ಇದೀಗ ರೈತರಿಗೆ ಗುಡ್ ನ್ಯೂಸ್ ತಿಳಿದು ಬಂದಿದೆ. ಹೌದು, ಈಗ ರೈತರಿಗೆ ನೀಡುತ್ತಿರುವ ಕೃಷಿ ಭಾಗ್ಯ ಯೋಜನೆಯು ( Krushi Bhagya Yojane ) ಒಂದು ವಿಶಿಷ್ಟವಾದ ಮಾದರಿಯಲ್ಲಿ ಇದೆ. ಈ ಯೋಜನೆಯಲ್ಲಿ ಕೃಷಿ ಹೊಂಡ, ಪಾಲಿಥೀನ್ ಹೊದಿಕೆ, ಡೀಸೆಲ್, ಪೆಟ್ರೋಲ್ ಪಂಪ್‍ಸೆಟ್, ಸೋಲಾರ್ ಪಂಪ್‍ಸೆಟ್, ಲಘುನೀರಾವರಿ ಘಟಕ ಹಾಗೂ ತಂತಿ ಬೇಲಿ ಒಳಗೊಂಡ ಒಂದು ಪ್ಯಾಕೇಜ್ ಆಗಿದೆ. ಈ ಕೃಷಿ ಭಾಗ್ಯ ಯೋಜನೆಯನ್ನು ಪಡೆದುಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕೃಷಿ ಭಾಗ್ಯ ಯೋಜನೆಯ ಉದ್ದೇಶಗಳು ( Purposes ) :
ಕರ್ನಾಟಕದ ಕೃಷಿ ಕ್ಷೇತ್ರದಲ್ಲಿ ಕ್ರಾಂತಿ ಮಾಡುವ ಮಹತ್ವಾಕಾಂಕ್ಷೆಯನ್ನು ಸರ್ಕಾರ ಹೊಂದಿದೆ. ಯೋಜನೆಯ ಅನುಷ್ಠಾನವು ಪ್ರಾಥಮಿಕವಾಗಿ ಜಮೀನಿನಲ್ಲಿ ಮಳೆನೀರು ಸಂರಕ್ಷಣಾ ಅಭ್ಯಾಸಗಳನ್ನು ತೆಗೆದುಕೊಳ್ಳುವ ಮೂಲಕ ರೈತರ ಆದಾಯವನ್ನು ಭದ್ರಪಡಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ರೈತರು ಮಳೆ, ಬೆಳೆ ಇಲ್ಲದೆ ಬಹಳ ಸಂಕಷ್ಟದಲ್ಲಿ ಬದುಕು ನಡೆಸುತ್ತಿದ್ದಾರೆ. ನೀರಿನ ಸಮರ್ಥ ಬಳಕೆಗಾಗಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಇದು ರೈತರನ್ನು ಉತ್ತೇಜಿಸುತ್ತದೆ.
ಈಗ ಸದ್ಯಕ್ಕೆ ನೀಡಿದ ವೆಚ್ಚ ದರ ಈ ಕೆಳಗಿನಂತಿದೆ :
ಬಹಳ ಕಷ್ಟದಲ್ಲಿ ಇರುವ ರೈತರಿಗೆ ನೆರವು ನೀಡಬೇಕು ಎಂಬ ಉದ್ದೇಶದಿಂದ ಕೃಷಿಭಾಗ್ಯ ಯೋಜನೆಗೆ ಮರುಚಾಲನೆ ನೀಡಲಾಗಿದೆ. ಈಗಾಗಲೇ 19 ಲಕ್ಷ ರೈತರಿಗೆ ರೂ. 1,500 ಕೋಟಿ ಬೆಳೆವಿಮೆ ವಿತರಿಸಲಾಗಿದೆ, ಹಾಗೂ 45,643 ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಸೌಲಭ್ಯ ಅಳವಡಿಕೆ ಮಾಡಲಾಗಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಕ್ರಮವಹಿಸಲು ಜಿಲ್ಲಾಧಿಕಾರಿಗಳ ಬ್ಯಾಂಕ್ ಖಾತೆಗೆ ಹಣದ ವರ್ಗಾವಣೆ ಮಾಡಲಾಗಿದೆ.
ಕೃಷಿ ಭಾಗ್ಯ ಯೋಜನೆಯಿಂದ ರೈತರಿಗೆ ಇರುವ ಬರಗಾಲದ ಅಭಾವವನ್ನು ನಿಗಿಸುವುದಾಗಿದೆ. ಹಾಗಾಗಿ ರಾಜ್ಯದ 5 ಒಣ ಹವಾಮಾನ ವಲಯಗಳ 24 ಬರಪೀಡಿತ ಜಿಲ್ಲೆಗಳಲ್ಲಿನ 106 ತಾಲ್ಲೂಕುಗಳಲ್ಲಿ ರೈತರ ಹಿತದೃಷ್ಟಿಯಿಂದ ಈ ಒಂದು ಕೃಷಿ ಭಾಗ್ಯವನ್ನು ಜಾರಿಮಾಡಲಾಗುತ್ತದೆ.
ಯೋಜನೆಯಡಿ ಒದಗಿಸುವ ಸೌಲಭ್ಯಗಳು ( Facilities ) :
ಕ್ಷೇತ್ರ ಬದು ನಿರ್ಮಾಣಕ್ಕೆ ಸಹಾಯಧನ (ಸಾ.ವರ್ಗಕ್ಕೆ ಶೇ 80, ಪ.ಜಾ/ಪ.ಪಂ. ಶೇ 90)
ನೀರು ಸಂಗ್ರಹಣಾ ರಚನೆ (ಕೃಷಿ ಹೊಂಡ) ನಿರ್ಮಾಣಕ್ಕೆ ಸಹಾಯಧನ (ಸಾ.ವರ್ಗಕ್ಕೆ ಶೇ 80, ಪ.ಜಾ/ಪ.ಪಂ. ಶೇ 90)
ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ (ಸಾ.ವರ್ಗಕ್ಕೆ ಶೇ 80, ಪ.ಜಾ/ಪ.ಪಂ. ಶೇ 90)
ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ (ಸಾ.ವರ್ಗಕ್ಕೆ ಶೇ 40, ಪ.ಜಾ/ಪ.ಪಂ. ಶೇ 50)
ಹೊಂಡದಿಂದ ನೀರೆತ್ತಲು ಡೀಸೆಲ್/ಟ್ರೋಲ್/ಸೋಲಾರ್ ಪಂಪ್ ಸೆಟ್ ವಿತರಣೆ (ಗರಿಷ್ಠ 10 ಎಚ್‌ಪಿ) (ಸಾ.ವರ್ಗಕ್ಕೆ ಶೇ 50, ಪ.ಜಾ/ಪ.ಪಂ. ಶೇ 90)
ನೀರನ್ನು ಬೆಳೆಗೆ ಹಾಯಿಸಲು ಸೂಕ್ಷ್ಮ (ತುಂತುರು/ಹನಿ) ನೀರಾವರಿ ಘಟಕ ವಿತರಣೆ(ಸಾ.ವರ್ಗಕ್ಕೆ ಶೇ 90, ಪ.ಜಾ/ಪ.ಪಂ. ಶೇ 90).
ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ( Last Date for Application ) :
ಕೃಷಿ ಭಾಗ್ಯ ಯೋಜನೆಯನ್ನು ಪಡೆಯಲು ಆಸಕ್ತಿಯುಳ್ಳ ರೈತರು ಡಿ. 31ರೊಳಗೆ ಅರ್ಜಿಗಳನ್ನು ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಿಗೆ ಸಲ್ಲಿಸಬಹುದಾಗಿದೆ.
ಯಾವುದೇ ಮಾಹಿತಿ ಪಡೆಯಲು ಸಂಪರ್ಕ ಸಂಖ್ಯೆ ಮತ್ತು ವಿಳಾಸ ಈ ಕೆಳಗೆ ನೀಡಲಾಗಿದೆ :
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ/ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಮಾಗಡಿ-8277932406, ಚನ್ನಪಟ್ಟಣ-8277932403, ಕನಕಪುರ ಮತ್ತು ಹಾರೋಹಳ್ಳಿ-8277932446, ರಾಮನಗರ- 8277932404 ಅನ್ನು ಸಂಪರ್ಕಿಸುವಂತೆ
ತಿಳಿಸಿದ್ದಾರೆ.
ಈ ಒಂದು ಕೃಷಿ ಭಾಗ್ಯ ಯೋಜನೆಯ ಪಡೆಯಲು ಆಸಕ್ತ ರೈತರು ಆದಷ್ಟು ಬೇಗ ಇದೆ ತಿಂಗಳು ಡಿಸೆಂಬರ್ 31 ರ ಒಳಗೆ ಈ ಯೋಜನೆಗೆ ಅರ್ಜಿ ಸಲ್ಲಿಸಿ ಸರ್ಕಾರ ನೀಡುತ್ತಿರುವ ಈ ಕೃಷಿ ಭಾಗ್ಯ ಯೋಜನೆಯನ್ನು ಪಡೆದುಕೊಳ್ಳಬೇಕು.
ಈ ಮಾಹಿತಿಗಳನ್ನು ಓದಿ
- ಅಕ್ರಮ ಸಕ್ರಮ ಭೂಮಿಗೆ ಹಕ್ಕು ಪತ್ರ ಪಡೆಯಲು ಬಗರ್ ಹುಕುಂ ಅರ್ಜಿ ಸಲ್ಲಿಸಲು ಆ್ಯಪ್ ಬಿಡುಗಡೆ
- ರಾಜ್ಯದ ಎಲ್ಲಾ ಮಹಿಳೆಯರಿಗೆ ಯಾವುದೇ ಬಡ್ಡಿ ಇಲ್ಲದೆ 3 ಲಕ್ಷ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
- ಮಹಿಳೆಯರಿಗೆ ಸಿಗಲಿದೆ 50 ಸಾವಿರ ರೂಪಾಯಿ ಸಹಾಯ ಧನ Apply Now
- ಸಾಲಕ್ಕೆ ಅರ್ಜಿ ಹಾಕುವಾಗ ಇದೊಂದು ದಾಖಲೆ ಸಾಕು, ತಕ್ಷಣ ಸಾಲ ಸಿಗುತ್ತೆ
- ಗ್ಯಾಸ್ ಸಿಲಿಂಡರ್ e-kyc ಮಾಡಿಲ್ಲ ಅಂದ್ರೆ ಸಬ್ಸಿಡಿ ಬಂದ್? ಕೇಂದ್ರದ ಸ್ಪಷ್ಟನೆ ಇಲ್ಲಿದೆ!
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.