ನಿಮ್ಮ ಕಾರಿನಲ್ಲಿ ನೀರಿನ ಬಾಟಲ್ ಇದೆಯೇ? ಕಾರಿನಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್ ಇಡುವುದು ಆರೋಗ್ಯಕ್ಕೆ ಹಾನಿಕಾರಕ!.
ನಾವು ದೂರದ ಪ್ರಯಾಣಕ್ಕೆ ಹೋದಾಗ ಅಥವಾ ಪ್ರತಿದಿನದ ಓಡಾಟದಲ್ಲಿ ನೀರಿನ ಬಾಟಲಿಯನ್ನು (water bottle) ಕಾರಿನಲ್ಲಿ ಇಡುವುದು ಸಾಮಾನ್ಯ. ಬಹುತೇಕ ಜನರು ತುರ್ತು ಅವಶ್ಯಕತೆಗಾಗಿ ಕಾರಿನಲ್ಲಿ ನೀರಿನ ಬಾಟಲ್ ಇಟ್ಟುಕೊಳ್ಳುತ್ತಾರೆ. ಬಾಯಾರಿದಾಗ ತಕ್ಷಣವೇ ನೀರು ಕುಡಿಯಲು ಇದು ಅನುಕೂಲಕರವೆನಿಸುತ್ತದೆ. ಆದರೆ, ಕಾರಿನ ಒಳಗಿನ ಬಿಸಿತಾಪಮಾನ ಮತ್ತು ಪ್ಲಾಸ್ಟಿಕ್ ಬಾಟಲಿಗಳ (Plastic bottles) ಪ್ರಭಾವದಿಂದಾಗಿ ಈ ಅಭ್ಯಾಸವು ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂಬುದು ಯಾರಿಗೂ ತಿಳಿದಿಲ್ಲ. ಹಾಗಿದ್ದರೆ ಕಾರಿನ ಒಳಗಡೆ ನೀರಿನ ಬಾಟಲ್ ಇಡುವುದರಿಂದ ಯಾವರೀತಿಯ ಪರಿಣಾಮವಾಗುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ನೀವು ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಬಿಸಿಲಿನ ಕಿರಣಗಳು (Sun rays) ಕಾರಿನ ಒಳಗೆ ನೇರವಾಗಿ ಬೀಳುವಾಗ ಅಥವಾ ಕಾರು ಬೆಚ್ಚಗಿನ ವಾತಾವರಣದಲ್ಲಿ ನಿಂತಿದ್ದಾಗ, ಅದರೊಳಗಿನ ವಸ್ತುಗಳ ತಾಪಮಾನ ಹೆಚ್ಚುತ್ತದೆ. ಇದರಿಂದ ಪ್ಲಾಸ್ಟಿಕ್ ಬಾಟಲಿಯಲ್ಲಿರುವ ನೀರಿನ ಗುಣಮಟ್ಟ ದುರ್ಬಲಗೊಳ್ಳಬಹುದು. ಈ ಸಂಬಂಧ, ಇತ್ತೀಚಿನ ಅಧ್ಯಯನಗಳು ಮತ್ತು ವೈದ್ಯಕೀಯ ತಜ್ಞರು(Recent studies and medical experts) ನೀಡಿರುವ ಎಚ್ಚರಿಕೆಗಳನ್ನು ಗಮನಿಸಿದರೆ, ಕಾರಿನಲ್ಲಿ ನೀರಿನ ಬಾಟಲಿಗಳನ್ನು ಇಡುವುದು ಮತ್ತು ಬಳಕೆ ಮಾಡುವುದು ಅಪಾಕಾರಿ ಎಂದು ಸೂಚಿಸಲಾಗುತ್ತಿದೆ.
ಅಧ್ಯಯನ ಸಂಶೋಧನೆಗಳು ಏನು ಹೇಳುತ್ತವೆ?:
ಅಂತಾರಾಷ್ಟ್ರೀಯ ಮಟ್ಟದ ಆರೋಗ್ಯ ಮತ್ತು ಪರಿಸರ ವಿಜ್ಞಾನ ಅಧ್ಯಯನಗಳ ಪ್ರಕಾರ, ಪ್ಲಾಸ್ಟಿಕ್ ಬಾಟಲಿಗಳನ್ನು ಹೆಚ್ಚು ಬಿಸಿಯ ತಾಪಮಾನಕ್ಕೆ ಒಡ್ಡಿದರೆ, ಅದರಿಂದ ಹಾನಿಕಾರಕ ರಾಸಾಯನಿಕಗಳು ನೀರಿನ ಒಳಗಡೆ ಸೇರಬಹುದು. ಇದರಲ್ಲಿ ಪ್ರಮುಖವಾಗಿ Bisphenol A (BPA) ಮತ್ತು Phthalates ಎಂಬ ರಾಸಾಯನಿಕಗಳು ಸೇರಿಕೊಂಡಿರುತ್ತವೆ.
BPA (Bisphenol A): ಇದು ಪ್ಲಾಸ್ಟಿಕ್ ತಯಾರಿಕೆಯಲ್ಲಿ ಬಳಸುವ ಒಂದು ಅಂಶವಾಗಿದ್ದು, ಇದು ನೀರಿನಲ್ಲಿ ಬೆರೆತು ಹೋಗಿರುತ್ತದೆ. ನೀರನ್ನು ದೀರ್ಘಕಾಲದವರಿಗೆ ಶೇಖರಿಸಿ ಸೇವನೆಯ ಮಾಡಿದರೆ, ಹಾರ್ಮೋನ್ ಅಸ್ಥಿರತೆ, ಸಂತಾನೋತ್ಪತ್ತಿ ಸಮಸ್ಯೆಗಳು, ಮೆಟಬಾಲಿಕ್ ಅಸ್ವಸ್ಥತೆ ಮತ್ತು ಕೆಲವೊಮ್ಮೆ ಕ್ಯಾನ್ಸರ್ ನಂತಹ ಕಾಯಿಲೆಗಳನ್ನು ಬರುತ್ತವೆ ಎಂದು ಅಧ್ಯಯನಗಳು ಹೇಳುತ್ತವೆ.
Phthalates: ಇದು ಪ್ಲಾಸ್ಟಿಕ್ ಮೃದುಗೊಳಿಸಲು ಬಳಸುವ ರಾಸಾಯನಿಕವಾಗಿದೆ, ಇದು ದೇಹದ ಆಂತರಿಕ ಶ್ರೇಣಿಗೆ ಹಾನಿಯುಂಟುಮಾಡಬಹುದು, ಹಾರ್ಮೋನ್ ವ್ಯತ್ಯಾಸ ಉಂಟುಮಾಡಬಹುದು, ಮಕ್ಕಳ ಬೆಳವಣಿಗೆಯಲ್ಲಿ ತೊಂದರೆ ತರುತ್ತದೆ.
ಅಮೆರಿಕದ Environmental Science & Technology ಪತ್ರಿಕೆಯಲ್ಲಿ ಪ್ರಕಟಗೊಂಡ ಸಂಶೋಧನೆಯ ಪ್ರಕಾರ, ಪ್ಲಾಸ್ಟಿಕ್ ಬಾಟಲಿಗಳು ಬಿಸಿಲಿನ ಕಿರಣಗಳಿಗೆ ಬಿದ್ದಾ, ಪ್ರತಿಯೊಂದು ಲೀಟರ್ ನೀರಿಗೂ ಟ್ರಿಲಿಯನ್ಗಟ್ಟಲೆ ನ್ಯಾನೋಪಾರ್ಟಿಕಲ್‌ಗಳು ಬಿಡುಗಡೆ ಆಗುತ್ತವೆ. ಈ ಅತಿಸೂಕ್ಷ್ಮ ರಾಸಾಯನಿಕ ಕಣಗಳು(Ultrafine chemical particles) ದೇಹದ ಅಂಗಾಂಗಗಳಿಗೆ ಹಾನಿ ಮಾಡಬಹುದು, ವಿಶೇಷವಾಗಿ ಲಿವರ್, ಕಿಡ್ನಿ ಮತ್ತು ಎಂಡೋಕ್ರೈನ್ ತೊಂದರೆಯನ್ನು ಉಂಟುಮಾಡುತ್ತವೆ.
ಕಾರಿನಲ್ಲಿರುವ ಪ್ಲಾಸ್ಟಿಕ್ ನೀರಿನ ಬಾಟಲಿ ಇಡುವುದು ಅಪಾಕಾರಿ:
ಪ್ಲಾಸ್ಟಿಕ್ ಬಾಟಲಿಯ ನೀರು 24-48 ಗಂಟೆಗಳಿಗಿಂತ ಹೆಚ್ಚು ಕಾಲ ಸಂಗ್ರಹಿಸುವುದು ಸುರಕ್ಷಿತವಲ್ಲ.
ಸೂರ್ಯನ ಶಾಖಕ್ಕೆ ಬಿಸಿಯಾದ ನೀರನ್ನು (Hot water) ಕುಡಿಯುವುದರಿಂದ ರಾಸಾಯನಿಕಗಳ ಪ್ರಮಾಣ ಹೆಚ್ಚಾಗುವ ಸಾಧ್ಯತೆ.
ಕಚ್ಚಾ ನೀರಿನ ಬದಲಿಗೆ ಗಾಜಿನ ಬಾಟಲಿ ಅಥವಾ ಸ್ಟೀಲ್ ಬಾಟಲಿಗಳನ್ನು (Glass or steal bottle’s) ಬಳಸುವುದು ಉತ್ತಮ ಯಾಕೆಂದರೆ, ಇದರಿಂದ ರಾಸಾಯನಿಕ ಸಂಗ್ರಹಣೆ ಕಡಿಮೆಯಾಗುತ್ತದೆ.
ಒಂದೇ ಪ್ಲಾಸ್ಟಿಕ್ ಬಾಟಲಿಯನ್ನು ಪದೇ ಪದೇ ಬಳಸುವುದರಿಂದ ಆಮ್ಲಜನಕದೊಂದಿಗೆ (with oxygen) ಸಂಯೋಗ ಉಂಟಾಗಿ ರಾಸಾಯನಿಕಗಳ ಪ್ರಮಾಣ ಹೆಚ್ಚಾಗುತ್ತದೆ.
ಹಾಗಿದ್ದರೆ ನಾವು ಅನುಸರಿಸಬಹುದಾದ ಆರೋಗ್ಯಕರ ಮಾರ್ಗಗಳು ಯಾವುವು?:
ನೀವು ಕಾರಿನಲ್ಲಿ ನೀರಿನ ಬಾಟಲ್ ಇಡುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕೆಂದೇನಿಲ್ಲ, ಆದರೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಅಷ್ಟೇ!.
ಪ್ಲಾಸ್ಟಿಕ್ ಬದಲಿಗೆ ಸ್ಟೀಲ್ ಅಥವಾ ಗಾಜಿನ ಬಾಟಲ್ (Steal or glass) ಬಳಸುವುದು ಹೆಚ್ಚು ಸುರಕ್ಷಿತ.
ತಂಪಾದ ನೀರನ್ನು ಮಾತ್ರ ಸೇವಿಸಿ.
ದೀರ್ಘಕಾಲ ನೀರಿನ ಬಾಟಲ್ ಅನ್ನು ಕಾರಿನಲ್ಲಿ ಇಡಬೇಡಿ.
ಕಾರಿನಲ್ಲಿ ನೀರಿನ ಬಾಟಲ್ ಅನ್ನು ನೇರ ಬಿಸಿಲಿಗೆ ಇಡುವುದನ್ನು ತಪ್ಪಿಸಿ.
ಪ್ಲಾಸ್ಟಿಕ್ ಬಾಟಲಿಯಲ್ಲಿನ ನೀರನ್ನು ಹೆಚ್ಚು ಕಾಲ ಸಂಗ್ರಹಿಸಬೇಡಿ, 48 ಗಂಟೆಗಳೊಳಗೆ ನೀರನ್ನು ಬಳಸಿ.
ನಾವು ದಿನನಿತ್ಯ ಅನುಸರಿಸುವ ಕೆಲವು ಚಿಕ್ಕ ಅಭ್ಯಾಸಗಳು ನಮ್ಮ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಕಾರಿನಲ್ಲಿ ನೀರಿನ ಬಾಟಲ್ (Water bottle) ಇಡುವುದು ಒಂದು ಸರಳ ಪದ್ಧತಿಯಂತಿದೆ, ಆದರೆ ಅದನ್ನು ಎಚ್ಚರಿಕೆಯಿಂದ ಬಳಕೆ ಮಾಡುವುದು ತುಂಬಾ ಮುಖ್ಯ. ಪ್ಲಾಸ್ಟಿಕ್ ಬಾಟಲಿಗಳ ಮೇಲೆ ಬಿಸಿಲಿನ ಶಾಖ ಬಿದ್ದಾಗ, ವಿಷಕಾರಿ ಕಣಗಳನ್ನು ಬಿಡುಗಡೆ ಮಾಡುತ್ತವೆ ಎಂಬ ಸತ್ಯವನ್ನು ಅರಿತುಕೊಳ್ಳುವುದು ನಮ್ಮ ಆರೋಗ್ಯ ಸಂರಕ್ಷಣೆಗೆ (For health protection) ಅಗತ್ಯ. ಆದ್ದರಿಂದ, ಹೆಚ್ಚು ಸುರಕ್ಷಿತ ಆಯ್ಕೆಗಳನ್ನು ಅನ್ವಯಿಸಿ, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿ!
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.