ವಿಜ್ಞಾನ ಅದೆಷ್ಟೇ ಮುಂದುವರೆದರು, ಹವಾಮಾನ ಇಲಾಖೆಯ ಮುನ್ಸೂಚನೆ ನಡುವೆಯೂ, ಧಾರ್ಮಿಕವಾಗಿ ಮಳೆ ನಕ್ಷತ್ರಗಳು ಕಮಾಯಿ ಮಾಡುವುದಂತೂ ನಿಜ ಹೌದು ಮಳೆ ನಕ್ಷತ್ರದ ಆಧಾರದ ಮೇಲೆಯೇ ಭಾರತದಲ್ಲಿ ಕೃಷಿ ಚಟುವಟಿಕೆಗಳು ನಡೆಯುತ್ತಾ ಬಂದಿವೆ. ಸಾಮಾನ್ಯವಾಗಿ ಭಾರತದಲ್ಲಿ ಮಳೆ ನಕ್ಷತ್ರಗಳನ್ನು ಹೆಚ್ಚಾಗಿ ನಂಬಲಾಗುತ್ತದೆ. ಅಶ್ವಿನಿ ಮಳೆಯಿಂದ ಶುರುವಾಗುವ ಮಳೆ ನಕ್ಷತ್ರ ವಿಶಾಖ ನಕ್ಷತ್ರಕ್ಕೆ ಕೊನೆಯಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಹವಾಮಾನ ಇಲಾಖೆಯಿಂದ ಕೊಡುವ ವೈಜ್ಞಾನಿಕ ಮಳೆ ಮುನ್ಸೂಚನೆ ಕೆಲವೊಮ್ಮೆ ತಪ್ಪಿದರೂ ರೈತಾಪಿ ವರ್ಗ ನಂಬುವ ಮಳೆ ನಕ್ಷತ್ರಗಳು ಭಾರಿ ಪ್ರಮಾಣದಲ್ಲಿ ಮಳೆ ತರಿಸುವ ನಂಬಿಕೆ ಹಲವು ಜನರಲ್ಲಿ ಇದೆ. ಮಳೆ ನಕ್ಷತ್ರಗಳನ್ನು ಬಲವಾಗಿ ನಂಬುವವರು ಇದ್ದಾರೆ.
ಮಳೆ ನಕ್ಷತ್ರಗಳು ಯಾವುವು ?
ಅಶ್ವಿನಿ, ಭರಣಿ, ಕೃತ್ತಿಕಾ, ರೋಹಿಣಿ, ಪುನರ್ವಸು, ಮೃಗಶಿರ, ಆರಿದ್ರ, ಪುಷ್ಯ, ಆಶ್ಲೇಷ, ಮಾಘ, ಹುಬ್ಬ, ಉತ್ತರ, ಹಸ್ತ, ಚಿತ್ತ, ಸ್ವಾತಿ, ವಿಶಾಖ ಪ್ರಮುಖ ಮಳೆ ನಕ್ಷತ್ರಗಳಾಗಿವೆ.
ರಾಜ್ಯದಲ್ಲಿ ಮಳೆ ಆರಂಭ :
ಏಪ್ರಿಲ್ 13 (ಶನಿವಾರ) ದಿಂದ ಅಶ್ವಿನಿ ಮಳೆ ನಕ್ಷತ್ರ ಆರಂಭವಾಗಿದೆ. ಆದರೆ ಅಶ್ವಿನಿ ಮಳೆ ನಕ್ಷತ್ರ ಆರಂಭಕ್ಕೂ ಮುನ್ನವೇ ಯುಗಾದಿ (ಏಪ್ರಿಲ್ 9) ಹಬ್ಬದಿಂದ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಇನ್ನೂ ಬರುವ ಏಪ್ರಿಲ್ 26 ರವರೆಗೆ ಅಶ್ವಿನಿ ಮಳೆ ಅಬ್ಬರ ಇರಲಿದ್ದು, ಏಪ್ರಿಲ್ 27ರಿಂದ ಭರಣಿ ಮಳೆ ಆರಂಭವಾಗಲಿದೆ. ಅಶ್ವಿನಿ ಮಳೆ ರಾಜ್ಯದಲ್ಲಿ ಅಬ್ಬರಿಸುವ ಮುನ್ಸೂಚನೆ ನೀಡಿದೆ. ಕಳೆದ ವರ್ಷ ಬರ ಮತ್ತು ತಾಪಮಾನ ಹೆಚ್ಚಳದಿಂದ ಕಂಗಾಲಾಗಿರುವ ರಾಜ್ಯಕ್ಕೆ ಅಶ್ವಿನಿ ಮಳೆ ತಂಪೆರೆಯುವುದು ಬಹುತೇಕ ಪಕ್ಕಾ ಆಗಿದೆ.
ಎಲ್ಲೆಲ್ಲಿ ಮಳೆ ಸಾಧ್ಯತೆ ?
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಚಾಮರಾಜನಗರ ಜಿಲ್ಲೆಗಳು ಇನ್ನೂ ವರ್ಷದ ಮಳೆಯನ್ನು ಕಂಡಿಲ್ಲ, ಆದರೆ ಮುಂದಿನ ಕೆಲವು ದಿನಗಳಲ್ಲೇ ಈ ಜಿಲ್ಲೆಗಳಲ್ಲೂ ಉತ್ತಮ ಮಳೆಯಾಗುವ ಮುನ್ಸೂಚನೆ ಇದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್ 13ನೇ ಮತ್ತು14ನೇ ತಾರೀಖಿನಿಂದ ಗಂಟೆಗೆ 30-40 ಕಿಮೀ ವೇಗದಲ್ಲಿ ಗಾಳಿಯ ವೇಗದಲ್ಲಿ ಪ್ರಬಲ ಮತ್ತು ರಭಸದಿಂದ ಬೀಸುವ ಸಾಧ್ಯತೆಯಿದೆ.
ಆದರೆ ಏಪ್ರಿಲ್ 14 ರಿಂದ 16ರವರೆಗೆ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಿಸಿಯಾದ ವಾತಾವರಣ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದು ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗಲಿದೆ.
ಅಶ್ವಿನಿ ಮಳೆ ಶುಭಾರಂಭ
ಏಪ್ರಿಲ್ 12 ಮತ್ತು 13ರಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಶನಿವಾರ ಹಲವು ಜಿಲ್ಲೆಗಳು ಅಶ್ವಿನಿ ಮಳೆಯ ಮೊದಲ ದಿನವೇ ಮಳೆಯನ್ನು ಪಡೆದಿವೆ. 2024 ಮೊದಲ ಮಳೆಯನ್ನು ಕಂಡ ಹಲವು ಜಿಲ್ಲೆಯ ಜನರಲ್ಲಿ ಖುಷಿ ಮೂಡಿದೆ.
ಯಾವ ಜಿಲ್ಲೆಗೆ ಎಷ್ಟು ಮಳೆ ?
ಶನಿವಾರ ಶಿವಮೊಗ್ಗ 79 ಮಿ.ಮೀ, ಕಲಬುರಗಿ 67 ಮಿ.ಮೀ, ಉಡುಪಿ 64 ಮಿ.ಮೀ, ಉತ್ತರ ಕನ್ನಡ 63 ಮಿ.ಮೀ, ವಿಜಯಪುರ 57 ಮಿ.ಮೀ, ಬಳ್ಳಾರಿ 55 ಮಿ.ಮೀ, ಯಾದಗಿರಿ 55 ಮಿ.ಮೀ, ಚಿತ್ರದುರ್ಗ 54 ಮಿ.ಮೀ, ಚಿಕ್ಕಮಗಳೂರು 53 ಮಿ.ಮೀ, ಧಾರವಾಡ 53 ಮಿ.ಮೀ, ರಾಯಚೂರು 45ಮಿ.ಮೀ, ಹಾವೇರಿ 37 ಮಿ.ಮೀ, ದಾವಣಗೆರೆ 35 ಮಿ.ಮೀ, ದಕ್ಷಿಣ ಕನ್ನಡ 33 ಮಿ.ಮೀ, ಗದಗ 28 ಮಿ.ಮೀ, ಕೊಪ್ಪಳ 27 ಮಿ.ಮೀ, ಹಾಸನ 20 ಮಿ.ಮೀ, ಬಾಗಲಕೋಟೆ 19 ಮಿ.ಮೀ, ಬೆಳಗಾವಿ 18 ಮಿ.ಮೀ, ಬೀದರ್ 18 ಮಿ.ಮೀ ಮಳೆಯಾಗಿದೆ.