ಕವಾಸಕಿ Z900 (Kawasaki Z900) ಬೈಕ್ ನ ಇಎಂಐ(EMI) ಬೆಲೆ ಎಷ್ಟು ಗೊತ್ತಾ?
ನಮ್ಮ ಭಾರತ ಎಲ್ಲಾ ದೇಶಗಳೊಟ್ಟಿಗೆ ಒಂದೊಳ್ಳೆ ಸಂಬಂಧವನ್ನು ಇಟ್ಟುಕೊಂಡಿದೆ. ಇದರಿಂದ ಹಲವಾರು ವ್ಯವಹಾರಗಳು, ವಹಿವಾಟುಗಳು ನಡೆಯುತ್ತಲೇ ಇರುತ್ತವೆ. ತಂತ್ರಜ್ಞಾನದ (technology) ವಿಷಯದಲ್ಲಿ ನಮ್ಮ ಭಾರತದ (India) ಜೊತೆಗೆ ಹೆಚ್ಚು ದೇಶಗಳು ಸಂಬಂಧವನ್ನು ಇಟ್ಟುಕೊಂಡಿವೆ. ವಿಜ್ಞಾನದ ಕ್ಷೇತ್ರದಲ್ಲಿ (science field) ನಮ್ಮ ಭಾರತ ಹೆಚ್ಚು ಮುಂಚೂಣಿಯಲ್ಲಿ ಇರುವ ಕಾರಣ, ನಮ್ಮ ಭಾರತವನ್ನು ಹೆಚ್ಚು ನಂಬುತ್ತಾರೆ ಹಾಗೂ ತನ್ನೆಲ್ಲಾ ಆವಿಷ್ಕಾರಗಳನ್ನು ಭಾರತದೊಟ್ಟಿಗೆಯೂ ಕೂಡ ಹಂಚಿಕೊಳ್ಳುತ್ತಾರೆ ಅಷ್ಟರಮಟ್ಟಿಗೆ ಭಾರತದ ಜೊತೆಗೆ ಒಂದೊಳ್ಳೆ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ಇನ್ನು ವಾಹನಗಳ ತಯಾರಿಕೆಯಲ್ಲಿಯೂ ಕೂಡ ಸಂಪರ್ಕವನ್ನು ಇಟ್ಟುಕೊಂಡು ಹಲವಾರು ವಾಹನಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತವೆ.
ಕವಾಸಕಿ Z900 (Kawasaki Z900) ಬೈಕ್:
ಇದೀಗ ಜಪಾನ್ (Japan) ಮೂಲದ ಜನಪ್ರಿಯ ದ್ವಿಚಕ್ರ ವಾಹನಗಳ (two wheel vehicles) ತಯಾರಕ ಕಂಪನಿಯು (Kawasaki) ಕೆಲವು ತಿಂಗಳ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ (Indian market) ಒಂದೊಳ್ಳೆ ಹೊಸ ಬೈಕ್ ಅನ್ನು ಬಿಡುಗಡೆ ಮಾಡಿತ್ತು. ಈ ಬೈಕ್ ನ ಹೆಸರು ಕವಾಸಕಿ Z900 (Kawasaki Z900) ಈ ಬೈಕ್ ಕೆಲವು ತಿಂಗಳ ಹಿಂದೆ ಹೊಸ ನವೀಕರಣದಿಂದ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಕಂಡಿತ್ತು. ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಸೂಪರ್ ಬೈಕ್ ಗಳ ಲಿಸ್ಟ್ ನಲ್ಲಿ ಕವಾಸಕಿ Z900 (Kawasaki Z900) ಬೈಕ್ ಕೂಡ ಒಂದಾಗಿದೆ. ಕವಾಸಕಿ Z900 ಬೈಕ್ ಹಲವಾರು ವಿಶೇಷತೆಗಳೊಂದಿಗೆ ಹಾಗೂ ಹೆಚ್ಚು ಆಕರ್ಷಕವಾಗಿ ಬಂದಿರುವ ಮತ್ತು ಹೆಚ್ಚು ಪರ್ಫಾರ್ಮೆನ್ಸ್ (performance) ನೀಡುವ ಈ ಬೈಕ್ ಯಾವ ಯಾವ ಬಣ್ಣಗಳಲ್ಲಿ ಬಂದಿದೆ ಹಾಗೂ ಇದರ ಬೆಲೆ ಎಷ್ಟು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಕವಾಸಕಿ Z900 ಬೈಕ್ ಯಾವ ಯಾವ ಬಣ್ಣಗಳಲ್ಲಿ ಬಂದಿದೆ :
ಇನ್ನು ಈ ಒಂದು ಬೈಕ್ ಬಣ್ಣಗಳಿಂದಲೂ ಕೂಡ ಗ್ರಾಹಕರನ್ನು ತನ್ನತ್ತ ಸೆಳೆದುಕೊಂಡಿದೆ. ಮೆಟಾಲಿಕ್ ಸ್ಪಾರ್ಕ್ ಬ್ಲಾಕ್ (metalic spark black) ಮತ್ತು ಮೆಟಾಲಿಕ್ ಮ್ಯಾಟ್ ಗ್ರ್ಯಾಫೀನ್ ಸ್ಟೀಲ್ ಗ್ರೇ (metalic mat graphin steal gray) ಎಂಬ ಎರಡು ಬಣ್ಣಗಳಲ್ಲಿ ಬಂದಿರುವಂತಹ ಕವಾಸಕಿ Z900 ಬೈಕ್ ಈ ಎರಡೂ ಬಣ್ಣಗಳಿಂದ ಬೇಡಿಕೆಯನ್ನು ಹೆಚ್ಚಿಸಿಕೊಂಡಿದೆ.
ಕವಾಸಕಿ Z900 ಬೈಕಿನ ಇಎಂಐ (EMI), ಆನ್ ರೋಡ್ ಬೆಲೆ (onroad price) ಎಷ್ಟು?
2024ರ ಕವಾಸಕಿ Z900 ಬೈಕಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ (ex showroom) ಪ್ರಕಾರ ರೂ.9,38,000 ಆದರೆ ಆನ್ ರೋಡ್ ಬೆಲೆಯು ರೂ.11,57,971 ಆಗಿದೆ. ಕವಾಸಕಿ Z900 ಬೈಕಿಗೆ 6% ಬಡ್ಡಿ ದರದಲ್ಲಿ 36 ತಿಂಗಳ ಲೋನ್ ಮಾಡಿದರೆ ಪ್ರತಿ ತಿಂಗಳು ನೀವು ರೂ.31,699 ಗಳಷ್ಟು ಇಎಂಐ ಪಾವತಿಸಬೇಕಾಗುತ್ತದೆ. ಇನ್ನು ಈ ಬೈಕಿನ ಡೌನ್ ಪೇಮೆಂಟ್ (down payment) ಸುಮಾರು ರೂ.116000 ಆಗಿದೆ.
ಎಂಜಿನ್ ನ ವಿಶೇಷತೆಗಳೇನು (engine features) ?
948cc,ಇನ್‌ಲೈನ್ ನಾಲ್ಕು ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿರುವ ಈ ಹೊಸ ಕವಾಸಕಿ Z900 ಬೈಕ್, ಎಂಜಿನ್ 9,500rpm ನಲ್ಲಿ 123.6bhp ಮತ್ತು 7,700rpm ನಲ್ಲಿ 98.6Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಫೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.
ಸುರಕ್ಷತೆ ವಿಭಾಗದಲ್ಲಿ ಬ್ರೇಕಿಂಗ್ ಸಿಸ್ಟಮ್ ನ (breaking system) ಪಾತ್ರ :
ಈ ಬೈಕಿನ ಮುಂಭಾಗದಲ್ಲಿ ಡ್ಯುಯಲ್ 300 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 250 ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದ್ದು,ಇದರೊಂದಿಗೆ ಹೆಚ್ಚಿನ ಸುರಕ್ಷತೆಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಕೂಡ ನೀಡಲಾಗಿದೆ. ಸುರಕ್ಷತೆ ವಿಭಾಗದಲ್ಲಿ ಬ್ರೇಕಿಂಗ್ ಸಿಸ್ಟಂ (breaking system) ಪ್ರಮುಖ ಪಾತ್ರವಹಿಸುತ್ತದೆ.
ಬೈಕ್ ನ ವಿನ್ಯಾಸ (bike design) :
ಮುಂಭಾಗದಲ್ಲಿ USD ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಟ್ರೆಲ್ಲಿಸ್ ಫ್ರೇಮ್‌ನಲ್ಲಿ (monoshock trellish frame) ಇರಿಸಲಾಗಿದೆ. ಈ ಬೈಕ್ 17-ಇಂಚಿನ ಅಲಾಯ್ ವ್ಹೀಲ್ (oil wheel) ಗಳೊಂದಿಗೆ ಹೊಸ ಡನ್‌ಲಪ್ ಸ್ಪೋರ್ಟ್‌ಮ್ಯಾಕ್ಸ್ ರೋಡ್‌ಸ್ಪೋರ್ಟ್ 2 ಟೈರ್‌ಗಳನ್ನು ಪಡೆಯುತ್ತದೆ.
ಕವಾಸಕಿ Z900 ಬೈಕ್ ನ ಫೀಚರ್ಸ್ (features) :
ಮೂರು ಸ್ಟ್ಯಾಂಡರ್ಡ್ ರೈಡಿಂಗ್ ಮೋಡ್‌ಗಳು ಸ್ಪೋರ್ಟ್ ಮೋಡ್ (sports mode) ಮತ್ತು ರೈನ್ ಮೋಡ್ (rain mode) ಹಾಗೂ ಹೆಚ್ಚುವರಿಯಾಗಿ ಸಂಪೂರ್ಣ ಕಸ್ಟಮೈಸ್ ರೈಡರ್ ಮೋಡ್ (customize rider mode) ಕೂಡ ಲಭ್ಯವಿದ್ದು.ಇದರೊಂದಿಗೆ ಟ್ರ್ಯಾಕ್ಷನ್ ಕಂಟ್ರೋಲ್. ABS, ಫುಲ್ LED ಲೈಟಿಂಗ್ ಮತ್ತು ಬ್ಲೂಟೂತ್-ಕನೆಕ್ಟಿವಿಟಿಯೊಂದಿಗೆ (bluetooth connectivity) ಕಲರ್ TFT ಡಿಸ್ಪ್ಲೇಯನ್ನು ಕೂಡ ನಾವು ಕಾಣಬಹುದು. ಈ ಬೈಕಿನ 120/70 ಮುಂಭಾಗದಲ್ಲಿ ಮತ್ತು 180/55 ಹಿಂಭಾಗದಲ್ಲಿ ಡನ್‌ಲಪ್ ಟೈರ್ ಗಳನ್ನು ಹೊಂದಿವೆ.
ಬೈಕ್ ನ ವಿನ್ಯಾಸ, ವಿಶೇಷತೆಗಳೊಂದಿಗೆ ಗ್ರಾಹಕರನ್ನು ಸೆಳೆದಿರುವ ಈ ಬೈಕ್, 2024ರ ಕವಾಸಕಿ Z900 ಭಾರತೀಯ ಮಾರುಕಟ್ಟೆಯಲ್ಲಿ ಡುಕಾಟಿ ಮಾನ್ಸ್ಟರ್ (ducati monster) BMW F900R ಮತ್ತು ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಬೈಕ್ ಗಳಿಗೆ ( Triumph steal triple bike) ಪೈಪೋಟಿ ನೀಡುತ್ತಿದೆ.
ಈ ಮಾಹಿತಿಗಳನ್ನು ಓದಿ