ರೈತರಿಗೆ ಗುಡ್ ನ್ಯೂಸ್, ಸಣ್ಣ ರೈತರಿಗೆ ಸಿಗಲಿದೆ 3 ಲಕ್ಷ ರೂಪಾಯಿ ಕಿಸಾನ್ ಕ್ರೆಡಿಟ್ ಕಾರ್ಡ್ ಲೋನ್!
ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ರೈತರಿಗೆ ಅವರ ಅಲ್ಪಾವಧಿಯ ಹಣಕಾಸಿನ ಅಗತ್ಯತೆಗಳು ಮತ್ತು ನಿರ್ದಿಷ್ಟ ಸಾಲ(loan)ದ ಅವಶ್ಯಕತೆಗಳನ್ನು ಪೂರೈಸುವ ಉದ್ದೇಶದಿಂದ ಭಾರತ ಸರ್ಕಾರವು ನೀಡುವ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ಬೀಜಗಳು, ರಸಗೊಬ್ಬರಗಳು, ಕೀಟನಾಶಕಗಳಂತಹ ವಿವಿಧ ಕೃಷಿ ಇನ್‌ಪುಟ್‌ಗಳನ್ನು (Agricultural inputs) ಸುಲಭವಾಗಿ ಖರೀದಿಸಬಹುದು ಮತ್ತು ಅವರ ತಕ್ಷಣದ ಉತ್ಪಾದನಾ ಅಗತ್ಯಗಳಿಗಾಗಿ ಹಣವನ್ನು ಡ್ರಾ (money draw) ಮಾಡಬಹುದಾದ ರೈತರಿಗೆ ಅಲ್ಪಾವಧಿಯ ಸಾಲ ಮತ್ತು ಅವಧಿಯ ಸಾಲಗಳನ್ನು ಒದಗಿಸಲು ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
KCC ಎಲ್ಲಾ ಭಾರತೀಯ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳ ಮೂಲಕ ಲಭ್ಯವಿದೆ. ಎಲೆಕ್ಟ್ರಾನಿಕ್ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳ (Electronic kisan card) ಮೂಲಕ ಇದರ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಮುಖ್ಯವಾಗಿ ಸರ್ಕಾರವೂ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸುತ್ತದೆ.
ಬಡ್ಡಿ ರಹಿತ ಸಾಲ ಸೌಲಭ್ಯಗಳನ್ನು ಪಡೆಯಲು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ :
ಕೇಂದ್ರ ಸರ್ಕಾರವು ರೈತರಿಗೆ ತಮ್ಮ ಕೃಷಿಗೆ ಉಪಯೋಗವಾಗುವಂತೆ, ಹಲವು ಯೋಜನೆಗಳನ್ನು ರೂಪಿಸಿದೆ. ಅದರಲ್ಲಿ ಹಲವು ಬಡ್ಡಿಯನ್ನು ನೀಡುವ ಯೋಜನೆಗಳಾಗಿದ್ದು, ಅತಿ ಕಡಿಮೆ ಬಡ್ಡಿ ದರದಲ್ಲಿ ಅಥವಾ ಬಡ್ಡಿ ರಹಿತ ಸಾಲ ಸೌಲಭ್ಯಗಳನ್ನು (interest free loan) ಸರ್ಕಾರ ಈ ಯೋಜನೆಯ ಮೂಲಕ ನೀಡುತ್ತದೆ. ಇದಕ್ಕಾಗಿ ಕಿಸಾನ್ ಕ್ರೆಡಿಟ್ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಒಂದು ಕಾರ್ಡ್ ಹೊಂದಿರುವ ರೈತರು ಅತಿ ಕಡಿಮೆ ಬಡ್ಡಿ ದರದಲ್ಲಿ 3 ಲಕ್ಷಗಳ (3 lakh) ವರೆಗೆ ಸಾಲ ಸೌಲಭ್ಯವನ್ನು ಪಡೆಯಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಪ್ರಧಾನ ಮಂತ್ರಿ ಕಿಸಾನ್ ಕಾರ್ಡ್ ಯೋಜನೆ (Kisan credit card scheme) :
ಕೇಂದ್ರ ಸರ್ಕಾರದ (central government) ಅಂದರೆ, ಪ್ರಧಾನ ಮಂತ್ರಿ ಕಿಸಾನ್ ಕಾರ್ಡ್ ಯೋಜನೆ ಇದಾಗಿದ್ದು, ಮುಖ್ಯವಾಗಿ ಇದು ಸಣ್ಣ ರೈತರಿಗೆ ಬಹಳ ನೆರವಿಗೆ ಬರುತ್ತದೆ. ಅವರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಹಾಯ ಮಾಡುತ್ತದೆ. ಈ ಯೋಜನೆಯ ಅಡಿಯಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರು ಯಾವುದೇ ಬ್ಯಾಂಕ್ ಅಥವಾ ಖಾಸಗಿ ಹಣಕಾಸಿನ ಸಂಸ್ಥೆಗಳಲ್ಲಿ ಮೂರು ಲಕ್ಷ, ಕಡಿಮೆ ಬಡ್ಡಿ ದರದ ಸಾಲ ಪಡೆದುಕೊಂಡು ತಮ್ಮ ಜೀವನ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು.
ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು ಯಾರಿಗೆಲ್ಲ ಅರ್ಹತೆ (qualifications) ಇದೆ :
ಸ್ಥಿರ ಆದಾಯದ ಮೂಲ ಹೊಂದಿರುವ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರಬೇಕು.
ಕೃಷಿ ಭೂಮಿ ಹೊಂದಿರಬೇಕು
ಒಂದು ಎಕರೆ ಅಥವಾ ಗರಿಷ್ಠ 10 ಹೆಕ್ಟರ್ ಕೃಷಿ ಭೂಮಿಯನ್ನು ಹೊಂದಿರಬೇಕು.
18 ರಿಂದ 70ನೇ ವರ್ಷದ ವರೆಗೂ ಈ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ ಸಿಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು (documents) :
ರೈತರ ಜಮೀನಿನ ಪಹಣಿ ಪತ್ರ
ಆದಾಯ ಪ್ರಮಾಣ ಪತ್ರ
ಆಧಾರ್ ಕಾರ್ಡ್
ವಿಳಾಸ ಪುರಾವೆಗಾಗಿ ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ ಮೊದಲಾದ ದಾಖಲೆಗಳು.
ಈ ಯೋಜನೆಯ ಅಡಿಯಲ್ಲಿ ಎರಡು ರೀತಿಯಲ್ಲಿ ಸಾಲ ಸೌಲಭ್ಯ ಪಡೆಯಬಹುದು, ಅವುಗಳೆಂದರೆ :
ಈ ಯೋಜನೆಯ ಅಡಿಯಲ್ಲಿ ಕೃಷಿ ಚಟುವಟಿಕೆಗಳಿಗೆ 3 ವರ್ಷಗಳ ಅವಧಿಯ ಸಾಲ ಮತ್ತು ಪಶು ಸಂಗೋಪನೆ, ಮೀನು ಸಾಕಾಣಿಕೆ ಮೊದಲಾದ ಉಪ ಕಸುಬುಗಳಿಗಾಗಿ 3-5 ವರ್ಷಗಳವರೆಗಿನ ಎರಡನೇ ಅವಧಿಯ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
ಈ ಯೋಜನೆ ಅಡಿಯಲ್ಲಿ ಕೇವಲ 4% ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಪಡೆಯಬಹುದು. ಆದರೆ ಬ್ಯಾಂಕ್ನಿಂದ ಬ್ಯಾಂಕ್ಗೆ ಸಾಲ ಕೊಡುವ ಮೊತ್ತ ಮತ್ತು ಬಡ್ಡಿ ದರದಲ್ಲಿ ವ್ಯತ್ಯಾಸ ಇರುತ್ತದೆ.ಯಾವ ಯಾವ ಪ್ರಮುಖ ಬ್ಯಾಂಕ್ ಗಳಲ್ಲಿ ಸಿಗುವ ಬಡ್ಡಿ ದರದ ಮಾಹಿತಿ ಈ ಕೆಳಗಿನಂತಿದೆ :
ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ನೀಡುವ ಬ್ಯಾಂಕುಗಳು (bank’s) ಮತ್ತು ಬಡ್ಡಿ ದರಗಳು:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ – ಎಸ್ ಬಿ ಐ (SBI) ಬ್ಯಾಂಕ್ ನಲ್ಲಿ ಮೂರು ಲಕ್ಷ ರೂಪಾಯಿಗಳವರೆಗೆ ಐದು ವರ್ಷಗಳ ಅವಧಿಗೆ ಸಾಲ ಪಡೆಯಬಹುದಾಗಿದ್ದು ಕೇವಲ 2% ಬಡ್ಡಿ ದರದಲ್ಲಿ ರೈತರು ಈ ಸಾಲ ಪಡೆಯಬಹುದು.
ಎಚ್ ಡಿ ಎಫ್ ಸಿ ಬ್ಯಾಂಕ್ – ಗರಿಷ್ಠ ಪಡೆಯಬಹುದಾದ ಸಾಲದ ಮೊತ್ತ ಮೂರು ಲಕ್ಷ ರೂಪಾಯಿಗಳು. ಸಾಲವನ್ನು ಹಿಂತಿರುಗಿಸುವ ಅವಧಿಯು 4-5 ವರ್ಷಗಳು ಮತ್ತು ಬಡ್ಡಿ 9% ನಿಂದ ಪ್ರಾರಂಭವಾಗುತ್ತದೆ.
ಆಕ್ಸಿಸ್ ಬ್ಯಾಂಕ್(Axis Bank) – 8.55% ಬಡ್ಡಿ ದರದಲ್ಲಿ ಕಿಸಾನ್ ಕ್ರೆಡಿಟ್ ಲೋನ್ ಪಡೆಯಬಹುದು. ಐದು ವರ್ಷಗಳ ಅವಧಿಗೆ 2.5 ಲಕ್ಷ ರೂಪಾಯಿಗಳ ಸಾಲ ಸಿಗುತ್ತದೆ ಹಾಗೂ 50,000 ವಿಮಾ ರಕ್ಷಣಾ ಸೌಲಭ್ಯ ನೀಡಲಾಗುವುದು.
ಬ್ಯಾಂಕ್ ಆಫ್ ಇಂಡಿಯಾ(BOI) – ಐವತ್ತು ಸಾವಿರಕ್ಕಿಂತ ಕಡಿಮೆ ಆದಾಯ ಇರುವ ರೈತರು ಸಾಲ ಸೌಲಭ್ಯ ಪಡೆದುಕೊಳ್ಳಬಹುದು.
ಗಮನಿಸಿ (notice) :
ಕಿಸಾನ್ ಕ್ರೆಡಿಟ್ ಲೋನ್ ಪಡೆದುಕೊಳ್ಳುವುದಿದ್ದರೆ ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ ಅಥವಾ ಆನ್ಲೈನ್ ನಲ್ಲಿ ಬ್ಯಾಂಕ್ ವೆಬ್ಸೈಟ್ ಮೂಲಕ ಕಿಸಾನ್ ಕ್ರೆಡಿಟ್ ಲೋನ್ ಬಗ್ಗೆ ಮಾಹಿತಿ ಪಡೆಯಬಹುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.