ್ಗಾವಣೆ ಬಗ್ಗೆ ಖಚಿತಪಡಿಸಿಕೊಳ್ಳಬಹುದು.
ಇದರೊಂದಿಗೆ, ಯೋಜನೆಯ ಪೂರ್ಣ ಹಣವು ಎಲ್ಲಾ ಫಲಾನುಭವಿಗಳಿಗೆ ಶೀಘ್ರವೇ ತಲುಪಲಿದೆ ಎಂದು ಸರ್ಕಾರ ತಿಳಿಸಿದೆ.
ಗೃಹಲಕ್ಷ್ಮೀ ಯೋಜನೆಯಡಿ ಲಕ್ಷಾಂತರ ಮಹಿಳೆಯರಿಗೆ ಸರ್ಕಾರದಿಂದ ನೇರ ಹಣ ಸಹಾಯ ನೀಡಲಾಗುತ್ತಿದೆ. ಇದರಿಂದ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸುವುದು ಹಾಗೂ ಮಹಿಳೆಯರ ಸಬಲೀಕರಣಕ್ಕೆ ಇದೊಂದು ದೊಡ್ಡ ಹೆಜ್ಜೆಯಾಗಿದೆ. ನೀವು ಈ ಯೋಜನೆಯ ಫಲಾನುಭವಿಯಾಗಿದ್ದರೆ, ನಿಮ್ಮ ಪಾವತಿ ಸ್ಥಿತಿಯನ್ನು ತಕ್ಷಣವೇ ಪರಿಶೀಲಿಸಿ!
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.