Iqoo Mobile – ಐಕ್ಯೂದ ಈ ಹೊಸ ಮೊಬೈಲ್ ಬೆಲೆಯಲ್ಲಿ ಭಾರಿ ಇಳಿಕೆ ಸಾಧ್ಯತೆ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

IQoo Neo 7 5G

ಇದೀಗ ಎಲ್ಲರಿಗೂ ಸಿಹಿ ಸುದ್ದಿ ತಿಳಿದು ಬಂದಿದೆ. ಹೌದು ಐಕ್ಯೂ ಸಂಸ್ಥೆಯು ಭಾರತದಲ್ಲಿ ಇದೀಗ ತನ್ನ ಹೊಸ ಮಾಡೆಲ್ ನ ಸ್ಮಾರ್ಟ್ ಫೋನ್ ಆದ ಐಕ್ಯೂ ನಿಯೋ 9 ಪ್ರೊ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ರೆಡಿಯಾಗಿದೆ. ಹಾಗೆಯೇ ಇದರಲ್ಲಿ ಖುಷಿಯ ವಿಚಾರ ಎಂದರೆ ಐಕ್ಯೂ ನಿಯೋ 7 5G ( IQoo Neo 7 5G ) ಮೊಬೈಲ್‌ ಬೆಲೆಯನ್ನು ಕಡಿಮೆ ಮಾಡಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಐಕ್ಯೂ ಸ್ಮಾರ್ಟ್ ಫೋನ್ ದರ ಕಡಿತದ ವಿವರ ಹೀಗಿದೆ :

IQoo Neo 7 5G

ಈಗಾಗಲೇ ಐಕ್ಯೂ ಸ್ಮಾರ್ಟ್ ಫೋನ್ ಸಂಸ್ಥೆಯು ಬಿಡುಗಡೆ ಮಾಡುವ ಐಕ್ಯೂ ನಿಯೋ 7 5G ಮೊಬೈಲ್‌ ನ ಬೆಲೆಯು ಕಡಿತವಾಗಿದೆ.

8GB RAM/128GB ಸ್ಟೋರೇಜ್‌ ವೇರಿಯಂಟ್‌ ಗೆ ರೂ. 3,000 ದರ ಕಡಿತವಾಗಿದೆ.

ಹಾಗೆಯೇ 12GB RAM/256GB ವೇರಿಯಂಟ್‌ ನ ಸ್ಮಾರ್ಟ್ ಫೋನ್ ನ ಬೆಲೆಯಲ್ಲಿ 4,000ರೂ. ಗಳ ವರೆಗೆ ಇಳಿಕೆ ಮಾಡಲಾಗಿದೆ.

ಹಾಗೆಯೇ ಈ ಒಂದು ಸ್ಮಾರ್ಟ್ ಫೋನ್ ನ ಫೀಚರ್ಸ್ ಗಳ ಬಗ್ಗೆ ವಿವರ :

ಡಿಸ್ಪ್ಲೇ ( Display ) :

ಈ ಫೋನ್‌ 6.78 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇಯು 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿದೆ.
ಹಾಗೆಯೇ ಈ ಫೋನ್‌ ನಲ್ಲಿ 120Hz ರಿಫ್ರೆಶ್ ರೇಟ್‌ ಮತ್ತು 300Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಸಾಮರ್ಥ್ಯ ವನ್ನು ಕಾಣಬಹುದು.

ಪ್ರೊಸೆಸರ್ ( Processor ) :

ಐಕ್ಯೂ ನಿಯೋ 7 5G ಫೋನ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8200 5G ಪ್ರೊಸೆಸರ್‌ ನಲ್ಲಿ ಕಾರ್ಯ ನಿರ್ವಹಿಸಲಿದೆ.
ಹಾಗೆಯೇ ಇದರಲ್ಲಿ ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ ಜೊತೆಗೆ ಕಾರ್ಯ ಮಾಡಲಿದೆ.

ಸ್ಟೋರೇಜ್ ( Storage ) :

ಈ. ಒಂದು ಸ್ಮಾರ್ಟ್ ಫೋನ್ ನಲ್ಲಿ ನಿಮಗೆ ಎರಡು ವೇರಿಯೆಂಟ್ ಲಭ್ಯವಿದೆ. ಅವುಗಳೆಂದರೆ :
8GB RAM/128GB ಹಾಗೂ 12GB RAM ಮತ್ತು 256GB ಆಂತರೀಕ ಸ್ಟೋರೇಜ್‌ ಅನ್ನು ಹೊಂದಿದೆ.

whatss

ಕ್ಯಾಮೆರಾ ( Camera ) :

ಇನ್ನು ಐಕ್ಯೂ ನಿಯೋ 7 5G ಫೋನ್‌ ನ ಕ್ಯಾಮೆರಾ ಬಗ್ಗೆ ನೋಡುವುದಾದರೆ ಈ ಫೋನ್ ನ ಹಿಂಭಾಗದಲ್ಲಿ ಮೂರು ರಿಯರ್‌ ಕ್ಯಾಮೆರಾ ಅನ್ನು ನೀಡಲಾಗಿದೆ.

ಹಾಗೆಯೇ ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 64 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದ್ದು, ದ್ವಿತೀಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್‌ ಅನ್ನು ಒಳಗೊಂಡಿದೆ.

ಇಷ್ಟೇ ಅಲ್ಲದೆ ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಅನ್ನು ಹೊಂದಿದ್ದು, ಮುಂಭಾಗದಲ್ಲಿ 16 ಮೆಗಾ ಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ಬ್ಯಾಟರಿ ಮತ್ತು ಸಾಮರ್ಥ್ಯ ( Battery and Pack up ) :

ಐಕ್ಯೂ ನಿಯೋ 7 5G ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ. ಹಾಗೆಯೇ ಈ ಬ್ಯಾಟರಿ ಶಕ್ತಿಗೆ ಪೂರಕವಾಗಿ 120W ಫ್ಲ್ಯಾಶ್ ಚಾರ್ಜಿಂಗ್ ಸೌಲಭ್ಯವನ್ನು ಕೂಡ ಅಳವಡಿಸಿದ್ದಾರೆ. ಇನ್ನು ಈ ಸ್ಮಾರ್ಟ್ ಫೋನ್ ನಲ್ಲಿ ಕನೆಕ್ಟಿವಿಟಿ ಸೌಲಭ್ಯಗಳನ್ನು ನೀಡಿದ್ದಾರೆ.
5G, 4G LTE, Wi-Fi 6 ಬ್ಲೂಟೂತ್ 5.2, GPS, GNSS, NavIC, ಮತ್ತು USB ಟೈಪ್-C ಪೋರ್ಟ್ ಅನ್ನು ನೀಡಲಾಗಿದೆ.

tel share transformed

ಬಣ್ಣಗಳು ( Colors ) :

ಇನ್ನು ಈ ಫೋನ್‌ ಬ್ಲೂ ಹಾಗೂ ಬ್ಕ್ಯಾಕ್‌ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಸಿಗಲಿವೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಸ್ಮಾರ್ಟ್‌ಫೋನ್‌ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!