ಕಲಿಕಾ ಭಾಗ್ಯ ಯೋಜನೆ 2024: ಕಾರ್ಮಿಕ ಮಕ್ಕಳ ಶಿಕ್ಷಣಕ್ಕೆ ದಾರಿದೀಪ
ಕರ್ನಾಟಕ ಸರ್ಕಾರವು, ಸಾಮಾಜಿಕ ನ್ಯಾಯವನ್ನು ಬಲಪಡಿಸುವ ಉದ್ದೇಶದಿಂದ, ಬಡ ಕುಟುಂಬಗಳಿಗೆ ಶೈಕ್ಷಣಿಕ ಸಹಾಯಧನ ಒದಗಿಸುವ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳಲ್ಲಿ ಒಂದು ಪ್ರಮುಖ ಯೋಜನೆ ಎಂದರೆ “ಕಲಿಕಾ ಭಾಗ್ಯ ಯೋಜನೆ(Kalika Bhagya Yojana)”labour card scholarship. ಈ ಯೋಜನೆಯು ಕಾರ್ಮಿಕ ಕುಟುಂಬಗಳ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಲು ಸರ್ಕಾರದಿಂದ ಮಾಡುತ್ತಿರುವ ಮಹತ್ವದ ಪ್ರಯತ್ನವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಕಲಿಕಾ ಭಾಗ್ಯ ಯೋಜನೆಯ (Kalika Bhagya Yojana) ಅವಶ್ಯಕತೆ ಕಟ್ಟಡ ಕಾರ್ಮಿಕರ ಮಕ್ಕಳು ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಯ ಕಾರಣದಿಂದ ಬಾಯಾರಿಕೆ, ನಿರಾಸೆಯಿಂದ ಉನ್ನತ ಶಿಕ್ಷಣವನ್ನು ತಲುಪಲು ಸಾಧ್ಯವಾಗದೆ ಇರುವಂತಹ ಸ್ಥಿತಿಯಲ್ಲಿ, ಕಲಿಕಾ ಭಾಗ್ಯ ಯೋಜನೆಯು ಅವರ ಭವಿಷ್ಯವನ್ನು ರೂಪಿಸುತ್ತಿದೆ. ಈ ಯೋಜನೆಯಡಿ ಕಾರ್ಮಿಕರ ಮಕ್ಕಳು ಶಾಲೆಯಿಂದ ಪ್ರಾರಂಭಿಸಿ ಪದವಿ ಹಾಗೂ ಸ್ನಾತಕೋತ್ತರ ಪದವಿಗಳವರೆಗೆ ಶೈಕ್ಷಣಿಕ ಧನ ಸಹಾಯ ಪಡೆಯಲು ಅರ್ಹರಾಗಿರುತ್ತಾರೆ.
ಯಾರು ಅರ್ಹರು?
ಈ ಯೋಜನೆಯು ಕರ್ನಾಟಕ ರಾಜ್ಯದಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಮಾತ್ರ ಅವಕಾಶ ನೀಡುತ್ತದೆ. ಅರ್ಜಿ ಸಲ್ಲಿಸಲು,ತಂದೆ ಅಥವಾ ತಾಯಿಯು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯಲ್ಲಿ ನೋಂದಾಯಿತರಾಗಿರಬೇ ಕು.
ಯಾರಿಗೆಲ್ಲ ವಿದ್ಯಾರ್ಥಿವೇತನ:
1 ರಿಂದ 4ನೇ ತರಗತಿ ವಿದ್ಯಾರ್ಥಿಗಳ ಪೈಕಿ ಗಂಡು ಮಕ್ಕಳಿಗೆ 3 ಸಾವಿರ, ಹೆಣ್ಣು ಮಕ್ಕಳಿಗೆ 4 ಸಾವಿರ ವಾರ್ಷಿಕ ಸಹಾಯಧನ ಇದೆ. ಹಾಗೆಯೇ 5-8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಬೇರೆ ಪ್ರಮಾಣ, 9-10ನೇ ತರಗತಿ ವಿದ್ಯಾರ್ಥಿಗಳಿಗೆ ಬೇರೆ ಪ್ರಮಾಣ, ಪ್ರಥಮ-ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಬೇರೆ ಪ್ರಮಾಣದಲ್ಲಿ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಹೀಗೆ ಪದವಿ, ಐಟಿಐ, ಡಿಪ್ಲೊಮ, ಸ್ನಾತಕೋತ್ತರ ಪದವಿ, ಮೆಡಿಕಲ್ ಕೋರ್ಸ್, ಎಂಟೆಕ್/ ಎಂಇ, ಎಂಡಿ/ ಎಂಇ, ಎಂಡಿ (ವೈದ್ಯಕೀಯ), ಪಿ.ಹೆಚ್.ಡಿ ವಿದ್ಯಾರ್ಥಿಗಳಿಗೂ ಈ ಸಹಾಯಧನ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
ನೋಂದಣಿ ಕಾರ್ಡ್: ಕಾರ್ಮಿಕ ಮಂಡಳಿಯಿಂದ ನೀಡಲ್ಪಟ್ಟಿರುವ ನೋಂದಣಿ ಕಾರ್ಡ್.
ಆಧಾರ್ ಕಾರ್ಡ್: ವಿದ್ಯಾರ್ಥಿ, ತಂದೆ/ತಾಯಿ ಇಬ್ಬರಿಗೂ ಸಂಬಂಧಿಸಿದ ಆಧಾರ್ ಕಾರ್ಡ್ ಪ್ರತಿ.
ಬ್ಯಾಂಕ್ ಖಾತೆ: ವಿದ್ಯಾರ್ಥಿಯ ಬ್ಯಾಂಕ್ ಖಾತೆಯ ವಿವರಗಳು.
ವ್ಯಾಸಂಗ ಪ್ರಮಾಣ ಪತ್ರ: ಶೈಕ್ಷಣಿಕ ಪ್ರಮಾಣ ಪತ್ರಗಳು.
ಉದ್ಯೋಗ ದೃಢೀಕರಣ ಪತ್ರ: ಅರ್ಜಿದಾರರ ಉದ್ಯೋಗ ದೃಢೀಕರಣದ ದಾಖಲೆ.
ವಿದ್ಯಾರ್ಥಿಯ ಕಾಲೇಜು ಐಡಿ: ವಿದ್ಯಾರ್ಥಿಯು ಹೆಜ್ಜೆ ಇಟ್ಟಿರುವ ವಿದ್ಯಾಸಂಸ್ಥೆಯ ಗುರುತಿನ ಚೀಟಿ.
ವಿದ್ಯಾರ್ಥಿವೇತನದ ವಿವರಗಳು:
ವಿದ್ಯಾರ್ಥಿವೇತನವು ಮಕ್ಕಳ ತರಗತಿ ಮತ್ತು ಕೋರ್ಸಿನ ಆಧಾರದ ಮೇಲೆ ವ್ಯತ್ಯಾಸವಾಗಿರುತ್ತದೆ.
1 ರಿಂದ 4ನೇ ತರಗತಿ: ಗಂಡು ಮಕ್ಕಳಿಗೆ ₹3,000/- ಮತ್ತು ಹೆಣ್ಣು ಮಕ್ಕಳಿಗೆ ₹4,000/-.
5 ರಿಂದ 8ನೇ ತರಗತಿ: ₹3,000/- ರಿಂದ ₹4,000/- ವರೆಗೆ.
9 ಮತ್ತು 10ನೇ ತರಗತಿ: ₹6,000/-.
ಪ್ರಥಮ-ದ್ವಿತೀಯ ಪಿಯುಸಿ: ₹6,000/- ರಿಂದ ₹8,000/-.
ಐಟಿಐ ಮತ್ತು ಡಿಪ್ಲೊಮೊ: ವರ್ಷಕ್ಕೆ ₹7,000/-.
ಪದವಿ: ವರ್ಷಕ್ಕೆ ₹10,000/-.
ಇಂಜಿನಿಯರಿಂಗ್: ಸೇರ್ಪಡೆಗೆ ₹25,000/- ಮತ್ತು ಪ್ರತಿ ವರ್ಷ ₹20,000/-.
ವೈದ್ಯಕೀಯ ಕೋರ್ಸ್: ಸೇರ್ಪಡೆಗೆ ₹30,000/- ಮತ್ತು ಪ್ರತಿ ವರ್ಷ ₹25,000/-.
ಸ್ನಾತಕೋತ್ತರ ಪದವಿ: ಪ್ರತಿ ವರ್ಷ ₹10,000/-.
ಪಿಎಚ್.ಡಿ: ಪ್ರತಿ ವರ್ಷ ₹20,000/-.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:
ಕಲಿಕಾ ಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಸರ್ಕಾರವು ಶೀಘ್ರದಲ್ಲೇ ಪ್ರಕಟಿಸುತ್ತದೆ. ಆನ್‌ಲೈನ್ (Online) ಮೂಲಕವೇ ಅರ್ಜಿ ಸಲ್ಲಿಸಬೇಕು.
ಕೊನೆಯದಾಗಿ ಹೇಳುವುದಾದರೆ,ಕಾರ್ಮಿಕ ಮಕ್ಕಳಿಗೆ ಸರ್ಕಾರದ ಇಂತಹ ವಿದ್ಯಾರ್ಥಿವೇತನಗಳು (Scholarships) ಅವರ ಉನ್ನತ ಶಿಕ್ಷಣವನ್ನು ಪೂರೈಸಲು ದಾರಿದೀಪವಾಗಿವೆ. ಕರ್ನಾಟಕ ಸರ್ಕಾರದ ಈ ಮಹತ್ವದ ಯೋಜನೆ ಕುರಿತು ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು, ಅಧಿಕೃತ ವೆಬ್ಸೈಟ್(Official website) :karbwwb.karnataka.gov.in ಇಲ್ಲಿಗೆ ಭೇಟಿ ನೀಡಬಹುದು.ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ
Hello