ರಾಜ್ಯ ಸರ್ಕಾರದಿಂದ ಕಾರ್ಮಿಕರ ಕಾರ್ಡ್, ಶೈಕ್ಷಣಿಕ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

IMG 20241013 WA0009

ಕಟ್ಟಡ ಕಾರ್ಮಿಕರ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಶುಭ ಸುದ್ದಿ : ಲೇಬ‌ರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ (Labour Card Scholarship) ಅರ್ಜಿ ಆಹ್ವಾನ.

ಸರ್ಕಾರ (government) ವಿದ್ಯಾರ್ಥಿಗಳಿಗಾಗಿ ಹಲವು ವಿದ್ಯಾರ್ಥಿ ವೇತನ ಯೋಜನೆಗಳನ್ನು ಜಾರಿಗೆ ತಂದಿದೆ. ಹರವು ವಿದ್ಯಾರ್ಥಿ ವೇತನಗಳಿಂದ ಬರುವ ಹಣದಿಂದ ವಿದ್ಯಾರ್ಥಿಗಳು ತಮ ವಿದ್ಯಾಭ್ಯಾಸವನ್ನು ಮಾಡಲು ಅನುಕೂಲಕರವಾಗಿರುತ್ತದೆ. ಅದೇ ರೀತಿಯಾಗಿ ಇದೀಗ ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ನೀಡುವ ಲೇಬ‌ರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಆಹ್ವಾನಿಸಿದೆ. ವಿದ್ಯಾರ್ಥಿಗಳು ಓದುತ್ತಿರುವಂತಹ ವಿವಿಧ ಕೋರ್ಸ್ ಗಳಿಗೆ ಅನುಗುಣವಾಗಿ ವಿದ್ಯಾರ್ಥಿ ವೇತನದ ಮೊತ್ತವನ್ನು ನೀಡಲಾಗುತ್ತದೆ. ಈ ವಿದ್ಯಾರ್ಥಿ ವೇತನಕ್ಕೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಅಗತ್ಯವಿರುವ ದಾಖಲೆಗಳು ಯಾವುವು? ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ಸರ್ಕಾರವು ಕಟ್ಟಡ ಕಾರ್ಮಿಕರ ಮಕ್ಕಳಿಗೆ (For labourers children) ಗುಡ್ ನ್ಯೂಸ್ ನೀಡಿದೆ. 2024-25 ನೇ ಸಾಲಿನ ಅರ್ಹ ನೋಂದಾಯಿತ ಕಟ್ಟಡ & ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕಾರ್ಮಿಕ ಇಲಾಖೆಯ ವತಿಯಿಂದ ಶೈಕ್ಷಣಿಕ ಧನಸಹಾಯಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಧನಸಹಾಯವನ್ನು ಪಡೆದುಕೊಳ್ಳಲು ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶ SSP ಮೂಲಕ ಅರ್ಜಿ ಸಲ್ಲಿಸಬಹುದು.

ಲೇಬರ್ ಕಾರ್ಡ್ ವಿದ್ಯಾರ್ಥಿವೇತನ ಎಂದರೇನು?:

ಕರ್ನಾಟಕ ಸರ್ಕಾರದ ಕಾರ್ಮಿಕ ಕಲ್ಯಾಣ ಮಂಡಳಿಯು ಕರ್ನಾಟಕ ರಾಜ್ಯದ (Karnataka state) ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ಶಿಕ್ಷಣವನ್ನು ಬೆಂಬಲಿಸಲು ಪರಿಚಯಿಸಿದಂತಹ ವಿದ್ಯಾರ್ಥಿವೇತನ. ಇನ್ನು ಈ ವಿದ್ಯಾರ್ಥಿ ವೇತನದ ಅಡಿಯಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸುವವರೆಗೆ ಅವರ ಶೈಕ್ಷಣಿಕ ಮಟ್ಟವನ್ನು ಅವಲಂಬಿಸಿ ರೂ.1100/- ರಿಂದ ರೂ.11,000/- ವರೆಗಿನ ವಾರ್ಷಿಕ ವಿದ್ಯಾರ್ಥಿವೇತನವನ್ನು ನೀಡಲಾಗಿತ್ತದೆ.

ಲೇಬರ್ ಕಾರ್ಡ್ ಸ್ಕಾಲರ್‌ಶಿಪ್‌ ಗೆ (labour card scholarship) ಅರ್ಜಿಗಳನ್ನು ಆಹ್ವಾನಿಸಲು ಇರಬೇಕಾದ ಅರ್ಹತೆಗಳು :

ಕರ್ನಾಟಕ ಸರ್ಕಾರದ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ವಿದ್ಯಾರ್ಥಿಯ ಪೋಷಕರು ನೋಂದಾಯಿತ ಕಟ್ಟಡ ಕಾರ್ಮಿಕರಾಗಿರಬೇಕು..
ಪೋಷಕರ ಮಾಸಿಕ ಆದಾಯವು ತಿಂಗಳಿಗೆ ರೂ.35,000/- ಕ್ಕಿಂತ ಕಡಿಮೆ ಅಥವಾ ಸಮಾನವಾಗಿರಬೇಕು(ಕಾರ್ಮಿಕ ಕಲ್ಯಾಣ ಮಂಡಳಿಯ ಇತ್ತೀಚಿನ ಪತ್ರಿಕಾ ಟಿಪ್ಪಣಿಯಲ್ಲಿ ಸೂಚಿಸಿರುವಂತೆ).
ಬಹಳ ಮುಖ್ಯವಾಗಿ ಈ ವಿದ್ಯಾರ್ಥಿ ವೇತನಕ್ಕೆ (scholarship) ಅರ್ಜಿ ಸಲ್ಲಿಸಬೇಕಾದರೆ ವಿದ್ಯಾರ್ಥಿಗಳು ಹಿಂದಿನ ಪರೀಕ್ಷೆಯಲ್ಲಿ ಕನಿಷ್ಠ 50%(ಸಾಮಾನ್ಯ ವರ್ಗಕ್ಕೆ) ಮತ್ತು ಕನಿಷ್ಠ45% (SC/ST ವರ್ಗಕ್ಕೆ) ಫಲಿತಾಂಶದೊಂದಿಗೆ ತೇರ್ಗಡೆಯಾಗಿರಬೇಕು.

ಈ ವಿದ್ಯಾರ್ಥಿ ವೇತನದಲ್ಲಿ ಸಿಗುವ ಸ್ಕಾಲರ್ಶಿಪ್ ಮೊತ್ತ :

ತರಗತಿ ಹಾಗೂ ಕೋರ್ಸ್ ಗಳ ಆಧಾರದ ಮೇಲೆ ಮೊತ್ತವನ್ನು ನಿಗದಿ ಮಾಡಲಾಗಿದೆ. ಈ ನಿಟ್ಟಿನಲ್ಲಿ 1 ರಿಂದ 4 ನೇ ತರಗತಿಯಲ್ಲಿ ಓದುತ್ತಿರುವಂತಹ ಮಕ್ಕಳಿಗೆ 1,100 ರೂ, 5 ರಿಂದ 8 ನೇ ತರಗತಿ ಮಕ್ಕಳಿಗೆ 1,250 ರೂ, 9 ರಿಂದ 10 ನೇ ತರಗತಿ ಮಕ್ಕಳಿಗೆ 3,000, 1ನೇ ಮತ್ತು 2ನೇ ಪಿಯುಸಿ ಮಕ್ಕಳಿಗೆ 4600 ರೂ, ಪದವಿ ಓದುತ್ತಿರುವವರಿಗೆ 6,000ರೂ, ಬಿಇ /ಬಿಟೆಕ್ ಓದುತ್ತಿರುವವರಿಗೆ 10,000, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ 10,000 ರೂ, ಪಾಲಿಟೆಕ್ನಿಕ್, ಡಿಪ್ಲೋಮಾ, ಐ.ಟಿ.ಐ ವಿದ್ಯಾರ್ಥಿಗಳಿಗೆ 4,600 ರೂ, BSC ನರ್ಸಿಂಗ್, ಪ್ಯಾರಾಮೆಡಿಕಲ್ ಓದುತ್ತಿರುವವರಿಗೆ 10,000 ರೂ, ಬಿ.ಎಡ್ ನವರಿಗೆ 6,000ರೂ, ವೈದ್ಯಕೀಯ ವಿದ್ಯಾರ್ಥಿಗಳಿಗೆ 11,000 ರೂ, LLB, LLM ವಿದ್ಯಾರ್ಥಿಗಳಿಗೆ 10,000 ರೂ, ಡಿ.ಎಡ್ ವಿದ್ಯಾರ್ಥಿಗಳಿಗೆ 4,600 ರೂ, ಪಿ . ಎಚ್.ಡಿ, ಎಂ. ಫಿಲ್ ನವರಿಗೆ 11,000 ರೂ. ಹೀಗೆ ವಿದ್ಯಾರ್ಥಿಗಳು ಓದುತ್ತಿರುವಂತಹ ಕೋರ್ಸ್ ಅಥವಾ ತರಗತಿಯ ಆಧಾರದ ಮೇಲೆ ಮೊತ್ತವನ್ನು ನಿಗದಿ ಮಾಡಲಾಗಿದೆ.

ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು (Documents) :

ಬಹಳ ಮುಖ್ಯವಾಗಿ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಪೋಷಕರ ಉದ್ಯೋಗ ಪ್ರಮಾಣಪತ್ರ ಅಥವಾ ಹಿಂದಿನ ತಿಂಗಳ ಸಂಬಳ ತೆಗೆದುಕೊಂಡ ಚೀಟಿ (Salary Slip)ಇರಬೇಕು.
ವಿದ್ಯಾರ್ಥಿಯ ವೈಯಕ್ತಿಕ ವಿವರಗಳು ಮತ್ತೆ ಶೈಕ್ಷಣಿಕ ವಿವರಗಳು.
ವಿದ್ಯಾರ್ಥಿ ಜಾತಿ ಮತ್ತು ಆದಾಯ ಪ್ರಮಾಣಪತ್ರ.
ವಿದ್ಯಾರ್ಥಿ ಆಧಾರ್ ಕಾರ್ಡ್.
ವಿದ್ಯಾರ್ಥಿ ಬ್ಯಾಂಕ್‌ ಪಾಸ್ ಪುಸ್ತಕ.
ಹಿಂದಿನ ವರ್ಷದ ಮಾರ್ಕ್‌ ಕಾರ್ಡ್‌ಗಳು.
ಪೋಷಕರ ಆಧಾರ್ ಕಾರ್ಡ್.

ಲೇಬರ್ ಕಾರ್ಡ್ ಸ್ಕಾಲರ್‌ಶಿಪ್ 2024-25 ಗೆ ಅರ್ಜಿ ಸಲ್ಲಿಸುವ ವಿಧಾನ (How to apply application) ?

ಹಂತ 1: ಮೊದಲಿಗೆ ಲೇಬರ್ ಕಾರ್ಡ್ ಸ್ಕಾಲರ್‌ಶಿಪ್ 2024-25 ಗೆ ಅರ್ಜಿ ಸಲ್ಲಿಸಲು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ (klwbapps.karnataka.gov.in) ಭೇಟಿ ನೀಡಿ.
ಹಂತ 2: ನಂತರ ಅಲ್ಲಿ ನೀಡಿರುವ ನೋಂದಣಿ ಎಂಬ ಮೆನು ಆಯ್ಕೆಯನ್ನು ಕ್ಲಿಕ್ ಮಾಡಿ, KLWB ಪೋರ್ಟಲ್‌ನಲ್ಲಿ ನೋಂದಾಯಿಸಿ. ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಪರಿಶೀಲನಾ ವಿಧಾನವಾಗಿ ‘ಮೊಬೈಲ್ ಪರಿಶೀಲನೆ’ ಆಯ್ಕೆಮಾಡಿ, ಹೊಸ ಪಾಸ್‌ವರ್ಡ್ ಆ ರಚಿಸಿ ಮತ್ತು ‘ರಿಜಿಸ್ಟರ್’ ಬಟನ್ ಕ್ಲಿಕ್ ಮಾಡಿ.
ಹಂತ 3 : ನಿಮ್ಮನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ OTP ಅನ್ನು ನಮೂದಿಸಿ ಮತ್ತು SUBMIT ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 4: ನಂತರ ನೋಂದಣಿ ಪ್ರಕ್ರಿಯೆಯಲ್ಲಿ ನೀವು ಒದಗಿಸಿದ ನಿಮ್ಮನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಪಾಸ್‌ವರ್ಡ್ ಬಳಸಿಕೊಂಡು KLWB ಪೋರ್ಟಲ್‌ಗೆ ಲಾಗ್ ಇನ್ ಮಾಡಿ. ನಿಮ್ಮ ಪರದೆಯ ಮೇಲೆ ಗೋಚರಿಸುವಂತೆ ಕ್ಯಾಪ್ಟಾವನ್ನು ನಮೂದಿಸಿ ಮತ್ತು LOGIN’ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 5 : ನೀವು ಮೊದಲ ಬಾರಿಗೆ KLWB
ಪೋರ್ಟಲ್‌ಗೆ ಲಾಗ್‌ ಇನ್ ಆಗುತ್ತಿದ್ದರೆ, ಭದ್ರತಾ ಪ್ರಶ್ನೆಯನ್ನು ಮತ್ತು ನಿಮ್ಮ ಸ್ವಂತ ಆಯ್ಕೆಯ ಉತ್ತರವನ್ನು ರಚಿಸಲು ನಿಮ್ಮನ್ನು ವಿನಂತಿಸಲಾಗುತ್ತದೆ.
ನಿಮ್ಮ ಪ್ರಶ್ನೆ ಮತ್ತು ಉತ್ತರವನ್ನು ಟೈಪ್ ಮಾಡಿ ಮತ್ತು ‘ಸಲ್ಲಿಸು’ ಬಟನ್ ಕ್ಲಿಕ್ ಮಾಡಿ.
ಹಂತ 6 : KLWB ಪೋರ್ಟಲ್‌ಗೆ ಲಾಗ್ ಇನ್ ಮಾಡಿದ ನಂತರ, ಪರದೆಯ ಎಡಭಾಗದಲ್ಲಿ ‘APPLY SCHOLARSHIP’ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್‌ನಲ್ಲಿ ನೀವು ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದರೆ, ಈ ಮೆನು ಆಯ್ಕೆಗಳನ್ನು ವೀಕ್ಷಿಸಲು ಹ್ಯಾಂಬರ್ಗರ್ ಮೆನು (ಮೂರು ಅಡ್ಡ ಸಾಲುಗಳು) ಕ್ಲಿಕ್ ಮಾಡಿ.
ಹಂತ 7 : 2024-25 ಶೈಕ್ಷಣಿಕ ವರ್ಷಕ್ಕೆ ಲೇಬ‌ರ್ ಕಾರ್ಡ್‌ ವಿದ್ಯಾರ್ಥಿವೇತನಕ್ಕಾಗಿ ಆನ್‌ಲೈನ್‌ ಅರ್ಜಿ ನಮೂನೆಯನ್ನು ತೆರೆಯಲಾಗುತ್ತದೆ.
ಮುಖ್ಯವಾಗಿ ಈ ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ನಮೂದಿಸಬೇಕಾಗುತ್ತದೆ, ಅವುಗಳೆಂದರೆ:
ಭಾಗ 1: ವಿದ್ಯಾರ್ಥಿಗಳ ಮೂಲ ವಿವರಗಳು
ಭಾಗ 2: ನಿಮ್ಮ ಕಾಲೇಜು ವಿವರಗಳು
ಭಾಗ 3: ಜಾತಿ ವಿವರಗಳು
ಭಾಗ 4: ಹಿಂದಿನ ವರ್ಷದ ಅಂಕಗಳ ವಿವರಗಳು
ಭಾಗ 5: ಆಧಾರ್ ಕಾರ್ಡ್ ವಿವರಗಳು
ಭಾಗ 6: ಬ್ಯಾಂಕ್ ಖಾತೆ ವಿವರಗಳು
ಭಾಗ 7: ಪೋಷಕರ ಉದ್ಯಮದ ವಿವರಗಳು
ಈ ಮೇಲೆ ತಿಳಿಸಿದ ಎಲ್ಲಾ ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ, ಪ್ರತಿ ಫೈಲ್ ಗಾತ್ರವು 512KB ಗಿಂತ ಕಡಿಮೆಯಿದೆ ಎಂದು ಖಚಿತಪಡಿಸಿಕೊಳ್ಳಬೇಕು.
ಹಂತ 8 : ಡಿಕ್ಲರೇಶನ್ ಬಾಕ್ಸ್ ಅನ್ನು ಪರಿಶೀಲಿಸಿ ಮತ್ತು ಟಿಕ್ ಮಾಡಿ ಮತ್ತು ‘APPLY’ ಬಟನ್ ಕ್ಲಿಕ್ ಮಾಡಿ.

SSP ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ :

ಅರ್ಹ ಕಾರ್ಮಿಕರ ಮಕ್ಕಳು ಶೈಕ್ಷಣಿಕ ಧನಸಹಾಯವನ್ನು SSP ವೆಬ್‌ಸೈಟ್ ಮೂಲಕ ಪಡೆಯಲು kbocwwb.Karnataka.gov.in & ನಲ್ಲಿ ತಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ, ಆಧಾ‌ರ್ ಲಿಂಕ್(ಸೀಡ್) ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
SSP ವೆಬ್‌ಸೈಟ್ ಮೂಲಕ ಶೈಕ್ಷಣಿಕ ಧನಸಹಾಯ ಪಡೆಯಲು ಆಧಾ‌ರ್ ಸಂಖ್ಯೆಯನ್ನು ಲಿಂಕ್(ಸೀಡ್) ಮಾಡದೇ ಇರುವ ಎಲ್ಲಾ ಕಾರ್ಮಿಕರು ಕೂಡಲೇ ತಮ್ಮ ಆಧಾ‌ರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಯೊಂದಿಗೆ ನೋಂದಣಿ ಮಾಡಿ ಎನ್.ಪಿ. ಸಿ. ಐ ಮ್ಯಾಪಿಂಗ್ ಮಾಡಿಸಿಕೊಳ್ಳಬೇಕು. 2024-25 ನೇ ಸಾಲಿಗೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರದ ವಿವಿಧ ಇಲಾಖೆಗಳಲ್ಲಿ SSP ಮೂಲಕ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಪುನಃ ಅರ್ಜಿ ಸಲ್ಲಿಸುವ ಅವಶ್ಯಕತೆಯಿರುವುದಿಲ್ಲ.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!