ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (KSDC) 2025ರ ಮೊದಲ ಉದ್ಯೋಗ ಮೇಳವನ್ನು( 2025 Year first Job Fair) ಬೆಂಗಳೂರಿನ ಶಾಂತಿನಗರದ ನಂದನ್ ಫುಟ್‌ಬಾಲ್ ಮೈದಾನದಲ್ಲಿ ಆಯೋಜಿಸುತ್ತಿದೆ. ಜನವರಿ 7 ಮತ್ತು 8ರಂದು ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ನಡೆಯುವ ಈ ಮೇಳವು ಉದ್ಯೋಗವನ್ನು ಹುಡುಕುತ್ತಿರುವ ಪ್ರತಿಭಾವಂತ ಯುವಕರಿಗೆ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವ ಸುವರ್ಣಾವಕಾಶವನ್ನು ಒದಗಿಸುತ್ತದೆ.
ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಉದ್ಯೋಗ ಮೇಳದ ವಿಶೇಷತೆಗಳು:
ದೊಡ್ಡ ಕಂಪನಿಗಳ ಭಾಗವಹಿಕೆ (Participation of large companies): ಉದ್ಯೋಗ ಮೇಳದಲ್ಲಿ ದೇಶೀಯ ಹಾಗೂ ಅಂತರಾಷ್ಟ್ರೀಯ ಕಂಪನಿಗಳು ಭಾಗವಹಿಸಲಿವೆ.
ಆರಂಭಿಕ ಹಂತದ ಮಾಹಿತಿ ಸಂಗ್ರಹಣೆ (Initial stage data collection): ಅಭ್ಯರ್ಥಿಗಳ ವಿದ್ಯಾರ್ಹತೆ, ಕೌಶಲ, ಹಾಗೂ ಅನುಭವವನ್ನು ಮೌಲ್ಯಮಾಪನ ಮಾಡಲಾಗುತ್ತದೆ.
ಉದ್ಯೋಗಾವಕಾಶ (job opportunity): ಅರ್ಹ ಅಭ್ಯರ್ಥಿಗಳಿಗೆ ಸೂಕ್ತ ಉದ್ಯೋಗವನ್ನು ನಿಗಮದಿಂದ ನೇರವಾಗಿ ಒದಗಿಸಲಾಗುತ್ತದೆ.
ನೋಂದಣಿ ಸುಲಭತೆ(Easy of registration): ಆಸಕ್ತರು ನಿಗಮದ ಅಧಿಕೃತ ಪೋರ್ಟಲ್ ಮೂಲಕ ಮೊದಲೇ ನೋಂದಣಿ ಮಾಡಿಕೊಳ್ಳಬಹುದು.
ನೋಂದಣಿಗೆ ಅಗತ್ಯ ದಾಖಲೆಗಳು :
ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಅಭ್ಯರ್ಥಿಗಳು ಕೆಳಗಿನ ದಾಖಲೆಗಳನ್ನು ತಯಾರಿಸಿಕೊಂಡಿರಬೇಕು:
ಪ್ರಮಾಣಪತ್ರಗಳು(Certificates): ವಿದ್ಯಾರ್ಹತೆ ಮತ್ತು ತರಬೇತಿ ಸಂಬಂಧಿತ ಪ್ರಮಾಣಪತ್ರಗಳು.
ಪಾಸ್‌ಪೋರ್ಟ್ ಸೈಸ್ ಫೋಟೋಗಳು.
ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿ.
ಬಯೋಡೇಟಾ/ರಿಸ್ಯೂಮ್(Biodata/Resume): ಅರ್ಜಿದಾರರ ಶೈಕ್ಷಣಿಕ ಮತ್ತು ವೃತ್ತಿಪರ ವಿವರಗಳು.
ಅನುಭವ ಪ್ರಮಾಣಪತ್ರಗಳು (Experience certificate) (ಅನುಭವವಿರುವವರಿಗಾಗಿ).
ನೋಂದಣಿ ಪ್ರಕ್ರಿಯೆ:
ಆನ್‌ಲೈನ್ ನೋಂದಣಿ (Online registration):
ಲಿಂಕ್‌ಗೆ ಭೇಟಿ ನೀಡಿ. ವೃತ್ತಿ, ಕೌಶಲ್ಯ ಮತ್ತು ವಿದ್ಯಾರ್ಹತೆಯ ವಿವರಗಳನ್ನು ಭರ್ತಿ ಮಾಡಿ.ಉದ್ಯೋಗ ಮೇಳಕ್ಕೆ ನೋಂದಣಿ ಮಾಡಿಸಿಕೊಳ್ಳಬಹುದು.
ನೇರ ನೋಂದಣಿ (Direct registration):
ಮೇಳದ ಸ್ಥಳದಲ್ಲಿ ಅಕ್ಷರಶಃ ನೋಂದಣಿ ಮಾಡುವ ವ್ಯವಸ್ಥೆಕೂಡ ಇರುತ್ತದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕ:ಟೋಲ್-ಫ್ರೀ: 1800 599 9918 (ವಿಸ್ತರಣಾ ಸಂಖ್ಯೆ: 5)ಸಂಪರ್ಕಿಸಿ ಅಥವಾ
ಇಮೇಲ್ (Email): [email protected]
ಇಮೇಲ್‌ಗೆ ಮಾಹಿತಿ ನೀಡಿ ವಿವರಗಳನ್ನು ಪಡೆಯಬಹುದಾಗಿದೆ.
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (KSDC) ಉದ್ದೇಶ :
ಅಲ್ಪಾವಧಿ ತರಬೇತಿ (Short term training) ಮತ್ತು ಉದ್ಯಮಶೀಲತೆ ಅಭಿವೃದ್ಧಿ(Entrepreneurship development) ಮೂಲಕ, ರಾಜ್ಯದ ಯುವಜನತೆಗೆ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ 2008ರಲ್ಲಿ ಸ್ಥಾಪಿತವಾದ ಕೆ.ಎಸ್.ಡಿ.ಸಿ(KSDC)., ಪ್ರತಿ ವರ್ಷ 60,000ಕ್ಕೂ ಹೆಚ್ಚು ಯುವಕರಿಗೆ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ್ ಯೋಜನೆ (PMKVY) ಮತ್ತು ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ (CMKKY) ಅಡಿಯಲ್ಲಿ ತರಬೇತಿ ನೀಡುತ್ತಿದೆ.
ಪ್ರಮುಖ ವಲಯಗಳು:
ಆಟೋಮೋಟಿವ್
ಐಟಿ-ಐಟೀಎಸ್
ಲಾಜಿಸ್ಟಿಕ್ಸ್
ಅಪಾರೆಲ್
ಎಲೆಕ್ಟ್ರಾನಿಕ್ಸ್
ಅರ್ಹ ಅಭ್ಯರ್ಥಿಗಳು:
ಪದವೀಧರರು
ಡಿಪ್ಲೊಮಾ ಅಥವಾ ಐಟಿಐ ಮುಗಿಸಿದವರು
ವೃತ್ತಿಪರ ತರಬೇತಿ ಹೊಂದಿದವರು
ಉದ್ಯೋಗದಾತರು
ಈ ಉದ್ಯೋಗ ಮೇಳವು(Job Fair ) ಪ್ರಾದೇಶಿಕ, ರಾಷ್ಟ್ರೀಯ, ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ಯುವಜನರನ್ನು ಸಿದ್ಧಗೊಳಿಸಲು ಶ್ರೇಷ್ಠ ವೇದಿಕೆಯಾಗಲಿದೆ. ಅರ್ಹ ಅಭ್ಯರ್ಥಿಗಳಿಗೆ ಶ್ರೇಷ್ಠ ಉದ್ಯೋಗಾವಕಾಶಗಳನ್ನು ಒದಗಿಸುವ ಮೂಲಕ ರಾಜ್ಯದ ಕೌಶಲ್ಯ ಕೊರತೆ ಅಂತರವನ್ನು (State skill shortage gap) ಕಡಿಮೆ ಮಾಡುವುದು ಮೇಳದ ಪ್ರಮುಖ ಗುರಿಯಾಗಿದೆ.
ನಿಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು, ಈ ಅವಕಾಶವನ್ನು ಕೈ ತಪ್ಪಿಸಿಕೊಳ್ಳಬೇಡಿ!ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.