ಕಾರಿನ(Car) ಡ್ಯಾಶ್‌ಬೋರ್ಡ್‌ನಲ್ಲಿ(dashboard) ದೇವರ ವಿಗ್ರಹ: ಅನುಸರಿಸಬೇಕಾದ ನಿಯಮಗಳು ಮತ್ತು ಜ್ಯೋತಿಷ್ಯ ಶಾಸ್ತ್ರದ ಸಲಹೆಗಳು
ಭಾರತೀಯ ಸಂಸ್ಕೃತಿಯಲ್ಲಿ ದೇವರ ಆರಾಧನೆ ಅತ್ಯಂತ ಪ್ರಮುಖವಾಗಿದ್ದು, ಭಕ್ತರು ದೇವರ ಅನುಗ್ರಹಕ್ಕಾಗಿ ಹತ್ತು ಹಲವು ವಿಧಾನಗಳಲ್ಲಿ ಪೂಜಾ ಕ್ರಮಗಳನ್ನು ಅನುಸರಿಸುತ್ತಾರೆ. ಮನೆ, ವ್ಯವಹಾರ ಸ್ಥಳ, ಮತ್ತು ಭಕ್ತಿಮಯ ಸ್ಥಳಗಳಷ್ಟೇ ಅಲ್ಲದೆ, ಕೆಲವರು ತಮ್ಮ ವಾಹನಗಳಲ್ಲೂ ದೇವರ ವಿಗ್ರಹ(Idol of God) ಅಥವಾ ಚಿತ್ರವನ್ನು ಇಡುವ ಪದ್ಧತಿಯನ್ನು ಅನುಸರಿಸುತ್ತಾರೆ. ಇದು ವಿಶೇಷವಾಗಿ ವಾಹನದ ಸುರಕ್ಷತೆಗಾಗಿ ಮತ್ತು ದೇವರ ಕೃಪೆ ಅವರ ಮೇಲೆ ಇರಲಿ ಎಂಬ ಉದ್ದೇಶದಿಂದ ಮಾಡಲಾಗುತ್ತದೆ. ಆದರೆ, ಈ ಪರಂಪರೆಯನ್ನು ಪಾಲಿಸುವಾಗ ಸ್ವಚ್ಚತೆ, ಶಿಷ್ಟಾಚಾರ, ಮತ್ತು ಜ್ಯೋತಿಷ್ಯ ಶಾಸ್ತ್ರದ ಕೆಲವು ನಿಯಮಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯವಾಗಿದೆ. ಹಾಗಿದ್ದರೆ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ದೇವರ ವಿಗ್ರಹವನ್ನು ಇಡುವ ಮಹತ್ವವೇನು? ಅನುಸರಿಸಬೇಕಾದ ನಿಯಮಗಳು ಮತ್ತು ಜ್ಯೋತಿಷ್ಯ(Astrology) ಶಾಸ್ತ್ರದ ಪ್ರಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಮಾನವ ಜೀವನದಲ್ಲಿ ಆಧ್ಯಾತ್ಮಿಕತೆಯ ಮಹತ್ವ ಅಪಾರವಾಗಿದೆ. ನಿತ್ಯಜೀವನದಲ್ಲಿ ನಾವು ದೇವರ ಆರಾಧನೆ ಮಾಡುವುದು, ದೇವರನ್ನು ಸ್ಮರಿಸುವುದು ನಮ್ಮ ಸಂಸ್ಕೃತಿಯ ಅಂಶವಾಗಿದೆ. ಮನೆಗಳಲ್ಲಿ ದೇವರ ಪ್ರತಿಮೆಗಳನ್ನು ಇಟ್ಟು ಪೂಜೆ ಮಾಡುವುದು ಒಂದು ಸಾಮಾನ್ಯ ಆಚರಣೆ. ಅದೇ ರೀತಿ, ನಮ್ಮ ವಾಹನಗಳಲ್ಲಿ ದೇವರ ಆಶೀರ್ವಾದ ಇರಲೆಂದು ಹಲವರು ತಮ್ಮ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ದೇವರ ವಿಗ್ರಹ ಅಥವಾ ಫೋಟೋ ಇಡುತ್ತಾರೆ. ಇದರಿಂದ ರಕ್ಷಣೆ ಸಿಗುತ್ತದೆ ಎಂಬ ನಂಬಿಕೆ ಹಲವರಿಗಿದೆ. ಆದರೆ ಈ ಪವಿತ್ರ ಸ್ಥಳವನ್ನು ಸದಾ ಶುದ್ಧವಾಗಿರಿಸಬೇಕು ಎಂಬುದು ಮಹತ್ವದ ಅಂಶ.
ದೇವರ ವಿಗ್ರಹ ಇಡುವ ಪರಂಪರೆ:
ಭಾರತೀಯರು(Indians) ತಮ್ಮ ದಿನಚರಿಯಲ್ಲಿ ದೇವರನ್ನು ಆರಾಧಿಸುವುದನ್ನು ಪ್ರಮುಖವಾಗಿ ಪರಿಗಣಿಸುತ್ತಾರೆ. ಈ ನಂಬಿಕೆ ವಾಹನಗಳಿಗೂ ವ್ಯಾಪಿಸಿದ್ದು, ಕೆಲವು ಜನರು ಕಾರಿನಲ್ಲಿ ದೇವರ ವಿಗ್ರಹ ಅಥವಾ ಚಿತ್ರ ಇಡುವ ಮೂಲಕ ಪ್ರಯಾಣವನ್ನು ಶುಭಕರವಾಗಿ ಮತ್ತು ಸುರಕ್ಷಿತವಾಗಿ(Safely) ನಡೆಸಲು ಬಯಸುತ್ತಾರೆ. ಭಗವಂತನ ನೆನಪಿನಲ್ಲಿ ಚಾಲನೆ ಮಾಡುವುದರಿಂದ ಆತ್ಮಸ್ಥೈರ್ಯ ಮತ್ತು ಮನಶಾಂತಿ ದೊರಕುತ್ತದೆ ಎಂದು ಭಕ್ತರು ನಂಬುತ್ತಾರೆ.
ದೇವರ ವಿಗ್ರಹವನ್ನು ಇಡುವಾಗ ಅನುಸರಿಸಬೇಕಾದ ನಿಯಮಗಳು ಯಾವುವು?:
ದೇವರ ವಿಗ್ರಹ ಇಡುವ ಸ್ಥಳವನ್ನು ನಿರಂತರವಾಗಿ ಸ್ವಚ್ಛಗೊಳಿಸಬೇಕು. ಧೂಳು, ಕೊಳಕು ಇರದಂತೆ ನೋಡಿಕೊಳ್ಳಬೇಕು.
ದೇವರ ವಿಗ್ರಹವಿರುವ ಕಾರಿನಲ್ಲಿ ಮಾದಕ ದ್ರವ್ಯಗಳ(drugs) ಸೇವನೆ ಮಾಡಬಾರದು.
ಸಿಗರೇಟ್, ಮದ್ಯಪಾನ(Cigarettes, alcohol) ಅಥವಾ ಯಾವುದೇ ಅಶುದ್ಧ ಪದಾರ್ಥಗಳನ್ನು ಬಳಸಬಾರದು.
ಮಾಂಸಾಹಾರ(meat) ಸೇವನೆ ಮಾಡುವುದನ್ನು ತಪ್ಪಿಸಬೇಕು.
ವಾಸ್ತು ಶಾಸ್ತ್ರದ ಪ್ರಕಾರ ಗಣೇಶ ಮತ್ತು ಹನುಮಂತ ದೇವರ ವಿಗ್ರಹವನ್ನು ಇಡುವುದು ಶುಭಕರ.
ಗಣಪತಿ: ಅಡೆತಡೆಗಳನ್ನು ನಿವಾರಿಸಿ ಸುರಕ್ಷಿತ ಪ್ರಯಾಣಕ್ಕೆ ಸಹಾಯ ಮಾಡುತ್ತಾರೆ.
ಹನುಮಂತ: ಶಕ್ತಿಯ ಸಂಕೇತವಾಗಿದ್ದು, ಅಪಾಯಗಳ ವಿರುದ್ಧ ರಕ್ಷಣೆಯನ್ನು ಒದಗಿಸುತ್ತಾರೆ. ಹಾರುವ ಹನುಮಂತನ ವಿಗ್ರಹವನ್ನು ಇಡುವುದು ಅತ್ಯಂತ ಮಂಗಳಕರ.
ದೇವರ ಸ್ಮರಣೆ ಮಾಡುವುದರೊಂದಿಗೆ ಬೆಳಿಗ್ಗೆ ಮತ್ತು ರಾತ್ರಿ ಹಗುರವಾದ ಆರತಿ ಅಥವಾ ಧೂಪವನ್ನಾದರೂ ಹಚ್ಚಬೇಕು.
ಕಾರಿನಲ್ಲಿ ದೇವರ ವಿಗ್ರಹ ಇರಿಸುವುದು ಭಕ್ತಿ ಮತ್ತು ಭದ್ರತೆಯ ಸಂಕೇತವಾಗಿದೆ. ಆದರೆ ದೇವರ ಪ್ರಸ್ತಿತಿಯನ್ನು ಗೌರವಿಸುವುದು ಮುಖ್ಯ. ಸ್ವಚ್ಛತೆ, ನಿಯಮ ಪಾಲನೆ, ಶಿಷ್ಟಾಚಾರ, ಸತ್ಕರ್ಮಗಳ ಪಾಲನೆಯಿಂದ ದೇವರ ಕೃಪೆ ಸದಾ ನಮ್ಮ ಮೇಲೆ ಇರುತ್ತದೆ. ಆದ್ದರಿಂದ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ(dashboard) ದೇವರ ವಿಗ್ರಹ ಇಡುವಾಗ ಈ ನಿಯಮಗಳನ್ನು ಪಾಲಿಸುವುದು ಸೂಕ್ತವಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.