Jio Offers : ಜಿಯೋ ಫೈಬರ್‌, ಏರ್‌ಫೈಬರ್‌ 1 ವರ್ಷ ಉಚಿತ ಪಡೆಯಲು ಹೀಗೆ ಮಾಡಿ!

IMG 20240920 WA0004

ದೀಪಾವಳಿ ಗಿಫ್ಟ್ (Diwali Gift), ರಿಲಯನ್ಸ್ ಜಿಯೋದಿಂದ (Reliance Jio) ಡಬಲ್ ಧಮಾಕಾ! 1 ವರ್ಷ ಜಿಯೋ ಏರ್ ಫೈಬರ್ ಉಚಿತ!

ಇನ್ನೇನು ದೀಪಾವಳಿ (Diwali) ಹಬ್ಬ ಬರುತ್ತಿದೆ, ಹಬ್ಬದ ತಯಾರಿ ಕೂಡ ಆರಂಭಗೊಳ್ಳುತ್ತಿದೆ, ತಮ್ಮ ಮನೆಗಳಲ್ಲಿ ಚಂದ ಚಂದದ ದೀಪ ಬೆಳಗಲು ಜನರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಸಂಭ್ರಮವನ್ನು ದುಪ್ಪಟ್ಟು ಮಾಡಲು ಭಾರತದ ನಂಬರ್ ಒನ್ ಟೆಲಿಕಾಂ ಕಂಪನಿಯಾದ ರಿಲಾಯನ್ಸ್ ಜಿಯೋ (Reliance Jio) ಇದೀಗ ದೀಪಾವಳಿ ಧಮಾಕ ಆಫರ್ ಬಿಡುಗಡೆ ಮಾಡಿದೆ. ಹೈಸ್ಪೀಡ್‌ ಬ್ರಾಡ್‌ಬ್ಯಾಂಡ್‌ ಸೇವೆ ಒದಗಿಸುವಲ್ಲಿ ಈ ಕಂಪನಿ ಮುಂಚೂಣಿಯಲ್ಲಿದ್ದು, ಪ್ರತಿವರ್ಷವೂ ರಿಲಯೆನ್ಸ್ ಕಂಪನಿಯು ವಿಶೇಷ ದೀಪಾವಳಿ ಆಫರ್ ನೀಡುತ್ತದೆ. ಅದೇ ರೀತಿಯಾಗಿ ಈ ವರ್ಷವೂ ಕೂಡ ಜಿಯೋ ತನ್ನ ಗ್ರಾಹಕರಿಗಾಗಿ ಮುಂಬರುವ ದೀಪಾವಳಿ ಹಬ್ಬದ ಪ್ರಯುಕ್ತ  ಭರ್ಜರಿ ಆಫರ್‌(Jio Offer) ಘೋಷಣೆ ಮಾಡಿದೆ. ದೀಪಾವಳಿ ಧಮಾಕಾ ಆಫರ್‌(Diwali Festive Offer) ಘೋಷಣೆ ಮಾಡಿರುವ ಜಿಯೋ, ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ ಒಂದು ವರ್ಷ ಉಚಿತ ಜಿಯೋ ಏರ್‌ ಫೈಬರ್‌(Jio air Fiber) ಸರ್ವಿಸಸ್‌, ಹೈ ಸ್ಪೀಡ್‌ ಇಂಟರ್ನೆಟ್‌ ಸೇವೆಯನ್ನು ಗ್ರಾಹಕರು ಎಂಜಾಯ್‌ ಮಾಡಬಹುದಾಗಿದೆ.

ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಜಿಯೋ ಏರ್​ಫೈಬರ್ (Jio Air Fiber) ಸೇವೆ ಒಂದು ವರ್ಷ ಉಚಿತವಾಗಿ ಪಡೆಯುವುದು ಹೇಗೆ?:

ಈ ಸೇವೆಯನ್ನು ಉಚಿತವಾಗಿ ಪಡೆಯಲು ಎರಡು ಮಾರ್ಗಗಳಿವೆ ಒಂದು ಯಾವುದೇ ರಿಲಾಯನ್ಸ್ ಡಿಜಿಟಲ್ (Reliance Digital) ಅಥವಾ ಮೈ ಜಿಯೋ ಸ್ಟೋರ್​ನಲ್ಲಿ (My Jio Store) ನೀವು ಕನಿಷ್ಠ 20,000 ರೂ. ಮೌಲ್ಯದ ವಸ್ತುಗಳನ್ನು ಖರೀದಿಸುವುದು ಅಂದರೆ ಟಿವಿ, ಮೊಬೈಲ್, ಲ್ಯಾಪ್​ಟಾಪ್, ವಾಷಿಂಗ್ ಮೆಷಿನ್, ರೆಫ್ರಿಜರೇಟರ್ ಇತ್ಯಾದಿ ನಾನಾ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ರಿಲಾಯನ್ಸ್ ಡಿಜಿಟಲ್​ನಲ್ಲಿ ಲಭ್ಯ ಇವೆ. ಇಲ್ಲಿ ನೀವು 20,000 ರೂಗೂ ಹೆಚ್ಚು ಶಾಪಿಂಗ್ ಮಾಡಿದರೆ ಒಂದು ವರ್ಷ ನಿಮಗೆ ಜಿಯೋ ಏರ್​ಫೈಬರ್ ಸರ್ವಿಸ್ (AirFiber Service) ಉಚಿತವಾಗಿ ಸಿಗುತ್ತದೆ. ಇನ್ನೊಂದು ಮಾರ್ಗವೆಂದರೆ ಈಗಾಗಲೇ ಜಿಯೋ ಏರ್​ಫೈಬರ್ ಕನೆಕ್ಷನ್ ಹೊಂದಿರುವವರೂ ಕೂಡ ಒಂದು ವರ್ಷದ ಉಚಿತ ಸರ್ವಿಸ್ ಅನ್ನು ಪಡೆಯಲು ಅವಕಾಶ ಇದೆ. 2,222 ರೂ ಮೌಲ್ಯದ 3 ತಿಂಗಳ ದೀಪಾವಳಿ ಪ್ಲಾನ್ (Diwali Plan) ಅನ್ನು ಖರೀದಿಸಿದಲ್ಲಿ ಒಂದು ವರ್ಷ ಫ್ರೀ ಸರ್ವಿಸ್ (Free service) ಸಿಗುತ್ತದೆ. ಜಿಯೋ ಫೈಬರ್ ಬಳಕೆದಾರರು ಈಗಿರುವ ತಮ್ಮ ಪ್ಲಾನ್​ಗೆ ಒನ್ ಟೈಮ್ ಅಡ್ವಾನ್ಸ್ ರೀಚಾರ್ಜ್ ಮಾಡಿದರೆ ಒಂದು ವರ್ಷ ಫ್ರೀ ಸರ್ವಿಸ್ ಪಡೆಯಬಹುದು.

ಅರ್ಹ ಗ್ರಾಹಕರಿಗೆ 12 ಕೂಪನ್‌ಗಳು ಸಿಗುತ್ತವೆ. ಪ್ರತಿಯೊಂದೂ ಅವರ ಸಕ್ರಿಯ Jio AirFiber ಯೋಜನೆಯ ಮೌಲ್ಯಕ್ಕೆ ಸಮನಾಗಿರುತ್ತದೆ.ಈ ಕೂಪನ್‌ಗಳನ್ನು ರಿಲಯನ್ಸ್ ಡಿಜಿಟಲ್, ಮೈಜಿಯೋ, ಜಿಯೋಪಾಯಿಂಟ್ ಅಥವಾ ಜಿಯೋಮಾರ್ಟ್ ಡಿಜಿಟಲ್ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳಲ್ಲಿ 2024ರ ನವೆಂಬರ್ ನಿಂದ 2025ರ ಅಕ್ಟೋಬರ್ ತನಕ ಪ್ರತಿ ತಿಂಗಳು ರಿಡೀಮ್ ಮಾಡಿಕೊಳ್ಳಬಹುದು. ಪ್ರತಿ ಕೂಪನ್ ಅನ್ನು ಬಳಸಲು,ಅದನ್ನು ಸ್ವೀಕರಿಸಿದ 30 ದಿನಗಳಲ್ಲಿ  15,000 ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಎಲೆಕ್ಟ್ರಾನಿಕ್ ಖರೀದಿಗಳನ್ನು ಮಾಡಬೇಕು.

ಉಚಿತ ಜಿಯೋ ಫೈಬರ್ ಸೇವೆ ಪಡೆಯಲ ಗ್ರಾಹಕರು ಹೆಚ್ಚಿನ ಶ್ರಮ ಪಡಬೇಕಿಲ್ಲ. ಈಗಾಗಲೇ ತಿಳಿಸಿರುವಂತೆ ಇಪ್ಪತ್ತು ಸಾವಿರ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ರಿಲಯನ್ಸ್ ಡಿಜಿಟಲ್ ಅಥವಾ ಮೈಜಿಯೋದಲ್ಲಿ ವೆಚ್ಚ ಮಾಡುತ್ತಾರೋ ಅವರು ಈ ಆಫರ್ ಪಡೆಯಲು ಅರ್ಹರಾಗುತ್ತಾರೆ. ಒಂದು ವರ್ಷದವರೆಗೂ ಉಚಿತ ಆಫರ್ ನಿಂದ ಮನೆಯಲ್ಲಿ ಅಂತ್ಯಂತ ವೇಗದ ಇಂಟರ್ನೆಟ್ ಸಂಪರ್ಕ ಸಿಗಲಿದೆ. ಯಾವುದೇ ಅಡೆ ತಡೆ ಇಲ್ಲದ ಸ್ಪೀಡ್ ನೆಟ್‌ವರ್ಕ್ ಈ ಕೊಡುಗೆಯಲ್ಲಿ ಪಡೆಯಬಹುದು.

ಗಮನಿಸಿ :

ಜಿಯೋ ಪ್ರಚಾರದ ಆಫರ್ ಇಂದಿನಿಂದ ಅಂದ್ರೆ 18ನೇ ಸೆಪ್ಟೆಂಬರ್ 2024 ರಿಂದ ಮುಂದಿನ ತಿಂಗಳು 3ನೇ ನವೆಂಬರ್ 2024 ರವರೆಗೆ ಲಭ್ಯವಿರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಹತ್ತಿರದ ರಿಲಯನ್ಸ್ ಡಿಜಿಟಲ್ ಅಥವಾ ಮೈಜಿಯೋ ಸ್ಟೋರ್ ಗೆ ಭೇಟಿ ನೀಡಬಹುದು.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!