ಈ ವರದಿಯಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸೊಸೈಟಿ (KSRLPS) ನೇಮಕಾತಿ 2024 (KSRLPS Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸೊಸೈಟಿ (KSRLPS) ಹೊಸ ನೇಮಕಾತಿ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, ಈ ಮೂಲಕ 39 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಇವು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೇಮಕ ಮಾಡಲಾಗುವ ಹುದ್ದೆಗಳಾಗಿದ್ದು, ಗ್ರಾಮೀಣ ಅಭಿವೃದ್ಧಿ ಮತ್ತು ಜೀವನೋಪಾಯ ಯೋಜನೆಗಳನ್ನು ಉತ್ತೇಜಿಸಲು ಪ್ರಸ್ತಾಪಿತವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಉದ್ಯೋಗ ವಿವರಗಳು:
ಇಲಾಖೆ: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸೊಸೈಟಿ(KSRLPS)
ಹುದ್ದೆಗಳ ಸಂಖ್ಯೆ: 39
ಅರ್ಜಿ ಪ್ರಕ್ರಿಯೆ: ಆನ್‌ಲೈನ್ (Online)
ಉದ್ಯೋಗ ಸ್ಥಳ: ಕರ್ನಾಟಕ (Karnataka)
ಹುದ್ದೆಗಳ ವಿವರಗಳು:
ಹುದ್ದೆ ಹೆಸರು, ಹುದ್ದೆಗಳ ಸಂಖ್ಯೆ
ಕ್ಲಸ್ಟರ್ ಸೂಪರ್‌ವೈಸರ್12
ಡಿಇಒ/ಎಂಐಎಸ್ ಕೋರ್ಡಿನೇಟರ್6
ಬ್ಲಾಕ್ ಮ್ಯಾನೇಜರ್12
ಜಿಲ್ಲಾ ಮ್ಯಾನೇಜರ್3
ಜಿಲ್ಲಾ ಎಂಐಎಸ್ ಅಸಿಸ್ಟಂಟ್ ಮತ್ತು ಡಿಇಒ2
ಆಫೀಸ್ ಅಸಿಸ್ಟಂಟ್1
ತಾಲೂಕು ಪ್ರೋಗ್ರಾಮ್ ಮ್ಯಾನೇಜರ್3
ವಿದ್ಯಾರ್ಹತೆ ಮತ್ತು ವಯೋಮಿತಿ
ವಿದ್ಯಾರ್ಹತೆ:
ಹುದ್ದೆಯ ಅವಶ್ಯಕತೆಯ ಪ್ರಕಾರ, ಅಭ್ಯರ್ಥಿಗಳು ಪದವಿ ಅಥವಾ ಸ್ನಾತಕೋತ್ತರ ಪದವಿ ಹೊಂದಿರಬೇಕು.
ಕ್ಲಸ್ಟರ್ ಸೂಪರ್‌ವೈಸರ್: ಪದವಿ
ಡಿಇಒ/ಎಂಐಎಸ್ ಕೋರ್ಡಿನೇಟರ್: ಪದವಿ ಅಥವಾ ಸ್ನಾತಕೋತ್ತರ ಪದವಿ
ಬ್ಲಾಕ್ ಮ್ಯಾನೇಜರ್: ಸ್ನಾತಕೋತ್ತರ ಪದವಿ
ಜಿಲ್ಲಾ ಮ್ಯಾನೇಜರ್: ಬಿಎಸ್ಸಿ, ಎಂಎಸ್ಸಿ, ಅಥವಾ ಮಾಸ್ಟರ್ ಡಿಗ್ರಿ
ಆಫೀಸ್ ಅಸಿಸ್ಟಂಟ್: ಪದವಿ
ತಾಲೂಕು ಪ್ರೋಗ್ರಾಮ್ ಮ್ಯಾನೇಜರ್: ಸ್ನಾತಕೋತ್ತರ ಪದವಿ ಅಥವಾ ಡಿಪ್ಲೊಮಾ
ವಯೋಮಿತಿ:
ಅಭ್ಯರ್ಥಿಗಳು ಗರಿಷ್ಠ 45 ವರ್ಷ ವಯಸ್ಸು ಮೀರಿರಬಾರದು.
ವೇತನಶ್ರೇಣಿ
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತ್ಯೇಕ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ, ಅದು ಹುದ್ದೆಯ ಪ್ರಮಾಣಕ್ಕೆ ಅನುಗುಣವಾಗಿದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ
ಅಭ್ಯರ್ಥಿಗಳು ಕೇವಲ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು.
ಆನ್‌ಲೈನ್ ಅರ್ಜಿ ಪ್ರಕ್ರಿಯೆ: ಅರ್ಜಿ ಸಲ್ಲಿಸುವುದು ಹೇಗೆ?
ವೆಬ್‌ಸೈಟ್ ವಿಳಾಸ (Website address) https://jobsksrlps.karnataka.gov.in/ ಕ್ಕೆ ಭೇಟಿ ನೀಡಿ.
ಇಲ್ಲಿ ಹುದ್ದೆ ಯಾವ ಜಿಲ್ಲೆಯಲ್ಲಿ, ಯಾವ ಹುದ್ದೆ, ಎಷ್ಟು ಲಭ್ಯ ಎಂದು ತಿಳಿಯಬಹುದು.
ಇದೇ ವೆಬ್‌ಪುಟದ ಕೆಳಗೆ ಹಲವು ಪೇಜ್‌ಗಳನ್ನು ಓಪನ್ ಮಾಡಿದಂತೆಲ್ಲಾ ಡಿಸೆಂಬರ್ 16 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇರುವ ಹುದ್ದೆಗಳ ಲಿಸ್ಟ್ ಅನ್ನು ನೋಡಬಹುದು.
ಹೀಗೆ ಚೆಕ್ ಮಾಡಿಕೊಂಡು ಯಾವ ಜಿಲ್ಲೆಯಲ್ಲಿ ಯಾವ ಹುದ್ದೆ ಇದೆ ಎಂದು ತಿಳಿದು ನಂತರ ಸದರಿ ಹುದ್ದೆ ಮುಂದಿರುವ View/Apply ಎಂದಿರುವಲ್ಲಿ ಕ್ಲಿಕ್ ಮಾಡಿ.
ನಂತರ ಅರ್ಹತೆ, ಕಾರ್ಯಾನುಭವ, ಹುದ್ದೆಯ ಕುರಿತ ವೆಬ್‌ಪೇಜ್ ಓಪನ್ ಆಗುತ್ತದೆ.
ಮಾಹಿತಿಗಳನ್ನು ತಿಳಿದು Apply Now ಎಂದಿರುವಲ್ಲಿ ಕ್ಲಿಕ್ ಮಾಡಿ.
ಮತ್ತೊಂದು ವೆಬ್‌ಪೇಜ್ ಓಪನ್ ಆಗುತ್ತದೆ. ಕೇಳಲಾದ ಮಾಹಿತಿ ನೀಡಿ ಅರ್ಜಿ ಸಲ್ಲಿಸಿ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 07-12-2024
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: 16-12-2024
ಆಯ್ಕೆ ಪ್ರಕ್ರಿಯೆ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಪೂರಕ ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಅರ್ಜಿ ಲಿಂಕ್ / ವೆಬ್ಸೈಟ್ Click Here
ಈ ಹುದ್ದೆಗಳು ಗ್ರಾಮೀಣ ಅಭಿವೃದ್ಧಿಗೆ ಸೇವೆ ಸಲ್ಲಿಸಲು ಸನ್ನದ್ಧರಾದ ಪ್ರತಿಭಾವಂತ ಅಭ್ಯರ್ಥಿಗಳಿಗೆ ಚನ್ನಾದ ಅವಕಾಶ ಒದಗಿಸುತ್ತವೆ. ವೇತನ, ಹುದ್ದೆ, ಮತ್ತು ಕ್ಷೇತ್ರಾವಕಾಶದ ನಿಟ್ಟಿನಲ್ಲಿ ಇದು ಆಕರ್ಷಕ ಅವಕಾಶವಾಗಿದೆ. ಆದ್ದರಿಂದ, ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸುವಂತೆ ಮನವಿ.ಮತ್ತು ನೀವೇನಾದರೂ, ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ, ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ. ಹಾಗೆಯೇ ಈ ವರದಿಯನ್ನು ಎಲ್ಲರಿಗೂ ಶೇರ್ ಮಾಡಿ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.