ಬ್ರೇಕಿಂಗ್ ನ್ಯೂಸ್ : ಸುಳ್ಳು ದಾಖಲೆ ಕೊಟ್ಟು ಕಾರ್ಮಿಕ ಕಾರ್ಡ್ ಮಾಡಿಸಿಕೊಂಡವರನ್ನು ಪತ್ತೇ ಮಾಡಲು ಕ್ರಮ ಜಾರಿ

ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ನಕಲಿ ದಾಖಲಾತಿ ಸೃಷ್ಠಿಸಿ ಗುರುತಿನ ಚೀಟಿ ಪಡೆದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಲ್ಲದವರ ಕಾರ್ಡುಗಳನ್ನು ರದ್ದುಪಡಿಸಲು, ಬೋಗಸ್‌ ಕಾರ್ಡ್ ನೋಂದಣಿ ರದ್ದತಿ ಅಭಿಯಾನ ಕೈಗೊಳ್ಳುವ ಕುರಿತಾದ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ನಕಲಿ ದಾಖಲಾತಿ ಸೃಷ್ಟಿಸಲಾದ ಕಾರ್ಮಿಕ ಕಾರ್ಡ್ಗಳನ್ನು ರದ್ದುಗೊಳಿಸುವ ಯೋಜನೆ

ಕರ್ನಾಟಕ ಸರ್ಕಾರ ಕಾರ್ಮಿಕ ಇಲಾಖೆಯ ಕಡೆಯಿಂದ ಈ ಅಭಿಯಾನವನ್ನು ಕೈಗೊಳ್ಳಲಾಗಿದೆ. ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ 04-01-2023 ರಂದು ಈ ಅಧಿಸೂಚನೆಯನ್ನು ಹೊರಡಿಸಿದ್ದಾರೆ. ನಕಲಿ ದಾಖಲಾತಿ ಸೃಷ್ಟಿಸಲಾದ ಕಾರ್ಮಿಕ ಕಾರ್ಡ್ಗಳನ್ನು ರದ್ದುಗೊಳಿಸುವ ಯೋಜನೆ (Fake labour registration scam uncovered): ಮೇಲ್ಕಂಡ ಉಲ್ಲೇಖದಲ್ಲಿ ಮಂಡಳಿಯಡಿ ಫಲಾನುಭವಿಗಳೆಂದು ನೋಂದಾಯಿತರಾಗಿ ವಿವಿಧ ಧನಸಹಾಯಗಳನ್ನು ಪಡೆಯುತ್ತಿರುವ ಅನರ್ಹ ಕಾರ್ಮಿಕರನ್ನು ಪರಿಶೀಲಿಸಿ, ಸದರಿಯವರ ನೋಂದಣಿಯನ್ನು ಫ್ರೀಜ್/ರದ್ದು ಮಾಡುವಂತೆ ಹಾಗೂ ಮಂಡಳಿಯ ಯಾವುದೇ ಸೌಲಭ್ಯಗಳನ್ನು ನೀಡದಂತೆ ತಡೆಹಿಡಿಯಲು ಸೂಚಿಸಲಾಗಿತ್ತು.

Untitled 1 scaled

ಇದನ್ನೂ ಓದಿ : ದ್ವಿಚಕ್ರ ವಾಹನ ಖರೀದಿಗೆ 50 ಸಾವಿರ ರೂಪಾಯಿ ಸಹಾಯಧನ ನೀಡಲು ಅರ್ಜಿ ಆಹ್ವಾನ

ಇದನ್ನೂ ಓದಿ: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ಯಮಹಾ R15 – 2023

ಮುಂದುವರೆದು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಲ್ಲದವರು ನಕಲಿ ದಾಖಲಾತಿ ಸೃಷ್ಠಿಸಿ, ಕಾರ್ಮಿಕರ ಗುರುತಿನ ಚೀಟಿ ಪಡೆದು ಸೌಲಭ್ಯಗಳನ್ನು ಪಡೆಯುತ್ತಿರುವುದು ಮಂಡಳಿಯ ಗಮನಕ್ಕೆ ಬಂದಿರುತ್ತದೆ. ಹಾಗಾಗೀ ದಿನಾಂಕ: 25/1/2023 ರಿಂದ 25/2/2023 ರವರೆಗೆ ಬೋಗಸ್‌ ಕಾರ್ಡು ನೋಂದಣಿ ಅಭಿಯಾನವನ್ನು ಈ ಕೆಳಕಂಡ ಮಾರ್ಗಸೂಚಿಗಳೊಂದಿಗೆ ಹಮ್ಮಿಕೊಂಡು ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸ ನಿರ್ವಹಿಸದೇ ಕಾರ್ಮಿಕರ ಗುರುತಿನ ಚೀಟಿ ಪಡೆದಿರುವ ನೋಂದಣಿಯನ್ನು ರದ್ದುಪಡಿಸಲು ಹಾಗೂ ಕಾನೂನನ್ವಯ ಕ್ರಮ ಕೈಗೊಳ್ಳಲು, ಕರ್ನಾಟಕ ಸರ್ಕಾರ ಕಾರ್ಮಿಕ ಇಲಾಖೆಯು ತಿಳಿಸಿದೆ.

ನಕಲಿ ಕಾರ್ಮಿಕ ಕಾರ್ಡ್ ರದ್ದುಗೊಳಿಸುವ ಅಭಿಯಾನದ ಮಾರ್ಗಸೂಚಿಗಳು ( Guidelines for Fake Labor Card Abolition Campaign):

Picsart 23 01 26 03 26 30 336

 ನಕಲಿ ದಾಖಲಾತಿ ಸೃಷ್ಠಿಸಿ ಗುರುತಿನ ಚೀಟಿ ಪಡೆದಿರುವ ಫಲಾನುಭವಿಗಳು ಸ್ವ-ಇಚ್ಛೆಯಿಂದ ಮಂಡಳಿಗೆ ಗುರುತಿನ ಚೀಟಿಯನ್ನು ಹಿಂತಿರುಗಿಸಿದ್ದಲ್ಲಿ ಮುಂದಿನ ಕಾನೂನು ಕ್ರಮವನ್ನು ಕೈಬಿಡಲಾಗುವುದು ಎಂದು ಅಭಿಯಾನ ಪೂರ್ವದಲ್ಲಿ ಸಂಬಂಧಪಟ್ಟ ನೋಂದಣಾಧಿಕಾರಿ/ಕಾರ್ಮಿಕ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯ ಮೂಲಕ ಪ್ರಚಾರ ಮಾಡಲಾಗುವುದು.

* ಪ್ರತಿ ಜಿಲ್ಲೆಯ ತಾಲೂಕುಗಳಲ್ಲಿ ಕಾರನಿರ್ವಹಿಸುತ್ತಿರುವ ಹಿರಿಯ/ಕಾರ್ಮಿಕ ನಿರೀಕ್ಷಕರನ್ನು ಒಳಗೊಂಡ ತಂಡಗಳನ್ನು ರಚಿಸುವುದು. ಪ್ರತಿ ತಂಡದಲ್ಲಿ ಕನಿಷ್ಠ ಮೂರು ನಿರೀಕ್ಷಕರು ಒಳಗೊಂಡಂತಿರಬೇಕು. ಆ ತಂಡದಲ್ಲಿ ಪರಿಶೀಲಿಸಲ್ಪಡುವ ವೃತ್ತದ/ತಾಲೂಕಿನ ನಿರೀಕ್ಷಕರು ಇರತಕ್ಕದಲ್ಲ. ಸದರಿ ತಂಡವು ಬೋಗಸ್ ಕಾರ್ಡುಗಳಿಗೆ ಸಂಬಂಧಿಸಿದಂತೆ ಪರಿಶೀಲಿಸುವುದು ಹಾಗೂ ಸಂಬಂಧಪಟ್ಟ ಜಿಲ್ಲೆಯ ಕಾರ್ಮಿಕ ಅಧಿಕಾರಿಗಳು ಸದರಿ ತಂಡಗಳ ಮೇಲ್ವಿಚಾರಣೆ ನಡೆಸಿ ಮಾರ್ಗದರ್ಶನ ನೀಡುವುದು.

telee

* ಅಭಿಯಾನದಲ್ಲಿ ಪ್ರಥಮವಾಗಿ ಪ್ರತಿ ತಾಲೂಕಿನಲ್ಲಿ ಗಾರೆಸಹಾಯಕರು ಎಂದು ನೋಂದಾಯಿತರಾಗಿರುವ ಫಲಾನುಭವಿಗಳ ವಿವರಗಳನ್ನು ಆದ್ಯತೆ ಮೇರೆಗೆ ಪರಿಶೀಲಿಸಲಾಗುವುದು. (ರಾಜ್ಯಾದ್ಯಂತ ಸುಮಾರು 1745402 ಕಾರ್ಮಿಕರು ಗಾರೆಸಹಾಯಕರೆಂದು ನೋಂದಣಿಯಾಗಿದ್ದು, ಗಾರೆ ಸಹಾಯಕ ಎಂಬ ವೃತ್ತಿಯಲ್ಲಿಯೇ ಹೆಚ್ಚಿನ ಬೋಗಸ್ ನೋಂದಣಿಯಾಗುತ್ತಿರುವುದು ಮೇಲ್ನೋಟಕ್ಕೆ ಮಂಡಳಿಯ ಗಮನಕ್ಕೆ ಬಂದಿರುತ್ತದೆ)

* ಗ್ರಾಮ/ಯಾವುದೇ ಸ್ಥಳಕ್ಕೆ ಪರಿಶೀಲನೆ ಸಂದರ್ಭದಲ್ಲಿ ಅಗತ್ಯವಿದ್ದಲ್ಲಿ ಪೊಲೀಸ್  ಇಲಾಖೆ ಸೇರಿದಂತೆ ಇತರೆ ಇಲಾಖಾ ಅಧಿಕಾರಿಗಳ ಸಹಕಾರ ಮತ್ತು ಮಾರ್ಗದರ್ಶನವನ್ನು ಪಡೆಯಲಾಗುವುದು.

* ಪರಿಶೀಲನೆಗೆ ಒಳಗಾದ ಫಲಾನುಭವಿಯು ನಕಲು ದಾಖಲಾತಿಯನ್ನು ಸೃಷ್ಠಿಸಿ ನೋಂದಣಿಯಾಗಿರುವುದು ಕಂಡುಬಂದಲ್ಲಿ, ಸರ್ಕಾರದ ಅಧಿಸೂಚನೆ ದಿನಾಂಕ:18-08-2022ರ ತಿದ್ದುಪಡಿ ನಿಯಮದ ಪ್ರಕಾರ ಫಲಾನುಭವಿಯ ನೋಂದಣಿಯನ್ನು ‘ಫ್ರೀಜ್’ ಮಾಡುವುದು ಮತ್ತು ಸದರಿ ಫಲಾನುಭವಿಯ ವೈಯಕ್ತಿಕ ಕಡತದಲ್ಲೂ ರದ್ದತಿಯನ್ನು ದಾಖಲಿಸಲಾಗುವುದು.

* ಫಲಾನುಭವಿಯು ನಕಲು ದಾಖಲಾತಿಗಳನ್ನು ಸೃಷ್ಟಿಸಿರುವುದು ಪರಿಶೀಲನಾ ವೇಳೆಯಲ್ಲಿ, ಪರಿಶೀಲನಾ ತಂಡಕ್ಕೆ ತಿಳದುಬಂದು ತಾವು ನಿಯಮಡದಿ ಸದರಿ ಕಾರ್ಡನ್ನು ರದ್ದು ಅಮಾನತ್ತುಗೊಳಿಸಿರುವುದನ್ನು ಪ್ರಶ್ನಿಸಲು ಸಂಬಂಧಪಟ್ಟ ಫಲಾನುಭವಿಗೆ ತಿದ್ದುಪಡಿ  ಅವಕಾಶವಿರುವುದರಿಂದ, ಪ್ರಶ್ನಿಸಲಾದ ಫಲಾನುಭವಿಯ ನೋಂದಣಿಗೆ ಸಂಬಂಧಿಸಿದಂತೆ ಮೇಲ್ಮನವಿ ಪ್ರಾಧಿಕಾರದ ತೀರ್ಮಾನದಂತೆ ಮುಂದಿನ ಕ್ರಮಕೈಗೊಳ್ಳುವುದು.

Picsart 23 01 26 03 25 52 011

* ಅಭಿಯಾನದ ಸಂದರ್ಭದಲ್ಲಿ ಬೋಗಸ್ ಫಲಾನುಭವಿಯು ಸ್ವ-ಇಚ್ಛೆಯಿಂದ ನಕಲು ನೋಂದಣಿಯನ್ನು ಒಪ್ಪಿಕೊಂಡು ಗುರುತಿನ ಚೀಟಿಯನ್ನು ಹಿಂದಿರುಗಿಸಿದ್ದಲ್ಲಿ, ಸದರಿಯವರಿಂದ ಒಪ್ಪಿಗೆ ಪತ್ರವನ್ನು ಪಡೆದು ಅವರ ಮೇಲಿನ ಮುಂದಿನ ಕಾನೂನು ಕ್ರಮವನ್ನು ಕೈಬಿಡುವುದು ಮತ್ತು ನೋಂದಣಿ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಫ್ರೀಜ್/ರದ್ದು ಮಾಡುವುದು ಮತ್ತು ಕಡತದಲ್ಲಿ ರದ್ದುಗೊಳಿಸುವುದು ಹಾಗೂ ಈಗಾಗಲೇ ಪಡೆದಿರುವ ವಿವಿಧ ಸೌಲಭ್ಯಗಳನ್ನು ವಸೂಲಿ ಮಾಡಲು ಕ್ರಮಕೈಗೊಳ್ಳುತ್ತಾರೆ.

* ಹಿರಿಯ ಕಾರ್ಮಿಕ ನಿರೀಕ್ಷಕರು/ಕಾರ್ಮಿಕ ನಿರೀಕ್ಷಕರು, ಬೋಗಸ್ ಕಾರ್ಮಿಕರನ್ನು ನೋಂದಾಯಿಸಲು ಉದ್ಯೋಗ ಪ್ರಮಾಣ ಪತ್ರ ನೀಡುವ/ಬೋಗಸ್ ಕಾರ್ಮಿಕರನ್ನು ನೋಂದಾಯಿಸುವ ವ್ಯಕ್ತಿ/ಸಂಸ್ಥೆ/ಪ್ರಾಧಿಕಾರ/ಸಂಘಟಣಿಗಳು ಉದ್ಯೋಗ ಪ್ರಮಾಣ ಪತ್ರ ನೀಡುವುದನ್ನು ರದ್ದುಗೊಳಿಸುವುದು/ಅಮಾನ್ಯಗೊಳಿಸುವುದು. ಅಗತ್ಯವಿದ್ದಲ್ಲಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಪೂರ್ವಾನುಮತಿ ಪಡೆದು ಸದರಿಯವರ ವಿರುದ್ಧ ಸಕ್ಷಮ ಪ್ರಾಧಿಕಾರದ ಮುಂದೆ ಮೊಕದ್ದಮೆಯನ್ನು ದಾಖಲಿಸಲಾಗುವುದು.

ಇದನ್ನೂ ಓದಿ : ಕೇವಲ 40 ಸಾವಿರ ಕಟ್ಟಿ ಮಾರುತಿ ಆಲ್ಟೊ ಕಾರ್ ನಿಮ್ಮದಾಗಿಸಿಕೊಳ್ಳಿ

ಇದನ್ನೂ ಓದಿ : SSLC ಆದವರಿಗೆ ಕೇಂದ್ರದಿಂದ 11409 ಹುದ್ದೆಗಳ ಬೃಹತ್ ನೇಮಕಾತಿ 2023

ನಿಮಗೆ ತಿಳಿದಿರುವವರು ನಕಲಿ ಕಾರ್ಮಿಕ ಕಾರ್ಡನ್ನು ಹೊಂದಿದ್ದರೆ ಈ ಕೂಡಲೇ ಅವರನ್ನು ಇಲಾಖೆಗೆ ಹಿಂತಿರುಗಿಸುವಂತೆ ಸಲಹೆ ನೀಡಿ. ಇದರಿಂದಾಗಿ ಅವರ ಮೇಲೆ ಕಾನೂನು ಕ್ರಮಗಳನ್ನು ಕೈತೆಗೆದುಕೊಳ್ಳುವುದು ತಪ್ಪುತ್ತದೆ. ಇಂತಹ ಸಹಾಯಕಾರಿಯಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೂ ಹಾಗೂ ಕಾರ್ಮಿಕ ಕಾರ್ಡ್ಗಳನ್ನು ಹೊಂದಿರುವ ಬಂಧುಗಳಿಗೂ ಶೇರ್ ಮಾಡಿ, ಧನ್ಯವಾದಗಳು.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

telee

ವಿದ್ಯಾರ್ಥಿಗಳಿಗೆ ಲಭ್ಯವಿರುವ ಸ್ಕಾಲರ್ಶಿಪ್ ಗಳ ಮಾಹಿತಿ

  1. SSP ಸ್ಕಾಲರ್ಶಿಪ್ : Click Here
  2. ಧರ್ಮಸ್ಥಳ ಸುಜ್ಞಾನನಿಧಿ ಸ್ಕಾಲರ್ಶಿಪ್: Click Here
  3. ರೈತ ವಿದ್ಯಾನಿಧಿ ಸ್ಕಾಲರ್ಶಿಪ್: Click Here
  4. ಕೇಂದ್ರ ಸರ್ಕಾರದ ಲೇಬರ್ ಕಾರ್ಡ್ ಸ್ಕಾಲರ್ಶಿಪ್: Click Here
  5. ಎಚ್‌ಡಿಎಫ್‍ಸಿ ಬಡ್ತೆ ಕದಂ: Click Here
  6. ಹೊಸ ಕೈಂಡ್ ಸ್ಕಾಲರ್ಶಿಪ್ ಕೋಟಕ್ ಕನ್ಯಾ ಸ್ಕಾಲರ್ಶಿಪ್: Click Here
  7. ವಿದ್ಯಾಸಿರಿ ಸ್ಕಾಲರ್ಶಿಪ್: Click Here
  8. ಕ್ರೆಡಿಟ್ ಸ್ವಿಸ್ ಸ್ಕಾಲರ್ಶಿಪ್ 2022 : Click Here
  9. ಲದೂಮಾ ದಮೇಚ ಯುವಾ ಸ್ಕಾಲರ್ಶಿಪ್ 2022 : Click Here
  10. ಫೆಡರಲ್ ಬ್ಯಾಂಕ್ ಸ್ಕಾಲರ್ಶಿಪ್ 2022: Click Here
  11. ಕೋಲ್ಗೇಟ್ ಸ್ಕಾಲರ್ಶಿಪ್ 2022-23: Click Here
  12. ಜಿಂದಾಲ್ ಸ್ಕಾಲರ್ಶಿಪ್ 2022: Click Here
  13. SSP ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ: Click Here

app download scaled

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

ಆಧಾರ್ ನಂಬರ್ ‌ ಅಥವಾ ರೇಷನ್ ಕಾರ್ಡ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನಾ ಮಾಹಿತಿ ಚೆಕ್ ಮಾಡಿ

ರೇಷನ್ ಕಾರ್ಡ್ ಅಥವಾ ಆಧಾರ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನದ ಪಟ್ಟಿಯಲ್ಲಿರುವ ಹೆಸರನ್ನು ಹೇಗೆ ಚೆಕ್ ಮಾಡಿಕೊಳ್ಳುವುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗುವುದು. ಹೌದು ಇದು ಒಂದು ಕನ್ನಡದ ಜನತೆಗೆ ಸಿಹಿ ಸುದ್ದಿಯಾಗಿದೆ.
ಸ್ಟೋರ್ ರೈತರು ತಮ್ಮ ಬೆಳೆಯನ್ನು ಹಾನಿ ಮಾಡಿಕೊಂಡು ಅಗಾಧದಲ್ಲಿದ್ದಾರೆ, ಇದಕ್ಕಾಗಿ ರಾಜ್ಯ ಸರ್ಕಾರವು
ಒಂದು ಉತ್ತಮವಾದ ನಿರ್ಧಾರವನ್ನು ತೆಗೆದುಕೊಂಡಿದೆ ಅದೇನೆಂದರೆ ಬೆಳೆ ಸಾಲವನ್ನು ಮನ್ನಾ ಮಾಡುವುದು.
ಅದರ ಜೊತೆಗೆ ಬೆಳೆ ಸಾಲವನ್ನು ಮನ್ನಾ ಮಾಡಿರುವ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ, ಇದು 2018ರ
ಬೆಳೆ ಸಾಲದ ಮನ್ನಾದ ಪಟ್ಟಿಯಾಗಿದೆ.

ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.needsofpublic.in/crop-loan-waiver-kannada/

ನಿಮ್ಮ ಜಾಗ ಹೊಲ ಗದ್ದೆಗಳ ಸಂಪೂರ್ಣ ಸರ್ವೇ ಸ್ಕೆಚ್ಚ್ ನಿಮ್ಮ ಪೋನಲ್ಲೆ ಉಚಿತವಾಗಿ ಪಡೆಯಿರಿ

ನಾವು ಭೂಮಿಯ ನಕ್ಷೆ, ಸರ್ವೆ ನಂಬರ್, ಭೂಮಿ ಒತ್ತುವರಿ ಆಗಿದ್ದನ್ನು ನೋಡಲು ದಿಶಾಂಕ್ ಆಪ್ ಅನ್ನು ಬಳಸಿಕೊಂಡು ಹೇಗೆ ಇವುಗಳನ್ನು ತಮ್ಮ ಫೋನ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ  ನೋಡಿಕೊಳ್ಳುವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುವುದು. ಹೌದು ಇದು ರೈತರಿಗೆ ಒಂದು ಸಂತಹಸದ ಸುದ್ದಿ ಅಂತನೇ ಹೇಳಬಹುದು, ಏಕೆಂದರೆ ಮೊದಲೆಲ್ಲಾ ಸರ್ವೆ ನಂಬರನ್ನು ತಿಳಿದುಕೊಳ್ಳಲು ಅಥವಾ ಒತ್ತುವರಿ  ಜಾಗದ ಬಗ್ಗೆ ವಿಚಾರಿಸಲು ಸರ್ವೇಯರ್ ನನ್ನು ಕರೆಯಬೇಕಾಗಿತ್ತು. ಆದರೆ ಇನ್ನು ಮುಂದೆ ಅಂತ ತಲೆಬಿಸಿ ಕೆಲಸ ಇಲ್ಲ. ನೀವು ಈ ಎಲ್ಲಾ ವಿಷಯಗಳ ಬಗ್ಗೆ ಕೂತಲ್ಲಿಯೇ ತಮ್ಮ ಮೊಬೈಲ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ ದಿಶಾಂಕ್ ಆಪ್ (Dishank app)ಇಂದ ತಿಳಿದುಕೊಳ್ಳಬಹುದು. ಇದರಿಂದಾಗಿ ನೀವು ತುಂಬಾ ಸಮಯವನ್ನು ಒಳಿತು ಮಾಡಬಹುದು ಅದಲ್ಲದೆ ಕಚೇರಿಗಳಿಗೆ, ಆಫೀಸ್ ಗಳಿಗೆ ಅಲೆದಾಡುವ ಸಂದರ್ಭ ಬರುವುದಿಲ್ಲ.

ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.needsofpublic.in/dishank-app-kannada/

ನಿಮ್ಮ ಜಮೀನಿನ ಪಹಣಿ (ಆರ್ ಟಿ ಸಿ ಉತಾರ) ಮತ್ತು ವರ್ಗಾವಣೆ ಸ್ಥಿತಿ ಮೊಬೈಲ್ ನಲ್ಲೇ ಚೆಕ್ ಮಾಡಿ

ನಿಮ್ಮ ಜಮೀನಿನ ಪಹಣಿ ಯಾವ ವರ್ಷದಿಂದ ತಮ್ಮ ತಮ್ಮ ಹೆಸರಿಗೆ ವರ್ಗಾವಣೆಯಾಗಿದೆ , ಮತ್ತು ನಿಮ್ಮ ಜಮೀನಿನ ಪಹಣಿ ಅಥವಾ ಆರ್ ಟಿ ಸಿ ಉತಾರವನ್ನ ಹೇಗೆ ನೋಡುವುದು ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನದ ಬಗ್ಗೆ ಸಂಪೂರ್ಣವಾಗಿ ಮಾಹಿತಿ ತಿಳಿಸಲಾಗುವುದು. ಇದು ರೈತರಿಗೆ ಒಂದು ಸಂತಸದ ವಿಷಯ ಎಂದು ತಿಳಿಸಬಹುದಾಗಿದೆ. ಏಕೆಂದರೆ ರೈತರು ಕಚೇರಿಗೆ ತೆರಳಿ ತಮ್ಮ ಪಹಣಿಯು ಯಾವ ವರ್ಷವದಿಂದ ತಮಗೆ ವರ್ಗಾವಣೆಯಾಗಿದೆ ಎಂಬುವುದರ ಮಾಹಿತಿಯನ್ನು ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ, ಏಕೆಂದರೆ ಅವರು ಕೂತಲಿಯೇ ಮೊಬೈಲ್ ಮೂಲಕ ತಮ್ಮ ಪಹಣಿ ಯಾವ ವರ್ಷದಿಂದ ತಮಗೆ ವರ್ಗಾವಣೆ ಆಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.needsofpublic.in/view-rtc-in-mobile-phone/

ಇದನ್ನೂ ಓದಿ:

25 ಲಕ್ಷದವರೆಗೆ ಸಾಲ ಸೌಲಭ್ಯ 35% ಸಬ್ಸಿಡಿ ಸಿಗುತ್ತೆ : PMEGP Loan Scheme 2022, ಅರ್ಜಿ ಸಲ್ಲಿಸುವುದು ಹೇಗೆ ?

ಖಾಲಿ ಜಾಗ, ಗುಡಿಸಲು, ಹಳೆ ಮನೆ ಇದ್ದವರಿಗೆ ಉಚಿತ ಮನೆ ಕಟ್ಟಿಸಲು ಅವಕಾಶ : ಬಸವ ವಸತಿ ಯೋಜನೆ 2022

ಗೂಗಲ್ ಪೇ ಲೋನ್ : ಗೂಗಲ್ ಪೇ ನಲ್ಲಿ 8 ಲಕ್ಷ ರೂಪಾಯಿ ಸಾಲ ಸೌಲಭ್ಯ : ಈಗಲೇ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!