ಕರ್ನಾಟಕದ ಭವಿಷ್ಯ: ಕ್ವಿನ್ ಸಿಟಿ (KWIN City)
ಕರ್ನಾಟಕ ರಾಜ್ಯವು ತನ್ನ ಆರ್ಥಿಕ ಅಭಿವೃದ್ಧಿಯ ಮತ್ತೊಂದು ಪಲ್ಲಟದ ಹಾದಿಯಲ್ಲಿದ್ದು, ಬಹುಕೋಟಿ ವೆಚ್ಚದಲ್ಲಿ Knowledge, Wellbeing, and Innovation City (KWIN City) ಎಂಬ ವಿನೂತನ ಯೋಜನೆಯನ್ನು ಸ್ಥಾಪಿಸುತ್ತಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ. ಪಾಟೀಲ್ (M.B. Patil) ಅವರ ಪ್ರಕಾರ, ಇದು ರಾಜ್ಯದ ಆರ್ಥಿಕ ಪ್ರಗತಿಗೆ ಅತ್ಯಂತ ಮಹತ್ವದ ಹೆಜ್ಜೆಯಾಗಲಿದೆ. ಬೆಂಗಳೂರು ಹೊರವಲಯದ ದಾಬಸ್‌ಪೇಟೆ ಮತ್ತು ದೊಡ್ಡಬಳ್ಳಾಪುರ ಮಧ್ಯೆ ಸ್ಥಾಪನೆಯಾಗುವ ಈ ಸ್ಮಾರ್ಟ್ ನಗರವು ಜ್ಞಾನ, ಆರೋಗ್ಯ, ನಾವೀನ್ಯತೆ ಮತ್ತು ಸಂಶೋಧನೆ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ಜಾಗತಿಕ ಮಟ್ಟದಲ್ಲಿ ಮುನ್ನಡೆಸುವ ಮಹತ್ವಾಕಾಂಕ್ಷೆಯ ಯೋಜನೆ.
ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಕ್ವಿನ್ ಸಿಟಿಯ (KWIN City) ಉದ್ದೇಶ ಮತ್ತು ವಿನ್ಯಾಸ:
ಇದು ಕೇವಲ ಆಧುನಿಕ ಮೂಲಸೌಲಭ್ಯಗಳನ್ನು ಮಾತ್ರವಲ್ಲ, ಬಹಳ ದೂರದೃಷ್ಟಿಯ ಯೋಜನೆಯಾಗಿದ್ದು, ಕರ್ನಾಟಕದ ಆರ್ಥಿಕತೆಯ ಗುರಿಗಳನ್ನು ಹೂಡಿಕೆ, ತಂತ್ರಜ್ಞಾನ, ಸುಸ್ಥಿರತೆಯ ಮೂಲಕ ಸಾಧಿಸಲು ವಿನ್ಯಾಸಗೊಳ್ಳಲಾಗಿದೆ. ಇಂದಿನ ಮತ್ತು ಭವಿಷ್ಯದ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ತಂತ್ರಜ್ಞಾನ ಆಧಾರಿತ ‘ಸ್ಮಾರ್ಟ್ ಲಿವಿಂಗ್'(Smart Living) ಪರಿಕಲ್ಪನೆಯೊಂದಿಗೆ ಈ ನಗರ ಅಭಿವೃದ್ಧಿಯಾಗಲಿದೆ. ಅತ್ಯಾಧುನಿಕ ಪದ್ದತಿಗಳು ಮತ್ತು ಪರಿಸರ ಸ್ನೇಹಿ ಮೂಲಸೌಲಭ್ಯಗಳನ್ನು ಬಳಸಿ, ಜೀವನದ ಗುಣಮಟ್ಟವನ್ನು ಸುಧಾರಿಸಲು ಕ್ವಿನ್ ಸಿಟಿ (KWIN city) ಗಮನಹರಿಸಿದೆ.
ಮಹತ್ವದ ಜಿಲ್ಲೆಯ ವಿಸ್ತಾರ : (Extent of significant district)
ಜ್ಞಾನ ಜಿಲ್ಲೆಯು: ಕ್ವಿನ್ ಸಿಟಿಯು ಜಾಗತಿಕ ಶಿಕ್ಷಣದ ಕೇಂದ್ರವನ್ನಾಗಿ ಬೆಳೆಯಲು ಶ್ರೇಷ್ಟ ಶಾಲಾ ಮತ್ತು ವಿಶ್ವವಿದ್ಯಾಲಯಗಳನ್ನು ಆಕರ್ಷಿಸುವ ಗುರಿಯಲ್ಲಿದೆ. 500 ವಿದೇಶಿ ಶಿಕ್ಷಣ ಸಂಸ್ಥೆ (Foreign Educational Institution) ಗಳನ್ನು ಆಕರ್ಷಿಸಲು ಉನ್ನತ ತಂತ್ರಜ್ಞಾನವು ಸಹಕಾರಿಯಾಗಲಿದೆ. ಈ ಹೆಜ್ಜೆಯಿಂದ ಕರ್ನಾಟಕವನ್ನು ಜಾಗತಿಕ ಶಿಕ್ಷಣದ ಮುಖ್ಯಸ್ಥಳವನ್ನಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ.
ಆರೋಗ್ಯ ಜಿಲ್ಲೆ (Health District):
KWIN City-ಯಲ್ಲಿ ಜೀವ ವಿಜ್ಞಾನ ಪಾರ್ಕ್ (Life Sciences Park), ಎಷ್ಯಾದ ಶ್ರೇಷ್ಠ ವೈದ್ಯಕೀಯ ಕೇಂದ್ರಗಳಾಗಲಿವೆ. ಇದು ಆರೋಗ್ಯ ವಲಯದಲ್ಲಿ ಭಾರತ ಮತ್ತು ಜಗತ್ತಿನ ಪ್ರಮುಖ ಕೇಂದ್ರವನ್ನಾಗಿ ಕರ್ನಾಟಕವನ್ನು ರೂಪಿಸಲಿದೆ.
ನಾವೀನ್ಯತಾ ಜಿಲ್ಲೆ (Innovation District):
ಜಾಗತಿಕ ಬದಲಾವಣೆಗಳು ಮತ್ತು ಮಾರುಕಟ್ಟೆ ಬೇಡಿಕೆಗಳನ್ನು ಪೂರೈಸುವ ತಂತ್ರಜ್ಞಾನ ಮತ್ತು ಸಂಶೋಧನಾ ಕೇಂದ್ರಗಳು ಇಲ್ಲಿ ಬೆಳೆಯಲಿವೆ. ಸೆಮಿಕಂಡಕ್ಟರ್, ಅಡ್ವಾನ್ಸ್ಡ್ ಇಂಜಿನಿಯರಿಂಗ್, ಆಧುನಿಕ ತಯಾರಿಕೆ, ವೈಮಾನಿಕ ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನಗಳ ಮೂಲಕ ದೇಶದ ನಾವೀನ್ಯತೆ ವಲಯದಲ್ಲಿ ಕರ್ನಾಟಕದ ಪಾತ್ರವನ್ನು ಹೆಚ್ಚಿಸಲಾಗುತ್ತದೆ.
ಸಂಶೋಧನಾ ಜಿಲ್ಲೆ (Research District): ಜೈವಿಕ ಔಷಧ ಸಂಶೋಧನೆ (Biopharmaceutical Research), ಕ್ಲಿನಿಕಲ್ ಪ್ರಯೋಗಾಲಯಗಳು (Clinical laboratories) ಮತ್ತು ಜಾಗತಿಕ ಮಟ್ಟದ ಸಂಶೋಧನೆಗಳನ್ನು ಉತ್ತೇಜಿಸುವ ಪ್ರಯತ್ನಗಳಾಗಲಿವೆ. ಇದು ಜ್ಞಾನ ಆಧಾರಿತ ಆರ್ಥಿಕತೆಯ ಮಹತ್ವದ ಘಟಕವಾಗಲಿದೆ.
ಸ್ನೇಹಿ ಸ್ಮಾರ್ಟ್ ನಗರ (A friendly smart city) :
ಅತ್ಯಾಧುನಿಕ ತಂತ್ರಜ್ಞಾನದ ಸಮಗ್ರ ಬಳಸುವ ಮೂಲಕ, ಕ್ವಿನ್ ಸಿಟಿಯು (KWIN city) ಕೇವಲ ಆರ್ಥಿಕ ಪ್ರಗತಿಗೆ ಮಾತ್ರ ಇಪ್ಪತ್ತರಿಸಲಿಲ್ಲ, ಪರಿಸರ ಸ್ನೇಹಿ ಪದ್ದತಿಗಳ ಅನುಸರಣೆ ಮೂಲಕ ಸುಸ್ಥಿರತೆಯನ್ನು ಉತ್ತೇಜಿಸುತ್ತದೆ. ಕುಡಿಯುವ ನೀರು, ವಿದ್ಯುತ್ ಮುಂತಾದ ಮೂಲಸೌಕರ್ಯಗಳ ಲಭ್ಯತೆಯು ಈ ನಗರವನ್ನು ಭವಿಷ್ಯದ ಶ್ರೇಷ್ಠ ನಗರವನ್ನಾಗಿ ಮಾಡಲಿದೆ.
ಇನ್ನು ಕೊನೆಯದಾಗಿ ಹೇಳುವುದಾದರೆ, ಕ್ವಿನ್ ಸಿಟಿ (KWIN City) ಬೆಂಗಳೂರಿಗೆ ಬಹಳ ದೂರದೃಷ್ಟಿಯ ಯೋಜನೆಯಾಗಿದ್ದು (visionary project), ಜ್ಞಾನ(Knowledge), ಆರೋಗ್ಯ (Health), ಮತ್ತು ನಾವೀನ್ಯತೆ ವಲಯದಲ್ಲಿ ಜಾಗತಿಕ ಸ್ಥಾನಮಾನವನ್ನು ರಾಜ್ಯಕ್ಕೆ ತರಲು ಪ್ರಾಮುಖ್ಯತೆಯನ್ನಿಟ್ಟಿದೆ. ಇನ್ನು ಮತ್ತಷ್ಟು ಮಾಹಿತಿಗಾಗಿ, ಯೋಜನೆಯ ಅಧಿಕೃತ ವೆಬ್ ತಾಣ (Official Website) kwincity.com ತಾಣಕ್ಕೆ ಭೇಟಿ ನೀಡಿ ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.