KSRTC ನೌಕರರಿಗೆ ಬಂಪರ್ ಗುಡ್ ನ್ಯೂಸ್ 2 ಸಾವಿರ ಕೋಟಿ ‘PF’ ಹಣ ಬಿಡುಗಡೆಗೆ ಸರ್ಕಾರ ಅನುಮೋದನೆ.!

1000350378

ಕರ್ನಾಟಕ ರಾಜ್ಯದ ಸಾರಿಗೆ ನೌಕಕರಿಗೆ ಸರ್ಕಾರದ ವತಿಯಿಂದ ಸಿಹಿ ಸುದ್ದಿ ಒಂದು ಬಂದಿದೆ. ನೌಕರರ ಪಿಎಫ್(PF) ಹಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2000 ಕೋಟಿ ರೂಪಾಯಿ ನೀಡಲು ಸಚಿವ ಸಂಪುಟದಲ್ಲಿ ನಿರ್ಧರಿಸಿದ್ದಾರೆ. ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

2 ಸಾವಿರ ಕೋಟಿ ‘ಪಿಎಫ್’ ಹಣ ಬಿಡುಗಡೆಗೆ ಸಿಎಂ ನಿರ್ಧಾರ:

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳನ್ನು ಕಾಡುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಲು ಕರ್ನಾಟಕ ಸರ್ಕಾರವು ರೂ 2,000 ಕೋಟಿ ಸಾಲವನ್ನು ಅನುಮೋದಿಸಿದೆ. ಈ ನಿಗಮಗಳು ಪಾವತಿಸದ ಭವಿಷ್ಯ ನಿಧಿ (ಪಿಎಫ್), ಇಂಧನ ಬಿಲ್‌ಗಳು ಮತ್ತು ನಿವೃತ್ತ ಉದ್ಯೋಗಿಗಳ ಬಾಕಿ ಸೇರಿದಂತೆ 5,492 ಕೋಟಿ ಮೊತ್ತದ ಹೊಣೆಗಾರಿಕೆಗಳನ್ನು ಎದುರಿಸುತ್ತಿವೆ.
ಹೆಚ್ಚುತ್ತಿರುವ ಕಾರ್ಯಾಚರಣೆ ವೆಚ್ಚಗಳು ಮತ್ತು ಶಕ್ತಿ ಯೋಜನೆ(shakhti scheme)ಗೆ ವಿಳಂಬ ಪಾವತಿಗಳು SRTC ಗಳ ಮೇಲೆ ಹಣಕಾಸಿನ ಒತ್ತಡವನ್ನು ಉಲ್ಬಣಗೊಳಿಸಿರುವುದರಿಂದ ಈ ನಿರ್ಧಾರವು ಬಂದಿದೆ.

ಜನವರಿ 5 ರಿಂದ ಪರಿಷ್ಕೃತ ಟಿಕೆಟ್ ದರ ಜಾರಿಗೆ ಬರುವುದರ ಸುದ್ದಿಯ ಹಿನ್ನೆಲೆಯೇ, ಸಿಎಂ ಸಿದ್ದರಾಮಯ್ಯನವರು ಸಂಪುಟ ಸಭೆಯಲ್ಲಿ ಈ ಹೊಸ ನಿರ್ಧಾರವನ್ನು ಕೈಗೊಂಡಿದ್ದಾರೆ.
ಕಳೆದ ವರ್ಷ ನವೆಂಬರ್‌ನಲ್ಲಿ KSRTC, KKRTC, BMTC ಹಾಗೂ NWKRTC ಎಲ್ಲ ನಾಲ್ಕು ಸಾರಿಗೆ ನಿಗಮಗಳು ನೌಕರರ ಸುಮಾರು 2972 ಕೋಟಿ ಹಣವನ್ನು ಪಿಎಫ್ ಟ್ರಸ್ಟ್ ಗೆ ಜಮೆ ಮಾಡದೇ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಬಂದಿತ್ತು, ಈಗ ಸಾರಿಗೆ ನೌಕರರ ಪಿಎಫ್ ಟ್ರಸ್ಟ್ ಗೆ 2000 ಕೋಟಿ ಕೋಟಿ ಹಣ ನೀಡಲು ಸಂಪುಟದಲ್ಲಿ ಅನುಮೋದನೆ ದೊರೆತಿದೆ.

ಎಲ್ಲಾ ಬಸುಗಳ ಟಿಕೆಟ್ ದರವನ್ನು 15% ಅಷ್ಟು ಪರಿಷ್ಕರಿಸಿರುವುದರಿಂದ ಆದಾಯ ಹೆಚ್ಚಾಗಲಿದೆ. ಇದರಿಂದ ಯಾವುದೇ ರೀತಿಯ ಹೊರೆ ರಾಜ್ಯ ಸರ್ಕಾರಕ್ಕೆ ಉಂಟಾಗುವುದಿಲ್ಲ, ಕರ್ನಾಟಕ ಅತ್ಯುತ್ತಮ ಆರ್ಥಿಕ ಹೊಣೆಗಾರಿಕೆಯನ್ನು ಅನುಷ್ಠಾನ ಮಾಡಿರುವ ರಾಜ್ಯ ಎಂದು ಸಚಿವರಾದ ಹೆಚ್‌ ಕೆ ಪಾಟೀಲ್‌ ಅವರು ತಿಳಿಸಿದರು.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!