ಜಿಯೋ (jio) ಅಪ್ಲಿಕೇಶನ್ ವಿಶೇಷತೆ ಹಾಗೂ ರೂ.395 ಯೋಜನೆಯೊಂದಿಗೆ ಪಡೆಯಿರಿ 5G ಪ್ರಿಪೇಯ್ಡ್ ಪ್ಲ್ಯಾನ್ (prepaid plan)
ಇಂದು ಹಲವಾರು ಟೆಲಿಕಾಂ ಕಂಪನಿಗಳು (telecom company) ಅತ್ಯಂತ ಜನಪ್ರಿಯತೆಯನ್ನು ಹೊಂದಿವೆ , ಅದರಲ್ಲೂ ಏರ್ಟೆಲ್ (airtel), ಜಿಯೋ (jio) ಕಂಪನಿಗಳು ಹೆಚ್ಚು ಹೆಸರುವಾಸಿಯಾಗಿವೆ. ಇನ್ನು ಹೇಳುವುದಾದರೆ ಜಿಯೋ ಕಂಪನಿಯ ಸಿಮ್(SIM) ಅನ್ನು ಹೆಚ್ಚು ಜನರು ಬಳಸುತ್ತಾರೆ. ಏಕೆಂದರೆ ಬೇರೆ ಕಂಪನಿಗಳಿಗೆ ಹೋಲಿಸಿದರೆ, ಇದು ಅಗ್ಗದ ಡೇಟಾ ಯೋಜನೆಗಳನ್ನು ನೀಡುತ್ತದೆ. ಜಿಯೋ ಕಂಪನಿಯು ತನ್ನ ಗ್ರಾಹಕರಿಗೆ ಉತ್ತಮ ಆಫರ್ ಗಳು ಮತ್ತು ಕೊಡುಗೆಯನ್ನು ನೀಡುತ್ತಿದ್ದು, ಕಂಪನಿಯು ಹೊಸ ಯೋಜನೆಗಳನ್ನು, ಪ್ರಿಪೇಯ್ಡ್ ಪ್ಲಾನ್ ಗಳನ್ನು ಬಿಡುಗಡೆ ಮಾಡುವುದರ ಮೂಲಕ ಹೆಚ್ಚು ಹೆಸರುವಾಸಿಯಾಗಿದೆ. ಹಾಗೆ ಇದೀಗ ಜಿಯೋ ಕಂಪನಿಯೂ ತನ್ನ ಹೊಸ ರೀಚಾರ್ಜ್ ಯೋಜನೆ(Recharge plan)ಯನ್ನು ವಿಸ್ತರಿಸಿದ್ದು, ಕೈಗೆಟುಕುವ ಪ್ರಿಪೇಯ್ಡ್ ಯೋಜನೆಯೊಂದನ್ನು ಜಾರಿಗೊಳಿಸಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇಂದು ಟೆಲಿಕಾಂ ಕಂಪನಿಗಳ ಮಾಸಿಕ ರೀಚಾರ್ಜ್ (monthly recharge) ಯೋಜನೆಯ ಬೆಲೆ ಹೆಚ್ಚಾಗಿದ್ದು, ಒಂದು ತಿಂಗಳು ಅಥವಾ 28 ದಿನಗಳ ವ್ಯಾಲಿಡಿಟಿಯನ್ನು ಪಡೆಯಲು ಕನಿಷ್ಠ 200 ರೂ ಬೇಕಾಗುತ್ತದೆ. ಹಾಗೆ ನೋಡುವುದಾದರೆ, ಉಳಿದ ಕಂಪನಿಗಳು ಜಿಯೋ ಕ್ಕಿಂತ ಹೆಚ್ಚು ಅಗ್ಗದ ರೀಚಾರ್ಜ್ ಪ್ಲ್ಯಾನ್ ಅನ್ನು ಹೊಂದಿವೆ.
ರಿಲಯನ್ಸ್ ಜಿಯೋ ದ 395 ಯೋಜನೆಯ ವಿಶೇಷತೆ :
ಈಗಾಗಲೇ ಜಿಯೋ ಕಂಪೆನಿಯು ರೂ 239 ಕ್ಕಿಂತ ಹೆಚ್ಚಿನ ಪ್ರತಿ ಪ್ರಿಪೇಯ್ಡ್ ಪ್ಲಾನ್‌ನೊಂದಿಗೆ ಅನಿಯಮಿತ 5G ಡೇಟಾವನ್ನು ಗ್ರಾಹಕರಿಗೆ ನೀಡುತ್ತಿದೆ. ಹಾಗೆಯೇ ಅದೇ ರೀತಿ ಏರ್‌ಟೆಲ್ ರೂ 455 ಅಥವಾ ರೂ 1799 ಪ್ಲಾನ್‌ಗಳೊಂದಿಗೆ ಅನಿಯಮಿತ 5G ಡೇಟಾ ಕೊಡುಗೆಯನ್ನು ಬಂಡಲ್ ಮಾಡುವುದಿಲ್ಲ. ಏಕೆಂದರೆ ರೂ.455 ಮತ್ತು ರೂ.1799 ಯೋಜನೆಗಳು ಗ್ರಾಹಕರಿಗೆ ಮೌಲ್ಯದ ಆಯ್ಕೆಗಳಾಗಿವೆ. ಆದರೆ ಜಿಯೋ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಗೆ ಉತ್ತಮ ಆಫರ್ ಗಳನ್ನು ನೀಡುತ್ತಿದೆ. ಹಾಗೆಯೇ ಇದೀಗ ಜಿಯೋದಿಂದ ರೂ 395 ಪ್ಲಾನ್ 84 ದಿನಗಳ ವ್ಯಾಲಿಡಿಟಿಯೊಂದಿಗೆ ಅನಿಯಮಿತ 5G ಡೇಟಾವನ್ನು ಗ್ರಾಹಕರಿಗೆ ನೀಡುತ್ತಿದೆ.
395 ರೂ. ಯೋಜನೆ ಹಳೇ ಯೋಜನೆ :
ಜಿಯೋ ಇದೀಗ ಬಿಡುಗಡೆ ಮಾಡಿರುವ ಯೋಜನೆ ಹಳೇ ಯೋಜನೆ ಆಗಿದ್ದು, ಆದರೆ ಇದೀಗ ಅಪ್ಲಿಕೇಶನ್ ನ ವಿಶೇತೆಯೊಂದಿಗೆ 395 ರೂ. ಯೋಜನೆಯಲ್ಲಿ ಅನಿಯಮಿತ 5G ಡೇಟಾವನ್ನು ನೀಡುತ್ತಿದೆ. ಈ ಆಫರ್‌ನಿಂದಾಗಿ ಅನೇಕ ಗ್ರಾಹಕರು ಈಗಾಗಲೇ ಅದರೊಂದಿಗೆ ರೀಚಾರ್ಜ್ ಮಾಡುತ್ತಾರೆ.
ಜಿಯೋ ರೂ 395 ಪ್ಲಾನ್ ನ ವಿವರಗಳು (information) ಈ ಕೆಳಗಿನಂತಿವೆ :
ಜಿಯೋದಿಂದ ರೂ 395 ಯೋಜನೆಯು 84 ದಿನಗಳವರೆಗೆ ಮಾನ್ಯತೆ ಇರುತ್ತದೆ. ಹಾಗೆಯೇ ಇದರಲ್ಲಿ ಅನಿಯಮಿತ ಧ್ವನಿ ಕರೆ, 1000 SMS ಮತ್ತು 6GB ಡೇಟಾದ ಬಂಡಲ್ ದೊರೆಯುತ್ತದೆ.
ಹಾಗೆಯೇ ಈ ರೀಚಾರ್ಜ್ ಪ್ಲ್ಯಾನಿನಲ್ಲಿ ಒಟ್ಟು 6GB ಡೇಟಾ ಇದ್ದು, ಯಾವುದೇ ದೈನಂದಿನ ಡೇಟಾ ಮಿತಿ ಇರುವುದಿಲ್ಲ. ಹಾಗೆಯೇ ಒಟ್ಟು 1000 ಎಸ್‌ಎಮ್‌ಎಸ್ (SMS) ಲಭ್ಯ ಇದ್ದು, ದೈನಂದಿನ ಮಿತಿ ಇರುವುದಿಲ್ಲ. ಇದರ ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್ ಸೇವೆಗಳು ದೊರೆಯುತ್ತವೆ.
ಈ ಯೋಜನೆಯ ಪ್ರಯೋಜನಗಳು (Benefits) :
ಅನಿಯಮಿತ 5G ಡೇಟಾ, JioCinema, JioCloud ಮತ್ತು JioTV. ನೀವೇನಾದರೂ ಜಿಯೋ ಕಂಪನಿಯ ಚಂದಾದಾರರಾಗಿದ್ದರೆ, ಅಥವಾ ಕಡಿಮೆ ಖರ್ಚು ಮಾಡಲು ಬಯಸುವವರಾಗಿದ್ದರೆ ಜಿಯೋ ನೀಡುವ ಈ ಒಂದು ಯೋಜನೆ ಬಹಳ ಉಪಯುಕ್ತವಾಗಿದೆ.
ಹಾಗೆಯೇ ಜಿಯೋ ಕಂಪೆನಿಯ ಇನ್ನೊಂದು ವಿಶೇಷತೆ ಎಂದರೆ, ತಾತ್ಕಾಲಿಕವಾಗಿ ಮತ್ತು ಅಗತ್ಯಕ್ಕಾಗಿ ಅತೀ ಕಡಿಮೆ ಪ್ರಮಾಣದ ಡೇಟಾವನ್ನು ನೀಡುತ್ತಿದೆ. Jio ನೀಡುವ ಡೇಟಾ ವೋಚರ್‌ಗಳು (vouchers) ಕೇವಲ 15 ರೂಪಾಯಿಗಳಿಂದ ಪ್ರಾರಂಭವಾಗುತ್ತವೆ. ನೀವು ಕೂಡ ಇದರ ಪ್ರಯೋಜನ ಪಡೆಯಬಹುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.