ಬಿಗ್ ಬಾಸ್ ಸೀಸನ್10 ನ ( Big Boss Season 10 ) ರಿಯಾಲಿಟಿ ಶೋ ಇದೀಗ ಹಲವು ರೀತಿಯ ವಿಶಿಷ್ಟತೆಯನ್ನು ಹೊಂದಿದೆ. ಹಾಗೆಯೇ ಈ ಒಂದು ಸೀಸನ್ ಸ್ವಲ್ಪ ಡಿಫ್ರೆಂಟ್ ( Different ) ಆಗಿದೆ. ಮನೆಯಲ್ಲಿ ಟಾಸ್ಕ್ ಗಳ ವಿಚಾರಕ್ಕೆ ಜಗಳ ಸಾಮಾನ್ಯ ಇರುತ್ತದೆ. ಆದರೆ ಸದ್ಯ ಇದೀಗ ಹೂವಿನಿಂದ ಇಬ್ಬರ ನಡುವೆ ಜಗಳ ಶುರುವಾಗಿದೆ. ಅದೇನೆಂದು ತಿಳಿದು ಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಕಾರ್ತಿಕ್ ಹಾಗೂ ವಿನಯ್ ನಡುವೆ ಜಗಳ :
ಬಿಗ್ ಬಾಸ್ ಮನೆಯ ಸ್ಪರ್ಧಿಗಳ ನಡುವೆ ಹೂವಿನಿಂದ ಶುರುವಾಯ್ತು ಆಟ ಆದರೆ ಸ್ವಲ್ಪ ಸಮಯದ ನಂತರ ಅದು ಜಗಳ ಮಾಡುವ ರೀತಿಯಲ್ಲಿ ಬೆಳೆಯಿತು. ಇದು ಇಬ್ಬರು ಸ್ನೇಹಿತರ ನಡುವೆ ಜಗಳ ಸೃಷ್ಟಿ ಮಾಡಿದೆ.
ಟಾಸ್ಕ್ ನಲ್ಲಿ ಕಾರ್ತಿಕ್(karthik) ಅವರು ಎದುರಾಳಿ ತಂಡದ ಹೂವಿನ ಬುಟ್ಟಿಯನ್ನು ತೆಗೆದುಕೊಂಡು ಹೋಗಿದ್ದಾರೆ. ಅವರನ್ನು ಹಿಂಬಾಲಿಸಿದ ವಿನಯ್(Vinay) ಕೋಪಗೊಂಡು ಕಾರ್ತಿಕ್ ಅನ್ನು ಹಿಡಿದು ಜಗ್ಗಾಡಿದ್ದಾರೆ.
ನಂತರ ಮಾತಿನ ಚಕಮಕಿ ನಡೆದಿದೆ. ಅವರಿಬ್ಬರು ಬರಿ ಮಾತಿನನಲ್ಲಿ ಸುಮ್ಮನಾಗಲಿಲ್ಲ. ಹಾಗೆಯೇ ಮಾತು ಜೋರಾಗಿ ಪರಸ್ಪರ ಕೈ ಕೈ ಮಿಲಾಯಿಸುವ ರೀತಿಯಲ್ಲಿ ಜಗಳ ನಡೆದಿದೆ. ಹಾಗೆಯೇ ಒಬ್ಬರಿಗೊಬ್ಬರು ಕೆಣಕುವ ಪ್ರಸಂಗಗಳೂ ನಡೆದಿವೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಹೂ ನೆಡುವ ಟಾಸ್ಕ್ ನಲ್ಲಿ ( Task ) ಶುರುವಾದ ಜಗಳ :
ಬಿಗ್‌ಬಾಸ್ ಮನೆಯ ಸ್ಪರ್ಧಿಗಳಿಗೆ ಹೊಸ ಟಾಸ್ಕ್ ನೀಡಲಾಗಿತ್ತು. ಅದೇನೆಂದ್ರೆ ‘ಮಣ್ಣಿನಲ್ಲಿ ಬಣ್ಣದ ಹೂಗಳನ್ನು ( Flowers ) ನೆಟ್ಟು, ಎದುರಾಳಿ ತಂಡದಿಂದ ಅವುಗಳನ್ನು ಕಾಪಾಡಿಕೊಳ್ಳಬೇಕು’. ಸ್ವಲ್ಪ ಹೊತ್ತು ಚೆನ್ನಾಗಿಯೇ ನಡೆಯಿತು ಆಟ ನಂತರ ಮೆಲ್ಲನೆ ಶುರುವಾಯಿತು ಜಗಳ( Fight ). ಈ ಆಟ ಬರುಬರುತ್ತಾ ದೊಡ್ಡದಾಗುತ್ತ ಬಂತು. ಹೌದು ಮೊದಲು ತಮ್ಮ ತಂಡದ ಹೂವನ್ನು ಇನ್ನೊಂದು ತಂಡ ಕಿತ್ತುಕೊಳ್ಳಲು ಬಂದ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದು ಜಗಳ ಸೃಷ್ಟಿಯಾಗಲು ಕಾರಣವಾಗಿದೆ.
ಈ ಜಗಳ ಹೀಗೆ ಮಾತಿನಲ್ಲಿ ಕೊನೆ ಕೊಡಿದ್ದಾರೆ ಏನು ಆಗುತ್ತಿರಲ್ಲಿ. ಆದರೆ ಇಲ್ಲಿ ಒಬ್ಬರು ಇನ್ನೊಬ್ಬರನ್ನು ಎಳದಾಡಿ, ಜಗಳವಾಡಿಕೊಳ್ಳುವವರೆಗೂ ಜಗಳ ಸೃಷ್ಟಿ ಯಾಗಿದೆ. ಇನ್ನೊಂದು ಕಡೆ ತುಕಾಲಿ ಸಂತೋಷ್, ಪ್ರತಾಪ್ ಅವರನ್ನು ನೆಲಕ್ಕೆ ಉರುಳಿಸಿ ಅವರು ನೆಟ್ಟ ಹೂ ಅನ್ನು ಹಾಳು ಮಾಡಿದ್ದಾರೆ. ಮತ್ತೆ ಕಾರ್ತಿಕ್ ಎದುರಾಳಿ ತಂಡದ ಹೂವಿನ ಬುಟ್ಟಿಯನ್ನು ತೆಗೆದುಕೊಂಡು ಹೋಗಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ತಡೆಯಲು ಹೋದ ವಿನಯ್ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ.
ಗರಂ ಆದ ವಿನಯ್ :
ಈ ಹಿಂದಿನ ವಾರಗಳಲ್ಲಿ ಸೈಲೆಂಟ್ ಆಗಿದ್ದ ವಿನಯ್ ಈಗ ಗರಂ ಆಗಿ ಜಗಳ ಆಡಿದ್ದಾರೆ. ಅದರ ಪರಿಣಾಮದಿಂದ ಜಗಳ ಇನ್ನು ಜೋರಾಗಿದೆ. ಹಿಂದಿನ ವಾರವಷ್ಟೇ ನಾನು ಮತ್ತೆ ಮೊದಲಿನಂತೆ ಆಡುತ್ತೇನೆ, ವಿನಯ್ 2.0 ಇನ್ನು ಮುಂದೆ ನೋಡುತ್ತಿರಿ ಎಂದು ಹೇಳಿದಂತೆಯೇ ವಿನಯ್ ಅವರು ಮಾಡುತ್ತಿದ್ದಾರೆ. ಮುಂದೆ ಏನಾಗುತ್ತದೆ ಎಂದು ಕಾದು ನೋಡೋಣ ಬನ್ನಿ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ