ಮಾರ್ಕೆಟ್ ನಲ್ಲಿ ಹೈ -ಬಜೆಟ್ ಇಂದ ಹಿಡಿದು ಕಡಿಮೆ ಬಜೆಟ್ ವರೆಗೂ ಅತ್ಯುತ್ತಮ ಸ್ಮಾರ್ಟ್ ಫೋನ್ ಗಳು(smart phones) ಲಭ್ಯವಿದೆ. ಹೀಗೆಯೇ ಒಂದು ಬಜೆಟ್- ಫ್ರೆಂಡ್ಲಿ , ಡ್ಯಾಶಿಂಗ್ ಫೀಚರ್ ಹೊಂದಿರುವ, ಅತ್ಯುತ್ತಮ ಕ್ಯಾಮರಾ ಪಡೆದಿರುವ, ಹಾಗೂ ಇನ್ನಿತರೆ ವೈಶಿಷ್ಟ್ಯಗಳನ್ನು ಒಳಗೊಂಡಿರುವ 5G ಸ್ಮಾರ್ಟ್ ಫೋನದೊಂದಿಗೆ ಬಂದಿದ್ದೇವೆ, ಈ ಸ್ಮಾರ್ಟ್ ಫೋನ್ ಬೆಲೆ ಕೇವಲ 9,999. ಯಾವ ಫೋನ್ ಎಂದು ತಿಳಿಯಬೇಕೇ, ಹಾಗಿದ್ದಲ್ಲಿ ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ ಮತ್ತು ಈ ಸ್ಮಾರ್ಟ್ ಫೋನ್ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
itel P55 5G ಸ್ಮಾರ್ಟ್ ಪೋನ್:
ಸ್ನೇಹಿತರೆ, ನೀವು ಕಡಿಮೆ ಬೆಲೆಯಲ್ಲಿ ಲಭ್ಯವಿರುವ 5G ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ, itel P55 5G ಸ್ಮಾರ್ಟ್ ಪೋನ್ ಉತ್ತಮ ಆಯ್ಕೆಯೆಂದು ಹೇಳಬಹುದು. ಏಕೆಂದರೆ ಕೇವಲ ಬಜೆಟ್- ಫ್ರೆಂಡ್ಲಿ ಮಾತ್ರವಲ್ಲದೆ ಆಧುನಿಕ(Modern) ಹಾಗೂ ಮುಂದುವರಿದ (advanced) ವೈಶಿಷ್ಟ್ಯಗಳೊಂದಿಗೆ ಪವರ್‌ಪ್ಯಾಕ್ಡ್ ಕಾರ್ಯಕ್ಷಮತೆಯನ್ನು ಈ ಸ್ಮಾರ್ಟ್ ಪೋನ್ ಹೊಂದಿರುತ್ತದೆ, ಹೀಗಾಗಿ
itel P55 ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ. ಈ ಸಾಧನದ ಎಲ್ಲಾ ವೈಶಿಷ್ಟ್ಯಗಳು, ಬೆಲೆಯ ಕುರಿತು ವಿವರವಾದ ಮಾಹಿತಿಯನ್ನು ತಿಳಿಯಿರಿ.
Itel P55 5G ವೈಶಿಷ್ಟ್ಯಗಳು :
Itel ಕಂಪನಿ ಪ್ರಸಕ್ತ 2023 ರಲ್ಲಿ ತನ್ನ ಹೊಸ ಸುಧಾರಿತ Itel P55 5G ಸ್ಮಾರ್ಟ್ ಫೋನ್ ಅನಾವರಣಗೊಳಿಸಿತು. ಈ ಸ್ಮಾರ್ಟ್ ಫೋನ್ 6.6 ಇಂಚಿನ HD IPS ಡಿಸ್ಪ್ಲೇಯೊಂದಿಗೆ ಬರುತ್ತದೆ. ಫೋನ್ 90 Hz ರಿಫ್ರೆಶ್ ರೇಟ್(Refresh rate) ಬೆಂಬಲದೊಂದಿಗೆ 180 Hz ಟಚ್ ಸ್ಯಾಂಪ್ಲಿಂಗ್ ದರವನ್ನು ಹೊಂದಿದೆ. ಇದಲ್ಲದೆ, ಫೋನ್ MediaTek Dimension 6080 ಚೀಪ್ ಸೆಟ್ ಪ್ರೊಸೆಸರನೊಂದಿಗೆ ಬರುತ್ತದೆ.
ಈ ಹ್ಯಾಂಡ್‌ಸೆಟ್ 6GB RAM ಮತ್ತು 128GB ಅಂತರ್ಗತ ಸಂಗ್ರಹಣೆ(Internal storage) ಯನ್ನು ಪಡೆಯುತ್ತದೆ. ಮತ್ತು ಮೈಕ್ರೊ SD ಕಾರ್ಡ್ ಮೂಲಕ ಫೋನ್‌ನ ಸಂಗ್ರಹಣೆಯನ್ನು 1TB ವರೆಗೂ ಹೆಚ್ಚಿಸುವ ಆಯ್ಕೆಯನ್ನು ಫೋನ್ ಹೊಂದಿದೆ. ಪ್ರಮುಖ ವಿಶೇಷವೆಂದರೆ, ಕಂಪನಿಯು 6GB RAM ನೀಡಿದರು ಕೂಡಾ, 6 GB ವರ್ಚುವಲ್ RAM ಮೂಲಕ RAM ಅನ್ನು 12 GB ವರೆಗೆ ಹೆಚ್ಚಿಸಬಹುದು. ಮೊಬೈಲ್ ಆಂಡ್ರಾಯ್ಡ್ v13 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಇದು ವೇಗವಾದ ನವೀಕರಣ(Updates)ಗಳನ್ನು ನೀಡುತ್ತದೆ.
ಕ್ಯಾಮರಾ ವಿಶೇಷತೆ:
ಇನ್ನು Itel P55 5G ಫೋನಿನ ಕ್ಯಾಮರಾ ಕ್ವಾಲಿಟಿ ಬಗ್ಗೆ ಹೇಳುವುದಾದರೆ, ಇದು 50MP ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು AI ಸಂವೇದಕ(Sensor)ವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಸ್ಮಾರ್ಟ್ ಫೋನ್ ನಲ್ಲಿ 18W ವೇಗದ USB ಟೈಪ್-C ಚಾರ್ಜಿಂಗ್ ಅನ್ನು ಬೆಂಬಲಿಸುವ 5000mAh ಬ್ಯಾಟರಿಯನ್ನು ಒದಗಿಸಲಾಗಿದೆ. ಸಂಪರ್ಕಕ್ಕಾಗಿ(Connectivity) , 3.5mm ಆಡಿಯೋ ಜ್ಯಾಕ್, ಸೈಡ್ ಮೌಂಟ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಫೇಸ್ ಅನ್‌ಲಾಕ್ ಫೀಚರ್ ಗಳೊಂದಿಗೆ ಬರುತ್ತದೆ.
Itel P55 5G ಬೆಲೆ:
ಭಾರತದಲ್ಲಿ Itel P55 5G 128GB ಯ ಪ್ರಾರಂಭಿಕ ಬೆಲೆ ರೂ. 9,999 ಆಗಿದೆ. ಈ ಮಾದರಿಯು 6 GB RAM ಮತ್ತು 128 GB ಆಂತರಿಕ ಸಂಗ್ರಹಣೆಯನ್ನು ಹೊಂದಿದೆ. ಈ ಸ್ಮಾರ್ಟ್ ಫೋನ್ ಜಗತ್ತಿನ ಪ್ರಸಿದ್ದ ಇ – ಕಾಮರ್ಸ್ ತಾಣವಾದ ಅಮೆಜಾನ್ (Amazon) ನಲ್ಲಿ ಮಾರಾಟಕ್ಕೆ ಲಭ್ಯವಿದೆ. ಇದು ಕೆಳಗಿನ ಬಣ್ಣಗಳಲ್ಲಿ ಬರುತ್ತದೆ: Galaxy Blue ಮತ್ತು Mint Green. ಹಾಗೆಯೇ ಕಂಪನಿಯು ಈ ಸ್ಮಾರ್ಟ್ ಪೋನಿಗೆ ಎರಡು ವರ್ಷಗಳ ವಾರಂಟಿಯೊಂದಿಗೆ ಗ್ರಾಹಕರಲ್ಲಿ ಭರವಸೆಯನ್ನು ನೀಡುತ್ತಿದೆ.
ನೀವು ಸಹ ಉತ್ತಮ ಹಾಗೂ ಕೈಗುಟುಕುವ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಈ itel P55 5G ಸ್ಮಾರ್ಟ್ ಫೋನ್ ಖಂಡಿತ ಉತ್ತಮ ಆಯ್ಕೆ ಎಂದು ಹೇಳಲು ತಪ್ಪಾಗುವುದಿಲ್ಲಾ. ಹಾಗೆಯೇ ಇಂತಹ ಉತ್ತಮ ಮಾಹಿತಿಯನ್ನು ಹೊಂದಿರುವ ಈ ವರದಿಯನ್ನು ನಿಮ್ಮೆಲ್ಲ ಸ್ನೇಹಾತರೊಂದಿಗೆ ಶೇರ್ ಮಾಡಿ, ಧನ್ಯವಾದಗಳು.
ಈ ಸ್ಮಾರ್ಟ್‌ಫೋನ್‌ನ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ
ಈ ಮಾಹಿತಿಗಳನ್ನು ಓದಿ
- ಹೊಸ ಮೊಬೈಲ್ ಖರೀದಿಸುವ ಮುನ್ನ ಈ ಲಿಸ್ಟ್ ಒಮ್ಮೆ ನೋಡಿ..!
- ವಿವೋದ ಮತ್ತೆರಡು ಹೊಸ ಸ್ಮಾರ್ಟ್ ಫೋನ್ಸ್ ಬಿಡುಗಡೆ, ಖರೀದಿಗೆ ಮುಗಿಬಿದ್ದ ಜನ
- ಇಷ್ಟು ಕಮ್ಮಿ ಬೆಲೆ ಅಂದ್ರೆ ನಿಜ ನೀವು ನಂಬಲ್ಲ, ಟೆಕ್ನೋದ ಹೊಸ ಸ್ಮಾರ್ಟ್ ಫೋನ್
- ಭರ್ಜರಿ ಎಂಟ್ರಿ ಕೊಟ್ಟ ಒನ್ಪ್ಲಸ್ 12 ಮೊಬೈಲ್ ! 1TB ವರೆಗೆ ಸ್ಟೋರೇಜ್ ಗುರು
- ಮಾರುಕಟ್ಟೆಗೆ ಜಬರ್ದಸ್ತ್ ಎಂಟ್ರಿ ಕೊಟ್ಟಿದೆ ರೆಡ್ ಮ್ಯಾಜಿಕ್ 9 ಪ್ರೊ, ಕಂಪ್ಲೀಟ್ ಮಾಹಿತಿ ಇಲ್ಲಿದೆ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ