ಕರ್ನಾಟಕದಲ್ಲಿ ಎ-ಖಾತಾ, ಬಿ-ಖಾತಾ ಮತ್ತು ಇ-ಖಾತಾ: ಸಂಪೂರ್ಣ ಮಾಹಿತಿ ಮತ್ತು ಇತ್ತೀಚಿನ ಸರ್ಕಾರದ ತೀರ್ಮಾನಗಳು
ಕರ್ನಾಟಕದಲ್ಲಿ ಆಸ್ತಿಯ ಕಾನೂನುಬದ್ಧತೆ, ಮಾಲೀಕತ್ವ, ಹಾಗೂ ತೆರಿಗೆ ಪಾವತಿ ವ್ಯವಸ್ಥೆಗೆ ಸಂಬಂಧಿಸಿದಂತೆ ಎ-ಖಾತಾ, ಬಿ-ಖಾತಾ ಮತ್ತು ಇ-ಖಾತಾ (A-Khata, B-Khata, E-Khata) ಎಂಬ ಮೂರು ಪ್ರಮುಖ ದಾಖಲೆ ಪ್ರಕಾರಗಳು ಪ್ರಚಲಿತದಲ್ಲಿವೆ. ಇತ್ತೀಚೆಗೆ, ರಾಜ್ಯ ಸರ್ಕಾರ ಈ ಬಗ್ಗೆ ಮಹತ್ವದ ತೀರ್ಮಾನಗಳನ್ನು ಕೈಗೊಂಡಿದ್ದು, ವಿಶೇಷವಾಗಿ ಇ-ಖಾತಾ ಕಡ್ಡಾಯಗೊಳಿಸುವ ಹಾಗೂ ಬಿ-ಖಾತಾ ಆಸ್ತಿಗಳಿಗೆ ಪ್ರಮಾಣೀಕರಣ ನೀಡುವ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ನೋಂದಾಯಿತ ನಿವೇಶನಗಳು ಹಾಗೂ ಅನಧಿಕೃತ ಆಸ್ತಿಗಳನ್ನು ಪ್ರತ್ಯೇಕವಾಗಿ ಗುರುತಿಸಲು ಈ ಖಾತಾ ವ್ಯವಸ್ಥೆ ರೂಪುಗೊಂಡಿದೆ. ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಈ ವಿಂಗಡಣೆ ಬಿಬಿಎಂಪಿ (Bruhat Bengaluru Mahanagara Palike) ಸೇರಿದಂತೆ ವಿವಿಧ ಸ್ಥಳೀಯ ಆಡಳಿತ ಸಂಸ್ಥೆಗಳ ನಿರ್ವಹಣೆಯಲ್ಲಿ ಇದೆ. ಹಾಗಿದ್ದರೆ ಎ-ಖಾತಾ, ಬಿ-ಖಾತಾ ಮತ್ತು ಇ-ಖಾತಾ ಎಂದರೇನು? ಅವುಗಳ ಪ್ರಾಮುಖ್ಯತೆ ಮತ್ತು ವ್ಯತ್ಯಾಸಗಳೇನು? ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಎ-ಖಾತಾ (A-Khata) ಎಂದರೇನು?:
ಎ-ಖಾತಾ (A-Khata) ಎಂದರೆ ಕಾನೂನುಬದ್ಧವಾಗಿ ನೋಂದಾಯಿತ ಆಸ್ತಿ. ಇದನ್ನು ಬಿಬಿಎಂಪಿ ಅಥವಾ ಸ್ಥಳೀಯ ಆಡಳಿತ ಸಂಸ್ಥೆಗಳು ನೀಡುತ್ತವೆ. ಇದು ಆಸ್ತಿ ಮಾಲೀಕನಿಗೆ ಸರಿಯಾದ ಮಾಲೀಕತ್ವದ ಪ್ರಮಾಣಪತ್ರ ಒದಗಿಸುವ ಪ್ರಮುಖ ದಾಖಲೆಯಾಗಿದೆ.
ಎ-ಖಾತೆಯ ಮಹತ್ವವೇನು (Importance)?
ಆಸ್ತಿ ಸಂಪೂರ್ಣ ಕಾನೂನುಬದ್ಧವಾಗಿರುತ್ತದೆ.
ಈ ದಾಖಲೆ ಇದ್ದರೆ ಆಸ್ತಿಯ ಮೇಲೆ ಸಾಲ ಪಡೆದುಕೊಳ್ಳಬಹುದು.
ನಿಗದಿತ ಶರತ್ತುಗಳನ್ನು ಪೂರೈಸಿದರೆ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ಕೂಡ ಸಿಗುತ್ತದೆ.
ಖರೀದಿದಾರರು ಯಾವುದೇ ಅನುಮಾನವಿಲ್ಲದೆ ಆಸ್ತಿಯನ್ನು ಖರೀದಿಸಬಹುದು.
ವ್ಯಾಪಾರಕ್ಕಾಗಿ ನಿಗದಿತ ಪರವಾನಗಿ ಪಡೆಯಲು ಎ-ಖಾತೆ ಪ್ರಮುಖ ದಾಖಲೆಯಾಗಿದೆ.
ಮಾಲೀಕರು ಸರಿಯಾಗಿ ಆಸ್ತಿ ತೆರಿಗೆ ಪಾವತಿಸಿರುವುದನ್ನು ದೃಢಪಡಿಸುತ್ತದೆ.
ಎ-ಖಾತಾ ಆಸ್ತಿಗಳು ಸಾಮಾನ್ಯವಾಗಿ, ಸರಿಯಾಗಿ ವಿಕಸಿತ ಬಡಾವಣೆಗಳಲ್ಲಿ ಇರುವ ಆಸ್ತಿಗಳಾಗಿರುತ್ತವೆ. ಹಾಗೆ ಸರಕಾರಿ ಅನುಮೋದನೆಗಳೊಂದಿಗೆ ಲೇಔಟ್ (Layout) ದಾರಣೆಯಾದ ನಿವೇಶನಗಲಾಗಿರುತ್ತವೆ. ಇನ್ನು ಈ ಆಸ್ತಿಗಳು ಕಾನೂನುಬದ್ಧ ದಾಖಲೆಗಳು ಹಾಗೂ ಪರವಾನಗಿಗಳು ಹೊಂದಿರುತ್ತವೆ.
ಬಿ-ಖಾತಾ (B-Khata) ಎಂದರೇನು?:
ಬಿ-ಖಾತಾ ಎಂದರೆ ಅಕ್ರಮ ಅಥವಾ ಅರೆ-ಕಾನೂನುಬದ್ಧ ಆಸ್ತಿಗಳನ್ನು ಗುರುತಿಸಲು ಬಳಸುವ ಪ್ರಕಾರವಾಗಿದೆ. ಇದು ಸಂಪೂರ್ಣ ಮಾಲೀಕತ್ವ ಅಥವಾ ಕಾನೂನುಬದ್ಧ ಸ್ವತ್ತಿನ ಪರಿಗಣನೆಗೆ ಒಳಪಟ್ಟಿರುವುದಿಲ್ಲ.
ಬಿ-ಖಾತೆಯ ತೊಂದರೆಗಳೇನು?:
ಹೈಕೋರ್ಟ್ 2014ರಲ್ಲಿ ಬಿ-ಖಾತಾ ಆಸ್ತಿಗಳನ್ನು ಅಮಾನ್ಯ (Illegal) ಎಂದು ಘೋಷಿಸಿತ್ತು. ಆದ್ದರಿಂದ ಬಿ-ಖಾತಾದಾರರು ಕಾನೂನುಬದ್ಧ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ಇನ್ನು, ಬ್ಯಾಂಕ್ ಸಾಲ ಮತ್ತು ಪರವಾನಗಿಗೆ ಬಿ-ಖಾತಾದಾರರು ಅರ್ಹರಾಗಿರುವುದಿಲ್ಲ.
ಕಟ್ಟಡ ಪರವಾನಗಿ, ವ್ಯಾಪಾರ ಪರವಾನಗಿ ಪಡೆಯಲು ಅನುಮತಿ ಸಿಗುವುದಿಲ್ಲ.
ಆಸ್ತಿ ಮಾರಾಟ ಮಾಡುವ ಸಂದರ್ಭದಲ್ಲಿ ಖರೀದಿದಾರರು ಹಿಂಜರಿಯುವ ಸಾಧ್ಯತೆ ಇರುತ್ತದೆ.
ನಗರಾಭಿವೃದ್ಧಿ ಸಂಸ್ಥೆಗಳು (Urban Organisations) ಕಾನೂನುಬದ್ಧಗೊಳಿಸಲು ಬೇಡಿಕೆ ಹೇರಿಕೆ ಅಥವಾ ದಂಡ ವಿಧಿಸುವ ಸಾಧ್ಯತೆ ಇರುತ್ತದೆ.
ಹಾಗಿದ್ದರೆ ಬಿ-ಖಾತಾ ವ್ಯಾಪ್ತಿಗೆ ಬರುವ ಆಸ್ತಿಗಳು ಯಾವುವು?:
ಅನಧಿಕೃತ ಬಡಾವಣೆಗಳು ಅಂದರೆ ಸರ್ಕಾರದಿಂದ (Government) ಅನುಮೋದನೆ ಇಲ್ಲದ ನಿವೇಶನಗಳಾಗಿರುತ್ತವೆ.
ನಗರ ವ್ಯಾಪ್ತಿಯಲ್ಲಿದ್ದರೂ ಗ್ರಾಮ ಪಂಚಾಯತ್ ಅಥವಾ ಸ್ಥಳೀಯ ಆಡಳಿತಕ್ಕೆ ಒಳಪಟ್ಟಿರುವ ನಿವೇಶನಗಳಾಗಿರುತ್ತವೆ.
ಇನ್ನು, ನಿಯಮಾನುಸಾರ ಯೋಜನೆ (Layout) ಇಲ್ಲದ ಹೌಸಿಂಗ್ ಬಡಾವಣೆಗಳಾಗಿರುತ್ತವೆ.
ಇತ್ತೀಚೆಗೆ, ರಾಜ್ಯ ಸರ್ಕಾರವು (State Government) ಬಿ-ಖಾತಾ ಆಸ್ತಿಗಳನ್ನು ಕಾನೂನುಬದ್ಧಗೊಳಿಸಲು ಹೊಸ ಮಾರ್ಗದರ್ಶನಗಳನ್ನು ರೂಪಿಸುತ್ತಿದೆ. ಅದರಲ್ಲಿ, ಮೂರು ತಿಂಗಳಲ್ಲಿ ಬಿ-ಖಾತಾ ನೋಂದಣಿ ಕಾರ್ಯವನ್ನು ಪೂರ್ಣಗೊಳಿಸಲು ಕಂದಾಯ ಇಲಾಖೆ ಸೂಚನೆ ನೀಡಿದೆ.
ಇ-ಖಾತಾ (E-Khata) ಎಂದರೇನು? :
ಇ-ಖಾತಾ ಎಂದರೆ ಎ-ಖಾತಾದ ಡಿಜಿಟಲ್ ಆವೃತ್ತಿ, ಇದು ಆಸ್ತಿ ಮಾಲೀಕತ್ವ, ತೆರಿಗೆ ಪಾವತಿ ಹಾಗೂ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ನಿರ್ವಹಿಸಲು ಸಹಾಯ ಮಾಡುತ್ತದೆ. ಕರ್ನಾಟಕ ಸರ್ಕಾರ ಇದನ್ನು ಕಡ್ಡಾಯಗೊಳಿಸಿರುವುದು, ಆಸ್ತಿ ದಾಖಲೆಗಳ ಡಿಜಿಟಲೀಕರಣಕ್ಕೆ ಮಹತ್ವದ ಹೆಜ್ಜೆ.
ಇ-ಖಾತೆಯ ಸೌಲಭ್ಯಗಳು:
ಆಸ್ತಿ ಸಂಬಂಧಿತ ಎಲ್ಲಾ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಲಭ್ಯ ವಾಗುತ್ತವೆ.
ಇನ್ನು, ಈ ಇ-ಖಾತೆಗಳನ್ನು ಹೊಂದವುದರಿಂದ ಪಾರದರ್ಶಕತೆ ಹೆಚ್ಚಾಗಿರುತ್ತದೆ.
ನಕಲಿ ದಾಖಲೆಗಳ ಬಳಕೆ ಕಡಿಮೆಯಾಗುತ್ತದೆ.
ಪೂರಕ ದಾಖಲೆಗಳ ಅಗತ್ಯ ಕಡಿಮೆಯಾಗುತ್ತದೆ.
ಇ-ಖಾತಾ ಹೊಂದಿರುವ ಆಸ್ತಿಗೆ ಸಾಲ ಪಡೆಯಲು ಅನುಕೂಲವಾಗುತ್ತದೆ.
ಪಾರದರ್ಶಕ ದಾಖಲೆ ವ್ಯವಸ್ಥೆ ಹೊಂದಿರುವ ಕಾರಣ ಮನೆ ಖರೀದಿದಾರರು ಮತ್ತು ಹೂಡಿಕೆದಾರರು ಆತಂಕವಿಲ್ಲದೆ ವ್ಯವಹರಿಸಬಹುದು.
ಇ-ಖಾತಾ ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಯ ಭಾಗವಾಗಿದೆ. ಇದನ್ನು ಅಪ್ಲೈ ಮಾಡುವ ಪ್ರಕ್ರಿಯೆ ಆನ್‌ಲೈನ್ (Online) ಮೂಲಕ ಸರಳೀಕರಣಗೊಂಡಿದೆ.
ನಿವೇಶನ ಖಾತೆಗಳ ಬಗ್ಗೆ ಸರ್ಕಾರದ ಇತ್ತೀಚಿನ ತೀರ್ಮಾನಗಳು ಈ ಕೆಳಗಿನಂತಿವೆ :
ಇ-ಖಾತಾ ಸಿಸ್ಟಮ್ ಅನ್ನು ಕಡ್ಡಾಯಗೊಳಿಸಿದೆ.
ಅನಧಿಕೃತ ನಿವೇಶನಗಳನ್ನು ನಿಯಂತ್ರಿಸಲು, ಬಿ-ಖಾತಾ ಆಸ್ತಿಗಳಿಗೆ ನಿರ್ಧಿಷ್ಟ ಅವಧಿಯಲ್ಲಿ ಪ್ರಮಾಣೀಕರಣಗೊಳಿಸುವಂತೆ ಕ್ರಮ ಕೈಗೊಳ್ಳಲಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.