ಕರ್ನಾಟಕ ಸಿಇಟಿ ಪರೀಕ್ಷೆ-2025: ವಿದ್ಯಾರ್ಥಿಗಳಿಗೆ ವಸ್ತ್ರ ಸಂಹಿತೆ & ಪರೀಕ್ಷೆ ನಿಯಮಗಳು, ತಿಳಿದುಕೊಳ್ಳಿ

Picsart 25 04 14 07 49 41 290

WhatsApp Group Telegram Group

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ-2025 ಪರೀಕ್ಷೆಗೆ(CET-2025 Exam) ತಯಾರಿ: ವಸ್ತ್ರಸಂಹಿತೆ ಹಾಗೂ ಪ್ರಮುಖ ಸೂಚನೆಗಳು ಪ್ರಕಟ

ಕರ್ನಾಟಕ ರಾಜ್ಯದಲ್ಲಿ ವೃತ್ತಿಪರ ಕೋರ್ಸ್‌ಗಳ (ಇಂಜಿನಿಯರಿಂಗ್, ಫಾರ್ಮಸಿ, ನರ್ಸಿಂಗ್, ಕೃಷಿ ಮೊದಲಾದವು) ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವರ್ಷಕ್ಕೊಮ್ಮೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಾದ ಕೆ-ಸಿಇಟಿ (CET)–2025ರ ಪರೀಕ್ಷೆಗಳು ಏಪ್ರಿಲ್ 16 ಮತ್ತು 17(ಏಪ್ರಿಲ್ 16th and 17th) ರಂದು ರಾಜ್ಯದಾದ್ಯಂತ ನಡೆಯಲಿವೆ. ಈ ಪರೀಕ್ಷೆಯನ್ನು ಪಾರದರ್ಶಕವಾಗಿ, ನಿಯಮಬದ್ಧವಾಗಿ ಮತ್ತು ಸಮರ್ಪಕ ರೀತಿಯಲ್ಲಿ ನಡೆಸಲು ವಿವಿಧ ತಂತ್ರಜ್ಞಾನದ ಸಹಾಯದಿಂದ ಹೆಚ್ಚಿನ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಇನ್ನು, ಈ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(Karnataka Examination Authority) ಅಧೀನದಲ್ಲಿ ನಡಸಲಾಗುವ ಮಹತ್ವಪೂರ್ಣ ಪರೀಕ್ಷೆಯಾಗಿದೆ. ಈ ಹಿನ್ನೆಲೆಯಲ್ಲಿ, ಅಭ್ಯರ್ಥಿಗಳು ಪ್ರಮುಖ ನಿಯಮಗಳು ಸೇರಿದಂತೆ ವಸ್ತ್ರ ಸಂಹಿತೆಯ ಬಗ್ಗೆ ಕಾಳಜಿವಹಿಸಬೇಕು. ಹಾಗಿದ್ದರೆ ವಿದ್ಯಾರ್ಥಿಗಳು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು ಯಾವುವು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಪರೀಕ್ಷಾ ದಿನಾಂಕಗಳು ಹಾಗೂ ವಿಷಯಗಳು:

ಏಪ್ರಿಲ್ 16, 2025(April 16 th)
ಬೆಳಗ್ಗೆ 10:30 – 11:50: ಭೌತಶಾಸ್ತ್ರ(Physics)
ಮಧ್ಯಾಹ್ನ 2:30 – 3:50: ರಸಾಯನಶಾಸ್ತ್ರ(Chemistry)

ಏಪ್ರಿಲ್ 17, 2025(April 17 th)
ಬೆಳಗ್ಗೆ 10:30 – 11:50: ಗಣಿತಶಾಸ್ತ್ರ(Mathematics)
ಮಧ್ಯಾಹ್ನ 2:30 – 3:50: ಜೀವಶಾಸ್ತ್ರ(Biology)

ಪರೀಕ್ಷಾ ಕೇಂದ್ರ ಸುತ್ತಲಿನ ನಿಯಮಗಳು ಹೀಗಿವೆ:

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ(Indian Civil Protection Code) 2023ರ ಕಲಂ 163ರನ್ವಯ, ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್(200 meters) ಪ್ರದೇಶವನ್ನು ನಿರ್ಬಂಧಿತ ವಲಯವೆಂದು ಘೋಷಿಸಲಾಗಿದೆ.
ಈ ವ್ಯಾಪ್ತಿಯಲ್ಲಿ ಇರುವ ಜೆರಾಕ್ಸ್ ಸೆಂಟರ್(Xerox Center), ಇಂಟರ್‌ನೆಟ್ ಸೆಂಟರ್‌ಗಳನ್ನು(Internet centers) ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತದೆ.
ಅನಧಿಕೃತ ವ್ಯಕ್ತಿಗಳ ಪ್ರವೇಶ ನಿಷೇಧಿಸಲಾಗಿದೆ.

ವಿದ್ಯಾರ್ಥಿಗಳಿಗಾಗಿ ವಸ್ತ್ರಸಂಹಿತೆಯ (Dress Code)ಬಗ್ಗೆಯೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ:

ಪುರುಷ ಅಭ್ಯರ್ಥಿಗಳು(Male candidates):
ಅರ್ಧತೋಳಿನ ಶರ್ಟ್ ಅಥವಾ ಟೀ-ಶರ್ಟ್(T-shirt) ಧರಿಸಬೇಕು.
ಕಾಲರ್ ಇಲ್ಲದ ಶರ್ಟ್ ಪ್ರಾಧಾನ್ಯ.
ಕುರ್ತಾ-ಪೈಜಾಮ, ಜೀನ್ಸ್ ಪ್ಯಾಂಟ್ ನಿಷಿದ್ಧ.
ಸರಳ, ಜೇಬು ಇಲ್ಲದ ಅಥವಾ ಕಮ್ಮಿ ಜೇಬಿಗಳಿರುವ ಪ್ಯಾಂಟ್‌ ಧರಿಸಬೇಕು.
ಶೂ ನಿಷಿದ್ಧ, ತೆಳುವಾದ ಚಪ್ಪಲಿ ಅಥವಾ ಸ್ಯಾಂಡಲ್ ಧರಿಸಬೇಕು.
ಲೋಹದ ಆಭರಣಗಳು, ಗಡಿಯಾರ, ಕ್ಯಾಪ್, ಮಾಸ್ಕ್ ನಿಷಿದ್ಧ.

ಮಹಿಳಾ ಅಭ್ಯರ್ಥಿಗಳು(Female candidates):
ಅರ್ಧತೋಳಿನ ಬಟ್ಟೆಗಳು ಮಾತ್ರ ಧರಿಸಬೇಕು.
ಜೀನ್ಸ್, ಕಸೂತಿ ಬಟ್ಟೆ, ಬ್ರೂಚ್, ದೊಡ್ಡ ಬಟನ್‌ಗಳ ಬಟ್ಟೆ ನಿಷಿದ್ಧ.
ಹೀಲ್ಡ್ ಚಪ್ಪಲಿ, ಶೂ ನಿಷಿದ್ಧ. ತೆಳುವಾದ ಚಪ್ಪಲಿ ಮಾತ್ರ ಧರಿಸಬೇಕು.
ಮಂಗಳಸೂತ್ರ ಹಾಗೂ ಕಾಲುಂಗುರ ಹೊರತುಪಡಿಸಿ ಇತರೆ ಲೋಹದ ಆಭರಣಗಳಿಗೆ ಅನುಮತಿ ಇಲ್ಲ.

ಪರೀಕ್ಷಾ ಕೇಂದ್ರದೊಳಗೆ ಯಾವೆಲ್ಲಾ ವಸ್ತುಗಳು ನಿಷಿದ್ಧ :

ಮೊಬೈಲ್(Mobile), ಇಯರ್‌ಫೋನ್, ಪೆನ್ ಡ್ರೈವ್, ಮೈಕ್ರೋಫೋನ್, ಬ್ಲೂಟೂತ್ ಸಾಧನಗಳು.
ಲೋಹದ ಅಥವಾ ಬಣ್ಣದ ಬಾಟಲಿಯ(Color bottle) ಕುಡಿಯುವ ನೀರು.
ಪೆನ್ಸಿಲ್, ಪೇಪರ್, ಲಾಗ್ ಟೇಬಲ್, ಜಾಮಿಟ್ರಿ ಬಾಕ್ಸ್.
ಟೋಪಿ ಮತ್ತು ಮುಖ ಮುಚ್ಚುವ ಮಾಸ್ಕ್.

ಪ್ರವೇಶ ಹಾಗೂ ಗುರುತಿನ ಪತ್ರ ಕಡ್ಡಾಯ:

ಕೇಂದ್ರದೊಳಗೆ ಪ್ರವೇಶಪತ್ರ ಹಾಗೂ ಮಾನ್ಯವಾದ ಫೋಟೋ ಗುರುತಿನ ಚೀಟಿ ಕಡ್ಡಾಯ.
ಆಧಾರದ ಮೇಲೆ ಅಭ್ಯರ್ಥಿಗಳ ಮುಖವನ್ನಾಧರಿಸಿ ಆಫ್ ಮೂಲಕ ಗುರುತು ಪರಿಶೀಲನೆ ನಡೆಯಲಿದೆ.
ಪರೀಕ್ಷೆ ಆರಂಭಕ್ಕೂ 2 ಗಂಟೆ ಮುಂಚಿತವಾಗಿ ಅಭ್ಯರ್ಥಿಗಳು ಕೇಂದ್ರದಲ್ಲಿರಬೇಕು.

ಕೆಲವು ಸೌಲಭ್ಯಗಳ ಬಗ್ಗೆ ಬಹು ಮುಖ್ಯ ಸೂಚನೆ:

ಗಾಳಿ, ಬೆಳಕು, ಕುಳಿತುಕೊಳ್ಳುವ ಆಸನ, ಶೌಚಾಲಯ, ಕುಡಿಯುವ ನೀರು ಮುಂತಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕೇಂದ್ರಗಳಿಗೆ ನಿರ್ದೇಶನ(Direction to Centres) ನೀಡಲಾಗಿದೆ.

ಒಟ್ಟಾರೆಯಾಗಿ, ಅಭ್ಯರ್ಥಿಗಳು ಯಾವುದೇ ಹಂಗು ಇಲ್ಲದೆ, ಸುಗಮವಾಗಿ ಪರೀಕ್ಷೆ ಬರೆಯಲು ಸಿಇಟಿ-2025ಗೆ ಅಗತ್ಯ ಸಿದ್ಧತೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(Karnataka Examination Authority) ಕೈಗೊಂಡಿದ್ದು, ಅಭ್ಯರ್ಥಿಗಳು ಪ್ರಕಟಿತ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!