ಮಾರುಕಟ್ಟೆಗೆ ಬಿಡುಗಡೆಯಾದ ಹೊಸ ಐಕ್ಯೂಬ್ ಎಲೆಕ್ಟ್ರಾನಿಕ್ಸ್ ಸ್ಕೂಟರ್ (iQube Electronic Scooter) ಇತರ ಎಲ್ಲಾ ಸ್ಕೂಟರ್ಗಳಿಗೂ ಪೈಪೋಟಿ (competition) ನೀಡುತ್ತಿದೆ!
ಇಂದು ಮಾರುಕಟ್ಟೆಯಲ್ಲಿ ಹಲವಾರು ವಿಧದ ಸ್ಕೂಟರ್ ಗಳು, ಬೈಕ್ ಗಳು, ಮತ್ತು ವಾಹನಗಳನ್ನು ನಾವು ನೋಡುತ್ತೇವೆ. ದಿನ ಕಳೆದಂತೆ ಹೊಸ ಹೊಸ ವಾಹನಗಳು ಬಿಡುಗಡೆಯಾಗುತ್ತವೆ. ತಂತ್ರಜ್ಞಾನವನ್ನು ಉಪಯೋಗಿಸಿ ವಿಶೇಷ ಲಕ್ಷಣಗಳೊಂದಿಗೆ ಮಾರುಕಟ್ಟೆಗೆ ಬಿಡುಗಡೆಯಾಗುವ ವಾಹನಗಳನ್ನು ನಾವು ನೋಡುತ್ತೇವೆ ವಿವಿಧ ಕಂಪನಿಗಳ ವಾಹನಗಳು ಬೇರೆ ಬೇರೆ ಕಂಪನಿಗಳ ವಾಹನಗಳಿಗೆ ಪೈಪೋಟಿಯನ್ನು ನೀಡುತ್ತಿವೆ. ಅದರಲ್ಲಂತೂ ಇಂದು ಎಲೆಕ್ಟ್ರಾನಿಕ್ ವಾಹನಗಳು ವಿವಿಧ ಇಂಧನ ಚಾಲಿತ ವಾಹನಗಳಿಗೆ ಪೈಪೋಟಿ ನೀಡುತ್ತಿವೆ. ಇದೀಗ ಮಾರುಕಟ್ಟೆಗೆ ಐಕ್ಯೂಬ್ ಸರಣಿಯ ಎಲೆಕ್ಟ್ರಾನಿಕ್ಸ್ ಸ್ಕೂಟರ್ ಲಗ್ಗೆ ಇಟ್ಟಿದೆ ಇದು ಇತರ ಸ್ಕೂಟರ್ಗಳಿಗೆ ಟಕ್ಕರ್ ನೀಡುತ್ತಿದೆ. ಬನ್ನಿ ಈ ಸ್ಕೂಟರ್ ಯಾವ ಬಣ್ಣದಲ್ಲಿ ಬರುತ್ತಿದೆ ಹಾಗೂ ಈ ಸ್ಕೂಟರ್ ಫೀಚರ್ಸ್ ಗಳೇನು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.
ಮೂರು ಹೊಸ ರೂಪಾಂತರಗಳಲ್ಲಿ ಬಿಡುಗಡೆಯಾದ ಐಕ್ಯೂಬ್ ಎಲೆಕ್ಟ್ರಾನಿಕ್ ಸ್ಕೂಟರ್ :
ಐಕ್ಯೂಬ್ (iQube) ಎಲೆಕ್ಟ್ರಿಕ್ ಸ್ಕೂಟರ್ ಮೂರು ಹೊಸ ರೂಪಾಂತರ (variant) ಗಳಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಹೊಸ ಮಾದರಿಯನ್ನೊಳಗೊಂಡ 3.04 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿರುವ ಸಾಮಾನ್ಯ ಐಕ್ಯೂಬ್ ಹಾಗೂ ಐಕ್ಯೂಬ್ ಎಸ್ ಸಿರೀಸ್ ಗಳ ಸ್ಕೂಟರ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.
ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ (TVS iQube Electronic scooter) :
ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ನ ಎಂಟ್ರಿ ಲೆವೆಲ್ ಸ್ಕೂಟರಾಗಿದೆ. ಈ ಸ್ಕೂಟರ್ ನಲ್ಲಿ 2.2 ಕೆಡಬ್ಲ್ಯೂಹೆಚ್ ಬ್ಯಾಟರಿಯನ್ನು ಸಹ ನೀಡಲಾಗಿದೆ. ಈ ಸ್ಕೂಟರ್ ಸಂಪೂರ್ಣ ಚಾರ್ಜ್ ನಲ್ಲಿ 75 ಕಿ.ಮೀ ರೇಂಜ್ (ಮೈಲೇಜ್) ಕೊಡುತ್ತದೆ. ಜೊತೆಗೆ 75 ಕೆಎಂಪಿಹೆಚ್ ಟಾಪ್ ಸ್ಪೀಡ್ (top speed) ಅನ್ನು ಹೊಂದಿದೆ. ಈ ಸ್ಕೂಟರ್ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಅವುಗಳೆಂದರೆ: ವಾಲ್ನಟ್ ಬ್ರೌನ್ ಮತ್ತು ಪರ್ಲ್ ವೈಟ್.
ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ನ ಫೀಚರ್ಸ್ (features) :
5-ಇಂಚಿನ ಟಿಎಫ್‌ಟಿ ಸ್ಕ್ರೀನ್, ವೆಹಿಕಲ್ ಕ್ರ್ಯಾಶ್ & ಟೌ ಅಲರ್ಟ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. 30 ಲೀಟರ್ ಸಾಮರ್ಥ್ಯದ ಸೀಟ್ ಬೂಟ್ ಸ್ಪೇಸ್ (seat boot space) ಅನ್ನು ಪಡೆದಿದ್ದು, ಇದರ ಬ್ಯಾಟರಿಯು ಫಾಸ್ಟ್ ಚಾರ್ಜರ್ ಆಯ್ಕೆಯಲ್ಲಿ 2 ಗಂಟೆಯಲ್ಲಿ ಶೇಕಡ 0-80% ನಲ್ಲಿ ಚಾರ್ಜ್ ಆಗುತ್ತದೆ.
ಈ ಸ್ಕೂಟರ್ ರೂ.94,999 ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯಲಿದೆ.
ಟಿವಿಎಸ್ ಐಕ್ಯೂಬ್ ಎಸ್‌ಟಿ (TVS iQube ST) ಎಲೆಕ್ಟ್ರಿಕ್ ಸ್ಕೂಟರ್ :
ಮತ್ತೊಂದು ಸಿರೀಸ್ ನಲ್ಲಿ ಬಿಡುಗಡೆಗೊಂಡಿದೆ ಟಿವಿಎಸ್ ಐಕ್ಯೂಬ್ ಎಸ್‌ಟಿ (TVS iQube ST) ಎಲೆಕ್ಟ್ರಿಕ್ ಸ್ಕೂಟರ್. ಮುಖ್ಯವಾಗಿ ಇದರಲ್ಲಿ 3.4 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. ಪೂರ್ತಿ ಚಾರ್ಜ್ ನಲ್ಲಿ 100 ಕಿಲೋಮೀಟರ್ ಓಡುತ್ತದೆ. ಹಾಗೂ 78 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ.
ಮೂರು ವಿಧದ ಬಣ್ಣಗಳಲ್ಲಿ ಲಭ್ಯ :
ಈ ಐಕ್ಯೂಬ್ ಎಸ್‌ಟಿ (iQube ST) (3.4 ಕೆಡಬ್ಲ್ಯೂಹೆಚ್) ಎಲೆಕ್ಟ್ರಿಕ್ ಸ್ಕೂಟರ್ ಕೋರಲ್ ಸ್ಯಾಂಡ್ ಸ್ಯಾಟಿನ್, ಟೈಟಾನಿಯಂ ಗ್ರೇ ಮ್ಯಾಟ್, ಸ್ಟಾರ್‌ಲೈಟ್ ಬ್ಲೂ ಸೇರಿದಂತೆ 3 ವಿವಿಧ ಬಣ್ಣಗಳಲ್ಲಿ ಲಭ್ಯವಿದೆ.
ಟಿವಿಎಸ್ ಐಕ್ಯೂಬ್ ಎಸ್‌ಟಿ (TVS iQube ST) ಎಲೆಕ್ಟ್ರಿಕ್ ಸ್ಕೂಟರ್ ನ ಫಿಚರ್ಸ್ :
7-ಇಂಚಿನ ಫುಲ್ ಕಲರ್ ಟಿಎಫ್‌ಟಿ ಸ್ಕ್ರೀನ್, 118+ ಕನೆಕ್ಟ್ದ್ ಫೀಚರ್ಸ್, ವಾಯ್ಸ್ ಅಸಿಸ್ಟ್ & ಅಲೆಕ್ಸಾ ಸ್ಕಿಲ್‌ಸೆಟ್, ಡಿಜಿಟಲ್ ಡಾಕ್ಯುಮೆಂಟ್ ಸ್ಟೋರೇಜ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.
ರೂ.155,555 ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ.
3.04 ಕೆಡಬ್ಲ್ಯೂಹೆಚ್ ಬ್ಯಾಟರಿ ಸಾಮರ್ಥ್ಯವುಳ್ಳ ಐಕ್ಯೂಬ್ ಎಲೆಕ್ಟ್ರಾನಿಕ್ಸ್ ಸ್ಕೂಟರ್ :
3.04 ಕೆಡಬ್ಲ್ಯೂಹೆಚ್ ಬ್ಯಾಟರಿಯುಳ್ಳ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅಪ್ ಅನ್ನು ಹೊಂದಿವೆ. ಸಂಪೂರ್ಣ ಚಾರ್ಜ್ ನಲ್ಲಿ 100 ಕಿಲೋಮಿಟರ್ ರೇಂಜ್ ಅನ್ನು ಹೊಂದಿವೆ. ಇವುಗಳ ಬ್ಯಾಟರಿಯು 4 ಗಂಟೆ 30 ನಿಮಿಷದಲ್ಲಿ 0-80% ಚಾರ್ಜ್ ಆಗುತ್ತದೆ. ಮತ್ತು ಒಂದು ಉತ್ತಮ ಎಲೆಕ್ಟ್ರಾನಿಕ್ಸ್ ಸ್ಕೂಟರ್ ಗಳು ಇವಾಗಿವೆ. ಈ ಸಾಮಾನ್ಯ ಐಕ್ಯೂಬ್ ಹಾಗೂ ಐಕ್ಯೂಬ್ ಎಸ್ ರೂಪಾಂತರಗಳು ರೂ.1.37 ಲಕ್ಷದಿಂದ ರೂ.1.46 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯ ಇವೆ.
ಟಿವಿಎಸ್ ಐಕ್ಯೂಬ್ ಎಸ್‌ಟಿ ಮಾದರಿಯು 5.1 ಕೆಡಬ್ಲ್ಯೂಹೆಚ್ (5.1 KWH) :
ಇದು ಐ ಕ್ಯೂ ಎಲೆಕ್ಟ್ರಾನಿಕ್ ಸೀರೀಸ್ ನ ಮತ್ತೊಂದು ಸ್ಕೂಟರ್ ಆಗಿದೆ. ಈ ಟಿವಿಎಸ್ ಐಕ್ಯೂಬ್ ಎಸ್‌ಟಿ ಮಾದರಿಯು 5.1 ಕೆಡಬ್ಲ್ಯೂಹೆಚ್ ಸಾಮರ್ಥ್ಯ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಫುಲ್ ಚಾರ್ಜ್ ನಲ್ಲಿ 150 ಕಿಲೋಮೀಟರ್ ರೇಂಜ್ ನಲ್ಲಿ ಮೈಲೇಜ್ ನೀಡುತ್ತದೆ. 82 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. 950ಡಬ್ಲ್ಯೂ ಚಾರ್ಜರ್ ಅನ್ನು ಪಡೆದಿದ್ದು, ಇದರ ಬ್ಯಾಟರಿಯು 4 ಗಂಟೆ 18 ನಿಮಿಷಗಳಲ್ಲಿ ಶೇಕಡ 0-80% ಚಾರ್ಜ್ ಆಗುತ್ತದೆ.
ಟಿವಿಎಸ್ ಐಕ್ಯೂಬ್ ಎಸ್‌ಟಿ ಮಾದರಿಯು 5.1 ಕೆಡಬ್ಲ್ಯೂಹೆಚ್ ನ ಫಿಚರ್ಸ್ (features) :
ಈ ಐಕ್ಯೂಬ್ ಎಸ್‌ಟಿ (5.1 ಕೆಡಬ್ಲ್ಯೂಹೆಚ್) ಸಿರೀಸ್ 7-ಇಂಚಿನ ಫುಲ್ ಕಲರ್ ಟಿಎಫ್‌ಟಿ ಸ್ಕ್ರೀನ್, 118+ ಕನೆಕ್ಟ್ದ್ ಫೀಚರ್ಸ್, ವಾಯ್ಸ್ ಅಸಿಸ್ಟ್ & ಅಲೆಕ್ಸಾ ಸ್ಕಿಲ್‌ಸೆಟ್, ಡಿಜಿಟಲ್ ಡಾಕ್ಯುಮೆಂಟ್ ಸ್ಟೋರೇಜ್, TPMS (Tair Fresher Monitoring System) ಟೈರ್ ಫ್ರೆಶರ್ ಮಾನಿಟರಿಂಗ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. 32-ಲೀಟರ್ ಸಾಮರ್ಥ್ಯದ ಸೀಟ್ ಬೂಟ್ ಸ್ಪೇಸ್ ಅನ್ನು ಕೂಡ ಈ ಸ್ಕೂಟರ್ ಹೊಂದಿದೆ.
ಐಕ್ಯೂಬ್ ಎಸ್ ಟಿ 5.1 ಕೆಡಬ್ಲ್ಯೂಹೆಚ್ಎರಡು ಬಣ್ಣಗಳಲ್ಲಿ ಲಭ್ಯವಿದೆ :
ಟೈಟಾನಿಯಂ ಗ್ರೇ ಮ್ಯಾಟ್ ಮತ್ತು ಸ್ಟಾರ್‌ಲೈಟ್ ಬ್ಲೂ ಬಣ್ಣಗಳೊಂದಿಗೂ ಲಭ್ಯವಿದೆ.
ಈ ಸ್ಕೂಟರ್ ರೂ.185,373 ಎಕ್ಸ್ ಶೋರೂಂ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.