ರಿಲಯನ್ಸ್ ಜಿಯೋದಿಂದ ಗುಡ್ ನ್ಯೂಸ್ ತಿಳಿದು ಬಂದಿದೆ, ಜಿಯೋ ಎಐ ಕ್ಲೌಡ್(AI cloud) ಹೆಸರಿನ ಈ ಸೇವೆಯನ್ನು
ಘೋಷಿಸಿದ ಮುಖೇಶ್ ಅಂಬಾನಿ.
ರಿಲಯನ್ಸ್ ಜಿಯೋ (Reliance Jio) ಇನ್ಫೋಕಾಂ ಲಿಮಿಟೆಡ್ ಅಥವಾ ಜಿಯೋ ಭಾರತದ LTE ಮೊಬೈಲ್ ನೆಟ್ವರ್ಕ್ ಅನ್ನು ಆಪರೇಟರ್ ಮಾಡುತ್ತದೆ. ಹಾಗೆಯೇ ಇಂದು ಜಿಯೋ ಅತೀ ಹೆಚ್ಚು ಗ್ರಾಹಕಾರನ್ನು ಹೊಂದಿದ ನೆಟ್ವರ್ಕ್ ಆಗಿದೆ. ಜಿಯೋ ತನ್ನ ಗ್ರಾಹಕರಿಗೆ ಆಗಾಗ ಹೊಸ ಆಫರ್ ಗಳು, ಹೊಸ ಯೋಜನೆಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಹಾಗೆಯೇ ಇದೀಗ ಜಿಯೋ ಕಂಪನಿಯ ಅಧ್ಯಕ್ಷ ಮುಕೇಶ್ ಅಂಬಾನಿ (Mukesh Ambani) ಹೊಸ ಸುದ್ದಿಯೊಂದನ್ನು ನೀಡಿದ್ದಾರೆ. ಅದರ ಬಗ್ಗೆ ಪೂರ್ಣ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಜಿಯೋ ಗ್ರಾಹಕರಿಗೆ ಜಿಯೋ ಎಐ ಕ್ಲೌಡ್ ಹೆಸರಿನ ಈ ಸೇವೆಯನ್ನು ಘೋಷಿಸಿದ ಮುಕೇಶ್ ಅಂಬಾನಿ :
ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ರಿಲಯನ್ಸ್ ಜಿಯೋ ಬಳಕೆದಾರರಿಗೆ ಭರ್ಜರಿ ಸುದ್ದಿ ನೀಡಿದ್ದಾರೆ. ಜಿಯೋ ಬಳಕೆದಾರರು 100GB ಕ್ಲೌಡ್ ಸ್ಟೋರೇಜ್ (Cloud storage) ಅನ್ನು ಉಚಿತವಾಗಿ ಪಡೆಯುತ್ತಿದ್ದಾರೆ ಎಂದು ಘೋಷಿಸಲಾಗಿದೆ. ಜಿಯೋ ಎಐ ಕ್ಲೌಡ್ ಹೆಸರಿನ ಈ ಸೇವೆಯನ್ನು ಮುಖೇಶ್ ಅಂಬಾನಿ ಘೋಷಿಸಿದ್ದಾರೆ.
ಜಿಯೋ ಗ್ರಾಹಕರಿಗೆ 100 GB ವರೆಗೆ ಉಚಿತ ಕ್ಲೌಡ್ ಸಂಗ್ರಹಣೆ :
Jio AI ಕ್ಲೌಡ್ ವೆಲ್ಕಮ್ ಆಫರ್‌ನ ಭಾಗವಾಗಿ, Jio ಬಳಕೆದಾರರು 100 GB ವರೆಗೆ ಉಚಿತ ಕ್ಲೌಡ್ ಸಂಗ್ರಹಣೆಯನ್ನು ಪಡೆಯಬಹುದು. ಜಿಯೋ ಬಳಕೆದಾರರು ತಮ್ಮ ಫೋಟೋಗಳು, ವೀಡಿಯೊಗಳು, ಡಾಕ್ಯುಮೆಂಟ್‌ಗಳು ಮತ್ತು ಇತರ ಫೈಲ್‌ಗಳನ್ನು ಉಚಿತವಾಗಿ ಸಂಗ್ರಹಿಸಬಹುದು ಎಂದು ತಿಳಿಸಿದ್ದಾರೆ.
ಯಾವಾಗ ಈ ಸೇವೆಯು ಜಿಯೋ ಗ್ರಾಹಕರಿಗೆ ಲಭ್ಯವಿದೆ ?
ಜಿಯೋ ಗ್ರಾಹಕರು ಹೆಚ್ಚಿನ ಸಂಗ್ರಹಣೆಯನ್ನು ಬಯಸುವವರಿಗೆ ಕೈಗೆಟುಕುವ ಬೆಲೆಯಲ್ಲಿ ಶೇಖರಣಾ ಆಯ್ಕೆಗಳು ಲಭ್ಯವಿರುತ್ತವೆ. ಈ ವರ್ಷ ದೀಪಾವಳಿಯಿಂದ Jio AI-ಕ್ಲೌಡ್ ವೆಲ್ಕಮ್ ಆಫರ್ (Cloud Velkam Offer) ಅನ್ನು ಪ್ರಾರಂಭಿಸಲು ಯೋಜಿಸುತ್ತಿದ್ದಾರೆ. ಕ್ಲೌಡ್ ಡೇಟಾ ಸಂಗ್ರಹಣೆ, ಡೇಟಾ-ಚಾಲಿತ AI ಸೇವೆಗಳು ಎಲ್ಲರಿಗೂ ಪ್ರವೇಶಿಸಬಹುದಾದ ಶಕ್ತಿಯುತ, ಕೈಗೆಟುಕುವ ಪರಿಹಾರವನ್ನು ತರುತ್ತಿವೆ ಎಂದು ಮುಕೇಶ್ ಅಂಬಾನಿ ತಿಳಿಸಿದ್ದಾರೆ.
ಏನಿದು ಜಿಯೋ ಕಂಪನಿ ನೀಡುತ್ತಿರುವ AI-ಕ್ಲೌಡ್ ವೆಲ್ಕಮ್ ಆಫರ್ ?
AI-ಕ್ಲೌಡ್ ವೆಲ್ಕಮ್ ಆಫರ್ ಅನ್ನು ಘೋಷಿಸಿದ್ದು, ಜಿಯೋ ಬಳಕೆದಾರರು ತಮ್ಮ ಎಲ್ಲಾ ಫೋಟೋಗಳು, ವೀಡಿಯೊಗಳು, ಡಾಕ್ಯುಮೆಂಟ್‌ಗಳು, ಇತರ ಡಿಜಿಟಲ್ ವಿಷಯ, ಡೇಟಾವನ್ನು ಸುರಕ್ಷಿತವಾಗಿ ಸಂಗ್ರಹಿಸಲು ಮತ್ತು ಪ್ರವೇಶಿಸಲು 100 GB ವರೆಗೆ ಉಚಿತ ಕ್ಲೌಡ್ ಸಂಗ್ರಹಣೆಯನ್ನು ಪಡೆಯಬಹುದು.
ಷೇರುದಾರರಿಗೆ 1:1 ಬೋನಸ್ ಷೇರು!
ಭಾರತದ ಅತ್ಯಮೂಲ್ಯ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಸೆಪ್ಟೆಂಬರ್ 5 ರಂದು ತನ್ನ ಮಂಡಳಿಯ ಸಭೆಯಲ್ಲಿ ಷೇರುದಾರರಿಗೆ ಗುಡ್ ನ್ಯೂಸ್ ನೀಡಿದೆ. ಹೌದು ರಿಲಯನ್ಸ್ ಷೇರು ಹೊಂದಿರುವವರಿಗಂತೂ ಇದು ಬಂಪರ್ ನ್ಯೂಸ್. 1:1 ಬೋನಸ್ ಷೇರು ನೀಡುವುದಾಗಿ ಮುಕೇಶ್ ಅಂಬಾನಿ ಘೋಷಿಸಿದ್ದಾರೆ. ಯಾರ ಬಳಿ ಈಗಾಗಲೇ ರಿಲಯನ್ಸ್ ಷೇರು ಇದ್ಯೋ ಅಂಥವರಿಗೆ ಒಂದಕ್ಕೆ ಒಂದರಂತೆ ಬೋನಸ್ ಷೇರುಗಳು ಸಿಗಲಿವೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ