ಡಿಸೆಂಬರ್ 29, 2024(December 29, 2024) ರಂದು ನಡೆದ KAS ಪರೀಕ್ಷೆ ಕಟ್ ಆಫ್(Cut off) ಮಾಹಿತಿ ಹೀಗಿದೆ.
ಕರ್ನಾಟಕ ಲೋಕಸೇವಾ ಆಯೋಗ (KPSC) ಇತ್ತೀಚೆಗೆ ಕರ್ನಾಟಕ ಆಡಳಿತ ಸೇವೆ (KAS) ಪರೀಕ್ಷೆಯನ್ನು ಡಿಸೆಂಬರ್ 29, 2024 ರಂದು ನಡೆಸಿತು. ಈ ಪರೀಕ್ಷೆಯ ಕೀ ಉತ್ತರಗಳನ್ನು ಡಿಸೆಂಬರ್ 31, 2024(December 31, 2024) ರಂದು ಅಂದರೆ ನೆನ್ನೆ ಅಧಿಕೃತ ವೆಬ್‌ಸೈಟ್‌ನಲ್ಲಿ(official website) ಪ್ರಕಟಿಸಲಾಗಿದೆ ಎಂದು ವರದಿಯ ಮೂಲಕ ತಿಳಿದು ಬಂದಿದೆ.
ಈ ನೇಮಕಾತಿ(recruitment) ಪ್ರಕ್ರಿಯೆಯಲ್ಲಿ 384 ಹುದ್ದೆಗಳಿಗಾಗಿ ಸ್ಪರ್ಧೆ ನಡೆಯುತ್ತಿದೆ. ಅಭ್ಯರ್ಥಿಗಳು(candidates) ತಮ್ಮ ಉತ್ತರಗಳನ್ನು ಕೀ ಉತ್ತರಗಳೊಂದಿಗೆ ಹೋಲಿಸಿ, ತಮ್ಮ ಅಂದಾಜು ಅಂಕಗಳನ್ನು ಲೆಕ್ಕಹಾಕಬಹುದು. ಫಲಿತಾಂಶ ಪ್ರಕಟವಾದ ನಂತರ, ಆಯೋಗವು ವಿವಿಧ ವರ್ಗಗಳಿಗಾಗಿ ಕಟ್ ಆಫ್ ಅಂಕಗಳನ್ನು ಪ್ರಕಟಿಸುತ್ತದೆ. ಈ ಬಾರಿ ಪರೀಕ್ಷೆಯ ಆಫ್ ಅಂಕಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇನ್ನು ಪರೀಕ್ಷೆ ನಡೆದ ಸಂಧರ್ಭದಲ್ಲಿ ಪ್ರಶ್ನೆ ಪತ್ರಿಕೆಯ ಲೋಪದೋಷಗಳ ಬಗ್ಗೆ ಹಲವು ಚರ್ಚೆಗಳು ನಡೆಯ ತೊಡಗಿದವು. ಇನ್ನು ಈ ಕುರಿತಾಗಿ ಆಯೋಗವು ಅಷ್ಟೇನೂ ತಲೆ ಕೆಡಿಸಿಕೊಳ್ಳದೆ ಆಯೋಗವು ನೇಮಕಾತಿಯ ಭಾಗವಾಗಿ KAS ಪರೀಕ್ಷೆಯ ಕೀ ಉತ್ತರ ಬಿಡುಗಡೆ ಮಾಡಲಿದೆ. ಜನವರಿ 2025ರಲ್ಲಿ(January 2025) ಕೆಪಿಎಸ್‌ಸಿಯು ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯ(Gazetted Probationary Examination) ಫಲಿತಾಂಶವನ್ನು ಬಿಡುಗಡೆ ಮಾಡಲಿದೆ. ಇನ್ನು ಪರೀಕ್ಷೆಯ ಫಲಿತಾಂಶ ಕಟ್ ಆಫ್ ಆಧಾರಿತ ನಿರ್ಧಾರವಾಗುತ್ತದೆ. ಅಭ್ಯರ್ಥಿಗಳ ಜಾತಿ ಆಧಾರದ ಮೇಲೆ ಕಟ್ ಆಫ್ ಅಂಕ ಬಿಡುಗಡೆ ಮಾಡಲಾಗುತ್ತದೆ.
ನಿರೀಕ್ಷಿತ ಕಟ್ ಆಫ್ ಅಂಕಗಳು:
ಸಾಮಾನ್ಯ ವರ್ಗ: 185
ಪರಿಶಿಷ್ಟ ಜಾತಿ (SC): 150
ಪರಿಶಿಷ್ಟ ಪಂಗಡ (ST): 163
C1: 168
2A: 150
3A: 175
3B: 172
2B: 135
ಕೆಪಿಎಸ್‌ಸಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶಗಳನ್ನು ಪ್ರಕಟಿಸಿದ ನಂತರ, ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು. ಅಧಿಕೃತ ವೆಬ್‌ಸೈಟ್ ನಲ್ಲಿ ನೋಡಬಹುದು. ಕಟ್ ಆಫ್ ಅಂಕಗಳನ್ನು https://kpsc.kar.nic.in/ ಈ ವೆಬ್ ಸೈಟ್ ನಲ್ಲಿ ಕಾಣಬಹುದು.
ಫಲಿತಾಂಶ ಪರಿಶೀಲನೆ ವಿಧಾನ:
ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ https://kpsc.kar.nic.in.
ಕರ್ನಾಟಕ ಲೋಕಸೇವಾ ಆಯೋಗ ಫಲಿತಾಂಶ ಬಿಡುಗಡೆ ಆಗುತ್ತಿದ್ದಂತೆ ಅಭ್ಯರ್ಥಿಗಳು ಲಿಂಕ್ ಮೂಲಕ ವೆಬ್‌ಸೈಟ್ ಪ್ರವೇಶಿಸಬೇಕು.
ಮುಖ್ಯ ಪುಟದಲ್ಲಿ ‘ಹೊಸ ಅಪ್ಡೇಟ್ಸ್’ ವಿಭಾಗದಲ್ಲಿ ‘ಗೆಜೆಟೆಡ್ ಪ್ರೊಬೇಷನರ್ ಪೂರ್ವಭಾವಿ ಪರೀಕ್ಷೆಯ ಫಲಿತಾಂಶ’ ಲಿಂಕ್ ಮೇಲೆ ಕ್ಲಿಕ್ ಮಾಡಿ.
ನಿಮ್ಮ ರೋಲ್ ಸಂಖ್ಯೆಯನ್ನು ನಮೂದಿಸಿ.
ಫಲಿತಾಂಶದ ಪಿಡಿಎಫ್ ಅನ್ನು ಡೌನ್‌ಲೋಡ್ ಮಾಡಿ.
ಇತ್ತೀಚೆಗೆ ನಡೆದ ಮರುಪರೀಕ್ಷೆಯಲ್ಲಿಯೂ ಕನ್ನಡ(kannada) ಭಾಷಾಂತರದಲ್ಲಿ ತಪ್ಪುಗಳು ಕಂಡುಬಂದಿರುವುದರಿಂದ, ಈ ವಿಷಯವು ಭಾರೀ ಚರ್ಚೆಗೆ ಕಾರಣವಾಗಿದೆ. ಒಂದು ಪರೀಕ್ಷೆ ನಡೆಸಲು ಸುಮಾರು 15 ಕೋಟಿ ರೂಪಾಯಿಗಳಷ್ಟು ವೆಚ್ಚವಾಗುತ್ತದೆ. ಮರುಪರೀಕ್ಷೆಯಲ್ಲಿಯೂ ತಪ್ಪುಗಳು ಕಂಡುಬಂದಿರುವುದರಿಂದ, ಮತ್ತೊಮ್ಮೆ ಪರೀಕ್ಷೆ ನಡೆಸಬೇಕೆಂಬ ಚರ್ಚೆಗಳು ನಡೆಯುತ್ತಿವೆ.
ಅಭ್ಯರ್ಥಿಗಳು ತಮ್ಮ ಮುಂದಿನ ಹಂತಗಳಿಗಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ(Official website) ಪ್ರಕಟವಾಗುವ ಮಾಹಿತಿಗಳನ್ನು ನಿಯಮಿತವಾಗಿ ಪರಿಶೀಲಿಸುವುದು ಮುಖ್ಯ. ಅಲ್ಲದೆ, ಕೀ ಉತ್ತರಗಳೊಂದಿಗೆ ತಮ್ಮ ಉತ್ತರಗಳನ್ನು ಹೋಲಿಸಿ, ತಮ್ಮ ಅಂದಾಜು ಅಂಕಗಳನ್ನು ಲೆಕ್ಕಹಾಕುವುದು ಉತ್ತಮ.
ಕೆಪಿಎಸ್‌ಸಿ ನಡೆಸುವ ಎಲ್ಲಾ ಪರೀಕ್ಷೆಗಳ ಕುರಿತು ಅಧಿಕೃತ ಮಾಹಿತಿಗಾಗಿ, ಕೆಪಿಎಸ್‌ಸಿಯ ಅಧಿಕೃತ ವೆಬ್‌ಸೈಟ್‌ಗೆ https://kpsc.kar.nic.in. ಭೇಟಿ ನೀಡುವುದು ಶ್ರೇಯಸ್ಕರ.
ಅಭ್ಯರ್ಥಿಗಳು ತಮ್ಮ ಮುಂದಿನ ಹಂತಗಳಿಗಾಗಿ ಸಿದ್ಧತೆ ನಡೆಸುವಾಗ, ಈ ಮಾಹಿತಿಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ. ಅಧಿಕೃತ ಪ್ರಕಟಣೆಗಳನ್ನು ನಿಯಮಿತವಾಗಿ ಪರಿಶೀಲಿಸಿ, ತಕ್ಕ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.