ಕಾರ್ಮಿಕರಿಗೆ ಸರ್ಕಾರದಿಂದ ಸಿಗಲಿದೆ, ಮದುವೆಗೆ ₹60 ಸಾವಿರ, ಹೆರಿಗೆಗೆ ₹50 ಸಾವಿರ ಸಹಾಯಧನ.!

Picsart 24 09 22 08 25 45 640

ಸರ್ಕಾರದಿಂದ ಕಾರ್ಮಿಕರಿಗೆ ಗುಡ್ ನ್ಯೂಸ್, ಹಲವು ಯೋಜನೆಗಳ ಮೂಲಕ ಸಹಾಯಧನ ಸೌಲಭ್ಯ!

ಇಂದು ಸರ್ಕಾದಿಂದ (government) ಹತ್ತು ಹಲವು ಯೋಜನೆಗಳು ಜಾರಿಯಲ್ಲಿವೆ. ಈ ಎಲ್ಲಾ ಯೋಜನೆಗಳ ಮೂಲಕ ಜನರಿಗೆ ಸಾಲ ಸೌಲಭ್ಯ(loan facilities), ಶೈಕ್ಷಣಿಕ ನೆರವು, ಮನೆ ನಿರ್ಮಾಣ, ಮಹಿಳೆಯರಿಗೆ ಸ್ವಂತ ದುಡಿಮೆಗಾಗಿ ಸಾಲ ಸೌಲಭ್ಯ ದೊರೆಯುತ್ತದೆ. ಸರ್ಕಾರದಿಂದ ಜಾರಿಯಾಗುವ ಈ ಯೋಜನೆಗಳು ಬಹಳಷ್ಟು ಬಡ ಜನರಿಗೆ ಸಹಾಯವಾಗಿವೆ. ಹಾಗೆಯೇ ಇದೀಗ ಸರ್ಕಾರದಿಂದ ಕಾರ್ಮಿಕರಿಗೆ ಗುಡ್ ನ್ಯೂಸ್ ತಿಳಿದು ಬಂದಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಸರ್ಕಾದಿಂದ ಕಾರ್ಮಿಕರ ಕಲ್ಯಾಣಕ್ಕಾಗಿ ಹಲವು ಯೋಜನೆಗಳು :

ಸರ್ಕಾರವು ಕಾರ್ಮಿಕರ (labuors) ಕ್ಷೇಮಾಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅಸಂಘಟಿತ ಕಾರ್ಮಿಕರು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣಕ್ಕಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರ ಮುಖ್ಯ ಉದ್ದೇಶ ಕಾರ್ಮಿಕರ ಜೀವನ ಉತ್ತಮ ರೀತಿಯಲ್ಲಿ ಸಾಗಬೇಕು. ಮತ್ತು ಅವರು ಯಾವುದೇ ಸೌಲಭ್ಯಗಳಿಂದ ವಂಚಿತರಾಗಬಾರದು ಎಂಬುದಾಗಿದೆ.

ಕಾರ್ಮಿಕರೆಲ್ಲರೂ ಈ ಯೋಜನೆಯ ಅನುದಾನ ಪಡೆದುಕೊಳ್ಳಬೇಕು :

ಈ ಯೋಜನೆಗಳ ಮೂಲಕ ಹಲವಾರು ಸವಲತ್ತುಗಳು ಕಾರ್ಮಿಕರಿಗೆ ದೊರೆಯಲಿದ್ದು, ಕಾರ್ಮಿಕರ ಕುಟುಂಬದಲ್ಲಿ ಜನನದಿಂದ ಹಿಡಿದು ಮರಣದ ವರೆಗೆ ಹಲವು ಯೋಜನೆಗಳಿದ್ದು, ಅದರ ಬಗ್ಗೆ ಮಾಹಿತಿ ಪಡೆದು ಅನುದಾನ ಪಡೆದುಕೊಳ್ಳಬೇಕು ಎಂದು ವಿಜಯನಗರ ಉಪ ವಿಭಾಗದ ಕಾರ್ಮಿಕ ಅಧಿಕಾರಿ ಸೂರಪ್ಪ ಡೊಂಬಲಮತ್ತೂರ ಸಲಹೆ ನೀಡಿದ್ದಾರೆ.

ಕಾರ್ಮಿಕರಿಗೆ ಈ ಯೋಜನೆಯ ಮೂಲಕ ದೊರೆಯುವ ಸೌಲಭ್ಯಗಳು (facilities) :

ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿ ಸಾವನ್ನಪ್ಪಿದರೆ ಅಥವಾ ಅಪಘಾತವಾಗಿ ಶಾಶ್ವತ ದುರ್ಬಲತೆ ಹೊಂದಿದರೆ, ಕಾರ್ಮಿಕ ಕುಟುಂಬಕ್ಕೆ ಸರ್ಕಾರದಿಂದ ಸಹಾಯಹಸ್ತ ನೀಡಲಾಗುತ್ತದೆ.
ಫಲಾನುಭವಿ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ತಲಾ ₹ 60 ಸಾವಿರದವರೆಗೆ ಸಹಾಯಧನ ದೊರೆಯುತ್ತಾದೆ.
ಕಾರ್ಮಿಕರ ಮಹಿಳೆಗೆ ಮೊದಲ ಎರಡು ಹೆರಿಗೆಗೆ ತಲಾ ₹ 50 ಸಾವಿರ ಸಹಾಯಧನ ದೊರೆಯುತ್ತದೆ.
ಫಲಾನುಭವಿಯ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಾಯಧನ ಲಭ್ಯವಿದೆ.
ನೋಂದಾಯಿತ ಫಲಾನುಭವಿ ಹಾಗೂ ಅವರ ಅವಲಂಭಿತರಿಗೆ ₹ 300 ರಿಂದ ₹ 20 ಸಾವಿರದವರೆಗೆ ಸಹಾಯಧನ ದೊರೆಯುತ್ತದೆ.
ಕಾರ್ಮಿಕರು ಮರಣ ಹೊಂದಿದ್ದಲ್ಲಿ ₹ 5 ಲಕ್ಷ, ಸಂಪೂರ್ಣ ಶಾಶ್ವತ ದುರ್ಬಲತೆಯಾದಲ್ಲಿ ₹2 ಲಕ್ಷ, ಭಾಗಶಃ ಶಾಶ್ವತ ದುರ್ಬಲತೆಯಾದಲ್ಲಿ ₹ 1ಲಕ್ಷದವರೆಗೆ ಸಹಾಯಧನ ನೀಡಲಾಗುತ್ತದೆ. ಔದ್ಯೋಗಿಕ ಕಾಯಿಲೆಗಳ ಚಿಕಿತ್ಸೆಗಳಿಗೆ ₹ 2 ಲಕ್ಷದವರೆಗೆ ವೈದ್ಯಕೀಯ ವೆಚ್ಚದ ಸಹಾಯಧನ.
ಮಹಿಳಾ ಫಲಾನುಭವಿ ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಆಕೆಯ ಮಗುವಿನ ಶಾಲಾ ಪೂರ್ವ ಶಿಕ್ಷಣ ಮತ್ತು ಪೌಷ್ಟಿಕತೆಗಾಗಿ ಮಗುವಿಗೆ ಮೂರು ವರ್ಷಗಳು ತುಂಬುವವರೆಗೆ ವಾರ್ಷಿಕ ₹6,000 ಸಹಾಯಧನ.
ಮೂರು ವರ್ಷ ಸದಸ್ಯತ್ವದೊಂದಿಗೆ 60 ವರ್ಷ ಪೂರೈಸಿದ ಫಲಾನುಭವಿಗೆ ಮಾಸಿಕ ₹3,000 ವರೆಗೆ ಸಹಾಯಧನ.
ಕುಟುಂಬ ಪಿಂಚಣಿ ಸೌಲಭ್ಯ ಅಡಿಯಲ್ಲಿ ಮೃತ ಪಿಂಚಣಿದಾರರ ಪತಿ, ಪತ್ನಿಗೆ ಮಾಸಿಕ ₹1,500 ವರೆಗೆ ಸಹಾಯಧನ ಲಭ್ಯವಿದೆ.
ದುರ್ಬಲತೆ ಪಿಂಚಣಿ(pension) ಅಡಿಯಲ್ಲಿ ನೋಂದಾಯಿತ ಫಲಾನುಭವಿಯು ಕಾಯಿಲೆಗಳಿಂದ ಅಥವಾ ಕಟ್ಟಡ ಕಾಮಗಾರಿಗಳ ಅಪಘಾತದಿಂದ ಶಾಶ್ವತ, ಭಾಗಶಃ ಅಂಗವಿಕಲತೆ ಹೊಂದಿದ್ದರೆ ಮಾಸಿಕ ₹2,000, ಪಿಂಚಣಿ ಹಾಗೂ ಶೇಕಡವಾರು ದುರ್ಬಲತೆಯನ್ನಾಧರಿಸಿ ₹ 2 ಲಕ್ಷದವರೆಗೆ ಅನುಗ್ರಹ ರಾಶಿ ಸಹಾಯಧನ ನೀಡಲಾಗುತ್ತದೆ.
ಅಂತ್ಯಕ್ರಿಯೆ ವೆಚ್ಚಕ್ಕಾಗಿ ₹4,000 ಹಾಗೂ ಅನುಗ್ರಹ ರಾಶಿ ₹ 71,000 ಸಹಾಯಧನ ಸೌಲಭ್ಯಗಳು ನೀಡಲಾಗುವುದು.

ಗಿಗ್ ಕಾರ್ಮಿಕರ(Gig workers) ಸೌಲಭ್ಯಗಳು :

ಗಿಗ್‌ ಕಾರ್ಮಿಕರು ಅಪಘಾತದಿಂದ ಮರಣ ಹೊಂದಿದಲ್ಲಿ ವಿಮಾ ಪರಿಹಾರ ₹2 ಲಕ್ಷ ಹಾಗೂ ಜೀವ ವಿಮಾ ₹ 2 ಲಕ್ಷ ಸೇರಿ ಒಟ್ಟು ₹ 4 ಲಕ್ಷಗಳು ಅಪಘಾತದಿಂದ ಶಾಶ್ವತ ದುರ್ಬಲತೆ ಹೊಂದಿದಲ್ಲಿ ₹2 ಲಕ್ಷಗಳವರೆಗೆ ಸಹಾಯಧನ ಆಸ್ಪತ್ರೆ ವೆಚ್ಚ ಮರುಪಾವತಿ ₹ 1 ಲಕ್ಷಗಳ ವರೆಗೆ (ಅಪಘಾತ ಪ್ರಕರಣಗಳಲ್ಲಿ ಮಾತ್ರ) ಜೀವ ವಿಮಾ ₹ 2ಲಕ್ಷ ನೀಡಲಾಗುತ್ತದೆ.

ದಿನ ಪತ್ರಿಕೆ (daily newspaper) ವಿತರಣಾ ಕಾರ್ಮಿಕರ ಸೌಲಭ್ಯಗಳು:

ಅಪಘಾತದಿಂದ ಮರಣ ಹೊಂದಿದಲ್ಲಿ ₹ 2 ಲಕ್ಷ ಅಪಘಾತದಿಂದ ಶಾಶ್ವತ ದುರ್ಬಲತೆ ಹೊಂದಿದಲ್ಲಿ ₹ 2 ಲಕ್ಷಗಳವರೆಗೆ (ಶೇಕಡ ವಾರು ದುರ್ಬಲತೆ ಆಧಾರದ ಮೇಲೆ) ಅಪಘಾತ ಅಥವಾ ಗಂಭೀರ ಕಾಯಿಲೆ ಅಥವಾ ಗಂಭೀರ ಅನಾರೋಗ್ಯಕ್ಕೆ ತುತ್ತಾದಲ್ಲಿ ಆಸ್ಪತ್ರೆ ವೆಚ್ಚ ಮರುಪಾವತಿ ₹ 1ಲಕ್ಷಗಳವರೆಗೆ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!