ಕರ್ನಾಟಕ ಗ್ರಾಮೀಣ ಬ್ಯಾಂಕ್​​ನಲ್ಲಿ 586 ಹುದ್ದೆಗಳ ಭರ್ಜರಿ ನೇಮಕಾತಿ! ಅಪ್ಲೈ ಮಾಡಿ

jobs in grammina bank

ಈ ವರದಿಯಲ್ಲಿ ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ(Banking Job Recruitments) ಕುರಿತು ತಿಳಿಸಿಕೊಡಲಾಗುತ್ತಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ  ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ಗ್ರಾಮೀಣ ಬ್ಯಾಂಕ್ ನೇಮಕಾತಿ 2024: 586 ಹುದ್ದೆಗಳ ಭರ್ತಿ

ಕರ್ನಾಟಕ ಗ್ರಾಮೀಣ ಬ್ಯಾಂಕ್ (Karnataka Gramina Bank) ವಿವಿಧ ಹುದ್ದೆಗಳಿಗೆ 586 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿ ಪ್ರಕ್ರಿಯೆ ಅಡಿಯಲ್ಲಿ ಆಫೀಸ್ ಅಸಿಸ್ಟೆಂಟ್ ಮತ್ತು ಆಫೀಸರ್ ಹುದ್ದೆಗಳಿಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಜೂನ್ 27, 2024 ರ ಒಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ನೇಮಕಾತಿ ಸಂಸ್ಥೆ: ಕರ್ನಾಟಕ ಗ್ರಾಮೀಣ ಬ್ಯಾಂಕ್
(Karnataka Gramina Bank)

ಹುದ್ದೆಯ ಹೆಸರು: ಆಫೀಸ್ ಅಸಿಸ್ಟೆಂಟ್, ಆಫೀಸರ್

ಒಟ್ಟು ಹುದ್ದೆಗಳು: 586

ಉದ್ಯೋಗ ಸ್ಥಳ: ಕರ್ನಾಟಕ

ಹುದ್ದೆಗಳ ಮಾಹಿತಿ: ವಿವಿಧ ಬ್ಯಾಂಕಿನಲ್ಲಿ ಲಭ್ಯವಿರುವ ಹುದ್ದೆಗಳ ವಿವರಗಳು ಹೀಗಿವೆ.

ಕರ್ನಾಟಕ ಗ್ರಾಮೀಣ ಬ್ಯಾಂಕ್(Karnataka Gramina Bank) – 386 ಹುದ್ದೆಗಳು

ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್(KarnatakaVikas gramina bank) – 200 ಹುದ್ದೆಗಳು

ಹುದ್ದೆಗಳ ಹಂಚಿಕೆ:

ಆಫೀಸ್ ಅಸಿಸ್ಟೆಂಟ್(Office Assistant)- 200 ಹುದ್ದೆಗಳು
ಆಫೀಸರ್ ಸ್ಕೇಲ್-1 (Assistant Manager)- 386 ಹುದ್ದೆಗಳು.

ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ:

ಆಫೀಸ್ ಅಸಿಸ್ಟೆಂಟ್: 18 ರಿಂದ 28 ವರ್ಷ
ಆಫೀಸರ್ ಸ್ಕೇಲ್-1: 18 ರಿಂದ 30 ವರ್ಷ

ವಯೋಮಿತಿ ಸಡಿಲಿಕೆ:

SC/ST ಅಭ್ಯರ್ಥಿಗಳಿಗೆ: 05 ವರ್ಷ
OBC (NCL) ಅಭ್ಯರ್ಥಿಗಳಿಗೆ: 03 ವರ್ಷ
PwBD ಅಭ್ಯರ್ಥಿಗಳಿಗೆ: 10 ವರ್ಷ

ಅರ್ಜಿ ಶುಲ್ಕ:

ಆಫೀಸರ್ ಸ್ಕೇಲ್ I:

SC/ST/PwBD: ರೂ.175/-

ಇತರರು: ರೂ.850/-

ಆಫೀಸ್ ಅಸಿಸ್ಟೆಂಟ್ (Multi purpose):

SC/ST/PwBD/ESM/DESM: ರೂ.175/-
ಇತರರು: ರೂ.850/-

ಪಾವತಿ ವಿಧಾನ: ಆನ್‌ಲೈನ್ ಮೂಲಕ
ಅಯ್ಕೆ ಪ್ರಕ್ರಿಯೆ:

ಪೂರ್ವಭಾವಿ ಪರೀಕ್ಷೆ(Preliminary Exam)
ಮುಖ್ಯ ಪರೀಕ್ಷೆ(Main Exam)
ಸಂದರ್ಶನ(Interview)

ಅಪ್ಲಿಕೇಶನ್ ಪ್ರಕ್ರಿಯೆ:

ಅಭ್ಯರ್ಥಿಗಳು Karnataka Gramin Bank ನ ಅಧಿಕೃತ ವೆಬ್‌ಸೈಟ್ ಮೂಲಕ ಆನ್ಲೈನ್ ಅಪ್ಲೈ ಮಾಡಬಹುದು.

ಅರ್ಜಿ ಸಲ್ಲಿಸಲು ಈ ಲಿಂಕ್ ನ ಮೇಲೆ ಕ್ಲಿಕ್ ಮಾಡಿ:

https://ibpsonline.ibps.in/rrb13oamay24

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 07/06/2024

ಅರ್ಜಿ ಸಲ್ಲಿಸಲು ಕೊನೆಯ ದಿನ: 27/06/2024

ಈ ನೇಮಕಾತಿ ಪ್ರಕ್ರಿಯೆ ನಮ್ಮ ರಾಜ್ಯದ ನೂರಾರು ಯುವಕರಿಗೆ ಉತ್ತಮ ಕಾರ್ಯಸ್ವವಲಂಬನೆ ಮತ್ತು ಯಶಸ್ವಿ ಭವಿಷ್ಯವನ್ನು ನೀಡುವಲ್ಲಿ ಸಹಾಯಕವಾಗುತ್ತದೆ. ಆದ್ದರಿಂದ, ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು  ಸದುಪಯೋಗಪಡಿಸಿಕೊಳ್ಳಬೇಕು.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!