ಯಾರೆಲ್ಲ ಉದ್ಯೋಗ ಹುಡುಕುತ್ತಿದ್ದೀರಿ ಅವರಿಗೆ ಮತ್ತೊಂದು ಸುವರ್ಣಾವಕಾಶ ಒದಗಿದೆ. ಈಗ KPTCL ನ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಸರ್ಕಾರವು ಆಹ್ವಾನಿಸಿದೆ. ಯಾವ ಹುದ್ದೆ, ಎಷ್ಟು ಹುದ್ದೆಗಳು ಖಾಲಿ ಇವೆ? ತಿಳಿದುಕೊಳ್ಳಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
KPTCL ನಲ್ಲಿ ಉದ್ಯೋಗವಕಾಶ :
ಶುಕ್ರವಾರ ಶಕ್ತಿ ಭವನದಲ್ಲಿ ನಡೆದ ಸಭೆಯೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು KPTCL ಹುದ್ದೆಗಳನ್ನು ಭರ್ತಿ ಮಾಡುವಂತೆ ಆದೇಶ ನೀಡಿದ್ದಾರೆ. ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್(KPTCL) [ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ] 2023-2024 ರ ಖಾಲಿ ಇರುವ ಸುಮಾರು 622 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ.
KPTCL ಕಂಪನಿಯು ಹಲವಾರು ವಲಯಗಳ ಉದ್ಯೋಗಕ್ಕೆ ಸಮರ್ಥ ಮತ್ತು ಪ್ರತಿಭಾವಂತರನ್ನು ಹುಡುಕುತ್ತಿದ್ದು ಅರ್ಜಿಗಳನ್ನು ಬಿಡಲಿದ್ದಾರೆ.
ಹುದ್ದೆಗಳ ವಿವರ :
ಸಹಾಯಕ ಇಂಜಿನಿಯರ್, ಜೂನಿಯರ್ ಇಂಜಿನಿಯರ್ ಮತ್ತು ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಭರ್ತಿ ಮಾಡಲು ಆದೇಶವನ್ನು ಹೊರಡಿಸಲಾಗಿದೆ. ಅರ್ಜಿ ಸಲ್ಲಿಸಲು KPTCL ಹುದ್ದೆಯ ಸರ್ಕಾರಿ ಉದ್ಯೋಗಗಳ ಅಧಿಕೃತ ವೆಬ್‌ಸೈಟ್ ಆದ kptcl.karnataka.gov.in ನಲ್ಲಿ ಉದ್ಯೋಗ ಪ್ರಕಟಣೆಗಳು ಲಭ್ಯವಾಗಲಿದೆ.
KPTCL ಹುದ್ದೆಯ ಸರ್ಕಾರಿ ನೌಕ್ರಿ 2023-2024 ಅಧಿಸೂಚನೆಯ ಪ್ರಕಾರ ಅರ್ಜಿದಾರರ ಕನಿಷ್ಠ ಮತ್ತು ಗರಿಷ್ಠ ವಯಸ್ಸು 18 ರಿಂದ 35 ರ ಒಳಗೆ ಇರಬೇಕಾಗಿರುತ್ತದೆ.
ಕರ್ನಾಟಕ ವಿದ್ಯುತ್ ನಿಗಮ ನಿಯಮಿತಿಯಲ್ಲಿ (KPTCL) ಖಾಲಿ ಇರುವ 622 ಹುದ್ದೆಗಳ ಭರ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಒಪ್ಪಿಗೆ ನೀಡಿದ್ದಾರೆ. ಶಕ್ತಿಭವನದಲ್ಲಿ ನಡೆದ ನಿಗಮದ ನಿರ್ದೇಶಕರ ಆಡಳಿತ ಮಂಡಳಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ KPTCL ಹುದ್ದೆಗಳ ಭರ್ತಿಗೆ ಸೂಚನೆ ನೀಡಿದ್ದಾರೆ.
ಹೈಕೋರ್ಟ್ ನ ನಿರ್ದೇಶನದಂತೆ 296 ಸಹಾಯಕ ಇಂಜಿನಿಯರ್ ಮತ್ತು 208 ಕಿರಿಯ ಇಂಜಿನಿಯರ್, ಕೆಮಿಸ್ಟ್ ಮತ್ತು ಕೆಮಿಕಲ್ ಸೂಪರ್ ವೈಸರ್ ಸೇರಿ ಒಟ್ಟು 622 ಹುದ್ದೆಗಳ ಭರ್ತಿಗೆ ಮರು ಪರೀಕ್ಷೆ ನಡೆಸಲಾಗುತ್ತಿದೆ. 622 ಹುದ್ದೆಗಳ ಜೊತೆಗೆ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗುವುದು.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ