ಫ್ಲಿಪ್ ಕಾರ್ಟ್ (flipkart) ನ ಎಂಡ್ ಆಫ್ ಸೀಸನ್ ಸೆಲ್ (End of season sale) ನಲ್ಲಿ ಭರ್ಜರಿ ರಿಯಾಯಿತಿಗಳೊಂದಿಗೆ ಐಫೋನ್ (iPhone) ಸಿರೀಸ್ ಗಳು.
ಇಂದು ಎಲ್ಲಾ ಆನ್ಲೈನ್ ವಹಿವಾಟಾಗಿದೆ (online transaction) ಪ್ರತಿಯೊಂದು ವಸ್ತುಗಳನ್ನು ಆನ್ಲೈನಲ್ಲಿ ಖರೀದಿ ಮಾಡುತ್ತೇವೆ. ಮಾರುಕಟ್ಟೆಗೆ ಹೋಗಿ ಕೊಂಡುಕೊಳ್ಳುವರ ಸಂಖ್ಯೆ ಅತೀ ಕಡಿಮೆ. ಆನ್ಲೈನ್ ನಮಗೆ ಬೇಕಾದ ವಸ್ತುಗಳು ಖರೀದಿ ಮಾಡುವವರಿಂದ ಮನೆ ಬಾಗಿಲಿಗೆ ಬಂದು ತಲುಪುತ್ತವೆ. ಹಾಗೆ ನೋಡುವುದಾದರೆ ಆನ್ಲೈನ್ ಇ ಕಾಮರ್ಸ್ ವೆಬ್ ಸೈಟ್ (e commerce website) ಗಳಲ್ಲಿ ಹೆಚ್ಚು ಜನಪ್ರಿಯತೆ ಹೊಂದಿರುವುದು ಫ್ಲಿಪ್ ಕಾರ್ಟ್ ಕೂಡ ಒಂದಾಗಿದೆ. ಫ್ಲಿಪ್ ಕಾರ್ಟ್ ನಲ್ಲಿ ಅನೇಕ ಜನ ವಹಿವಾಟು ಮಾಡುತ್ತಾರೆ. ಹಾಗೆ ಫ್ಲಿಪ್ ಕಾರ್ಟ್ ಸೀಸನ್ ಗೆ ತಕ್ಕಂತೆ ಅನೇಕ ಆಫರ್ ಗಳು ಕೊಡುಗೆಗಳು ಮತ್ತು ಭರ್ಜರಿಗಳನ್ನು ರಿಯಾಯಿತಿಗಳನ್ನು ನೀಡುತ್ತದೆ.
ಫ್ಲಿಪ್ ಕಾರ್ಟ್ ಪ್ಲಾಟ್‌ಫಾರ್ಮ್‌ನಲ್ಲಿ ನೂತನ ಎಂಡ್ ಆಫ್ ಸೀಸನ್ ಸೇಲ್ :
ಇ ಕಾಮರ್ಸ್ ವೆಬ್‌ಸೈಟ್‌ಗಳು ಬಹಳ ವಿಶೇಷವಾಗಿರುತ್ತವೆ. ಯಾಕೆಂದರೆ, ಸೀಸನ್ ಗೆ ತಕ್ಕಂತೆ ವಿಶೇಷ ರಿಯಾಯಿತಿ ನೀಡುತ್ತವೆ. ಹಾಗೆಯೇ ಇದೀಗ ಇ-ಕಾಮರ್ಸ್ ಸಂಸ್ಥೆಯಾಗಿರುವ ಫ್ಲಿಪ್‌ಕಾರ್ಟ್ (Flipkart) ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ನೂತನ ಎಂಡ್ ಆಫ್ ಸೀಸನ್ ಸೇಲ್ ಈವೆಂಟ್ ಅನ್ನು ಆಯೋಜಿಸುತ್ತಿದ್ದು, ಹಲವಾರು ಐಫೋನ್‌ಗಳ (iPhone) ಮೇಲೆ ರಿಯಾಯಿತಿಗಳನ್ನು ನೀಡಲು ಮುಂದಾಗಿದೆ. ಫ್ಲಿಪ್‌ಕಾರ್ಟ್ ಇ-ಕಾಮರ್ಸ್ ವೆಬ್‌ಸೈಟ್ ಐಫೋನ್ ಸ್ಮಾರ್ಟ್‌ಫೋನ್ ಖರೀದಿ ಮೇಲೆ ಭರ್ಜರಿ ರಿಯಾಯಿತಿ ನೀಡುತ್ತಿದೆ. ಅವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದು ಕೊಳ್ಳೋಣಬನ್ನಿ.
ಐ ಫೋನ್ ಸರಣಿಗಳ ಸ್ಮಾರ್ಟ್ ಫೋನ್ ಗಳಿಗೆ ಫ್ಲಿಪ್ ಕಾರ್ಟ್ ನಲ್ಲಿ ಭರ್ಜರಿ ರಿಯಾಯಿತಿ (special offers) :
ಐ ಫೋನ್ ಸ್ಮಾರ್ಟ್ ಫೋನ್ ಗಳ ಮೇಲೆ ಫ್ಲಿಫ್ ಕಾರ್ಟ್ ಭರ್ಜರಿ ರಿಯಾಯಿತಿ ನೀಡುತ್ತಿದ್ದು, ಇದೀಗ iPhone 14 Plus, iPhone 15, iPhone 15 Pro ಸೇರಿದಂತೆ ಇನ್ನೂ ಅನೇಕ ಡಿವೈಸ್‌ಗಳ ಮೇಲೆ ಬ್ಯಾಂಕ್ ಕೊಡುಗೆಗಳ ಜೊತೆಗೆ ಬೃಹತ್ ಪ್ರಮಾಣದ ರಿಯಾಯಿತಿಗಳನ್ನು ಫ್ಲಿಪ್‌ಕಾರ್ಟ್ ನೀಡುತ್ತಿದೆ. ಈಗಾಗಲೇ ಮಾರಾಟವು ಆರಂಭವಾಗಿದ್ದು, ಜೂನ್ 8 ರವರೆಗೆ ಮುಂದುವರಿಯುತ್ತದೆ.
ಫ್ಲಿಪ್‌ಕಾರ್ಟ್ ಎಂಡ್ ಆಫ್ ಸೀಸನ್ ಸೇಲ್ ಸಮಯದಲ್ಲಿ 128GB ಸ್ಟೋರೇಜ್ ವೇರಿಯಂಟ್ ಐಫೋನ್ 14 ಪ್ಲಸ್ ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆ 61,999 ರೂ.ಗಳಾಗಿರಲಿವೆ. ಈ ಬೆಲೆಯು ಅದರ ಮೂಲ ಬೆಲೆ ರೂ 79,900 ಕ್ಕಿಂತ ಬಹಳ ಕಡಿಮೆಯಾಗಿದೆ, ಅಂದರೆ ಫ್ಲಿಪ್‌ಕಾರ್ಟ್ ಈ ಸ್ಮಾರ್ಟ್‌ಫೋನ್ ಖರೀದಿ ಮೇಲೆ ಸುಮಾರು 17,901 ರೂ. ಗಳಷ್ಟು ಕಡಿಮೆ ಮಾಡಿದೆ.
ಐಫೋನ್ 14 (iPhone 14) :
ಐಫೋನ್ 14 ಸ್ಮಾರ್ಟ್ ಫೋನ್ ಅನ್ನು ಖರೀದಿ ಮಾಡುವವರಿಗೆ ಇಲ್ಲಿದೆ ಬಹಳ ಆಫರ್ ಗಳು(offers),
ಆದರೆ ಐ ಫೋನ್ ನ ಪ್ಲಸ್ ಮಾದರಿಯು ಸ್ವಲ್ಪ ಹೆಚ್ಚು ಬೆಲೆಯಲ್ಲಿ ಲಭ್ಯವಿವೆ. ಗ್ರಾಹಕರಿಗೆ ಹೆಚ್‌ಡಿಎಫ್‌ಸಿ ಬ್ಯಾಂಕ್(HDFC Bank) ಮೂಲಕ EMI ಆಯ್ಕೆಯಲ್ಲಿ ಫೋನ್ ಖರೀದಿಸಿದರೆ ಶೇಕಡಾ 10 ರಷ್ಟು ರಿಯಾಯಿತಿ ಸೇರಿದಂತೆ ಕೆಲವು ಬ್ಯಾಂಕ್ ಕೊಡುಗೆಗಳೂ ದೊರೆಯಲಿವೆ.
ಸಾಮಾನ್ಯ iPhone 14 ಮಾದರಿ ಸ್ಮಾರ್ಟ್‌ಫೋನ್ 56,999 ರೂಪಾಯಿಗಳಿಗೆ ಲಭ್ಯವಿದೆ. ಅಷ್ಟೇ ಅಲ್ಲದೆ ಗ್ರಾಹಕರು ಸಾಧ್ಯವಾದರೆ ತಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ಮಾರಾಟ ಮಾಡಿ ಐ ಫೋನ್ 14 ನ ಮುಂದುವರಿದ ಸ್ಮಾರ್ಟ್ ಫೋನ್ ಆದ ಐಫೋನ್ 15 ಅನ್ನು ಖರೀದಿಸಬಹುದಾಗಿದೆ.
ಐಫೋನ್ 15 (iPhone 15) :
ಐಫೋನ್ 14 ನ ನಂತರದ ಮಾದರಿಯು iPhone 15 ಇದು ವೇಗವಾದ ಕಾರ್ಯಕ್ಷಮತೆ ಮತ್ತು ಉತ್ತಮ ಕ್ಯಾಮರಾ ವ್ಯವಸ್ಥೆ ಹೊಂದಿದೆ. iPhone 15 Pro ಮಾದರಿಗಳಲ್ಲಿ ಉತ್ತಮ ಫೀಚರ್ಸ್ ಪಡೆಯಬಹುದು. ಐಫೋನ್ 15 ಮಾದರಿಯ ಬೆಲೆ 70,999 ರಿಂದ ಪ್ರಾರಂಭವಾಗಲಿದ್ದು, ಇದು ಅದರ ಮೂಲ ಬೆಲೆ 79,900 ಕ್ಕಿಂತ ಕಡಿಮೆಯಾಗಿದೆ. ಗ್ರಾಹಕರು 8,901 ರೂಪಾಯಿಗಳ ಫ್ಲಾಟ್ ರಿಯಾಯಿತಿಯನ್ನು ಈ ಸ್ಮಾರ್ಟ್‌ಫೋನ್ ಖರೀದಿಯಲ್ಲಿ ಪಡೆಯಬಹುದು.
ವಿಶೇಷ ಆಫರ್ಸ್ ಗಳು (special offers) :
ಹಾಗೆಯೇ ಗ್ರಾಹಕರು SBI ಬ್ಯಾಂಕ್ ಕಾರ್ಡ್‌ಗಳ ಮೇಲೆ 4,000 ರೂ. ಗಳ ಹೆಚ್ಚುವರಿ ರಿಯಾಯಿತಿಯನ್ನೂ ಪಡೆಯಬಹುದು. ಯಾಕೆಂದರೆ, ಬೆಲೆಯನ್ನು 66,999 ರೂ.ಗೆ ಇಳಿಸುತ್ತದೆ. ಪ್ರಸ್ತುತ iPhone ನಲ್ಲಿ ಇನ್ನೂ ಹೆಚ್ಚಿನ ರಿಯಾಯಿತಿಗಳನ್ನು ಪಡೆಯಲು ಜನರು ವಿನಿಮಯ ಕೊಡುಗೆಗಳನ್ನು ಕ್ಲೈಮ್ ಕೂಡ ಮಾಡಬಹುದು.
ಐಫೋನ್ 15 ಪ್ರೊ (iPhone 15 pro):
ಇನ್ನು ಐಫೋನ್ 15 ಪ್ರೊ ಸ್ಮಾರ್ಟ್‌ಫೋನ್ ಖರೀದಿದಾರರು 1,27,990 ರೂ. ಗಳಿಗೆ ಪಡೆಯಬಹುದು. ಇದರ ಮೂಲ ಬೆಲೆ 1,34,900 ರೂ.ಗಿಂತ ಕಡಿಮೆಯಾಗಿದೆ. ಅದೇ ರೀತಿ iPhone 15 Pro Max ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ 1,48,900 ರೂ.ಗಳಲ್ಲಿ ಖರೀದಿಸಬಹುದು. ಇದರ ಮೂಲ ಬೆಲೆ 1,59,900 ರೂ. ಗಿಂತ ಕಡಿಮೆಯಾಗಿದೆ.
ಹಾಗೆಯೇ ಕೇವಲ ಐಫೋನ್ ಮಾತ್ರವಲ್ಲದೆ ವಿವಿಧ ಸ್ಮಾರ್ಟ್ ಫೋನ್ ಗಳು ಸೇರಿದಂತೆ ಹಲವು ವಸ್ತುಗಳ ಮೇಲೆ ಹೆಚ್ಚು ರಿಯಾಯಿತಿ ಮತ್ತು ಉತ್ತಮ ಆಫರ್ಸ್, ಕೊಡುಗೆಗಳನ್ನು ಫ್ಲಿಫ್ ಕಾರ್ಟ್ ತನ್ನ ನೂತನ ಎಂಡ್ ಆಫ್ ಸೀಸನ್ ಸೇಲ್ ನಲ್ಲಿ ನೀಡುತ್ತಿದೆ. ಈ ಎಲ್ಲಾ ರಿಯಾಯಿತಿ ಮತ್ತು ಆಫರ್ಸ್ ಗಳು ಜೂನ್8 ವರೆಗೆ ಮಾತ್ರ ಲಭ್ಯವಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.