ಈ ವರದಿಯಲ್ಲಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) 2025 ನೇಮಕಾತಿ (Bharat Electronics Limited (BEL) Recruitment 2025) ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ತನ್ನ ಅಧಿಕೃತ ವೆಬ್‌ಸೈಟ್ www.bel-india.in ನಲ್ಲಿ ಡೆಪ್ಯುಟಿ ಇಂಜಿನಿಯರ್ (Deputy Engineer) ಹುದ್ದೆಗಳಿಗೆ 2025ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಇದು ತಾಂತ್ರಿಕ ವೃತ್ತಿಪರರಿಗಾಗಿ ಒಂದು ಮಹತ್ವದ ಅವಕಾಶವಾಗಿದ್ದು, ಬಿಇ, ಬಿಟೆಕ್, ಬಿಎಸ್‌ಸಿ, ಎಎಂಐಇ, ಜಿಐಇಟಿಇ ಪದವೀಧರರಿಗೆ ಸರ್ಕಾರದ ಒಬ್ಬ ಪಯೋನಿಯರ್ ಸಂಸ್ಥೆಯಲ್ಲಿ ಕೆಲಸ ಮಾಡಲು ಅವಕಾಶ ಒದಗಿಸುತ್ತದೆ.
ನೇಮಕಾತಿಯ ಪ್ರಮುಖ ಅಂಶಗಳು:
ಇಲಾಖೆಯ ಹೆಸರು : ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)
ಹುದ್ದೆಯ ಹೆಸರು: ಡೆಪ್ಯುಟಿ ಇಂಜಿನಿಯರ್ (Deputy Engineer)
ಒಟ್ಟು ಹುದ್ದೆಗಳ ಸಂಖ್ಯೆ: 42
ವೇತನ ಶ್ರೇಣಿ: ₹40,000 – ₹1,40,000
ಕೆಲಸದ ಸ್ಥಳ: ಚೆನ್ನೈ ಮತ್ತು ಪುಣೆ ಘಟಕಗಳು
ವಯೋಮಿತಿ:
ಅರ್ಜಿ ಸಲ್ಲಿಸಲ ಬಯಸುತ್ತಿರುವ ಅಭ್ಯರ್ಥಿಗಳು 28 ವರ್ಷ ಹೊಂದಿರಬೇಕು.(ನಿಗದಿತ ವಿನಾಯಿತಿಗಳು ಅನ್ವಯ)
ವಿದ್ಯಾರ್ಹತೆ :
ಅರ್ಜಿ ಸಲ್ಲಿಸಲ ಬಯಸುತ್ತಿರುವ ಅಭ್ಯರ್ಥಿಗಳು ಬಿಇ(B.E), ಬಿಟೆಕ್(BTech), ಬಿಎಸ್‌ಸಿ(Bsc), ಎಎಂಐಇ(MMIE), ಜಿಐಇಟಿಇ(JIETE).
ಅರ್ಜಿ ಶುಲ್ಕ:
ಜನರಲ್, ಒಬಿಸಿ, EWS : ₹472
ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಡಿಗೆ ವಿನಾಯತಿ ಹೊಂದಿದೆ.
ಆಯ್ಕೆ ಪ್ರಕ್ರಿಯೆ:
BEL ಅಭ್ಯರ್ಥಿಗಳನ್ನು ಮೂರು ಹಂತಗಳಲ್ಲಿ ಆಯ್ಕೆ ಮಾಡುತ್ತದೆ:
ಲಿಖಿತ ಪರೀಕ್ಷೆ(Written test)– ತಾಂತ್ರಿಕ ಪ್ರಶ್ನೆಗಳು ಮತ್ತು ಸಾಮಾನ್ಯ ಅರಿವು
ಸಂದರ್ಶನ (Interview) – ತಾಂತ್ರಿಕ ತಜ್ಞರ ಸಮಿತಿಯಿಂದ ಸಂದರ್ಶನ
ದಾಖಲೆ ಪರಿಶೀಲನೆ (Document verification)– ಶೈಕ್ಷಣಿಕ ಮತ್ತು ಅನುಭವದ ದೃಢೀಕರಣ
ನೇಮಕಾತಿಯ ಪ್ರಮುಖ ದಿನಾಂಕಗಳು :
ಘಟಕಅರ್ಜಿ ಪ್ರಾರಂಭ ದಿನಾಂಕ:
ಚೆನ್ನೈ:15 ಜನವರಿ 2025
ಪುಣೆ :29 ಜನವರಿ 2025
ಕೊನೆಯ ದಿನಾಂಕ:
06 ಫೆಬ್ರವರಿ 2025
24 ಫೆಬ್ರವರಿ 2025
ಅರ್ಜಿ ಸಲ್ಲಿಸುವುದು ಹೇಗೆ?
ಹಂತ 1: ಮೊದಲು, ಅಧಿಕೃತ ವೆಬ್‌ಸೈಟ್ ಗೆ (Official Website) ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ
www.bel-india.in
ಹಂತ 2: ನಂತರ ನೋಂದಣಿಯನ್ನು ಮಾಡಿಕೊಳ್ಳಿ, ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
ಹಂತ 3: ಅಭ್ಯರ್ಥಿಗಳು ಫೋಟೋ, ಸಹಿ, ಹುಟ್ಟಿದ ದಿನಾಂಕದ ದಾಖಲೆ, ಗುರುತಿನ ಪುರಾವೆ, ಅಗತ್ಯ ಅರ್ಹತೆಯ ಮಾರ್ಕ್‌ಶೀಟ್, ವರ್ಗ ಪ್ರಮಾಣಪತ್ರ (ಅನ್ವಯಿಸಿದರೆ). ಹೀಗೆ ಕೇಳಲಾದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು
ಹಂತ 4: ಅರ್ಜಿ ಶುಲ್ಕವನ್ನು ಪಾವತಿಸಿ.(ಅನ್ವಯಿಸಿದಲ್ಲಿ)
ಹಂತ 5: ಸಂಪೂರ್ಣ ಅರ್ಜಿ ನಮೂನೆಯನ್ನು ಪೂರ್ವವೀಕ್ಷಿಸಲು ಮತ್ತು ಪರಿಶೀಲಿಸಲು ಪೂರ್ವವೀಕ್ಷಣೆ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಹಂತ 6: ಅಂತಿಮ ಸಲ್ಲಿಕೆ ಮೊದಲು, ಅಗತ್ಯವಿದ್ದಲ್ಲಿ ವಿವರಗಳನ್ನು ಮಾರ್ಪಡಿಸಿ ಮತ್ತು ನೀವು ಭರ್ತಿ ಮಾಡಿದ ಫೋಟೋ, ಸಹಿ ಮತ್ತು ಇತರ ವಿವರಗಳನ್ನು ಪರಿಶೀಲಿಸಿದ ನಂತರ ಮತ್ತು ಖಚಿತಪಡಿಸಿದ ನಂತರವೇ ಅಂತಿಮ ಸಲ್ಲಿಕೆ ಮಾಡಿ.
ಹೆಚ್ಚಿನ ಮಾಹಿತಿಗೆ: ಅಧಿಸೂಚನೆ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಈ ಉದ್ಯೋಗವನ್ನು ಯಾಕೆ ಆಯ್ಕೆ ಮಾಡಬೇಕು?
BEL ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಒಡಂಬಡಿಕೆಯ ತಾಂತ್ರಿಕ ಕಂಪನಿಯಾಗಿದ್ದು, ಇದು ಪ್ರತ್ಯೇಕತೆಯನ್ನೊಳಗೊಂಡ, ಉನ್ನತ ಮಟ್ಟದ ತಾಂತ್ರಿಕ ಜ್ಞಾನ ಹೊಂದಿದ ವೃತ್ತಿಪರರಿಗೆ ಉತ್ತಮ ಅವಕಾಶವನ್ನು ಒದಗಿಸುತ್ತದೆ. ಈ ಹುದ್ದೆಯು ಹೈ-ಟೆಕ್ ಎಲೆಕ್ಟ್ರಾನಿಕ್ಸ್ ಮತ್ತು ಡಿಫೆನ್ಸ್ ಟೆಕ್ನಾಲಜಿ ಕ್ಷೇತ್ರದಲ್ಲಿ ಕೆಲಸ ಮಾಡುವ ಉತ್ಸಾಹಿಗಳನ್ನು ಬೆಳೆಯಲು ಸಹಾಯ ಮಾಡುತ್ತದೆ.
BEL ನೇವಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸರ್ಕಾರದ ಉದ್ಯೋಗದ ಸುರಕ್ಷತೆ, ಹೆಚ್ಚು ವೇತನ ಶ್ರೇಣಿ, ಸುಧಾರಿತ ತರಬೇತಿ, ಮತ್ತು ಉನ್ನತ ಮಟ್ಟದ ವೃತ್ತಿ ಬೆಳವಣಿಗೆಯ ಅವಕಾಶಗಳು ಲಭ್ಯವಿರುತ್ತವೆ.
BEL 2025 ನೇಮಕಾತಿ ನಿಮ್ಮ ಭವಿಷ್ಯಕ್ಕೆ ಉತ್ತೇಜನ ನೀಡುವಂತ ಆಗಲಿ, ಈ BEL ನೇಮಕಾತಿ ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಡಿಫೆನ್ಸ್ ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರಕ ವೃತ್ತಿ ಬೆಳೆಸಲು ಬಯಸುವವರಿಗೆ ಮಹತ್ವದ ಅವಕಾಶ. ಮಹತ್ವದ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಮತ್ತು ಭವಿಷ್ಯಕ್ಕಾಗಿ ಪ್ರಗತಿ ಪಥದಲ್ಲಿ ಮುನ್ನಡೆ. ಮತ್ತು ನೀವೇನಾದರೂ, ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ, ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ. ಹಾಗೆಯೇ ಈ ವರದಿಯನ್ನು ಎಲ್ಲರಿಗೂ ಶೇರ್ ಮಾಡಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.