ಎಲ್ಲರಿಗೂ ನಮಸ್ಕಾರ. ಈಗಾಗಲೇ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಮೋಟರ್ ಬೈಕ್‌ಗಳು ಜನರಿಗೆ ಆಸಕ್ತಿದಾಯಕವಲ್ಲದೆ , ಹೆಚ್ಚಿನ ಮಟ್ಟದಲ್ಲಿ ಖರೀದಿ ಕೂಡಾ ಆಗುತ್ತಿವೆ. ಮತ್ತು ಜನರು ತಮ್ಮ ಪೆಟ್ರೋಲ್, ಡೀಸೆಲ್ ಖರ್ಚನ್ನು ಉಳಿಸಲು ಕೂಡಾ ಹೆಚ್ಚಾಗಿ ಎಲೆಕ್ಟ್ರಿಕ್ ಮಾದರಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ದೀಪಾವಳಿ ಹಬ್ಬದ ಪ್ರಯುಕ್ತ ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲೆ ಭಾರಿ ಆಫರ್ :
ಈ ಮದ್ಯದಲ್ಲಿ ಮಾರುಕಟ್ಟೆಗೆ ಇದೀಗ ದೀಪಾವಳಿ ಹಬ್ಬ(Diwali festival)ದ ಪ್ರಯುಕ್ತ ವಿವಿಧ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಕೂಡಾ ಬರ್ಜರಿ ಆಫರ್ ಗಳನ್ನು ನೀಡುತ್ತಿದ್ದಾರೆ. ಆದರೆ ಇದೀಗ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ತನ್ನ ಪ್ರಿಯ ಗ್ರಾಹಕರಿಗೆ ದೀಪಾವಳಿ ಹಬ್ಬದ ಕೊಡಗೆ ಅನ್ನು ನೀಡಿದೆ. ಬನ್ನಿ ಹಾಗಾದರೆ ಯಾವುದು ಆ ಎಲೆಕ್ಟ್ರಿಕ್ ಸ್ಕೂಟರ್?, ಅದರ ಬೆಲೆ ಎಷ್ಟು? ಏನು ಆ ಆಫರ್?, ಎಷ್ಟು ಮೈಲೇಜ್ ನೀಡಬಹುದು?, ಫೀಚರ್ ಗಳ ಏನಿರಬಹುದು ಎಂದು ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ಈ ಮುಂಬರುವ ಹಬಕ್ಕೆ ನೀವೇನಾದರೂ ಎಲೆಕ್ಟ್ರಿಕ್ ಸ್ಕೂಟರ್ (Electric scooter) ಖರೀದಿ ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದರೆ, ನೀವು ಟಿವಿಎಸ್ ಐಕ್ಯೂಬ್(TVS iQube )ಅನ್ನು ನಿಮ್ಮ ಆಯ್ಕೆಯಲ್ಲಿ ಇರಿಸಿಕೊಳ್ಳುವುದು ಉತ್ತಮ ಎಂದು ಹೇಳಬಹುದಾಗಿದೆ. ಯಾಕೆಂದರೆ ಇದೀಗ ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಟಿವಿಎಸ್ ಮೋಟಾರ್ಸ್ (TVS motors) ತನ್ನ ಎಲೆಕ್ಟ್ರಿಕ್ ಸ್ಕೂಟರ್ (Electric scooter) ಮೇಲೆ ದೀಪಾವಳಿಯ ಬಂಪರ್ ಆಫರ್(Dipavali Bumper Offer) ಅನ್ನು ನೀಡಿದೆ. ಈ ಸ್ಕೂಟರ್ ಮೇಲೆ 10,000 ರೂ.ವರೆಗೆ ರಿಯಾಯಿತಿ ನೀಡುತ್ತಿದೆ ಮತ್ತು ಈ ಕುರಿತು ಕಂಪನಿಯು ತನ್ನ ವೆಬ್‌ಸೈಟ್‌ನಲ್ಲಿ (Conpany website) ಈ ಮಾಹಿತಿಯನ್ನು ಹಂಚಿಕೊಂಡಿದೆ.
ಇದನ್ನೂ ಓದಿ – Loan Scheme – SC/ST ವರ್ಗದವರಿಗೆ ಸಾಲ & ಸಬ್ಸಿಡಿ ಯೋಜನೆಗಳಿಗೆ ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ
TVS iQube ಎಲೆಕ್ಟ್ರಿಕ್ ಸ್ಕೂಟರ್ ಆಫರ್ :
TVS iQube ಎಲೆಕ್ಟ್ರಿಕ್ ಸ್ಕೂಟರ್ ಮೇಲಿರುವ ಆಫರ್ ಮತ್ತು ಅದರ ಬೆಲೆಯ ಮಾಹಿತಿಯನ್ನು ತಿಲಿಯುವುದಾದರೆ, ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ರೂ 10,000 ವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಇದರಲ್ಲಿ ಕಂಪನಿಯು ರೂ 7500 ಕ್ಯಾಶ್ಬ್ಯಾಕ್(cashback) ನೀಡುತ್ತಿದೆ. ಮತ್ತೆ ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸುವಾಗ ನೋ ಕಾಸ್ಟ್ ಇಎಂಐ (No cost EMI) ಆಯ್ಕೆಯನ್ನು ಸಹ ಗ್ರಾಹಕರಿಗೆ ನೀಡುತ್ತದೆ. ಗ್ರಾಹಕರು ವಾರಂಟಿಯನ್ನು (waranty) 70,000km ಅಥವಾ 5 ವರ್ಷಗಳವರೆಗೆ ವಿಸ್ತರಿಸಬಹುದು.
ಇನ್ನೂ ಈ ಎಲೆಕ್ಟ್ರಿಕ್ ಸ್ಕೂಟರ್ (electric scooter) ಬೆಲೆಯ ಕುರಿತು ತಿಳಿಯುವುದಾದರೆ, ದೆಹಲಿಯಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್‌ನ ಎಕ್ಸ್ ಶೋ ರೂಂ ಬೆಲೆ(ex showroom price) 1.55 ಲಕ್ಷ ರೂಪಾಯಿಗಳು ಇರುತ್ತದೆ. ನಾವು ಸಬ್ಸಿಡಿ ಮುಖಾಂತರ ಕೊಂಡ ನಂತರ ಈ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 1.17 ಲಕ್ಷ ರೂ.ಗಳಿಗೆ ಸಿಗುತ್ತದೆ. ಮತ್ತೆ ಈ ಬೆಲೆಯಲ್ಲಿಯೂ ಸಹ ನೀವು ರೂ 10,000 ಹೆಚ್ಚುವರಿ ಪ್ರಯೋಜನಗಳನ್ನು ಪಡೆದುಕೊಳ್ಳುತಿರಿ. ಅಂದರೆ ನೀವು ಕೇವಲ 1.07 ಲಕ್ಷಕ್ಕೆ ಈ ಸ್ಕೂಟರ್ ಅನ್ನು ಖರೀದಿ ಮಾಡಿ ನಿಮ್ಮದಾಗಿಸಿ ಕೊಳ್ಳಬಹುದು.
ಇದನ್ನೂ ಓದಿ – Bricks Machine – ಗಂಟೆಗೆ ಬರೋಬ್ಬರಿ 25 ಸಾವಿರ ಇಟ್ಟಿಗೆ ತಯಾರಿಸುವ ಹೊಸ ಮಷಿನ್ ಬಿಡುಗಡೆ.
ಟಿವಿಎಸ್ ಐ ಕ್ಯೂಬ್ ನ ವೈಶಿಷ್ಟಗಳು :
ಇನ್ನು ಈ ಟಿವಿಎಸ್ ಐ ಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ನ ಫೀಚರ್ ಗಳ ಬಗ್ಗೆ ನೋಡುವುದಾದರೆ,
ಈ ಎಲೆಕ್ಟ್ರಿಕ್ ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 78kmph ಆಗಿದೆ. ಈ ಸ್ಕೂಟರ್ 4.30 ಗಂಟೆಗಳಲ್ಲಿ 0-80 % ಚಾರ್ಜಿಂಗ್ (Charging) ಅನ್ನು ಪೂರ್ಣಗೊಳಿಸುತ್ತದೆ.
ಈ ಸ್ಕೂಟರ್ 3.04 kWh ಲಿಥಿಯಂ ಐಯಾನ್ ಬ್ಯಾಟರಿಯನ್ನು (Lithium Ion Battery)ಹೊಂದಿದೆ. ಈ ಸ್ಕೂಟರ್ ನೀರು ಮತ್ತು ಧೂಳು ನಿರೋಧಕವಾಗಿದೆ. ಈ TVS ಸ್ಕೂಟರ್ ಜಿಯೋ-ಫೆನ್ಸಿಂಗ್, ರಿಮೋಟ್ ಬ್ಯಾಟರಿ ಚಾರ್ಜ್ ಸ್ಥಿತಿ , ಕೊನೆಯ ಪಾರ್ಕ್ ಸ್ಥಳ, ನ್ಯಾವಿಗೇಷನ್ ಅಸಿಸ್ಟ್, ಜೋಡಿಯಾಗಿರುವ ಸ್ಮಾರ್ಟ್‌ಫೋನ್‌ನಿಂದ ಒಳಬರುವ ಎಚ್ಚರಿಕೆಗಳು ಮತ್ತು ನಂತರ ಕೆಲವು ಸಂಪರ್ಕಿತ ವೈಶಿಷ್ಟ್ಯಗಳನ್ನು ಹೊಂದಿದೆ. ಬೆಳಕಿಗೆ ಸಂಬಂಧಿಸಿದಂತೆ, ಹೆಡ್‌ಲ್ಯಾಂಪ್ ಮತ್ತು ಟೈಲ್‌ಲ್ಯಾಂಪ್ ಎರಡನ್ನೂ LEDಗಳೊಂದಿಗೆ ಚಾಲಿತಗೊಳಿಸಲಾಗಿದೆ.
ಇದನ್ನೂ ಓದಿ – Jio Recharge Plan – ಬರೋಬ್ಬರಿ 336 ದಿನದ ಹೊಸ ಜಿಯೋ ರಿಚಾರ್ಜ್ ಪ್ಲಾನ್, ಅನಿಯಮಿತ ಕರೆ, ಡೇಟಾ & SMS ಸೇವಗಳು
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ