Infosys Scholarship : ಬರೋಬ್ಬರಿ 1 ಲಕ್ಷ ರೂಪಾಯಿ ನೇರವಾಗಿ ಖಾತೆಗೆ ಬರುವ ಇನ್ಫೋಸಿಸ್ ವಿದ್ಯಾರ್ಥಿ ವೇತನಕ್ಕೆ ಅಪ್ಲೈ ಮಾಡಿ!

IMG 20240810 WA0001 1

ಇನ್ಫೋಸಿಸ್ ಫೌಂಡೇಶನ್ STEM ಸ್ಟಾರ್ಸ್ ಸ್ಕಾಲರ್‌ಶಿಪ್ (Infosys Foundation STEM Stars Scholarship) ಗೆ ಅರ್ಜಿ ಅಹ್ವಾನ. ರೂ 1 ಲಕ್ಷದ ವರೆಗೂ ಸಿಗಲಿದೆ ಸ್ಕಾಲರ್ಶಿಪ್.

ಇಂದು ನಮ್ಮ ಭಾರತ (India) ಶೈಕ್ಷಣಿಕವಾಗಿಯೂ ಕೂಡ ಮುಂದುವರಿಯುತ್ತಾ ಬರುತ್ತಿದೆ. ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯಲು ವಿದ್ಯಾರ್ಥಿ ವೇತನ (Scholarship) ಎಂಬುದು ಬಹಳ ಸಹಕಾರಿ ಅಂಶವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಹಲವು ಸ್ಕಾಲರ್‌ಶಿಪ್ ಗಳನ್ನು ವಿದ್ಯಾರ್ಥಿಗಳಿಗಾಗಿ ನೀಡುತ್ತಿದೆ. ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿ ಆರ್ಥಿಕವಾಗಿ ಯಾವುದೇ ತೊಂದರೆಯಾಗುವುದು ಕಡಿಮೆಯಾಗುತ್ತದೆ. ಅದೇ ರೀತಿಯಾಗಿ ವಿದ್ಯಾರ್ಥಿಗಳ ಉನ್ನತ ಶಿಕ್ಷಣವನ್ನು ಪ್ರೋತ್ಸಾಹದಲ್ಲಿ ಪ್ರತಿವರ್ಷವೂ ಕೂಡ ವಿದ್ಯಾರ್ಥಿ ವೇತನವನ್ನು (student scholarship) ಇನ್ಫೋಸಿಸ್ ಸಂಸ್ಥೆ ನೀಡುತ್ತಾ ಬಂದಿದೆ. ಈ ವಿದ್ಯಾರ್ಥಿ ವೇತನ ಯಾವುದು? ಸಲ್ಲಿಸುವುದು ಹೇಗೆ? ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಕೊನೆಯ ದಿನಾಂಕ ಯಾವಾಗ? ಎಂಬ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ಇನ್ಫೋಸಿಸ್ ಫೌಂಡೇಶನ್‌ (Infosys foundation) ವತಿಯಿಂದ ಇನ್ಫೋಸಿಸ್ ಫೌಂಡೇಶನ್ STEM ಸ್ಟಾರ್ಸ್ ಸ್ಕಾಲರ್‌ಶಿಪ್ 2024-25 ನೇ ಸಾಲಿನ ವಿದ್ಯಾರ್ಥಿವೇತನಕ್ಕೆ ಅರ್ಜಿ ಅಹ್ವಾನಿಸಲಾಗಿದೆ.1996 ರಲ್ಲಿ ಸ್ಥಾಪನೆಯಾದ ಇನ್ಫೋಸಿಸ್ ಫೌಂಡೇಶನ್. ಶಿಕ್ಷಣ, ಆರೋಗ್ಯ ರಕ್ಷಣೆ, ಮಹಿಳಾ ಸಬಲೀಕರಣ ಮತ್ತು ಪರಿಸರ ಸುಸ್ಥಿರತೆಯ ಕ್ಷೇತ್ರಗಳಿಗೆ ಹೊತ್ತನ್ನು ನೀಡುತ್ತಾ ಬಂದಿದೆ. ದೇಶದಾದ್ಯಂತ  ಹಿಂದುಳಿದವರಿಗೆ ಹಾಗೂ ವಿದ್ಯಾರ್ಥಿಗಳಿಗೆ ಶ್ರಮಿಸುವುದು ಇದರ ಉದ್ದೇಶವಾಗಿದೆ.

ಇನ್ಫೋಸಿಸ್ ಫೌಂಡೇಶನ್‌ ವತಿಯಿಂದ ಇನ್ಫೋಸಿಸ್ ಫೌಂಡೇಶನ್ STEM ಸ್ಟಾರ್ಸ್ ಸ್ಕಾಲರ್‌ಶಿಪ್ (Infosys foundation STEM Scholarship) 2024-25 ನೇ ಸಾಲಿನ ವಿದ್ಯಾರ್ಥಿವೇತನ ( ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಗಣಿತ) ವಿಷಯಗಳಲ್ಲಿ ಪದವಿಪೂರ್ವ ಹಾಗೂ ಪದವಿಗಳನ್ನು ಓದುತ್ತಿರುವ ಮೊದಲ ವರ್ಷದವರಿಗೆ ನೀಡಲಾಗುತ್ತದೆ. ವಿದ್ಯಾರ್ಥಿವೇತನವು 4-ವರ್ಷದ STEM ಕೋರ್ಸ್‌ನಲ್ಲಿ ಮಹಿಳಾ ವಿದ್ಯಾರ್ಥಿಗಳಿಗೆ ವಾರ್ಷಿಕ ₹1 ಲಕ್ಷದವರೆಗೆ ಸಮಗ್ರ ಆರ್ಥಿಕ ರಕ್ಷಣೆಯನ್ನು ಒದಗಿಸುತ್ತದೆ,

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಸಲ್ಲಿಸಲು ಇರಬೇಕಾದ ಅರ್ಹತಾ ಮಾನದಂಡಗಳು (qualifications) :

ಹೆಣ್ಣು ಮಕ್ಕಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು (ಭಾರತೀಯ ಪ್ರಜೆಯಾಗಿರಬೇಕು).
ವಿದ್ಯಾರ್ಥಿಗಳು ಎಂಜಿನಿಯರಿಂಗ್, ವೈದ್ಯಕೀಯ (MBBS) ಮತ್ತು ಇತರ ಸಂಬಂಧಿತ STEM ಕ್ಷೇತ್ರಗಳಲ್ಲಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ (NIRF ಮಾನ್ಯತೆ ಪಡೆದ) ಮೊದಲ ವರ್ಷದಲ್ಲಿ ಪದವಿ ಓದುತ್ತಿರಬೇಕು.
ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯವು 8 ಲಕ್ಷ ಮೀರಿರಬಾರದು.
ವಿದ್ಯಾರ್ಥಿಗಳು ಸಂಸ್ಥೆಯಿಂದ ಗುರುತಿಸಲ್ಪಟ್ಟ ಕಾಲೇಜುಗಳಿಗೆ ಪ್ರವೇಶವನ್ನು ಪಡೆದಿರಬೇಕು ಮತ್ತು 12ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು.
ಅರ್ಜಿದಾರರು ಈ ಕೆಳಗಿನ-ನಿರ್ದಿಷ್ಟ ಶೈಕ್ಷಣಿಕ ಮಾನದಂಡಗಳನ್ನು ಪೂರೈಸಬೇಕು:
ಕೋರ್ಸ್ ಪೂರ್ಣಗೊಳ್ಳುವವರೆಗೆ ಎಂಜಿನಿಯರಿಂಗ್ ಮತ್ತು ಸಂಬಂಧಿತ ಕೋರ್ಸ್‌ಗಳಲ್ಲಿ ಕನಿಷ್ಠ 7 CGPA.
ಕೋರ್ಸ್ ಪೂರ್ಣಗೊಳ್ಳುವವರೆಗೆ ನಿರಂತರ ದಾಖಲಾತಿಗಾಗಿ MBBS ನಲ್ಲಿ ವರ್ಷಕ್ಕೆ ಎಲ್ಲಾ ವಿಷಯಗಳಲ್ಲಿ ಉತ್ತೀರ್ಣರಾಗಿಬೇಕು.

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು (Documents) :

ಇನ್ಫೋಸಿಸ್ ಫೌಂಡೇಶನ್ STEM ಸ್ಟಾರ್ಸ್ ಸ್ಕಾಲರ್‌ಶಿಪ್ 2024 ರ ಆನ್‌ಲೈನ್ ಸಲ್ಲಿಕೆ ಸಮಯದಲ್ಲಿ ಬೇಕಾಗುವ ಅಗತ್ಯ ದಾಖಲೆಗಳು ಈ ಕೆಳಗಿನಂತಿವೆ.

ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಪೋಟೋ.
12 ನೇ ತರಗತಿಯ ಅಂಕಪಟ್ಟಿ ಮತ್ತು JEE/CET/NEET ಅಂಕಪಟ್ಟಿಯೊಂದಿಗೆ ಉತ್ತೀರ್ಣ ಪ್ರಮಾಣಪತ್ರಗಳು.
ಸರ್ಕಾರ ನೀಡಿದ ಗುರುತಿನ ಪುರಾವೆ (ಆಧಾರ್ ಕಾರ್ಡ್/ವೋಟರ್ ಐಡಿ ಕಾರ್ಡ್/ಚಾಲನಾ ಪರವಾನಗಿ/ಪಾನ್ ಕಾರ್ಡ್).
ಕಾಲೇಜು ಪ್ರವೇಶ ಪುರಾವೆ (ಶುಲ್ಕ ರಶೀದಿ/ಪ್ರವೇಶ ಪತ್ರ/ಸಂಸ್ಥೆಯ ಗುರುತಿನ ಚೀಟಿ/ಬನಫೈಡ್ ಪ್ರಮಾಣಪತ್ರ).
ಸೂಕ್ತ ಸರ್ಕಾರದಿಂದ ನೀಡಲಾದ ಕುಟುಂಬದ ಆದಾಯ ಪುರಾವೆ ಪ್ರಮಾಣಪತ್ರ. ಕಚೇರಿಗಳು/ಬಿಪಿಎಲ್ ಕಾರ್ಡ್/ಆಯುಷ್ಮಾನ್ ಭಾರತ್ ಕಾರ್ಡ್.
ಅರ್ಜಿದಾರರ ಬ್ಯಾಂಕ್ ಖಾತೆ ವಿವರಗಳು ಬ್ಯಾಂಕ್ ಪಾಸ್‌ಬುಕ್.

ಯಾರು ಯಾರು ಅರ್ಹರು ಹಾಗೂ ಪಡೆಯುವ ಪ್ರಯೋಜನ :

ಈ ವಿದ್ಯಾರ್ಥಿವೇತನವನ್ನು 4-ವರ್ಷದ ಪದವಿ ಕೋರ್ಸ್‌ಗಳನ್ನು ಓದುತ್ತಿರುವ ಮಹಿಳಾ ವಿದ್ಯಾರ್ಥಿಗಳು ಅರ್ಹರು, ವಾರ್ಷಿಕ ₹1 ಲಕ್ಷದವರೆಗೆ ಸಮಗ್ರ ಆರ್ಥಿಕ ಸಹಾಯಧನವನ್ನು ಒದಗಿಸುತ್ತದೆ. ಹಾಗೂ ಆಯ್ಕೆಯಾದ ಅಭ್ಯರ್ಥಿಗಳು ಕೋರ್ಸ್‌ನ ಅವಧಿಯಲ್ಲಿ ಬೋಧನಾ ಜೀವನ ವೆಚ್ಚಗಳು ಮತ್ತು ಅಧ್ಯಯನ ಸಾಮಗ್ರಿಗಳನ್ನು ಒಳಗೊಂಡ ವಾರ್ಷಿಕ ₹1 ಲಕ್ಷದವರೆಗೆ ವಿದ್ಯಾರ್ಥಿವೇತನವನ್ನು ಪಡೆಯುತ್ತಾರೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ :

ಅರ್ಜಿ ಸಲ್ಲಿಸಲು ಕೆಳಗೆ ನೀಡಲಾಗಿರುವ ಲಿಂಕ್ ಕ್ಲಿಕ್ ಮಾಡಿ
https://www.buddy4study.com/page/infosys-stem-stars-scholarship#singleScApply
ನಂತರ ಅನ್ವಯಿಸು  ಬಟನ್ ಮೇಲೆ ಕ್ಲಿಕ್ ಮಾಡಿ .
ನಿಮ್ಮ ನೋಂದಾಯಿತ ID ಯೊಂದಿಗೆ Buddy4Study ಗೆ ಲಾಗಿನ್ ಮಾಡಿ ಮತ್ತು ನಿಮ್ಮನ್ನು ‘ ಅರ್ಜಿ ನಮೂನೆಯ (Application form) ಪುಟ’ಕ್ಕೆ ನಿರ್ದೇಶಿಸಲಾಗುತ್ತದೆ.
ನೋಂದಾಯಿಸದಿದ್ದರೆ, ದಯವಿಟ್ಟು ನಿಮ್ಮ ಇಮೇಲ್/ಮೊಬೈಲ್ ಸಂಖ್ಯೆ/Gmail ಖಾತೆಯೊಂದಿಗೆ Buddy4Study (ಸಂಬಂಧಿತ ಪುಟಕ್ಕೆ ಲಿಂಕ್ ಅನ್ನು ಸೇರಿಸಬೇಕು) ನಲ್ಲಿ ನೋಂದಾಯಿಸಿ.
ನಿಮ್ಮನ್ನು ‘ ಇನ್ಫೋಸಿಸ್ ಫೌಂಡೇಶನ್ STEM ಸ್ಟಾರ್ಸ್ ಸ್ಕಾಲರ್‌ಶಿಪ್ ಪ್ರೋಗ್ರಾಂ 2024-25 ‘ ಅರ್ಜಿ ನಮೂನೆಯ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ .
ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ‘ ಅಪ್ಲಿಕೇಶನ್ ಪ್ರಾರಂಭಿಸಿ ‘ ಬಟನ್ ಮೇಲೆ ಕ್ಲಿಕ್ ಮಾಡಿ .
ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.
ಸಂಬಂಧಿತ ದಾಖಲೆಗಳನ್ನು ಅಪ್ಲೋಡ್ ಮಾಡಿ.
ನಿಯಮಗಳು ಮತ್ತು ಷರತ್ತುಗಳನ್ನು ‘ ಒಪ್ಪಿಕೊಳ್ಳಿ ಮತ್ತು ‘ ಪೂರ್ವವೀಕ್ಷಣೆ ‘ ಮೇಲೆ ಕ್ಲಿಕ್ ಮಾಡಿ.
ಪೂರ್ವವೀಕ್ಷಣೆ ಪರದೆಯಲ್ಲಿ ಗೋಚರಿಸುವ ಎಲ್ಲಾ ವಿವರಗಳು ಸರಿಯಾಗಿದ್ದರೆ, ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ‘ ಸಲ್ಲಿಸು ‘ ಬಟನ್ ಅನ್ನು ಕ್ಲಿಕ್ ಮಾಡಿ.

ಗಮನಿಸಿ (Notice) :
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-ಸೆಪ್ಟೆಂಬರ್-2024  ಈ ವಿದ್ಯಾರ್ಥಿ ವೇತನಕ್ಕೆ ಯಾರೆಲ್ಲ ಅರ್ಹರೂ ಅವರು ಮೇಲಿನ ದಿನಾಂಕದೊಳಗಾಗಿ ಅರ್ಜಿಗಳನ್ನು ಸಲ್ಲಿಸಬೇಕು.

ನಿಮಗೆ ಈ ಪ್ರಕ್ರಿಯೆಯಲ್ಲಿ ಯಾವುದೇ ಪ್ರಶ್ನೆಗಳಿದ್ದಲ್ಲಿ ಇವರನ್ನು ಸಂಪರ್ಕಿಸಬಹುದು. 011-430-92248 (Ext- 351) (ಸೋಮವಾರದಿಂದ ಶುಕ್ರವಾರದವರೆಗೆ – 10:00AM ನಿಂದ 06:00 PM (IST))
[email protected].

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!