ಜಿಯೋ ಗ್ರಾಹಕರೇ, ಈ ಪ್ಲ್ಯಾನ್‌ ರೀಚಾರ್ಜ್‌ ಮಾಡಿ ಉಚಿತ ನೆಟ್‌ಫ್ಲಿಕ್ಸ್‌ ಚಂದಾದಾರಿಕೆ ಪಡೆಯಿರಿ

WhatsApp Image 2024 07 15 at 11.40.21 AM

ಜಿಯೋ ಗ್ರಾಹಕರಿಗೆ ಇದೀಗ ಗುಡ್ ನ್ಯೂಸ್! ಎರೆಡು ಯೋಜನೆಗಳಲ್ಲಿ ಉಚಿತ ನೆಟ್ ಪ್ಲಿಕ್ಸ್( Netflix) ಪ್ರಯೋಜನ ಲಭ್ಯವಾಗಲಿದೆ.

ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ (internet) ಇಲ್ಲದೆ ಬದಕುಲು ಸಾಧ್ಯವಿಲ್ಲ ಎಂಬಂತಾಗಿದೆ. ನಾವು ಬಳಸುವ ಸ್ಮಾರ್ಟ್ ಫೋನ್ ಗಳು ಇಂಟರ್ನೆಟ್ ಅಥವಾ ಡಾಟಾ ಇಲ್ಲದೆ ಕೆಲಸ ಮಾಡುವುದಿಲ್ಲ. ಕರೆನ್ಸಿ (currency) ಹಾಗೂ ಡೇಟಾವನ್ನು (data) ಹಾಕಿಸಿಕೊಳ್ಳಲೆಂದೇ ಹಣವನ್ನು ಕೂಡಿಡುತ್ತಿರುತ್ತಾರೆ. ಆದರೆ ಇತ್ತೀಚಿಗೆ  ಜಿಯೋ, ಏರ್ ಟೆಲ್(Airtel) ಸೇರಿದಂತೆ ಹಲವು ಟೆಲಿಕಾಂ ಸಂಸ್ಥೆಗಳು ರಿಚಾರ್ಜ್ ದರವನ್ನು (recharge rate) ಏರಿಕೆ ಮಾಡಿದ್ದರು. ಇದರಿಂದ ಗ್ರಾಹಕರಿಗೆ ತುಂಬಾ ಬೇಸರವಾಗಿತ್ತು. ಬೆಲೆ ಏರಿಕೆಯ ಕಾರಣದಿಂದ ಗ್ರಾಹಕರು ಮನೋಲ್ಲಾಸವನ್ನು ಕಳೆದುಕೊಂಡಿದ್ದಾರೆ. ಆದ್ದರಿಂದ ಗ್ರಾಹಕರನ್ನು ಸಂತೋಷಪಡಿಸಿ, ಗ್ರಾಹಕರನ್ನು  ಸೆಳೆಯಲು ಹಾಗೂ ಗ್ರಾಹಕರನ್ನು ತಮ್ಮ ಬಳಿಯೇ ಉಳಿಸಿಕೊಳ್ಳಲು ಹೆಚ್ಚುವರಿ ಕೊಡುಗೆಗಳನ್ನು ನೀಡುವ ರೀಚಾರ್ಜ್ ಪ್ಲಾನ್ ಗಳನ್ನು ಸಹ ನೀಡಿವೆ. ಯಾವ ಟೆಲಿಕಾಂ ಕಂಪನಿ, ಉಚಿತ ನೆಟ್ ಪ್ಲಿಕ್ಸ್( Netflix) ಸೇವೆಯನ್ನು ನೀಡುತ್ತಿದೆ? ಆ ಯೋಜನೆಗಳು ಯಾವುವು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಅತ್ಯಂತ ಜನಪ್ರಿಯತೆಯನ್ನು (popularity) ಹೊಂದಿರುವ ಜಿಯೋ (Jio) ಕಂಪನಿ ತನ್ನ ಗ್ರಾಹಕರಿಗೆ ಹಲವಾರು ರೀತಿಯ ಪ್ಲಾನ್ ರಿಯಾಯಿತಿ ಯನ್ನು ನೀಡುತ್ತ ಬಂದಿದೆ. ರಿಚಾರ್ಜ್ ಪ್ಲಾನ್ ಗಳ ದರ ಏರಿಕೆ ಯನ್ನು ಮಾಡಿದ ನಂತರ ವಿವಿಧ ರೀತಿಯ ಪ್ರಿಪೇಯ್ಡ್ (pre paid) ಯೋಜನೆಗಳನ್ನು ನೀಡುತ್ತಿದೆ. ಅದರಲ್ಲೂ ಪ್ರಿಪೇಯ್ಡ್  (pre paid) ಯೋಜನೆಗಳು ಹೆಚ್ಚುವರಿಯಾಗಿ ಓಟಿಟಿ(OTT) ಪ್ರಯೋಜನಗಳನ್ನು ಪಡೆದುಕೊಂಡಿವೆ. ಆದ್ದರಿಂದ ಜಿಯೋ ಇದೀಗ 1299 ರೂ. ಹಾಗೂ 1799 ರೂ. ಪ್ರಿಪೇಯ್ಡ್ (pre paid) ಯೋಜನೆಯಲ್ಲಿ ಉಚಿತವಾಗಿ ನೆಟ್ ಪ್ಲಿಕ್ಸ್ ಸೇವೆಯನ್ನು ನೀಡುತ್ತಿದೆ. ಈ ಎರಡೂ ಯೋಜನೆಗಳಲ್ಲಿ ದೈನಂದಿನ ಡೇಟಾವನ್ನು ನೀಡುತ್ತಿರುವುದು ಹೆಚ್ಚು ಆಕರ್ಷಕವಾಗಿದೆ.

1299 ರೂ. ರಿಚಾರ್ಜ್ ಯೋಜನೆ  :

ಜಿಯೋ ನೀಡಿರುವಂತಹ  1299 ರೂ. ಪ್ರಿಪೇಯ್ಡ್  (pre paid) ರಿಚಾರ್ಜ್ ಯೋಜನೆಯು ಗ್ರಾಹಕರಿಗೆ ಹೆಚ್ಚು ಇಷ್ಟವಾಗುತ್ತದೆ. ಕಾರಣ ಒಟ್ಟು 84 ದಿನಗಳ ವ್ಯಾಲಿಡಿಟಿ ಪಡೆದುಕೊಂಡಿರುವ  1299 ರೂ. ಪ್ರಿಪೇಯ್ಡ್ (pre paid) ರಿಚಾರ್ಜ್ ಯೋಜನೆಯಲ್ಲಿ 2 GB ದೈನಂದಿನ ಡೇಟಾ ಸೌಲಭ್ಯ ದೊರೆಯುತ್ತಿದ್ದು ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 168GB ಡಾಟಾ ಪ್ರಯೋಜನ ಸಿಗಲಿದೆ. ಹಾಗೂ ದಿನಕ್ಕೆ 100 ಎಸ್ಎಂಎಸ್ (SMS) ಗಳ ಜೊತೆಯಲ್ಲಿ ಅನಿಯಮಿತ (Unlimited) ವಾಯ್ಸ್ ಕರೆಗಳ ಪ್ರಯೋಜನವನ್ನು ಸಹ ನೀಡುತ್ತಿದೆ. ಅಲ್ಲದೆ ಹೆಚ್ಚುವರಿ ಸೌಲಭ್ಯಗಳಾಗಿ  ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್ ಸೇವೆಗಳು ದೊರೆಯುತ್ತವೆ.ಬಹಳ ಮುಖ್ಯವಾಗಿ ಜಿಯೋ ನೀಡಿದ ಈ ಯೋಜನೆಯಲ್ಲಿ ಉಚಿತವಾಗಿ  ನೆಟ್ ಪ್ಲಿಕ್ಸ್ ಪ್ರಯೋಜನ ಲಭ್ಯವಾಗಲಿದೆ.

1799 ರೂ.ರಿಚಾರ್ಜ್ ಯೋಜನೆ  :

ಜಿಯೋ ನೀಡಿರುವಂತಹ  1799 ರೂ. ಪ್ರಿಪೇಯ್ಡ್  (pre paid) ರಿಚಾರ್ಜ್ ಯೋಜನೆಯೂ ಕೂಡ ಗ್ರಾಹಕರಿಗೆ ಹೆಚ್ಚು ಇಷ್ಟವಾಗುತ್ತದೆ. ಕಾರಣ ಒಟ್ಟು 84 ದಿನಗಳ ವ್ಯಾಲಿಡಿಟಿ ಪಡೆದುಕೊಂಡಿರುವ  1799 ರೂ. ಪ್ರಿಪೇಯ್ಡ್ ರಿಚಾರ್ಜ್ ಯೋಜನೆಯಲ್ಲಿ 3 GB ದೈನಂದಿನ ಡೇಟಾ ಸೌಲಭ್ಯ ದೊರೆಯುತ್ತಿದ್ದು ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 252 GB ಡಾಟಾ ಪ್ರಯೋಜನ ಸಿಗಲಿದೆ. ಹಾಗೂ ದಿನಕ್ಕೆ 100 ಎಸ್ಎಂಎಸ್ (SMS) ಗಳ ಜೊತೆಯಲ್ಲಿ ಅನಿಯಮಿತ (Unlimited) ವಾಯ್ಸ್ ಕರೆಗಳ ಪ್ರಯೋಜನವನ್ನು ಸಹ ನೀಡುತ್ತಿದೆ. ಅಲ್ಲದೆ ಹೆಚ್ಚುವರಿ ಸೌಲಭ್ಯಗಳಾಗಿ  ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್ ಸೇವೆಗಳು ದೊರೆಯುತ್ತವೆ.ಬಹಳ ಮುಖ್ಯವಾಗಿ ಜಿಯೋ ನೀಡಿದ ಈ ಯೋಜನೆಯಲ್ಲಿ ಉಚಿತವಾಗಿ  ನೆಟ್ ಪ್ಲಿಕ್ಸ್ ಪ್ರಯೋಜನ ಕೂಡ ಗ್ರಾಹಕರಿಗೆ ಲಭ್ಯವಾಗಲಿದೆ.

ಪ್ರೈಮ್ ವಿಡಿಯೋ ಯೋಜನೆ 1029 ರೂ. ಗಳಲ್ಲಿ :

ಜಿಯೋ ನೀಡಿರುವಂತಹ  1029 ರೂ. ಪ್ರಿಪೇಯ್ಡ್  ರಿಚಾರ್ಜ್ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಪಡೆದುಕೊಂಡಿದೆ. 1029  ರೂ. ಪ್ರಿಪೇಯ್ಡ್ ರಿಚಾರ್ಜ್(recharge) ಯೋಜನೆಯಲ್ಲಿ 2 GB ದೈನಂದಿನ ಡೇಟಾ ಸೌಲಭ್ಯ ದೊರೆಯುತ್ತಿದ್ದು ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 168 GB ಡಾಟಾ ಪ್ರಯೋಜನ ಸಿಗಲಿದೆ. ಹಾಗೂ ದಿನಕ್ಕೆ 100 ಎಸ್ಎಂಎಸ್ (SMS) ಗಳ ಜೊತೆಯಲ್ಲಿ ಅನಿಯಮಿತ ವಾಯ್ಸ್ ಕರೆಗಳ ಪ್ರಯೋಜನವನ್ನು ಸಹ ನೀಡುತ್ತಿದೆ. ಅಲ್ಲದೆ ಹೆಚ್ಚುವರಿ ಸೌಲಭ್ಯಗಳಾಗಿ  ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್ ಸೇವೆಗಳು ದೊರೆಯುತ್ತವೆ.ಬಹಳ ಮುಖ್ಯವಾಗಿ ಜಿಯೋ ನೀಡಿದ ಈ ಯೋಜನೆಯಲ್ಲಿ ಉಚಿತವಾಗಿ ಅಮೆಜಾನ್ ಪ್ರೈಮ್ ವಿಡಿಯೋ ಓಟಿಟಿ (prime video mobile Edition) ಪ್ರಯೋಜನ ಕೂಡ ಗ್ರಾಹಕರಿಗೆ ಲಭ್ಯವಾಗಲಿದೆ.

ಈ ಮಾಹಿತಿಗಳನ್ನು ಓದಿ

 

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!