ಕಳೆದ ಎರಡು ವರ್ಷಗಳಿಂದ ಜನರಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಕ್ರೇಜ್ ಹೆಚ್ಚುತ್ತಲೇ ಇದೆ, ಇದೆ ಕ್ರೇಜ್ ನಲ್ಲಿ ಸುಮಾರು ದೊಡ್ಡ ಕಂಪನಿಗಳು ಹಾಗೂ ಸ್ಟಾರ್ಟ್ ಅಪ್(Start up) ಕಂಪನಿಗಳು ಹೊಸ ಹೊಸ ಟೆಕ್ನಾಲಜಿಯನ್ನು ಬಳಸಿಕೊಂಡು ಒಂದರ ಮೇಲೊಂದು ಹೊಸ ಹೊಸ ಫೀಚರ್ ಗಳ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇವೆ.ಆದರಿಂದ ಈಗಾಗಲೇ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು (electric vehicles)ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಮೋಟರ್ ಬೈಕ್‌ಗಳು ಜನರಿಗೆ ಆಸಕ್ತಿದಾಯಕವಲ್ಲದೆ , ಹೆಚ್ಚಿನ ಮಟ್ಟದಲ್ಲಿ ಖರೀದಿ ಕೂಡಾ ಆಗುತ್ತಿವೆ. ಮತ್ತು ಜನರು ತಮ್ಮ ಪೆಟ್ರೋಲ್, ಡೀಸೆಲ್ ಖರ್ಚನ್ನು ಉಳಿಸಲು ಕೂಡಾ ಹೆಚ್ಚಾಗಿ ಎಲೆಕ್ಟ್ರಿಕ್ ಮಾದರಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದಾಗಿದೆ. ಆದರೆ ಇದೀಗ ದೇಶದ ರಸ್ತೆಯನ್ನು ಆಳಿದ್ದ ಜನಸಾಮಾನ್ಯರ ಇಷ್ಟದ ‘ಕೈನಿಟಿಕ್ ಲೂನಾ'(Kinetic Luna), ಎಲೆಕ್ಟ್ರಿಕ್(electric) ರೂಪದಲ್ಲಿ ಬರಲು ಸಿದ್ದವಾಗಿದೆ. ಹೌದು,ಆಸಕ್ತ ಗ್ರಾಹಕರು, ರೂ.500 ಮುಂಗಡ ಹಣ ಪಾವತಿಸುವ ಮೂಲಕ ಈ ಮೊಪೆಡ್ ಅನ್ನು ಬುಕಿಂಗ್ (booking) ಮಾಡಿ ತಮ್ಮದಾಗಿಸಿಕೊಳ್ಳಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Kinetic E-Luna :
ಭಾರತದಲ್ಲಿ ಒಂದು ಕಾಲದಲ್ಲಿ ಕೈನೆಟಿಕ್ ಲೂನಾ (Kinetic Luna) ಜನಪ್ರಿಯ ಮೊಪೆಡ್ ಆಗಿತ್ತು. ವರ್ಷಗಳು ಉರುಳಿದಂತೆ ಹೊಸ ಮೋಟಾರ್‌ಸೈಕಲ್ ಮತ್ತು ಸ್ಕೂಟರ್‌ಗಳ ಪ್ರವೇಶದಿಂದ ತೀವ್ರ ಪೈಪೋಟಿ ಎದುರಾಗಿ ಮಾರುಕಟ್ಟೆಯಿಂದ ಕಣ್ಮರೆಯಾಗಿತ್ತು. ಈಗಲೂ 80-90ರ ದಶಕದವರ ನೆಚ್ಚಿನ ದ್ವಿಚಕ್ರ ವಾಹನವಾಗಿ ಅವರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ ಎಂದೇ ಹೇಳಬಹುದಾಗಿದೆ.
ಮುಂಬರಲಿರುವ ನೂತನ ಕೈನಿಟಿಕ್ ಇ-ಲೂನಾ (Kinetic E-Luna)ವನ್ನು ದೊಡ್ಡ ನಗರಗಳು ಮಾತ್ರವಲ್ಲದೆ ಗ್ರಾಮೀಣ ಪ್ರದೇಶದ ಜನರು ಸಹ ಉಪಯೋಗ ಮಾಡುವಂತೆ ಕಂಪನಿ ವಿನ್ಯಾಸಗೊಳಿಸಿದೆ ಎಂದು ತಿಳಿದುಬಂದಿದೆ. ಎಲೆಕ್ಟ್ರಿಕ್ ಲೂನಾ (electric luna) ಹೆಚ್ಚು ಗಟ್ಟಿಮುಟ್ಟಾಗಿದ್ದು, ದೀರ್ಘಕಾಲ ಬಾಳಿಕೆ ಬರುತ್ತದೆ ಎಂದು ಕಂಪನಿಯ ಹಿರಿಯ ಅಧಿಕಾರಿಗಳು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಜೊತೆಗೆ ಪೆಟ್ರೋಲ್ ದ್ವಿಚಕ್ರ ವಾಹನಗಳಿಗೆ ಪರ್ಯಾಯವಾಗಲಿದೆ ಎನ್ನಲಾಗಿದೆ.
ಇತ್ತೀಚೆಗೆ ಪುಣೆ ಮೂಲದ ಕೈನೆಟಿಕ್ ಗ್ರೀನ್ (Kinetic Green), ಫೆಬ್ರವರಿಯ ಮೊದಲಾರ್ಧದಲ್ಲಿ ಇ-ಲೂನಾ (E-Luna) ವನ್ನು ಬಿಡುಗಡೆಗೊಳಿಸಲಾಗುವುದು. ಶುಕ್ರವಾರ (ಜನವರಿ 26)ದಿಂದ ಬುಕ್ಕಿಂಗ್ ಆರಂಭ ಮಾಡುವುದಾಗಿ ಘೋಷಿಸಿತ್ತು. ಹೊಸ ಇ-ಲೂನಾದ ಬ್ಯಾಟರಿ(battery), ರೇಂಜ್ (ಮೈಲೇಜ್) (Milage) ಹಾಗೂ ವೈಶಿಷ್ಟ್ಯವನ್ನು ಒಳಗೊಂಡ ಇನ್ನಿತರೇ ಮಾಹಿತಿಯನ್ನು ಕಂಪನಿಯು ಇನ್ನೂ ಬಹಿರಂಗಪಡಿಸಿಲ್ಲ. ಅದರ ಬಗ್ಗೆ ಕೆಲವೇ ದಿನಗಳಲ್ಲಿ ತಿಳಿಯಲಿದೆ ಎಂದು ತಿಳಿಸಿದ್ದಾರೆ.
ಎಲೆಕ್ಟ್ರಿಕ್ ಸ್ಕೂಟಿಯ ಬೆಲೆ :
ಈ ಎಲೆಕ್ಟ್ರಿಕ್ ಸ್ಕೂಟರ್‌ನ್ನು ರೂ.94,990 ಎಕ್ಸ್ ಶೋರೂಂ ಬೆಲೆ ಪರಿಚಯಿಸಲಾಯಿತು. ಇದರಲ್ಲಿ 2.27 kWh ಸಾಮರ್ಥ್ಯದ ಲಿಥಿಯಂ – ಐಯಾನ್ ಬ್ಯಾಟರಿ ಪ್ಯಾಕ್(Lithium ion battery pack), ಹಬ್ ಎಲೆಕ್ಟ್ರಿಕ್ ಮೋಟಾರ್(hub electric motor) ಬಳಕೆ ಮಾಡಲಾಗಿದ್ದು, ಇದು 2.8 bhp ಗರಿಷ್ಠ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಸಂಪೂರ್ಣ ಚಾರ್ಜ್ ನಲ್ಲಿ 104km ರೇಂಜ್(range) ನೀಡಲಿದ್ದು, 60 kmph ಟಾಪ್ ಸ್ವೀಡ್(top speed) ಪಡೆಯಲಿದೆ. ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಈ ಮಾಹಿತಿಗಳನ್ನು ಓದಿ
- ಬರೋಬ್ಬರಿ 500 ಕಿ.ಮೀ ಮೈಲೇಜ್ ಇರುವ ಟಾಟಾ ಕಂಪನಿಯ ಹೊಸ ಎಲೆಕ್ಟ್ರಿಕ್ ಕಾರ್
- ಬರೋಬ್ಬರಿ 300 ಕಿ. ಮೀ ವರೆಗೆ ಮೈಲೇಜ್ ಕೊಡುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!
- Mahindra Electric : ಮಹೇಂದ್ರ SUV 700 ಎಲೆಕ್ಟ್ರಿಕ್ ನಲ್ಲಿ ಲಭ್ಯ, ಖರೀದಿಗೆ ಮುಗಿಬಿದ್ದ ಗ್ರಾಹಕರು
- ಡಿಸೆಂಬರ್ ನಲ್ಲಿ ತಪ್ಪದೇ ಈ ಕೆಲಸಗಳನ್ನು ಪೂರ್ಣಗೊಳಿಸಿ, ಇಲ್ಲಾಂದ್ರೆ ಬೀಳುತ್ತೆ ದಂಡ
- NX 100 e -Scooti : ಒಂದೇ ಚಾರ್ಜ್ ನಲ್ಲಿ ಬರೋಬ್ಬರಿ 500 ಕಿ.ಮೀ ರೇಂಜ್ ಇರುವ ಹೊಸ ಸ್ಕೂಟಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.