ಈಗಾಗಲೇ ಮತ್ತೆ ಕೊರೋನ ( Corona ) ಭಯ ಕಾಣಿಸಿಕೊಂಡಿದೆ. ಹೌದು, 2019 ರಲ್ಲಿ ಕೊರೋನ ಬಂದು ಹೋದ ನಂತರ ಮತ್ತೆ ಇದೀಗ ಕೊರೋನಾ ಅಟ್ಟಹಾಸ ಶುರುಮಾಡಿದೆ. ಈಗ ಸದ್ಯಕ್ಕೆ ಬರೋಬ್ಬರಿ 40 ಜನರಿಗೆ ಜೆಎನ್ 1 ರೂಪಾಂತರಿ ಕೊರೋನಾ ವೈರಸ್ ( JN 1 Corona virus ) ತಗುಲಿದ್ದು, ಸುಮಾರು ಮಂದಿ ಸಾವಿಗೀಡಾಗಿದ್ದಾರೆ. ಇದೀಗ ರಾಜ್ಯದಲ್ಲಿಯೂ ಕೂಡ ಹೊಸ ರೂಪಾಂತರಿ ಕೊರೋನಾ ಮತ್ತೆ ರಾಜ್ಯದಲ್ಲಿ ಅಟ್ಟಹಾಸ ಆರಂಭಿಸಿದೆ. ರಾಜ್ಯದಲ್ಲಿ 192 ಸೋಂಕಿತರ ಮಾದರಿಯನ್ನು ವಂಶವಾಹಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ 60 ಮಾದರಿಗಳ ಫಲಿತಾಂಶ ಲಭ್ಯವಾಗಿದ್ದು, 34 ಮಂದಿಯಲ್ಲಿ ಹೊಸ ವೈರಾಣು ಜೆಎನ್ 1 ಪತ್ತೆಯಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ರಾಜ್ಯದಲ್ಲಿ ಲಸಿಕೆ ಅಭಿಯಾನಕ್ಕೆ ಚಾಲನೆ :
ರಾಜ್ಯದಲ್ಲಿ ಕೋವಿಡ್(COVID) ನ ಜೆಎನ್1 ರೂಪಾಂತರಿ ಸೋಂಕು ಹೆಚ್ಚುತ್ತಿದ್ದು, ಈಗ ಕೊರೋನಾ ಆತಂಕದ ಹಿನ್ನೆಲೆಯಲ್ಲಿ ಮತ್ತೆ ರಾಜ್ಯದಲ್ಲಿ ಲಸಿಕೆ ಅಭಿಯಾನಕ್ಕೆ ಸರ್ಕಾರ ಚಾಲನೆ ನೀಡುತ್ತಿದ್ದು. ಇದರ ಉಪಯೋಗವನ್ನು ಎಲ್ಲರೂ ಬಳಸಿಕೊಳ್ಳಬೇಕು. ಮತ್ತು ಯಾವುದೇ ರೋಗ ಬಾರದಂತೆ ನಮ್ಮನ್ನು ನಾವು ಸದೃಢಗೊಳಿಸಬೇಕಿದೆ.
ಜನವರಿ 2 ರಿಂದ ಲಸಿಕೆ ನೀಡಲು ಸರ್ಕಾರದ ನಿರ್ಧಾರ :
ಹೀಗಾಗಿ ಜನವರಿ 2 ರಿಂದ ರಾಜ್ಯದಲ್ಲಿ ಮತ್ತೆ ಕೋವಿಡ್ ವ್ಯಾಕ್ಸಿನ್ ( Covid Vaccine ) ಅಭಿಯಾನ ಶುರು ಮಾಡಲು ಸರ್ಕಾರ (Karnataka Government) ಮುಂದಾಗಿದ್ದು, ರಾಜ್ಯಾದ್ಯಂತ ಉಚಿತ ಕೋರ್ಬಿವ್ಯಾಕ್ಸ್ ಲಸಿಕೆ ( corbevax vaccine ) ನೀಡಲು ಸರ್ಕಾರ ನಿರ್ಧರಿಸಿದೆ. ದೇಶದಲ್ಲಿ ಕೊರೊನಾ JN.1 ರೂಪಾಂತರಿ ಹಾವಳಿ ಹೆಚ್ಚಾಗುತ್ತಿದ್ದಂಗೆ ಆರೋಗ್ಯ ಇಲಾಖೆಯು ( Health Department ) ಸರ್ಕಾರಕ್ಕೆ ವ್ಯಾಕ್ಸಿನ್ ಗಾಗಿ ಮೊರೆ ಹೋಗಿದೆ. ಹಾಗೆಯೇ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಮತ್ತೆ ವ್ಯಾಕ್ಸಿನ್ ನೀಡಲು ರಾಜ್ಯ ಸರ್ಕಾರ ಈಗ ಮುಂದಾಗಿದೆ.
ಮುನ್ನೆಚ್ಚರಿಕಾ ಲಸಿಕೆ ಪಡೆಯಲು ಅರ್ಹರಿರುವವರ ಸಂಖ್ಯೆ :
ಈಗಾಗಲೇ ರಾಜ್ಯದಲ್ಲಿ ಮೊದಲ ಮತ್ತು ಎರಡನೇ ಡೋಸ್ 100% ವ್ಯಾಕ್ಸಿನೇಶನ್ ( Vaccination ) ಮಾಡಲಾಗಿದೆ. ಶೇ. 27% ಜನರು ಮಾತ್ರ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಿದೆ. ಸದ್ಯ ರಾಜ್ಯದಲ್ಲಿ ಇನ್ನು 1.5 ಕೋಟಿಗೂ ಅಧಿಕ ಜನರು ಮುನ್ನೆಚ್ಚರಿಕಾ ವ್ಯಾಕ್ಸಿನ್ ಪಡೆಯಲು ಅಹರ್ತೆ ಪಡೆದಿದ್ದಾರೆ. ಈ ಒಂದು ಕೊರೋನಾ ವೈರಸ್ ನ ಹೊಸ ರೂಪಾಂತರ ಹರಡುವುದನ್ನು ತಡೆಯಲು ಆದಷ್ಟು ಬೇಗ ಎಲ್ಲರೂ ಈ ಮುನ್ನೆಚ್ಚರಿಕೆ ಲಸಿಕೆ ಹಾಕಿಸಿ ಕೊಳ್ಳುವ ಅಗತ್ಯವಿದೆ. ಹಾಗಾಗಿ ಎಲ್ಲರೂ ಆದಷ್ಟು ಬೇಗ ಮುನ್ನೆಚ್ಚರಿಕೆ ಲಸಿಕೆಯನ್ನು ಹಾಕಿಸಿ ಕೊರೊನ ವೈರಸ್ ಹರಡದಂತೆ ತಡೆಯ ಬೇಕಿದೆ.
ಮುನ್ನೆಚ್ಚರಿಕಾ ಲಸಿಕೆ ( Pre Vaccine ) ನೀಡಲು ಆರೋಗ್ಯ ಇಲಾಖೆ ನಿರ್ಧಾರ :
ಈಗಾಗಲೇ ರಾಜ್ಯದಲ್ಲಿ ಪ್ರಿಕಾಶನರಿ ವ್ಯಾಕ್ಸಿನ್ ( Precautionary vaccine ) ಶೇ.27 ಜನರು ಮಾತ್ರ ಪಡೆದಿದ್ದಾರೆ. ಸಧ್ಯ ರಾಜ್ಯದಲ್ಲಿ 1.5 ಕೋಟಿಗೂ ಹೆಚ್ಚು ಜನರು ಮೂರನೇ ಡೋಸ್ ವ್ಯಾಕ್ಸಿನ್ ( 3rd Dose Vaccine ) ತೆಗೆದುಕೊಂಡಿಲ್ಲ. ಹೀಗಾಗಿ ಈಗ ಮತ್ತೆ ಮುನ್ನೆಚ್ಚರಿಕಾ ಲಸಿಕೆ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ.
ಹಾಗೆಯೇ ಪ್ರಾಥಮಿಕ ಹಂತದಲ್ಲಿ 30 ಸಾವಿರ ಕೋರ್ಬಿವಾಕ್ಸ್ ಲಸಿಕೆ ಖರೀದಿಗೆ ಸರ್ಕಾರ ಮುಂದಾಗಿದೆ. ಒಂದಕ್ಕಿಂತ ಹೆಚ್ಚು ಆರೋಗ್ಯ ಸಮಸ್ಯೆ ( Health problems ) ಹಾಗೂ ಗಂಭೀರ ಆರೋಗ್ಯ ಸಮಸ್ಯಯಿಂದ ಬಳಲುತ್ತಿರುವವರು ಮೂರನೇ ಡೋಸ್ ಪಡೆಯುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.