ಸ್ನೇಹಿತರೆ, ಒಂದು ಮುಖ್ಯವಾದ ಸುದ್ದಿ!
ನಿಮ್ಮ ಸ್ಮಾರ್ಟ್ ಫೋನ್ ಗಳನ್ನು ಚಾರ್ಜ್ ಮಾಡಲು ಪಬ್ಲಿಕ್ ಚಾರ್ಜಿಂಗ್ ಪೋರ್ಟ್ ಗಳನ್ನು ಬಳಸುತ್ತಿದ್ದರೆ ಎಚ್ಚರವಹಿಸಿ!( careful of use public charging ports to charge your smart phones)
ಹೌದು, ಈ ಪೋರ್ಟ್ ಗಳು ಖಾತರಿಪಡಿಸಲಾಗದ ಮೂಲಗಳಿಂದ ವಿದ್ಯುತ್ ಪೂರೈಸಬಹುದು ಮತ್ತು ದುರುದ್ದೇಶಪೂರಿತ ವ್ಯಕ್ತಿಗಳಿಂದ ಡೇಟಾ ಕಳ್ಳತನಕ್ಕೆ ಕಾರಣವಾಗಬಹುದು. ಸಂಪೂರ್ಣ ಮಾಹಿತಿಯನ್ನು ತಿಳಿಯಲು ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನದ ಒತ್ತಡದ ಜೀವನದಲ್ಲಿ, ಫೋನ್ ಚಾರ್ಜ್ ಮಾಡಲು ಮರೆತುಬಿಡುವುದು ಸಾಮಾನ್ಯವಾಗಿದೆ. ಹೊರಗೆ ಚಾರ್ಜ್ ಮಾಡುವುದು ಅನೇಕರಿಗೆ ಒಂದು ಅನಿವಾರ್ಯತೆಯಾಗಿದೆ. ಪ್ರಯಾಣದ ವೇಳೆ ಚಾರ್ಜಿಂಗ್ ಪಾಯಿಂಟ್‌ಗಳಲ್ಲಿ ಫೋನ್ ಚಾರ್ಜ್ ಮಾಡುವುದು ಒಂದು ಸುಲಭ ಪರಿಹಾರ ಎಂದು ಸೂಚಿಸಲಾಗಿದೆ. ಆದರೆ ಈ ಅಭ್ಯಾಸದಲ್ಲಿ ಅಡಗಿರುವ ಅಪಾಯದ ಬಗ್ಗೆ ನಿಮಗೆ ತಿಳಿದಿದೆಯೇ?
ಸಾರ್ವಜನಿಕ ಸ್ಥಳದಲ್ಲಿ ಚಾರ್ಜ್ ಮಾಡುವಾಗ ಎಚ್ಚರ:
ಸಾರ್ವಜನಿಕ ಸ್ಥಳಗಳಲ್ಲಿ ಚಾರ್ಜ್ ಮಾಡುವಾಗ, ದುರುದ್ದೇಶಪೂರಿತ ವ್ಯಕ್ತಿಗಳು USB ಚಾರ್ಜರ್‌ಗಳನ್ನು ಬಳಸಿ ನಿಮ್ಮ ಫೋನ್‌ನಿಂದ ಡೇಟಾವನ್ನು ಕದಿಯಬಹುದು. ‘ಜ್ಯೂಸ್ ಜಾಕಿಂಗ್(juice- jacking)’ ಎಂಬ ಹೊಸ ರೀತಿಯ ಸೈಬರ್ ಅಪರಾಧದಲ್ಲಿ, ಖದೀಮರು ಚಾರ್ಜಿಂಗ್ ಪಾಯಿಂಟ್‌ಗಳಲ್ಲಿ ಈ ಹಾನಿಕಾರಕ ಚಾರ್ಜರ್‌ಗಳನ್ನು ಅಳವಡಿಸುತ್ತಾರೆ. ಈ ಚಾರ್ಜರ್‌ಗಳು ನಿಮ್ಮ ಫೋನ್‌ಗೆ ಚಾರ್ಜ್ ಮಾಡುವಂತೆ ಕಾಣಿಸಿದರೂ, ನಿಮ್ಮ ಫೋನ್‌ನಿಂದ ಖಾಸಗಿ ಫೋಟೋಗಳು, ವೀಡಿಯೊಗಳು, ಸಂದೇಶಗಳು ಮತ್ತು ಗುಪ್ತ ಮಾಹಿತಿಯನ್ನು ಕದಿಯಬಹುದು.
ಜ್ಯೂಸ್-ಜಾಕಿಂಗ್(juice- jacking) ಎಂದರೇನು?
ಜ್ಯೂಸ್-ಜಾಕಿಂಗ್” ಎಂಬುದು ಸೈಬರ್ ದಾಳಿಯ(cyber attack’s) ಒಂದು ರೂಪವಾಗಿದ್ದು, ಇದರಲ್ಲಿ ಸಾರ್ವಜನಿಕ USB ಪೋರ್ಟ್(USB port) ಮೂಲಕ ವ್ಯಕ್ತಿಯ ಫೋನ್ ಅಥವಾ ಇತರ ಪೋರ್ಟಬಲ್ ಸಾಧನದಲ್ಲಿ ಮಾಲ್‌ವೇರ್(malware) ಅನ್ನು ಸ್ಥಾಪಿಸುವ ಮೂಲಕ ಮಾಹಿತಿಯನ್ನು ಕದಿಯಲಾಗುತ್ತದೆ.
ಇದು ಹೇಗೆ ಕೆಲಸ ಮಾಡುತ್ತದೆ?
ದುಷ್ಕರ್ಮಿಗಳು ಚಾರ್ಜಿಂಗ್ ಸ್ಟೇಷನ್‌ಗಳಿಗೆ ಮಾಲ್‌ವೇರ್ ಅನ್ನು ಲೋಡ್ ಮಾಡುತ್ತಾರೆ ಅಥವಾ ಸೋಂಕಿತ ಯುಎಸ್‌ಬಿ ಕೇಬಲ್‌ಗಳನ್ನು ಬಿಡುತ್ತಾರೆ.
ಅನುಮಾನಾಸ್ಪದ ವ್ಯಕ್ತಿ “ಮರೆತುಹೋದ” ಕೇಬಲ್ ಅನ್ನು ಬಳಸಿ ಫೋನ್ ಚಾರ್ಜ್ ಮಾಡಲು ಪ್ರಯತ್ನಿಸುತ್ತಾನೆ.
ಚಾರ್ಜ್ ಮಾಡುವಾಗ, ಮಾಲ್‌ವೇರ್ ಫೋನ್‌ಗೆ ಸ್ಥಾಪಿಸುತ್ತದೆ ಮತ್ತು ಖಾಸಗಿ ಡೇಟಾವನ್ನು ಕದಿಯುತ್ತದೆ.
ಯುಎಸ್‌ಬಿ ಪೋರ್ಟ್‌ಗಳು ಚಾರ್ಜ್ ಮಾಡುವುದರ ಜೊತೆಗೆ ಡೇಟಾವನ್ನು ವರ್ಗಾಯಿಸುತ್ತವೆ.
ದುಷ್ಕರ್ಮಿಗಳು ಈ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ಫೋಟೋಗಳು, ಸಂದೇಶಗಳು(Messages), ಪಾಸ್‌ವರ್ಡ್‌ಗಳು ಮತ್ತು ಇನ್ನಷ್ಟನ್ನು ಕದಿಯಬಹುದು.
ಸಾರ್ವಜನಿಕ USB ಚಾರ್ಜಿಂಗ್ ಪೋರ್ಟ್ಗಳ ಬಳಕೆಯಲ್ಲಿ ಕೇಂದ್ರ ಸರ್ಕಾರ ನೀಡಿದ ಎಚ್ಚರಿಕೆ ಏನು?
ಕೇಂದ್ರ ಸರ್ಕಾರವು ವಿಮಾನ ನಿಲ್ದಾಣಗಳು(Airport), ಕೆಫೆಗಳು(Cafe’s), ಹೋಟೆಲ್‌ಗಳು(Hotels)ಮತ್ತು ಬಸ್ ನಿಲ್ದಾಣ(Bustand)ಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಫೋನ್ ಚಾರ್ಜಿಂಗ್ ಸ್ಟೇಷನ್‌ಗಳ ಬಳಕೆಯ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದೆ. “USB ಚಾರ್ಜರ್ ಸ್ಕ್ಯಾಮ್(USB charger scam)” ಗೆ ಬಲಿಯಾಗುವ ಅಪಾಯವನ್ನು ಅವರು ಹೈಲೈಟ್ ಮಾಡಿದ್ದಾರೆ, ಸೋಂಕಿತ USB ಚಾರ್ಜಿಂಗ್ ಸ್ಟೇಷನ್‌ಗಳಿಗೆ ಸಾಧನಗಳನ್ನು ಸಂಪರ್ಕಿಸುವುದು ಜ್ಯೂಸ್-ಜಾಕಿಂಗ್ ಸೈಬರ್ ದಾಳಿಗೆ ಕಾರಣವಾಗಿದೆ ಎಂದು ಎಚ್ಚರಿಸಿದ್ದಾರೆ
ಜ್ಯೂಸ್-ಜಾಕಿಂಗ್ ಸೈಬರ್ ಕೃತ್ಯದಿಂದ ಸುರಕ್ಷಿತವಾಗಿರುವುದು ಹೀಗೆ?
ಗೋಡೆಯ ಪ್ಲಗ್‌ಗಳನ್ನು ಬಳಸಿ: ಚಾರ್ಜ್ ಮಾಡಲು ಯಾವಾಗಲೂ ಗೋಡೆಯ ಪ್ಲಗ್‌ಗಳನ್ನು ಬಳಸುವುದು ಉತ್ತಮ.
ನಿಮ್ಮದೇ ಆದ ಕೇಬಲ್: ಯಾವಾಗಲೂ ನಿಮ್ಮದೇ ಆದ ಚಾರ್ಜ್ ಕೇಬಲ್ ಮತ್ತು ಪವರ್ ಬ್ಯಾಂಕ್ ಬಳಸಿ( use own charge cable and power bank).
ಮೊಬೈಲ್ ಲಾಕ್: ಚಾರ್ಜ್ ಮಾಡುವಾಗ ನಿಮ್ಮ ಮೊಬೈಲ್ ಲಾಕ್ ಮಾಡಿ.
ಬ್ಲೂಟೂತ್ ಆಫ್: ಚಾರ್ಜ್ ಮಾಡುವಾಗ ಬ್ಲೂಟೂತ್ ಆಫ್(Bluetooth off)ಮಾಡಿ.
ಮೊಬೈಲ್ ಸ್ವಿಚ್ ಆಫ್: ಚಾರ್ಜ್ ಮಾಡುವಾಗ ಸಾಧ್ಯವಾದರೆ ಮೊಬೈಲ್ ಸ್ವಿಚ್ ಆಫ್‌ಮಾಡಿ.
ಯಾವುದೇ ಸೈಬರ್ ವಂಚನೆ ಕಂಡುಬಂದರೆ www.cybercrime.gov.in ವೆಬ್‌ಸೈಟ್ ಮೂಲಕ ದೂರು ನೀಡಿ ಅಥವಾ 1930 ಸಹಾಯವಾಣಿಗೆ ಕರೆ ಮಾಡಿ
ಜ್ಯೂಸ್ ಜಾಕಿಂಗ್ ಒಂದು ಗಂಭೀರ ಬೆದರಿಕೆ. ಈ ಸರಳ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ, ನಿಮ್ಮ ಖಾಸಗಿ ಮಾಹಿತಿಯನ್ನು ರಕ್ಷಿಸಿಕೊಳ್ಳಬಹುದು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- SSC 968 ಖಾಲಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟ, ಇಲ್ಲಿದೆ ವಿವರ
- ಹೊಸ ರೇಷನ್ ಕಾರ್ಡ್ ಸ್ಟೇಟಸ್ ಮೊಬೈಲ್ ನಲ್ಲೆ ಚೆಕ್ ಮಾಡಿ, New Ration Card Status Karnataka 2024 @ahara.kar.nic.in
- 2024 ರ ಮತದಾರರ ಪಟ್ಟಿ ಬಿಡುಗಡೆ. ಮೊಬೈಲ್ ನಲ್ಲಿ ನೋಡುವುದು ಹೇಗೆ? Karnataka Voter List Download 2024
- ಗೃಹಲಕ್ಷ್ಮಿ 7ನೇ ಕಂತಿನ ಹಣ ಈಗ ಖಾತೆಗೆ ಬಂತು, ನಿಮ್ಮ ಖಾತೆಗೆ ಬರದೇ ಇದ್ರೆ ಈ ರೀತಿ ಮಾಡಿ
- ಒಂದೇ ತಿಂಗಳಲ್ಲಿ ಬರೋಬ್ಬರಿ 4 ಸಾವಿರ ಏರಿದ ಚಿನ್ನದ ಬೆಲೆ, ಇಂದಿನ ರೇಟ್ ನೋಡಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ..