ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ (ಕೆಎಸ್ಆರ್‌ಟಿಸಿ) ( karnataka state road transport corporation ) ಇದೀಗ ಹೊಸ ಸುದ್ದಿಯೊಂದು ತಿಳಿದು ಬಂದಿದೆ. ಹೌದು ಕರ್ನಾಟಕ ರಸ್ತೆ ಸಾರಿಗೆ ನಿಯಮ ಇದೇ ಮೊದಲ ಬಾರಿಗೆ ಲಾಜಿಸ್ಟಿಕ್ಸ್ ಸೇವೆಯನ್ನು ( Logistic Service ) ಆರಂಭಿಸುತ್ತಿದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದು ಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
KSRTC ಕಾರ್ಗೋ ಸೇವೆ:
ಕೆಎಸ್ಆರ್‌ಟಿಸಿ(KSRTC) ರಸ್ತೆ ಸಾರಿಗೆ ನಿಗಮವು ಇದೀಗ ನಮ್ಮ ಕಾರ್ಗೋ ನಿಮ್ಮ ವಿಶ್ವಾಸ, ನಮ್ಮ ಕಾಳಜಿ’ ಎಂಬ ಹೆಸರಿನಲ್ಲಿ ಸರಕು ಸಾಗಣೆ ಸೇವೆಗಾಗಿಯೇ ವಿಶೇಷ ಲಾರಿಗಳನ್ನು ತಯಾರಿಸಲಾಗಿದೆ. ಡಿಸೆಂಬರ್ 15ರಂದು ಈ ಲಾರಿಗಳ ಸಂಚಾರ ಮಾಡಲು ತಯಾರಾಗಿವೆ.
ಈ ಒಂದು ಹೊಸ ಸೇವೆಯ ಮುಖ್ಯ ಉದ್ದೇಶ :
ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಕೆಎಸ್ಆರ್‌ಟಿಸಿ ಸಾರಿಗೆ ನಿಗಮವು ಹೆಚ್ಚು ಜನಪ್ರಿಯತೆ ಹೊಂದಿದೆ. ಹಾಗೆಯೇ ಈಗ ಸರಕು-ಸಾಗಣೆ ( Goods And Services ) ಕ್ಷೇತ್ರಕ್ಕೆ ಕಾಲಿಟ್ಟು ಒಂದು ವಿಶಿಷ್ಟ ಸಾಧನೆ ಮಾಡಲು ಹೊರಟಿದೆ. ಹೌದು, ಡಿಸೆಂಬರ್ 15 ರಂದು ಲಾಜಿಸ್ಟಿಕ್ ಸೇವೆ ನೀಡುವ ಕೆಎಸ್ಆರ್‌ಟಿಸಿ ಲಾರಿಗಳನ್ನು ಲೋಕಾರ್ಪಣೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
ಈ ಒಂದು ಹೊಸ ಯೋಜನೆಯನ್ನು ಮೊದಲಿಗೆ ಪ್ರಾಯೋಗಿಕ ಯೋಜನೆಯಾಗಿ ಬಿಡಲಾಗುತ್ತದೆ :
ಕೆಎಸ್ಆರ್‌ಟಿಸಿ ನಮ್ಮ ಕಾರ್ಗೋ ಯೋಜನೆಯನ್ನು ( Cargo System ) ಮೊದಲು ಪ್ರಾಯೋಗಿಕವಾಗಿ ( Practical ) ಆರಂಭಿಸಲಾಗುತ್ತಿದೆ. ತದ ನಂತರ ಈ ಯೋಜನೆ ಯಶಸ್ವಿಯಾದರೆ ಸರಕು ಸಾಗಣೆಗಾಗಿಯೇ ಹೆಚ್ಚಿನ ಲಾರಿಗಳನ್ನು ಖರೀದಿ ಮಾಡಲು ಯೋಜಿಸಲಾಗಿದೆ. ಲಾಜಿಸ್ಟಿಕ್ ಸೇವೆ ಮೂಲಕ ಸುಮಾರು 100 ಕೋಟಿ ಆದಾಯ ಸಂಗ್ರಹ ಮಾಡಬಹುದು ಎಂದು ಕೆಎಸ್ಆರ್‌ಟಿಸಿ ಸಾರಿಗೆ ನಿಗಮ ಮಾಹಿತಿ ನೀಡಿದೆ.
ಸರಕು ಸಾಗಣೆ ಮಾಡುವ ಲಾರಿಗಳ ವಿಶೇಷತೆಗಳು ಮತ್ತು ವಿನ್ಯಾಸ :
ಕೆಎಸ್ಆರ್‌ಟಿಸಿ ಬಸ್‌ಗಳ ಮಾದರಿಯಲ್ಲಿಯೇ ಸರಕು ಸಾಗಿಸುವ ಲಾರಿಗಳನ್ನು ಕೂಡ ವಿನ್ಯಾಸ ಮಾಡಲು ಸಾರಿಗೆ ನಿಗಮವು ತಿಳಿಸಿದೆ. ಸುಮಾರು 17.03 ಲಕ್ಷ ರೂ. ದರದಲ್ಲಿ 3.4 ಕೋಟಿ ರುಪಾಯಿ ವೆಚ್ಚದಲ್ಲಿ 20 ಲಾರಿಗಳನ್ನು ಖರೀದಿ ಮಾಡಲಾಗಿದ್ದು ವಿನ್ಯಾಸವೂ ಸಹ ಪೂರ್ಣಗೊಂಡಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಸರಕು ಸಾಗಣೆ ಮಾಡಲು ವಿಶಿಷ್ಟ ವಿನ್ಯಾಸದ ಲಾರಿಗಳನ್ನು ಪುಣೆಯಲ್ಲಿ ಸಿದ್ಧಪಡಿಸಲಾಗಿದೆ. ಕೆಲವೇ ದಿನಗಳಲ್ಲಿ ಎಲ್ಲಾ ಲಾರಿಗಳು ರಾಜ್ಯಕ್ಕೆ ಆಗಮಿಸಲಿವೆ. ಈಗ ಬಸ್‌ನಲ್ಲಿ ಸಾಗಣೆ ಮಾಡುವ ಸರಕುಗಳನ್ನು ಇನ್ನು ಮುಂದೆ ಲಾರಿಗಳಲ್ಲಿ ಸಾಗಣೆ ಮಾಡಲಾಗುತ್ತದೆ. ಇದು ಒಂದು ಖುಷಿಯ ವಿಚಾರ ಎನ್ನಬಹುದು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಒಂದು ಯೋಜನೆಯನ್ನು ಜಾರಿಗೆ ತರಲು ಮುಖ್ಯ ಕಾರಣ ?
ಸಾರಿಗೆ ನಿಗಮದ ಆದಾಯ ಹೆಚ್ಚಳ ಮಾಡುವ ಉದ್ದೇಶದಿಂದ ಜಾರಿಗೊಳಿಸುತ್ತಿರುವ ಯೋಜನೆಯಿಂದ 100 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಸದ್ಯ ರಾಜ್ಯದಲ್ಲಿ ಮಾತ್ರ ಈ ಲಾರಿಗಳು ಸಂಚಾರ ನಡೆಸಿ, ಸರಕು ಸಾಗಣೆ ಮಾಡಲಿವೆ ಎಂದು ತಿಳಿಸಿದ್ದಾರೆ. ಹಾಗೆಯೇ ನಂತರ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕರೆ ಹೊರ ರಾಜ್ಯಗಳಿಗೆ ಸಹ ಲಾರಿ ಮೂಲಕ ಸಾಗಾಟ ಆರಂಭಿಸಲು ಮಾಡಲಾಗುತ್ತದೆ.
ಹಾಗೆಯೇ ಮತ್ತೊಂದು ವಿಚಾರ ಏನೆಂದರೆ ಈಗ ಮಹಿಳೆಯರ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆ(shakti scheme) ಜಾರಿಯಾದ ಬಳಿಕ ಸಾರಿಗೆ ನಿಗಮಕ್ಕೆ ಆದಾಯದ ಕೊರತೆ ಉಂಟಾಗಿದೆ. ಹಾಗಾಗಿ ಈ ಒಂದು ಹೊಸ ಯೋಜನೆ ಜಾರಿಗೆ ತರಲು ಸಾರಿಗೆ ನಿಗಮವು ಮುಂದಾಗಿದೆ.
ಯಾವೆಲ್ಲ ಸಾರಿಗೆ ನಿಗಮಗಳಲ್ಲಿ ಈ ಒಂದು ವ್ಯವಸ್ಥೆ ಇರುತ್ತದೆ ?
ಬಿಎಂಟಿಸಿ(BMTC) ಹೊರತುಪಡಿಸಿ ಕೆಎಸ್ಆರ್‌ಟಿಸಿ, ಎನ್‌ಡಬ್ಲ್ಯುಆರ್‌ಟಿಸಿ, ಕೆಕೆಆರ್‌ಟಿಸಿ ಈ ಮೂರು ನಿಗಮಗಳಲ್ಲಿ ಕಾರ್ಗೋ ಸೇವೆ(Cargo service) ಲಭ್ಯವಿರಲಿದೆ ಎಂದು ತಿಳಿಸಿದ್ದಾರೆ. ಹಾಗೆಯೇ ಆರಂಭದಲ್ಲಿ 109 ಕೇಂದ್ರಗಳಲ್ಲಿ ಕಾರ್ಗೋ ಸೇವೆ ಆರಂಭಿಸಲಾಗುತ್ತದೆ.
ಈ ಸೇವೆಯನ್ನು ಪಡೆಯಲು ಸಾರ್ವಜನಿಕರು ಮಾಡಬೇಕಾದ ನೀತಿ ನಿಯಮಗಳು ಈ ಕೆಳಗಿನಂತಿವೆ :
ಕಾರ್ಗೋ ಸೇವೆ ಪಡೆಯಲು ಗ್ರಾಹಕರು ಬಸ್ ನಿಲ್ದಾಣದ ಕೌಂಟರ್‌ನಲ್ಲಿ ಅರ್ಜಿ ಪಡೆದು ವಿವರ ದಾಖಲಿಸಬೇಕು. ನಂತರ ಪಾರ್ಸೆಲ್ ಅನ್ನು ಸಿಬ್ಬಂದಿಗೆ ನೀಡಿ, ನಿಗದಿತ ಶುಲ್ಕವನ್ನು ಪಾವತಿ ಮಾಡಿ ರಶೀದಿ ಪಡೆಯಬೇಕು. ಹಾಗೆಯೇ ಪಾರ್ಸೆಲ್ ಸೇವೆಗಾಗಿಯೇ ತಂತ್ರಾಂಶವನ್ನು ಅಭಿವೃದ್ಧಿಗೊಳಿಸಲಾಗಿದೆ. ಪಾರ್ಸೆಲ್ ಪಡೆದವರು ತಮ್ಮ ಸಹಿಯ ಜೊತೆ ವಿವರಗಳನ್ನು ಸಾಫ್ಟ್‌ವೇರ್‌ನಲ್ಲಿ ದಾಖಲು ಮಾಡಬೇಕು. ಪಾರ್ಸೆಲ್ ಹೊರಟ ತಕ್ಷಣ, ಅದು ತಲುಪಿದ ತಕ್ಷಣದ ಗ್ರಾಹಕರಿಗೆ ಎಸ್ಎಂಎಸ್ ಬರುವಂತೆ ವ್ಯವಸ್ಥೆ ಮಾಡಲಾಗಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ