ಅತೀ ಕಮ್ಮಿ ಬೆಲೆಗೆ JioPhone Prima 2 4G ಮೊಬೈಲ್ ಬಿಡುಗಡೆ, ಇಲ್ಲಿದೆ ಡೀಟೇಲ್ಸ್!

IMG 20240912 WA0011

ಜಿಯೋ ಬಿಡುಗಡೆ ಮಾಡುತ್ತಿದೆ ಹೊಸ ಸ್ಮಾರ್ಟ್ ಫೋನ್, ಕೇವಲ 2,799 ರೂ ಗಳಿಗೆ ದೊರೆಯಲಿದೆ ಜಿಯೋ ಫೋನ್ ಪ್ರೈಮಾ 2 4G!

ರಿಲಯನ್ಸ್ ಜಿಯೋ ಇನ್ಫೋಕಾಂ ಲಿಮಿಟೆಡ್ ಅಥವಾ ಜಿಯೋ ಭಾರತದ LTE ಮೊಬೈಲ್ ನೆಟ್ವರ್ಕ್ ಆಪರೇಟರ್ ಆಗಿದೆ. ಇದು ರಿಲಯನ್ಸ್ ಇಂಡಸ್ಟ್ರೀಸ್ ನ ಅಂಗಸಂಸ್ಥೆಯೂ ಕೂಡ ಆಗಿದೆ. ಜಿಯೋ ಭಾರತದ 22 ಟೆಲಿಕಾಮ್ ವಲಯಗಳಲ್ಲೂ 4G LTE ನೆಟ್ವರ್ಕ್ ಸೇವೆ ಒದಗಿಸುತ್ತಿದೆ. ದೇಶದ ಉದ್ದಗಲಕ್ಕೂ ಹೆಚ್ಚು ಹೆಸರುವಾಸಿಯಾಗಿದೆ ಜಿಯೋ. ಇಂದು ತನ್ನ ಗ್ರಾಹಕರಿಗೆ ಹಲವಾರು ಯೋಜನೆಗಳು, ಸೇವೆಗಳನ್ನು ನೀಡುತ್ತಿದೆ.

ಜಿಯೋ ಫೋನ್ ಪ್ರೈಮಾ 2 4G (JioPhone Prima 2 4G) :
JioPhone Prima 2

ಹಾಗೆಯೇ ಇದೀga ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಭರ್ಜರಿ ಗಿಫ್ಟ್ ನೀಡಿದೆ. ಮುಖ್ಯವಾಗಿ, ದೀಪಾವಳಿ ಹಬ್ಬಕ್ಕೂ ಮುಂಚಿತವಾಗಿಯೇ, ಜಿಯೋ ತನ್ನ ಅಭಿಮಾನಿಗಳಿಗಾಗಿ ಜಿಯೋ ಫೋನ್ ಪ್ರೈಮಾ 2 4G (JioPhone Prima 2 4G) ಅನ್ನು ಬಿಡುಗಡೆ ಮಾಡಿದೆ. ಅದ್ಭುತ ವೈಶಿಷ್ಟ್ಯಗಳೊಂದಿಗೆ ಈ ಇತ್ತೀಚಿನ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಜಿಯೋ ಫೋನ್ ಪ್ರೈಮಾ 2 4G ಫೋನಿನ ಬೆಲೆ ಮತ್ತು ಲಭ್ಯತೆ :

ಕಂಪನಿಯು ಜಿಯೋ ಫೋನ್ ಪ್ರೈಮಾ 2 4G ಫೋನ್‌ (JioPhone Prima 2 4G) ಅನ್ನು ಲಕ್ಸ್ ಬ್ಲೂ ಬಣ್ಣದಲ್ಲಿ ಬಿಡುಗಡೆ ಮಾಡಿದ್ದು, ಈ ಫೋನ್ ಕೇವಲ 2,799 ರೂ.ಗಳಲ್ಲಿ ಖರೀದಿಸಬಹುದು. ಈ ಸ್ಮಾರ್ಟ್‌ಫೋನ್ ಇ ಕಾಮರ್ಸ್ ವೆಬ್‌ಸೈಟ್ ಅಮೇಜಾನ್‌ (Amazon) ನಲ್ಲಿ ಲಭ್ಯವಿದೆ. ಅಷ್ಟೇ ಅಲ್ಲದೆ ಕಂಪನಿಯು ಶೀಘ್ರದಲ್ಲೇ ಈ ಫೋನನ್ನು ಜಿಯೋಮಾರ್ಟ್, ರಿಲಯನ್ಸ್ ಡಿಜಿಟಲ್ ಮತ್ತು ಇತರ ಚಿಲ್ಲರೆ ಅಂಗಡಿಗಳ ಮೂಲಕ ಮಾರಾಟ ಮಾಡಲಿದೆ.

ಜಿಯೋ ಫೋನ್ ಪ್ರೈಮಾ 2 4G ಫೋನಿನ ವೈಶಿಷ್ಟ್ಯಗಳು :

ಡಿಸ್ಪ್ಲೇ (Display) :
ಜಿಯೋ ಫೋನ್ ಪ್ರೈಮಾ 2 4G ಫೋನ್ 320×240 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ 2.4 ಇಂಚಿನ QVGA ಬಾಗಿದ ಡಿಸ್ಪ್ಲೇಯನ್ನು ಹೊಂದಿದೆ.

ಪ್ರೊಸೆಸರ್ (processor) :
ರೌಂಡ್ ಎಡ್ಜ್ ವಿನ್ಯಾಸ ಹೊಂದಿರುವ ಈ ಫೋನ್ ARM Cortex A53 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸುತ್ತದೆ.

ಸ್ಟೋರೇಜ್ (storage) :
ಈ ಹೊಸ ಫೋನ್ 512MB RAM ಅನ್ನು ಹೊಂದಿದೆ. ಮೈಕ್ರೊ SD ಕಾರ್ಡ್ ಸಹಾಯದಿಂದ ನೀವು ಇದರ ಮೆಮೊರಿಯನ್ನು 128GB ವರೆಗೆ ವಿಸ್ತರಿಸಬಹುದು.

ಕ್ಯಾಮೆರಾ (camera) :
ಈ ಫೋನ್ ಎಲ್‌ಇಡಿ ಟಾರ್ಚ್ ಮತ್ತು ಹಿಂಭಾಗದ ಕ್ಯಾಮೆರಾವನ್ನು ಸಹ ಹೊಂದಿದೆ. ಸೆಲ್ಫಿಗಾಗಿ ಮತ್ತು JioChat ಗಾಗಿ ಮುಂಭಾಗದಲ್ಲಿ 0.3MP ಕ್ಯಾಮೆರಾವನ್ನು ಹೊಂದಿದ್ದು, ಯಾವುದೇ ಅಪ್ಲಿಕೇಶನ್ ಇಲ್ಲದೆ ಸ್ಥಳೀಯ ವಿಡಿಯೋ ಕರೆಗಳನ್ನು ಒಳಗೊಂಡಿದೆ.

ಬ್ಯಾಟರಿ (Battery) :
ಈ ಫೋನ್‌ ಅದ್ಭುತ ಬ್ಯಾಟರಿ ಬ್ಯಾಕಪ್ ಹೊಂದಿದೆ. ಕಂಪನಿಯು 2000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ.

ಜಿಯೋ ಫೋನ್ ಪ್ರೈಮಾ 2 4G ಫೋನ್‌ ನ ಇತರ ವೈಶಿಷ್ಟ್ಯಗಳು (Other features) :

ಈ ಮೊಬೈಲ್ YouTube, Facebook ಮತ್ತು Google Voice Assistant ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಅಂದರೆ, ನೀವು ಈ ಫೋನಿನಲ್ಲೊ ಈ ಎಲ್ಲಾ ಅಪ್ಲಿಕೇಶನ್‌ಗಳನ್ನು ಸುಲಭವಾಗಿ ರನ್ ಮಾಡಲು ಸಾಧ್ಯವಾಗುತ್ತದೆ. ಈ ಸ್ಮಾರ್ಟ್‌ಫೋನ್ JoiTV, JioCinema, JioSaavan ಜೊತೆಗೆ ಅನೇಕ ಇತರೆ ಮನರಂಜನಾ ಅಪ್ಲಿಕೇಶನ್‌ಗಳನ್ನು ಸಹ ನೀಡುತ್ತದೆ.

ಅಷ್ಟೇ ಅಲ್ಲದೆ, JioPay ಮತ್ತು ಸೌಂಡ್ ಅಲರ್ಟ್, UPI ಸ್ಕ್ಯಾನ್ ಮತ್ತು QR ಕೋಡ್ ಪಾವತಿ ಆಯ್ಕೆಯೂ ಈ ಫೋನ್‌ನಲ್ಲಿ ಲಭ್ಯವಿದೆ. ಮನರಂಜನೆಗಾಗಿ ಈ ಫೋನ್ FM ರೇಡಿಯೊವನ್ನು ಸಹ ಹೊಂದಿದೆ. ಇದು 23 ಭಾಷೆಗಳ ಬೆಂಬಲದೊಂದಿಗೆ ಲಭ್ಯವಿದೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!