‘ಪೊಲೀಸ್ ಸಿಬ್ಬಂದಿ’ಗಳಿಗೆ ಶೀಘ್ರವೇ ‘ಅಂತರ್ ಜಿಲ್ಲಾ ವರ್ಗಾವಣೆ’ಗೆ ಚಾಲನೆ; ಜಿ. ಪರಮೇಶ್ವರ್

IMG 20240610 WA0001

ಪೊಲೀಸ್ ಸಿಬ್ಬಂದಿಗಳಿಗೆ (Police personnel) ಅಂತರ ಜಿಲ್ಲಾ ವರ್ಗಾವಣೆ:

ಗೃಹ ಸಚಿವ ಡಾ. ಜಿ ಪರಮೇಶ್ವರ್ (Home Minister Dr. G Parameshwar) ಚಾಲನೆ.

ಯಾವುದೇ ಹುದ್ದೆಯಾದರೂ ಕೆಲಸಗಾರರು ಅವರ ಮನೆಗಳಿಗೆ ಹತ್ತಿರವಾಗಿರುವಂತಹ ಕೆಲಸಗಳನ್ನೇ ಮಾಡಲು ಇಚ್ಛಿಸುತ್ತಾರೆ. ಏಕೆಂದರೆ ಮನೆಯಲ್ಲಿ ಪೋಷಕರು, ವಯಸ್ಸಾದವರು, ಹಾಗೂ ಹೆಂಡತಿ ಮಕ್ಕಳ ಯೋಗ ಕ್ಷೇಮವನ್ನು ನೋಡಿಕೊಂಡು ಪ್ರತಿದಿನ ಕೆಲಸಕ್ಕೆ ಹೋಗಿ ಮರಳಿ ತನ್ನ ಮನೆಗಳಿಗೆ ಹೋಗಲು ಇಚ್ಚಿಸುತ್ತಾರೆ. ಸ್ವಂತ ಊರುಗಳಲ್ಲಿಯೇ ಕೆಲಸ ಮಾಡಲು ಹೆಚ್ಚಿನ ಜನರು ಕಾಯುತ್ತಿರುತ್ತಾರೆ.  ಅದೇ ರೀತಿಯಾಗಿ ಪೊಲೀಸರೂ ಕೂಡ ತಮ್ಮ ಮನೆಗಳಿಗೆ ಹತ್ತಿರವಾಗಿರುವಂತಹ ಜಿಲ್ಲೆಗಳಲ್ಲಿ ಕೆಲಸ ಮಾಡಬೇಕೆಂಬ ಹಂಬಲವನ್ನು ಇಟ್ಟುಕೊಂಡಿರುತ್ತಾರೆ. ಪೋಲಿ ಸಿಬ್ಬಂದಿಗಳ ಈ ಆಸೆಯನ್ನು ಗೃಹ ಸಚಿವ ಡಾ. ಜಿ ಪರಮೇಶ್ವರ್ ಚಾಲನೆ ನೀಡುವಂತೆ ತಿಳಿಸಿದ್ದಾರೆ. ವರ್ಗಾವಣೆಗೆ ಇರಬೇಕಾದ ಅರ್ಹತೆಗಳೇನು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಇತ್ತೀಚಿಗಷ್ಟೇ ಲೋಕಸಭಾ ಚುನಾವಣೆ (Loksabha Election) ಮುಗಿದಿದ್ದು, ಲೋಕಸಭಾ ಚುನಾವಣೆಯ ಕಾರಣದಿಂದಾಗಿ ನೀತಿ ಸಂಹಿತೆಯು(code of ethics) ಜಾರಿಯಲ್ಲಿತ್ತು. ಆದ್ದರಿಂದ ಕೆಲವು ಸರ್ಕಾರಿ ಕೆಲಸಗಳು ಇತ್ಯರ್ಥವಾಗಿರುವುದಿಲ್ಲ. ಆದರೆ ಇದೀಗ ನೀತಿ ಸಂಹಿತೆ ಜಾರಿಯಲ್ಲಿಲ್ಲದಿರುವ ಕಾರಣದಿಂದ ಹಲವು ಸರ್ಕಾರಿ ಕೆಲಸಗಳ (government works) ಪರಿಶೀಲನೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಪೋಲಿಸ್ ಸಿಬ್ಬಂದಿಗಳ ಅಂತರ್ ಜಿಲ್ಲಾ ವರ್ಗಾವಣೆಯನ್ನು ಮಾಡುವಂತೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ನಗರದ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪೋಲಿ ಸಿಬ್ಬಂದಿಗಳ ಅಂತರ್ ಜಿಲ್ಲಾ ವರ್ಗಾವಣೆಗೆ ಚಾಲನೆ ನೀಡುವುದಾಗಿ ತಿಳಿಸಿದನಂತರ ಇಂದು ಮೂರನೇ ಬಾರಿಯೂ ಪ್ರಧಾನಿ ಮಂತ್ರಿಯಾಗುತ್ತಿರುವ ಮೋದಿಯವರಿಗೆ (PM.Naredra Modi) ಶುಭಾಶಯ ಕೋರಿದರು.ಹಾಗೂ ಜನಪರ ಕೆಲಸ ಮಾಡಲಿ ಎಂದು ಆಶಿಸಿದರು.

ಪೊಲೀಸ್ ಸಿಬ್ಬಂದಿಗಳಿಗೆ ಅಂತರ ಜಿಲ್ಲಾ ವರ್ಗಾವಣೆಗೆ ಇರಬೇಕಾದ ಅರ್ಹತೆಗಳೇನು (qualifications).?

ಪೋಲಿಸ್ ಸಿಬ್ಬಂದಿ ಇಲಾಖೆಗೆ  ನೇಮಕವಾಗಿ ಕನಿಷ್ಠ 3 ವರ್ಷ ಸೇವೆ ಸಲ್ಲಿಸಿರಬೇಕು.
ಪೊಲೀಸ್ ಸಿಬ್ಬಂದಿಗಳ ಜೊತೆಯಲ್ಲಿ  ಮಾಜಿ ಯೋಧರೂ ಕೂಡ ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಆಗಬಹುದು.
ಯಾವುದೇ ಒಂದು ಜಿಲ್ಲೆಯಲ್ಲಿ, ನೇಮಕಾತಿ ಹೊಂದಿದ ಹಾಗೂ ಅದೇ ಜಿಲ್ಲೆಯಲ್ಲಿ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿದ ಯಾವುದೇ ಸಿಬ್ಬಂದಿ ಇತರೆ ಜಿಲ್ಲೆಗಳು ಅಥವಾ ತಮ್ಮ ಸ್ವಂತ ಜಿಲ್ಲೆಗೆ ವರ್ಗಾವಣೆ ಹೊಂದಲು ಅರ್ಹತೆ ಹೊಂದಿರುತ್ತಾರೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!