ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ಸುಳ್ಳು ಮಾಹಿತಿಯನ್ನು ನೀಡಿ ಪಡಿತರ ಚೀಟಿಯನ್ನು ಪಡೆದು, ಅದರ ಸದುಪಯೋಗ ಪಡೆದುಕೊಳ್ಳುತ್ತಿರುವವರಿಗೆ ಒಂದು ಬಿಗ್ ಶಾಕ್ ಇದೆ. ರಾಜ್ಯ ಸರ್ಕಾರವು ಬೋಗಸ್ ಪಡಿತರ ಚೀಟಿ(Ration card)ಯನ್ನು ಪಡೆದವರ ಮೇಲೆ ಕ್ರಮ ಕೈಗೊಳ್ಳಲಿದೆ. ಇಂತಹ ನಕಲಿ(Duplicate) ರೇಷನ್ ಕಾರ್ಡ್ ಗಳ ಮೇಲೆ ಯಾವ ಕ್ರಮವನ್ನು ಕೈಗೊಳ್ಳಲಾಗುತ್ತದೆ?, ಅಂತಹ ಪಡಿತರ ಚೀಟಿಗಳನ್ನು ಹಿಂದಿರುಗಿ ತೆಗೆದುಕೊಳ್ಳುತ್ತಾರೆಯೇ?, ಇಂತಹ ರೇಷನ್ ಕಾರ್ಡ್ ಹೊಂದಿದವರಿಗೆ ದಂಡ ಎಷ್ಟು ವಿಧಿಸಲಾಗುತ್ತದೆ?, ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ನಕಲಿ BPL ಪಡಿತರ ಚೀಟಿ ಹೊಂದಿದವರಿಗೆ ಬಿಗ್ ಶಾಕ್?:
ನಮ್ಮ ಕರ್ನಾಟಕದಲ್ಲಿ ಹೊಸ ಸರ್ಕಾರ(government) ಬಂದು ಬಿಟ್ಟಿತು. ಹಾಗೆಯೇ ಹೊಸ ಸರ್ಕಾರವು ನೀಡಿರುವ ಆಶ್ವಾಸನೆಯಂತೆ, ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ಅದೆಷ್ಟೋ ಸೌಲಭ್ಯಗಳು ದೊರೆಯುತ್ತದೆ ಎಂಬ ಭರವಸೆಯನ್ನು ಕೂಡ ಸರ್ಕಾರವು ನೀಡಿದೆ. ಇದೇ ಸಂದರ್ಭದಲ್ಲಿ ಸರ್ಕಾರದ ಆಹಾರ ಇಲಾಖೆಯು ಒಂದು ಬಿಗ್ ಶಾಕ್ ನೀಡಿದೆ. ಸುಳ್ಳು ಮಾಹಿತಿಯನ್ನು ನೀಡಿ ಬಿಪಿಎಲ್ ಪಡಿತರ ಚೀಟಿಯನ್ನು ಪಡೆದುಕೊಂಡು ಅದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿರುವ ಅನೇಕ ನೌಕರರ ಹಾಗೂ ಬಿಪಿಎಲ್(BPL) ಕಾರ್ಡ್ಗಳನ್ನು ಪಡೆಯಲು ಅರ್ಹವಿಲ್ಲದವರ ಜನರ ಕಡೆಯಿಂದ ಪಡಿತರ ಚೀಟಿಗಳನ್ನು ಹಿಂದಿರುಗಿ ಪಡೆಯುತ್ತಿದ್ದಾರೆ.
ಸರ್ಕಾರವು ಈಗಾಗಲೇ ಬೊಗಸ್ ಪಡಿತರ ಚೀಟಿಯನ್ನು ಪಡೆದವರ ಕಾರ್ಡ್ಗಳನ್ನು ತೆಗೆದು ಹಾಕುವ ಕಾರ್ಯಾಚರಣೆಯಲ್ಲಿದೆ. ವರದಿಯ ಪ್ರಕಾರ ಆಹಾರ ಇಲಾಖೆಯು(Food Department) ದಿನಕ್ಕೆ 2000 ನಕಲಿ ರೇಷನ್ ಕಾರ್ಡ್ ಗಳನ್ನು ಪತ್ತೆ ಹಚ್ಚಿ ಅವುಗಳನ್ನು ಹಿಂಪಡೆಯುತ್ತಿದ್ದಾರೆ. 16,300 ಕಾರ್ಡ್‌ದಾರರು ಬೋಗಸ್ ಪಡಿತರ ಚೀಟಿ ಹೊಂದಿರುವುದು ಪತ್ತೆಯಾಗಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅವರ ವಿರುದ್ಧ ಕ್ರಮ ಕೈಗೊಂಡಿದೆ. ಈ ಹಲವು ಕಾರ್ಡ್‌ಗಳನ್ನು ತೆಗೆದುಹಾಕುವ ಮೂಲಕ ಇಲಾಖೆಯು ಪ್ರತಿ ತಿಂಗಳು 1.18 ಕೋಟಿ ರೂ.ಗಳನ್ನು ಉಳಿಸಲು ಪ್ರಾರಂಭಿಸಿದೆ.
16,300 ಕಾರ್ಡ್‌ದಾರರಲ್ಲಿ 150 ಮಂದಿ ಸರ್ಕಾರಿ ನೌಕರರಾಗಿದ್ದು, ಅವರಿಗೆ ನೋಟಿಸ್(notice) ಜಾರಿ ಮಾಡುವಂತೆ ಸರ್ಕಾರವು ತಿಳಿಸಿದೆ ಅಷ್ಟೇ ಅಲ್ಲದೆ ಅವರ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಿದೆ. ಅಥವಾ ಅಂತಹ ಬಿಪಿಎಲ್ ಕಾರ್ಡ್ ಗಳು ಕಂಡುಬಂದಲ್ಲಿ ಅವುಗಳನ್ನು ಎಪಿಎಲ್ ಕಾರ್ಡ್ಗಳಿಗೆ ಬದಲಾಯಿಸುವ ಕಾರ್ಯಾಚರಣೆ ನಡೆಯುತ್ತಿದೆ.
ಉಚಿತ ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್‌ಗಳನ್ನು ಹೊಂದಿರುವವರು ಯಾರು ಮತ್ತು ಅದರ ನೈಜತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯದ ಎಲ್ಲಾ ನಾಗರಿಕರನ್ನು ಪರೀಕ್ಷಿಸಲು ಇಲಾಖೆಯು ಮೂರು ಅಂಶಗಳ ವಿಧಾನವನ್ನು ಅಳವಡಿಸಿಕೊಂಡಿದೆ. ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಕುಟುಂಬಗಳ ಸಂಖ್ಯೆಯನ್ನು ಕಂಡುಹಿಡಿಯುವ ಮೂಲಕ ಇದು ಪ್ರಾರಂಭವಾಯಿತು. ನಾಲ್ಕು ಚಕ್ರದ(4 wheelers) ವಾಹನಗಳನ್ನು ಹೊಂದಿರುವವರು ಪಿಡಿಎಸ್(PDS) ಯೋಜನೆಯಡಿ ಅರ್ಜಿ ಸಲ್ಲಿಸಲು ಅರ್ಹರಲ್ಲ
ಈಗಾಗಲೇ ಸರ್ಕಾರವು 20 ಲಕ್ಷಕ್ಕೂ ಹೆಚ್ಚು ಪಡಿತರ ಚೀಟಿಗಳನ್ನು ವಿತರಿಸಲಾಗಿದೆ. ಅವುಗಳೆಲ್ಲವನ್ನು ಮತ್ತೊಮ್ಮೆ ಸಂಕ್ಷಿಪ್ತವಾಗಿ ಪರಿಶೀಲಿಸುತ್ತಿದ್ದಾರೆ. ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿದವರು, ಸುಳ್ಳು ಮಾಹಿತಿಯನ್ನು ನೀಡಿ ಪಡೆದುಕೊಂಡಿದ್ದರೆ ಅವರುಗಳ ಮೇಲೆ ಕ್ರಿಮಿನಲ್ ಕೇಸ್(criminal case) ಕೂಡ ಮಾಡುವಂತೆ ಸರ್ಕಾರವು ಮಾಹಿತಿಯನ್ನು ನೀಡಿದೆ. ಹಾಗಾಗಿ ನೀವೇನಾದರೂ ನಕಲಿ ರೇಷನ್ ಕಾರ್ಡನ್ನು ಹೊಂದಿದ್ದರೆ ನೀವೇ ಸ್ವತಹ ಅದನ್ನು ಹಿಂತಿರುಗಿಸುವುದು ಒಳ್ಳೆಯದು.
ಆಕ್ಟಿವ್ BPL ಕಾರ್ಡ್ ಸಂಖ್ಯೆ ಚೆಕ್ ಮಾಡುವುದು ಹೇಗೆ?
ಹಂತ 1: ಮೊದಲಿಗೆ ಅರ್ಜಿದಾರರು ಒಟ್ಟಾರೆ ಪೋರ್ಟಲ್‌ಗೆ ಹೋಗಬೇಕು. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿದ ನಂತರ, ಮುಖಪುಟವು ನಿಮ್ಮ ಮುಂದೆ ತೆರೆಯುತ್ತದೆ. ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಅಥವಾ ಕೆಳಗಿನ ಡೈರೆಕ್ಟ್ ಲಿಂಕ್ ಮೇಲೆ ಸಹಿತ ನೀವು ಕ್ಲಿಕ್ ಮಾಡಬಹುದು
Anna bhagya-ಅನ್ನಭಾಗ್ಯ ಯೋಜನೆಯಡಿ ಸಿಗಲಿದೆ 10kg ಅಕ್ಕಿ-ನಿಮ್ಮ ಹೆಸರು ಚೆಕ್ ಮಾಡುವ ಡೈರೆಕ್ಟ್ ಲಿಂಕ್
https://mahitikanaja.karnataka.gov.in/FCS/MyAreaData?ServiceId=1043&Type=TABLE&DepartmentId=1010
ಹಂತ 2: ನಂತರ ನಿಮ್ಮ ಜಿಲ್ಲೆ, ತಾಲೂಕು,ಗ್ರಾಮಪಂಚಾಯತಿ,ಗ್ರಾಮ ಹಾಗೂ ಕಾರ್ಡ್ ಪ್ರಕಾರ(AAY/BPL) Select ಮಾಡಿ “ಸಲ್ಲಿಸಿ” ಮೇಲೆ ಕ್ಲಿಕ್ ಮಾಡಿ. ನಿಮ್ಮ ಕುಟುಂಬ ಮತ್ತು ನಿಮ್ಮ ಹೆಸರನ್ನು ನೀವು ನೋಡಬಹುದು.
ಪಡಿತರ ಚೀಟಿ ನವೀಕರಣ:
ಹೊಸ ಪಡಿತರ ಚೀಟಿಗಳಿಗಾಗಿ (ಪಡಿತರ ಕಾರ್ಡ್ ಅರ್ಜಿ) ಅರ್ಜಿಗಳನ್ನು ರಾಜ್ಯದ ಜಿಲ್ಲಾ ಸರಬರಾಜು ಕಚೇರಿ ಮತ್ತು ತಹಸಿಲ್ ಮಟ್ಟದ ಸರಬರಾಜು ಕಚೇರಿಗೆ ಸಲ್ಲಿಸಲಾಗುತ್ತದೆ. ಅದರ ನಂತರ, ತನಿಖೆಯ ಆಧಾರದ ಮೇಲೆ, ಅನರ್ಹರ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗುತ್ತದೆ ಮತ್ತು ಅವರ ಸ್ಥಾನದಲ್ಲಿ ಅರ್ಹರ ಪಡಿತರ ಚೀಟಿಗಳನ್ನು ಮಾಡಲಾಗುತ್ತದೆ.
ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಮಹಿಳೆಯರಿಗೆ ಉಚಿತ ಬಸ್ ಪಾಸ್ | ರಾಜ್ಯದಲ್ಲಿ ಇವತ್ತಿನಿಂದಲೇ ಜಾರಿ.! ಟಿಕೆಟ್ ಕೊಳ್ಳಬೇಡಿ
ಇದನ್ನೂ ಓದಿ: ₹7999ಕ್ಕೆ ಹೊಸ ಮೊಬೈಲ್ 😎 ಜಗತ್ತಿನ ಅತಿ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ – LAVA Yuva 2 Pro
ಪ್ರಮುಖ ಲಿಂಕುಗಳು |
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್ | Download App |
ಟೆಲಿಗ್ರಾಂ ಚಾನೆಲ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ವಾಟ್ಸಪ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ