ಕಡಿಮೆ ದರದಲ್ಲಿ ಸಿಗುತ್ತಿದ್ದ ಜಿಯೋ ರಿಚಾರ್ಜ್ (Jio recharge), ಇದೀಗ ದುಬಾರಿ ರಿಚಾರ್ಜ್ ಪ್ಲಾನ್ (recharge) ಆಗಲಿದೆ. ಹೊಸ ದರದ ಪಟ್ಟಿ ಹೀಗಿದೆ.
ರಿಲಯನ್ಸ್ ಜಿಯೋ ಮೊಬೈಲ್ ಕರೆ ಹಾಗೂ ಇಂಟರ್ನೆಟ್ ದರಗಳನ್ನು ಹೆಚ್ಚಿಸಿದೆ. ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ (jio president Akash Ambani) ಹೇಳಿಕೆ ನೀಡಿರುವ ಪ್ರಕಾರ ಜಿಯೋನ ಎಲ್ಲ ಪ್ಲ್ಯಾನ್‌ನ ದರಗಳನ್ನು ಏರಿಸಲಾಗಿದೆ. ಹಾಗೂ ಈ ದರಗಳು ಜುಲೈ 3ರಿಂದ ಅನ್ವಯವಾಗಲಿವೆ.ಶೇ. 12ರಿಂದ ಶೇ. 27ರವರೆಗೂ ದರ ಪರಿಷ್ಕರಣೆ ಮಾಡಿದ್ದು, ಮೊಬೈಲ್ ರಿಚಾರ್ಜ್ ಪ್ಲಾನ್ ಗಳ (mobile recharge plan) ದರಗಳ ಏರಿಕೆಯಿಂದ ಟೆಲಿಕಾಂ ಕಂಪನಿಗಳಿಗೆ (Telecom company) ಹೆಚ್ಚು ಲಾಭ ತರುತ್ತವೆ ಇದರಿಂದ ಷೇರು ಮಾರುಕಟ್ಟೆಯು ಸಕಾರಾತ್ಮಕವಾಗಿ ಸ್ಪಂದಿಸುವ ನಿರೀಕ್ಷೆ ಇದೆ. ಈ ಜಿಯೋ ಹೊಸ ದರಗಳು ಜಾರಿಗೆ ಬರುವುದರಿಂದ ಅದರ 47.2 ಕೋಟಿ ಬಳಕೆದಾರರ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದರು. ಜಿಯೋ ರಿಚಾರ್ಜ್ ಪ್ಲಾನ್ ನ ಹೊಸ ದರ new recharge plan) ಎಷ್ಟಕ್ಕೆ ಏರಿಕೆಯಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಜಿಯೋ ದರ ಹೆಚ್ಚಳದ ವಿವರ(Jio rate hike details) :
ಜಿಯೋ ರಿಚಾರ್ಜ್ ಪ್ಲಾನ್ ಗಳಲ್ಲಿ ಭಾರಿ ಏರಿಕೆಯನ್ನು ಮಾಡಿದ್ದು, ಮುಂಚೆ ಇದ್ದ ರಿಚಾರ್ಜ್ ಪ್ಲಾನ್ ಇದ್ದರ ಹಾಗೂ ಈಗ ಏರಿಕೆ ಆಗಲಿರುವ ರಿಚಾರ್ಜ್ ಪ್ಲಾನ್ ಗಳನ್ನು ನೋಡುವುದಾದರೆ, 155 ರೂ. 28 ದಿನ ವ್ಯಾಲಿಡಿಟಿ 2 ಜಿಬಿ ಡಾಟಾ ಇದ್ದ ಪ್ಲಾನ್ ಅನ್ನು 189 ರೂ. ಗೆ ಏರಿಕೆ ಮಾಡಲಾಗಿದೆ.
209 ರೂ. ಪ್ರತಿ ದಿನ 1 ಜಿಬಿ ಡಾಟಾ 28 ದಿನದ ಪ್ಲಾನ್ 249 ರೂ.ಗೆ ಏರಿಕೆಯಾಗಿದೆ.
ಹಾಗೂ ಗ್ರಾಹಕರು ಹೆಚ್ಚು ಬಳಸುತ್ತಿದ್ದ ಪ್ಲಾನ್ 239 ರೂ. ಪ್ರತಿದಿನ 1.5 ಜಿಬಿ ಡಾಟಾ ಪ್ಲಾನ್ 299 ರೂ.ಗೆ ಏರಿಕೆಯಾಗಿದೆ.
299 ರೂ. 28 ದಿನ ವ್ಯಾಲಿಡಿಟಿ 2 ಜಿಬಿ ಡಾಟಾ ಇದ್ದ ಪ್ಲಾನ್ ಅನ್ನು 349 ರೂ. ಗೆ ಏರಿಕೆ ಮಾಡಲಾಗಿದೆ.
349 ರೂ. 28 ದಿನ ವ್ಯಾಲಿಡಿಟಿ 2.5 ಜಿಬಿ ಡಾಟಾ ಇದ್ದ ಪ್ಲಾನ್ ಅನ್ನು 399 ರೂ. ಗೆ ಏರಿಕೆ ಮಾಡಲಾಗಿದೆ.
399 ರೂ. 28 ದಿನ ವ್ಯಾಲಿಡಿಟಿ 3 ಜಿಬಿ ಡಾಟಾ ಇದ್ದ ಪ್ಲಾನ್ ಅನ್ನು 449 ರೂ. ಗೆ ಏರಿಕೆ ಮಾಡಲಾಗಿದೆ.
479 ರೂ. 56 ದಿನ ವ್ಯಾಲಿಡಿಟಿ 1.5 ಜಿಬಿ ಡಾಟಾ ಇದ್ದ ಪ್ಲಾನ್ ಅನ್ನು 579 ರೂ. ಗೆ ಏರಿಕೆ ಮಾಡಲಾಗಿದೆ.
533 ರೂ. 56 ದಿನ ವ್ಯಾಲಿಡಿಟಿ 2 ಜಿಬಿ ಡಾಟಾ ಇದ್ದ ಪ್ಲಾನ್ ಅನ್ನು 629 ರೂ. ಗೆ ಏರಿಕೆ ಮಾಡಲಾಗಿದೆ.
395 ರೂ. 84 ದಿನ ವ್ಯಾಲಿಡಿಟಿ 6 ಜಿಬಿ ಡಾಟಾ ಇದ್ದ ಪ್ಲಾನ್ ಅನ್ನು 479 ರೂ. ಗೆ ಏರಿಕೆ ಮಾಡಲಾಗಿದೆ.
666 ರೂ. 84 ದಿನ ವ್ಯಾಲಿಡಿಟಿ 1.5 ಜಿಬಿ ಡಾಟಾ ಇದ್ದ ಪ್ಲಾನ್ ಅನ್ನು 799 ರೂ. ಗೆ ಏರಿಕೆ ಮಾಡಲಾಗಿದೆ.
719 ರೂ. 84 ದಿನ ವ್ಯಾಲಿಡಿಟಿ 2 ಜಿಬಿ ಡಾಟಾ ಇದ್ದ ಪ್ಲಾನ್ ಅನ್ನು 859 ರೂ. ಗೆ ಏರಿಕೆ ಮಾಡಲಾಗಿದೆ.
999 ರೂ. 84 ದಿನ ವ್ಯಾಲಿಡಿಟಿ 3 ಜಿಬಿ ಡಾಟಾ ಇದ್ದ ಪ್ಲಾನ್ ಅನ್ನು 1199 ರೂ. ಗೆ ಏರಿಕೆ ಮಾಡಲಾಗಿದೆ.
1559 ರೂ. 336 ದಿನ ವ್ಯಾಲಿಡಿಟಿ 24 ಜಿಬಿ ಡಾಟಾ ಇದ್ದ ಪ್ಲಾನ್ ಅನ್ನು 1899 ರೂ. ಗೆ ಏರಿಕೆ ಮಾಡಲಾಗಿದೆ.
2999 ರೂ. 365 ದಿನ ವ್ಯಾಲಿಡಿಟಿ 2.5 ಜಿಬಿ ಡಾಟಾ ಇದ್ದ ಪ್ಲಾನ್ ಅನ್ನು 3599 ರೂ. ಗೆ ಏರಿಕೆ ಮಾಡಲಾಗಿದೆ.
ಡೇಟಾ ಆಡ್ ಆನ್ (Data Add On)
15 ರೂ. ಗೆ 1 GB ಡೇಟಾ ಇದ್ದ ರಿಚಾರ್ಜ್ ಪ್ಲಾನ್ 19 ರೂ. ಗೆ ಏರಿಕೆ ಮಾಡಲಾಗಿದೆ.
25ರೂ. ಗೆ 2 GBಡೇಟಾ ಇದ್ದ ರಿಚಾರ್ಜ್ ಪ್ಲಾನ್ 29 ರೂ ಗೆ ಏರಿಕೆ ಮಾಡಲಾಗಿದೆ.
61ರೂ. ಗೆ 6 GB ಡೇಟಾ ಇದ್ದ ರಿಚಾರ್ಜ್ ಪ್ಲಾನ್ 69 ರೂ ಗೆ ಏರಿಕೆ ಮಾಡಲಾಗಿದೆ.
ಪೋಸ್ಟ್ ಪೇಡ್ ( Postpaid )
299 ರೂ. ಗೆ 30 GB ಡೇಟಾ ಇದ್ದ ರಿಚಾರ್ಜ್ ಪ್ಲಾನ್ 349 ರೂ ಗೆ ಏರಿಕೆ ಮಾಡಲಾಗಿದೆ.
399 ರೂ. ಗೆ 75 GB ಡೇಟಾ ಇದ್ದ ರಿಚಾರ್ಜ್ ಪ್ಲಾನ್ 449 ರೂ ಗೆ ಏರಿಕೆ ಮಾಡಲಾಗಿದೆ.
ಜಿಯೋ ರಿಚಾರ್ಜ್ ಪ್ಲಾನ್ ಗಳ ದರವನ್ನು ಹೆಚ್ಚಳ ಮಾಡುವುದರ ಜೊತೆಯಲ್ಲಿ ಎರಡು ಹೊಸ ಅಪ್ಲಿಕೇಶನ್ ಗಳನ್ನು ಪರಿಚಯಿಸಿದೆ. ಜಿಯೊ ಸೇಫ್ (JioSafe)ಮತ್ತು ಜಿಯೊ ಟ್ರಾನ್ಸ್ಲೇಟ್ (JioTranslate) ಎಂಬ ಎರಡು ಅಪ್ಲಿಕೇಷನ್ಗಳನ್ನು ಬಿಡುಗಡೆಗೊಳಿಸಿದೆ. ಜಿಯೊ ಬಳಕೆದಾರರಿಗೆ ಒಂದು ವರ್ಷದವರೆಗೆ ಈ ಎರಡೂ ಅಪ್ಲಿಕೇಷನ್‌ಗಳು ಉಚಿತವಾಗಿ ದೊರೆಯಲಿವೆ.
ಜಿಯೊ ಸೇಫ್ (JioSafe):
ಜಿಯೊ ಸೇಫ್‌ನ ಮಾಸಿಕ ದರ ₹199 ಆಗಿದೆ. ಸುರಕ್ಷಿತ ಕರೆ, ಮೆಸೇಜಿಂಗ್ ಮತ್ತು ಫೈಲ್ ಟ್ರಾನ್ಸ್‌ಫರ್ ಸೇವೆಯನ್ನು ಒದಗಿಸಲಿದೆ.
ಜಿಯೊ ಟ್ರಾನ್ಸ್ಲೇಟ್(JioTranslate):
ಜಿಯೊ ಟ್ರಾನ್ಸ್‌ಲೇಟ್ ಅಪ್ಲಿಕೇಷನ್‌ನಲ್ಲಿ ತಿಂಗಳಿಗೆ ₹99 ನೀಡಿದರೆ ಕೃತಕ ಬುದ್ಧಿಮತ್ತೆಯಿಂದ ಚಾಲಿತ ಅಪ್ಲಿಕೇಷನ್, ಧ್ವನಿ, ಕರೆ, ಸಂದೇಶವನ್ನು ಭಾಷಾಂತರ ಮಾಡಬಹುದಾಗಿದೆ.
ಗಮನಿಸಿ (notice) :
ಈವರೆಗೆ 239 ರೂ. ರಿಚಾರ್ಜ್ ಮಾಡಿಕೊಂಡರೆ ಅನಿಯಮಿತ 5ಜಿ ಡಾಟಾ ದೊರಕುತ್ತಿತ್ತು. ಇನ್ನು ಮುಂದೆ ಪ್ರತಿದಿನ 2 ಜಿಬಿ ಡಾಟಾ ಇರುವವರಿಗೆ ಮಾತ್ರ ಅನಿಯಮಿತ 5ಜಿ ದೊರಕುತ್ತದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.