ಈ ವರದಿಯಲ್ಲಿ ಕರ್ನಾಟಕ ರಾಜ್ಯ ಕೃಷಿ ಇಲಾಖೆಯ ನೇಮಕಾತಿ 2025 ( Karnataka State Agricultural department Recruitment 2025) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ ರಾಜ್ಯ ಕೃಷಿ ಇಲಾಖೆಯಿಂದ (Karnataka State Agricultural department) ಉದ್ಯೋಗಾಕಾಂಕ್ಷಿಗಳಿಗೆ ಹೊಸ ಭರ್ಜರಿ ಅವಕಾಶವನ್ನು ನೀಡಲಾಗಿದೆ. 945 ಹುದ್ದೆಗಳ ಭರ್ತಿಗಾಗಿ ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮಿಷನ್ (KPSC) ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳು ರಾಜ್ಯದ ವಿವಿಧ ವಿಭಾಗಗಳಲ್ಲಿ ಕೃಷಿ ಅಭಿವೃದ್ಧಿಗೆ ಪ್ರಮುಖವಾಗಿ ಸೇವೆ ಸಲ್ಲಿಸಲಿವೆ. ಅರ್ಜಿ ಪ್ರಕ್ರಿಯೆ, ವಿದ್ಯಾರ್ಹತೆಗಳು, ವಯಸ್ಸಿನ ಮಿತಿಗಳು, ಮತ್ತು ಪರೀಕ್ಷಾ ಕ್ರಮವನ್ನು ಇಲ್ಲಿ ವಿವರವಾಗಿ ಪರಿಶೀಲಿಸೋಣ.
ಹುದ್ದೆಗಳ ವಿವರ :
ಹುದ್ದೆ ಹೆಸರು: ಸಹಾಯಕ ಕೃಷಿ ಅಧಿಕಾರಿ (Assistant Agriculture Officer)
ಒಟ್ಟು ಹುದ್ದೆಗಳು: 945
ಸಂಸ್ಥೆ: ಕರ್ನಾಟಕ ರಾಜ್ಯ ಕೃಷಿ ಇಲಾಖೆ
ಅರ್ಜಿ ಪ್ರಾರಂಭ ದಿನಾಂಕ: 03-01-2025
ಅರ್ಜಿ ಕೊನೆ ದಿನಾಂಕ: 01-02-2025
ಶೈಕ್ಷಣಿಕ ಅರ್ಹತೆಗಳು:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಈ ಕೆಳಗಿನ ಪಠ್ಯಕ್ರಮಗಳನ್ನು ಪೂರೈಸಿರಬೇಕು:
B.Sc. (Agriculture) ಅಥವಾ B.Sc. (Honours) Agriculture
B.Tech. ತಂತ್ರಜ್ಞಾನದಲ್ಲಿ:
ಆಹಾರ ವಿಜ್ಞಾನ (Food Science)
ಕೃಷಿ ಎಂಜಿನಿಯರಿಂಗ್(Agricultural engineering)
ಬಯೋಟೆಕ್ನಾಲಜಿ (Biotechnology)
B.Sc.:
ಕೃಷಿ ಮಾರುಕಟ್ಟೆ ಮತ್ತು ಸಹಕಾರ
ಕೃಷಿ ಜೈವಿಕ ತಂತ್ರಜ್ಞಾನ
ಅಗ್ರಿ ಬಿಸಿನೆಸ್ ಮ್ಯಾನೇಜ್ಮೆಂಟ್
15% ಹುದ್ದೆಗಳು B.Tech ಮತ್ತು ಆನರ್ಸ್ ಕೋರ್ಸ್ಗಳಿಗೆ ಮೀಸಲಾಗಿವೆ.
ವಯಸ್ಸಿನ ಮಿತಿ:
ಅರ್ಜಿ ಸಲ್ಲಿಸುವ ದಿನಾಂಕಕ್ಕೆ (ಸೆಪ್ಟೆಂಬರ್ 10, 2024) ಅಭ್ಯರ್ಥಿಯ ವಯಸ್ಸು:
ಕನಿಷ್ಠ: 18 ವರ್ಷ
ಗರಿಷ್ಠ: ಸಾಮಾನ್ಯ ವರ್ಗ: 38 ವರ್ಷ
2A, 2B, 3A, 3B: 41 ವರ್ಷ
SC/ST/ಪ್ರವರ್ಗ 1: 43 ವರ್ಷ
ಪರೀಕ್ಷಾ ವಿಧಾನ ಮತ್ತು ಮೌಲ್ಯಮಾಪನ :
ಭಾಷಾ ಪರೀಕ್ಷೆ (Language Test)
ಮೋಡ್: ಆಫ್ಲೈನ್ (Offline)
ಅವಧಿ: 1.5 ಗಂಟೆ
ಒಟ್ಟು ಅಂಕಗಳು: 150
ಉತ್ತೀರ್ಣ ಅಂಕಗಳು: 50
ಲಿಖಿತ ಪರೀಕ್ಷೆ (Written test)
ಪೇಪರ್ I: 300 MCQ (1.5 ಗಂಟೆ)
ಪೇಪರ್ II: 300 MCQ (2 ಗಂಟೆ)
ಒಟ್ಟು ಅಂಕಗಳು: 600
ಮಾರ್ಕಿಂಗ್ ಸ್ಕೀಮ್ (Marking Scheme) :
ಸರಿಯಾದ ಉತ್ತರಕ್ಕೆ: 1 ಅಂಕ
ತಪ್ಪು ಉತ್ತರಕ್ಕೆ: -1/4 ಅಂಕ
ಮಾಧ್ಯಮ: ಕನ್ನಡ ಮತ್ತು ಇಂಗ್ಲಿಷ್
ಅಭ್ಯರ್ಥಿಗಳು ಭಾಷಾ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಆಯ್ಕೆಯಾಗುತ್ತಾರೆ.
ಅರ್ಜಿಯನ್ನು ಸಲ್ಲಿಸುವ ಮುನ್ನ :
ಅಧಿಕೃತ ಅಪ್ಲಿಕೇಶನ್ ಪೋರ್ಟಲ್ಗೆ ಭೇಟಿ ನೀಡಿ:
ಅಪ್ಲಿಕೇಶನ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವುದು ಹೇಗೆ?
ಹಂತ 1: ಮೊದಲು, ಅಧಿಕೃತ ವೆಬ್ಸೈಟ್ ಗೆ (Official Website) ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ
ಹಂತ 2: ನಂತರ ನೋಂದಣಿಯನ್ನು ಮಾಡಿಕೊಳ್ಳಿ. ನಂತರ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
ಹಂತ 3: ಅಭ್ಯರ್ಥಿಗಳು ಫೋಟೋ, ಸಹಿ, ಹುಟ್ಟಿದ ದಿನಾಂಕದ ದಾಖಲೆ, ಗುರುತಿನ ಪುರಾವೆ, ಅಗತ್ಯ ಅರ್ಹತೆಯ ಮಾರ್ಕ್ಶೀಟ್, ವರ್ಗ ಪ್ರಮಾಣಪತ್ರ (ಅನ್ವಯಿಸಿದರೆ). ಹೀಗೆ ಕೇಳಲಾದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು
ಹಂತ 4: ಅರ್ಜಿ ಶುಲ್ಕವನ್ನು ಪಾವತಿಸಿ.(ಅನ್ವಯಿಸಿದಲ್ಲಿ)
ಹಂತ 5: ಸಂಪೂರ್ಣ ಅರ್ಜಿ ನಮೂನೆಯನ್ನು ಪೂರ್ವವೀಕ್ಷಿಸಲು ಮತ್ತು ಪರಿಶೀಲಿಸಲು ಪೂರ್ವವೀಕ್ಷಣೆ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಹಂತ 6: ಅಂತಿಮ ಸಲ್ಲಿಕೆ ಮೊದಲು, ಅಗತ್ಯವಿದ್ದಲ್ಲಿ ವಿವರಗಳನ್ನು ಮಾರ್ಪಡಿಸಿ ಮತ್ತು ನೀವು ಭರ್ತಿ ಮಾಡಿದ ಫೋಟೋ, ಸಹಿ ಮತ್ತು ಇತರ ವಿವರಗಳನ್ನು ಪರಿಶೀಲಿಸಿದ ನಂತರ ಮತ್ತು ಖಚಿತಪಡಿಸಿದ ನಂತರವೇ ಅಂತಿಮ ಸಲ್ಲಿಕೆ ಮಾಡಿ.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:
ಅರ್ಜಿ ಪ್ರಾರಂಭ ದಿನಾಂಕ: 03-01-2025
ಅರ್ಜಿ ಕೊನೆ ದಿನಾಂಕ: 01-02-2025
ಕೊನೆಯದಾಗಿ ಹೇಳುವುದಾದರೆ, ಈ ನೇಮಕಾತಿ ರಾಜ್ಯದ ಕೃಷಿ ಅಭಿವೃದ್ಧಿಗೆ ಮಹತ್ವದ ಕೊಡುಗೆಯನ್ನು ನೀಡುವ ಸಾಧ್ಯತೆಯಿದೆ. ಬಿಎಸ್ಸಿ ಅಥವಾ ಬಿ.ಟೆಕ್ ಪದವಿ ಹೊಂದಿರುವ ಯುವ ಉದ್ಯೋಗಾಕಾಂಕ್ಷಿಗಳಿಗೆ ಇದು ಒಳ್ಳೆಯ ಅವಕಾಶ. ಲಿಖಿತ ಪರೀಕ್ಷೆಗೆ ಸಮರ್ಪಕವಾಗಿ ತಯಾರಿ ಮಾಡಿಕೊಳ್ಳುವುದು ಅವಶ್ಯಕ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ನೋಟಿಫಿಕೇಶನ್ ಅನ್ನು ಪರಿಶೀಲಿಸಿ.ಮತ್ತು ನೀವೇನಾದರೂ, ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ, ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ. ಹಾಗೆಯೇ ಈ ವರದಿಯನ್ನು ಎಲ್ಲರಿಗೂ ಶೇರ್ ಮಾಡಿ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.