ಇತ್ತೀಚಿನ ದಿನಗಳಲ್ಲಿ ಪ್ರತ್ಯೇಕ ವಾಹನಗಳ ಬಳಕೆ ಹೆಚ್ಚಾಗಿದ್ದು, ಇಂಧನ ದರ ಏರಿಕೆ, ಅತಿಯಾದ ವಾಯು ಮಾಲಿನ್ಯ, ಮತ್ತು ಸಾರಿಗೆ ವೆಚ್ಚದ ಸಮಸ್ಯೆಗಳ ನಡುವೆಯೇ ಹೊಸ ತಂತ್ರಜ್ಞಾನ ನಮ್ಮ ದೈನಂದಿನ ಜೀವನದಲ್ಲಿ ಬದಲಾವಣೆ ತರಲು ಸಜ್ಜಾಗಿದೆ. ಈಗ ಜಿಯೋ(Jio) ತನ್ನ ಹೆಜ್ಜೆಯನ್ನು ಎಲೆಕ್ಟ್ರಿಕ್ ಸೈಕಲ್(electrical cycle) ಕ್ಷೇತ್ರದಲ್ಲಿ ಇಟ್ಟಿದ್ದು, ಪರಿಸರಕ್ಕೆ ಸಹಕಾರಿಯಾಗುವ ಹಾಗೂ ಆರ್ಥಿಕವಾಗಿಯೂ ಲಾಭಕರವಾದ ಇ-ಸೈಕಲ್ ಬಿಡುಗಡೆ ಮಾಡುತ್ತಿದೆ. ಬನ್ನಿ ಹಾಗಾದರೆ ಏನು ಅದರ ವಿಶೇಷತೆ, ಲಭ್ಯೆತೆ ಮತ್ತು ಅದರ ಸಂಪೂರ್ಣ ಮಾಹಿತಿ ಬಗ್ಗೆ ತಿಳಿಯೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪರಿಸರ ಮತ್ತು ಆರೋಗ್ಯದ ಪರಿಪೂರ್ಣ ಸಮತೋಲನ :
ಜಿಯೋ ಇ-ಸೈಕಲ್ (Jio E-Cycle) ಕೇವಲ ವಾಹನವಷ್ಟೇ ಅಲ್ಲ, ಇದು ಪರಿಸರ ಸ್ನೇಹಿಯಾಗಿದ್ದು, ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ದಿನನಿತ್ಯದ ಓಡಾಟಕ್ಕೆ ಪ್ರಚಲಿತ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ತೀರ್ವ ಅವಲಂಬನೆ, ಇಂಧನ ಸಂಪತ್ತಿನ ನಾಶ ಮತ್ತು ಪರಿಸರ ಮಾಲಿನ್ಯ ಹೆಚ್ಚಿಸುವ ಪ್ರಮುಖ ಕಾರಣಗಳಾಗಿವೆ. ಇಂತಹ ಸಮಯದಲ್ಲಿ, ಜಿಯೋ ಇ-ಸೈಕಲ್ (Jio E-Cycle) ಪರಿಸರದ ಮೇಲೆ ಕಡಿಮೆ ಪ್ರಭಾವ ಬೀರುವ, ಸ್ವಚ್ಚ ಗಾಳಿಯನ್ನು ಉಳಿಸುವ ಮತ್ತು ಆರೋಗ್ಯಕರ ಜೀವನ ಶೈಲಿಗೆ ಉತ್ತೇಜನ ನೀಡುವ ಹೊಸ ಆಯ್ಕೆಯಾಗಲಿದೆ.

ಪ್ರಮುಖ ವೈಶಿಷ್ಟ್ಯಗಳು :
80 ಕಿಮೀ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ:
ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ, 80 ಕಿಮೀವರೆಗೆ (80km) ನಿರಾತಂಕವಾಗಿ ಪ್ರಯಾಣಿಸಲು ಇದು ಅನುಕೂಲ ನೀಡಲಿದೆ. ಈ ದೂರ ದೈನಂದಿನ ಕಚೇರಿ, ಶಾಲೆ, ಕಾಲೇಜು ಅಥವಾ ಅಂಗಡಿಗೆ ಹೋಗಲು ಸಂಪೂರ್ಣ ಸಮರ್ಪಿತವಾಗಿದೆ.
ಆಧುನಿಕ ತಂತ್ರಜ್ಞಾನ:
ಜಿಪಿಎಸ್ ಟ್ರ್ಯಾಕಿಂಗ್ (GPS tracking), ಡಿಜಿಟಲ್ ಡಿಸ್‌ಪ್ಲೇ(digital display), ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ (smartphone connectivity), ನೈಜ-ಸಮಯದ ಬ್ಯಾಟರಿ ನವೀಕರಣ, ರಿವರ್ಸ್ ಮೋಡ್ ಮುಂತಾದ ಸುಧಾರಿತ ತಂತ್ರಜ್ಞಾನವನ್ನು ಒಳಗೊಂಡಿದೆ.
ಬಲಿಷ್ಠ ವಿನ್ಯಾಸ:
ಡೈಮಂಡ್ ಫ್ರೇಮ್ (dimond frame), ಎಲ್‌ಇಡಿ ಲೈಟ್‌ಗಳು (Led lights), ಸುಗಮ ಶಾಕ್ ಅಬ್ಸಾರ್ಬರ್ ಹಾಗೂ ವಾಟರ್‌ಪ್ರೂಫ್ (water proof) ವಿನ್ಯಾಸ ಇದನ್ನು ಆಕರ್ಷಕ ಮತ್ತು ತಾಂತ್ರಿಕವಾಗಿ ಪ್ರಬಲವಾಗಿಸುತ್ತದೆ.
ಆರೋಗ್ಯ ಮತ್ತು ಆರ್ಥಿಕ ಲಾಭ:
ಇಂಧನ ಖರ್ಚು ಇಲ್ಲದ ಕಾರಣ, ಪೆಟ್ರೋಲ್ ದರ ಏರಿಕೆಯ ಚಿಂತೆ ಇಲ್ಲ. ಇದರಿಂದ ಆರ್ಥಿಕವಾಗಿ ಒಳ್ಳೆಯ ಬಂಡವಾಳ ಉಳಿಸಬಹುದು. ಅಲ್ಲದೆ, ಸೈಕ್ಲಿಂಗ್ ಸ್ವಾಭಾವಿಕ ಶಾರೀರಿಕ ವ್ಯಾಯಾಮವಾಗಿದ್ದು, ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ.

ಇನ್ನು ಮುಖ್ಯವಾಗಿ ಬೆಲೆ ಮತ್ತು ಲಭ್ಯತೆ ಬಗ್ಗೆ ನೋಡುವುದಾದರೆ,ಪ್ರಸಕ್ತ ವರದಿಗಳ ಪ್ರಕಾರ, ಈ ಇ-ಸೈಕಲ್ ₹25,000 ರಿಂದ ₹35,000 ರ ಮೊತ್ತದಲ್ಲಿ ಲಭ್ಯವಿರಲಿದೆ. ಇದನ್ನು ಜಿಯೋನ ಅಧಿಕೃತ ವೆಬ್‌ಸೈಟ್ ಮತ್ತು ಆಯ್ದ ಅಂಗಡಿಗಳ ಮೂಲಕ ಖರೀದಿಸಲು ಅವಕಾಶವಿರುತ್ತದೆ.
ಭಾರತದ ಸಂಚಾರ ವ್ಯವಸ್ಥೆಗೆ ಇದು ಹೊಸ ತಂತ್ರಜ್ಞಾನವೆ ಎಂದು ಹೇಳಬಹುದು, ಹೌದು ಜಿಯೋ ಇ-ಸೈಕಲ್ ದಿನನಿತ್ಯದ ಸಂಚಾರಕ್ಕಾಗಿ ಉತ್ತಮ ಪರ್ಯಾಯವಾಗಿದ್ದು, ಇದು ನಗರ ಮತ್ತು ಗ್ರಾಮೀಣ ಪ್ರದೇಶಗಳ ಬಡ್ತಿ ಮತ್ತು ಆರ್ಥಿಕ ಸುಧಾರಣೆಗೆ ಸಹಕಾರಿಯಾಗಲಿದೆ. ಇಂಧನ ಸಂರಕ್ಷಣೆ, ಆರೋಗ್ಯ ಮತ್ತು ಆರ್ಥಿಕ ಸುಧಾರಣೆಯ ಉದ್ದೇಶ ಹೊಂದಿದ ಈ ನವೀನ ಇ-ಸೈಕಲ್, ಭಾರತದಲ್ಲಿ ಶೀಘ್ರವೇ ಜನಪ್ರಿಯತೆಗಳಿಸಲಿದೆ.
ಇನ್ನು ಕೊನೆಯದಾಗಿ ಹೇಳುವುದಾದರೆ, ಪರಿಸರ ಸ್ನೇಹಿ (Environmentally friendly) ಮತ್ತು ತಂತ್ರಜ್ಞಾನ (technological) ಬಳಕೆಯಾದ ಹೊಸ ಸಂಚಾರದ ದಿಕ್ಕಿಗೆ ಜಿಯೋ ಇ-ಸೈಕಲ್ (Jio E-Cycle) ಒಂದು ಹೊಸ ಸಂಚಲನ ತರಲಿದೆ ಎಂದು ಹೇಳಬುದಾಗಿದೆ. ಇನ್ನಷ್ಟು ಇಂತಹ ಉತ್ತಮವಾದ ಮಾಹಿತಿಯನ್ನು ನೀವು ತಿಳಿದಮೇಲೆ ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.