ನೀವು ಜಿಯೋ ಸಿಮ್ (Jio sim) ಬಳಸುತ್ತಿದ್ದೀರಾ? ಹಾಗಿದ್ದಲ್ಲಿ ಕಡಿಮೆ ಬೆಲೆಯಲ್ಲಿ 800 ಟಿವಿ ಚಾನೆಲ್ ಗಳನ್ನು ಉಚಿತವಾಗಿ ವೀಕ್ಷಿಸಬಹುದು.
ಇಂದು ನಾವೆಲ್ಲರೂ ಮೊಬೈಲ್ ಫೋನ್ ಗಳನ್ನು ಬಳಸುತ್ತಿದ್ದೇವೆ. ಹಲವಾರು ಟೆಲಿಕಾಂ ಕಂಪನಿಗಳು (telecom company) ಅತ್ಯಂತ ಜನಪ್ರಿಯತೆಯನ್ನು ಹೊಂದಿವೆ , ಅದರಲ್ಲೂ ಏರ್ಟೆಲ್ (airtel), ಜಿಯೋ (jio) ಕಂಪನಿಗಳು ಹೆಚ್ಚು ಹೆಸರುವಾಸಿಯಾಗಿವೆ. ಭಾರತದಲ್ಲಿಯೇ ನಂಬರ್ ಒನ್ ಟೆಲಿಕಾಂ ಸಂಸ್ಥೆಯಾಗಿರುವ ರಿಲಯನ್ಸ್ ಜಿಯೋ ಗೆ (Reliance Jio) ದೇಶದಲ್ಲಿಯೇ ಹಲವಾರು ಮಂದಿ ಗ್ರಾಹಕರಿದ್ದಾರೆ. ಏಕೆಂದರೆ ಬೇರೆ ಕಂಪನಿಗಳಿಗೆ ಹೋಲಿಸಿದರೆ ರಿಲಯನ್ಸ್ ಜಿಯೋ ತನ್ನ ಗ್ರಾಹಕರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತದೆ. ಜಿಯೋ ಕಂಪನಿಯು ತನ್ನ ಗ್ರಾಹಕರಿಗೆ ಉತ್ತಮ ಆಫರ್ ಗಳು ಮತ್ತು ಕೊಡುಗೆಯನ್ನು ನೀಡುತ್ತಿದ್ದು, ಕಂಪನಿಯು ಹೊಸ ಯೋಜನೆಗಳನ್ನು, ಪ್ರಿಪೇಯ್ಡ್ ಪ್ಲಾನ್ ಗಳನ್ನು ಬಿಡುಗಡೆ ಮಾಡುವುದರ ಮೂಲಕ ಹೆಚ್ಚು ಹೆಸರುವಾಸಿಯಾಗಿದೆ. ಇದೀಗ ಜಿಯೋ ತನ್ನ ಗ್ರಾಹಕರಿಗೆ ಒಂದು ವಿಶೇಷವಾದಂತಹ ಆಫರ್ (special offer ) ಅನ್ನು ನೀಡುತ್ತಿದೆ. ಹೌದು ಜಿಯೋ ಕಂಪೆನಿಯು (jio company) ತನ್ನ ಗ್ರಾಹಕರಿಗೆ ಇದೀಗ ಹೊಸ ಪ್ಲ್ಯಾನ್ (new plan) ಒಂದನ್ನು ನೀಡಿದೆ. ಅದು ಯಾವುದು? ಮತ್ತು ಅದರಲ್ಲಿ ಇರುವ ಇತರೆ ಆಫರ್ ಗಳೇನು (offers)? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಹೌದು, ಜಿಯೋ ತನ್ನ ಗ್ರಾಹಕರಿಗಾಗಿ ಪ್ರಿಪೇಯ್ಡ್, ಪೋಸ್ಟ್ ಪೇಯ್ಡ್ (prepaid and post paid) ಹಾಗೂ ಬ್ರಾಡ್ ಬ್ಯಾಂಡ್ (broad band) ನಂತಹ ಗ್ರಾಹಕರಿಗೆ ಪ್ರಿಯವಾಗಿರುವ ಸೇವೆಗಳನ್ನು ಒದಗಿಸುತ್ತಿದ್ದು, ಈ ಎಲ್ಲಾ ಸೇವೆಗಳಲ್ಲಿಯೂ ಕೂಡ ಗ್ರಾಹಕರಿಗೆ ಉತ್ತಮ ಪ್ರಯೋಜನಗಳನ್ನು ನೀಡುತ್ತಿದೆ ಇದರಿಂದ ಗ್ರಾಹಕರಿಗೆ ಹಲವು ರೀತಿಯಾಗಿ ಉಪಯೋಗಲಿದ್ದು, ಜನರ ಮನಸ್ಸನ್ನು ತನ್ನತ್ತ ಸೆಳೆಯುವಲ್ಲಿ ಜಿಯೋ ರಿಲಯನ್ಸ್ ಹೆಚ್ಚು ಪ್ರಯತ್ನ ಪಡುತ್ತಿದೆ. ಈ ಮೂರು ಯೋಜನೆಗಳ ಅಡಿಯಲ್ಲಿ ಜಿಯೋ ಅತಿ ಕಡಿಮೆ ಬೆಲೆಯಲ್ಲಿ 800 ಟಿವಿ ಚಾನಲ್ ಗಳನ್ನು ಉಚಿತವಾಗಿ ವೀಕ್ಷಿಸುವ ಅವಕಾಶವನ್ನು ಕಲ್ಪಿಸಿಕೊಡಲು ಮುಂದಾಗಿದೆ.
ಜಿಯೋ ಬೆಸ್ಟ್ ಪ್ಲಾನ್ (jio best plan) :
ಕೇವಲ ಒಳ್ಳೆ ಮೊಬೈಲ್ ಫೋನ್ ಗಳನ್ನು ಕೊಂಡು ಅದಕ್ಕೆ ಒಳ್ಳೆಯ ಕಂಪನಿಗಳ ಸಿಮ್ ಗಳನ್ನು ಹಾಕಿದರೆ ಸಾಲದು ಬಹಳ ಮುಖ್ಯವಾಗಿ ಇಂಟರ್ನೆಟ್ ಎಂಬುದು ಅವಶ್ಯಕವಾಗಿದೆ. ಹಾಗಾಗಿ ವೇಗದ ಇಂಟರ್ನೆಟ್ ಅವಶ್ಯಕತೆ ಇದ್ದಲ್ಲಿ ಅಂತಹ ಗ್ರಾಹಕರು ಜಿಯೋ ಏರ್ ಫೈಬರ್ ಖರೀದಿಸಬಹುದು. ಈ ಯೋಜನೆಯನ್ನು ಪಡೆದುಕೊಂಡರೆ ಜಿಯೋ ರಿಲಯನ್ಸ್ ಗ್ರಾಹಕರಿಗೆ ಹಲವು ಸೌಲಭ್ಯಗಳು ಲಭ್ಯವಿದ್ದು. ಜಿಯೋ ಏರ್ ಫೈಬರ್ ಯೋಜನೆಯನ್ನು (jio air fiber scheme) ಪಡೆದುಕೊಂಡ ನಂತರವೇ ಗ್ರಾಹಕರು ಕಂಪನಿಯ 599 ರೂ ಯೋಜನೆಯನ್ನೂ ಸಹ ಖರೀದಿಸಬಹುದು. ಈ ಯೋಜನೆ ಜಿಎಸ್ ಟಿ (GST) ರಹಿತವಾಗಿದ್ದು, ಒಂದು ವೇಳೆ ಜಿಎಸ್‌ಟಿ ಸೇರಿದರೆ ಇದರ ಬೆಲೆ ಹೆಚ್ಚಾಗುತ್ತದೆ. 599 ರೂ ರಿಚಾರ್ಜ್ ಮಾಡಿಸಿಕೊಂಡರೆ ಗ್ರಾಹಕರು 30 ದಿನಗಳ ವರೆಗೂ ಮಾನ್ಯತೆಯನ್ನು ಪಡೆದುಕೊಳ್ಳಬಹುದು. ಹಾಗೂ ಇದರ ಜೊತೆಯಲ್ಲಿ ವೇಗದ ಡೇಟಾ ಸೌಲಭ್ಯವೂ ಕೂಡ ದೊರೆಯುತ್ತದೆ. ಇನ್ನು ಇದರಲ್ಲಿ ಕಂಪನಿಯು ತನ್ನ ಗ್ರಾಹಕರಿಗೆ 30 Mbps ವೇಗದಲ್ಲಿ ಡೇಟಾವನ್ನು ನೀಡುತ್ತದೆ. ಹಾಗೂ ಜಿಯೋ ಈ ಯೋಜನೆಯಲ್ಲಿ 30 ದಿನಗಳವರಿಗೆ 1000 Gb ಡೇಟಾವನ್ನು ನೀಡುವುದರ ಜೊತೆಗೆ 30 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ.
ಜಿಯೋ ಒಟಿಟಿ ಆಫರ್ (jio OTT offer) :
ಜಿಯೋ ಪ್ರಿಪೇಯ್ಡ್ ಯೋಜನೆಯಂತೆಯೇ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಜಿಯೋ ಏರ್ ಫೈಬರ್ ಪ್ಲಾನ್ ನಲ್ಲಿಯೂ ಓ ಟಿ ಟಿ ವೀಕ್ಷಣೆಯ ಅವಕಾಶವನ್ನು ಕಲ್ಪಿಸಿಕೊಡುತ್ತಿದೆ. ರೂ 599 ರ ಯೋಜನೆಯೊಂದಿಗೆ ಗ್ರಾಹಕರು sonyLiv, jio cinema,disney + Hotstar,Lionsgate Play, zee 5 ಈ ರೀತಿಯಾದಂತಹ ಹಲವು ಓ ಟಿ ಟಿ ಪ್ಲಾಟ್ ಫಾರ್ಮ್ ಗಳಿಗೆ ಗ್ರಾಹಕರು ಉಚಿತ ಚಂದಾದಾರ(Free subscription)ರಾಗಬಹುದು. ಕೇವಲ ಉಚಿತ ಚಂದಾದಾರರಾಗುವುದಲ್ಲದೆ 800 ಕ್ಕೂ ಹೆಚ್ಚು ಟಿವಿ ಚಾನೆಲ್ ಗಳನ್ನು ಉಚಿತವಾಗಿ ವೀಕ್ಷಿಸಬಹುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.