Labour Card Scholarship – ಕಾರ್ಮಿಕ ಇಲಾಖೆಯಿಂದ ಶೈಕ್ಷಣಿಕ ಧನಸಹಾಯಕ್ಕೆ ಅರ್ಜಿ ಆಹ್ವಾನ! ಇಲ್ಲಿದೆ ಲಿಂಕ್

labour card scholarship

ವಿದ್ಯಾರ್ಥಿಗಳೇ ನಿಮಗೊಂದು ಗುಡ್ ನ್ಯೂಸ್! ಕಾರ್ಮಿಕ ಇಲಾಖೆಯಿಂದ ಶೈಕ್ಷಣಿಕ ಸಹಾಯ ಧನ(Educational Assistance Fund)ಕ್ಕಾಗಿ ಅರ್ಜಿ ಅಹ್ವಾನ.

ಇದೀಗ ಕಾರ್ಮಿಕ ಇಲಾಖೆ (Department of Labor) ವತಿಯಿಂದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ (good news) ತಿಳಿದು ಬಂದಿದೆ. ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಧನ ಸಹಾಯ (Educational Financial Assistance) ಪಡೆಯಲು ಅರ್ಜಿಯನ್ನು (Application) ಆಹ್ವಾನಿಸಲಾಗಿದೆ.

ಕರ್ನಾಟಕ ರಾಜ್ಯದ (Karnataka state) ಕಾರ್ಮಿಕ ಇಲಾಖೆ ವತಿಯಿಂದ ಕಾರ್ಮಿಕ ಕುಟುಂಬಗಳ ವಿದ್ಯಾರ್ಥಿಗಳಿಗೆ ನೀಡುವ ಒಂದು ಅಮೂಲ್ಯವಾದ ಯೋಜನೆ ಇದಾಗಿದೆ. 2023-24ರ ಶೈಕ್ಷಣಿಕ ಧನ ಸಹಾಯ ಯೋಜನೆಯಡಿ ರಾಜ್ಯದ ಕಟ್ಟಡ ಕಾರ್ಮಿಕರ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಸಹಾಯವಾಗುತ್ತದೆ. ಈ ವರ್ಷವೂ ಈ ಶೈಕ್ಷಣಿಕ ಧನ ಸಹಾಯ ಪಡೆಯಲು ಆನ್‌ಲೈನ್‌ (Online) ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅದಕ್ಕಾಗಿ ಬೇಕಾಗಿರುವ ಅಗತ್ಯ ದಾಖಲೆಗಳು, ಅರ್ಜಿ ಸಲ್ಲಿಸುವ ವಿವರ ಮತ್ತು ಅರ್ಜಿ ಸಲ್ಲಿಸುವ ದಿನಾಂಕದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಲೇಬರ್ ಕಾರ್ಡ್ ಸ್ಕಾಲರ್ಶಿಪ್ (Labour card schorship 2023-2024) :

ಈ ಸ್ಕೋಲರ್‌ಶಿಪ್ ಯೋಜನೆಯು ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಉದ್ದೇಶವನ್ನು ಹೊಂದಿದೆ. ಈ ಯೋಜನೆಯು ಕಾರ್ಮಿಕ ವರ್ಗದ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಪಡೆಯಲು ಸಹಾಯ ಮಾಡುತ್ತದೆ. ಇದು ಅವರ ಭವಿಷ್ಯವನ್ನು ರೂಪಿಸಲು ಮತ್ತು ಉತ್ತಮ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ. ಈ ಸ್ಕೋಲರ್‌ಶಿಪ್ ಪಡೆಯಲು, ವಿದ್ಯಾರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.

ಈ ಶೈಕ್ಷಣಿಕ ಧನ ಸಹಾಯ ಪಡೆಯಲು ಇರಬೇಕಾದ ಅರ್ಹತೆಗಳು (qualifications) :

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕಾರ್ಡ್ ಹೊಂದಿರುವವರು ಕರ್ನಾಟಕದ ನಿವಾಸಿಯಾಗಿರಬೇಕು.
ಕಾರ್ಮಿಕ ಕಾರ್ಡ್ ಹೊಂದಿರುವ ಕಾರ್ಮಿಕರ ಮಕ್ಕಳು  ಮಾತ್ರ ಅರ್ಜಿ ಸಲ್ಲಿಸಬೇಕು.
10ನೇ ತರಗತಿ ಅಥವಾ ಪದವಿ, ಸ್ನಾತಕೋತ್ತರಪದವಿ ಕೋರ್ಸ್‌ಗಳಲ್ಲಿ ಓದುತ್ತಿರಬೇಕು.
ಕುಟುಂಬದ ವಾರ್ಷಿಕ ಆದಾಯ 8 ಲಕ್ಷೆ ರೂಪಾಯಿಗಿಂತ ಕಡಿಮೆ ಇರಬೇಕು.
ಇನ್ನು ಈ ಅರ್ಜಿಯ ಲಾಭ ಆ ಮನೆಯ ಒಬ್ಬ ಮಗುವಿಗೆ ಮಾತ್ರ ದೊರೆಯುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು (documents):

ಮೊದಲನೆಯದಾಗಿ ಕಾರ್ಮಿಕ ಇಲಾಖೆಯಿಂದ ಪಡೆದ ನೋಂದಣಿ ಕಾರ್ಡ್ ಅರ್ಜಿದಾರರ ಬಳಿ ಇರಬೇಕು.
ಉದ್ಯೋಗ ದೃಢೀಕರಣ ಪತ್ರ ಹಾಗೂ ಸ್ವಯಂ ದೃಢೀಕರಣ ಪತ್ರವನ್ನು ಹೊಂದಿರಬೇಕು.
ವಿದ್ಯಾರ್ಥಿಯ ಪ್ರಸ್ತುತ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಪುರಾವೆಗಾಗಿ ವ್ಯಾಸಂಗ ಪ್ರಮಾಣ ಪತ್ರ ಹೊಂದಿರಬೇಕು.
ವಿದ್ಯಾರ್ಥಿಯ ಆಧಾ‌ರ್ ಕಾರ್ಡ್.
ಸ್ಪೂಡೆಂಟ್ ಐಡಿ.
ವಿದ್ಯಾರ್ಥಿಯ ಪೋಷಕರ ಆಧಾರ್ ಕಾರ್ಡ್.
ನೋಂದಣಿದಾರರ ಬ್ಯಾಂಕ್ ಖಾತೆಯ ವಿವರ.

ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ(Important Dates to Apply)  :

ಕಾರ್ಮಿಕ ಇಲಾಖೆಯ ಕಲಿಕಾ ಭಾಗ್ಯ ಯೋಜನೆಯ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದೆ ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವು 31 ಮೇ 2024 ಆಗಿರುತ್ತದೆ.

ಅರ್ಜಿಯನ್ನು ಸಲ್ಲಿಸುವ ವಿಧಾನ (steps for applying) :

ಹಂತ 1: ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯ ಬಯಸುವ ವಿದ್ಯಾರ್ಥಿಗಳು ಆನ್‌ಲೈನ್ ಮುಖಾಂತರ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಜಾಲತಾಣದಲ್ಲಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಅರ್ಜಿಯನ್ನು ಸಲ್ಲಿಸಲು ಈ ಕೆಳಗಿನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ : https://klwbapps.karnataka.gov.in/

ಹಂತ 2: ನಂತರ ‘ವಿದ್ಯಾರ್ಥಿ ಲಾಗಿನ್ ಮಾಡಿ’ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 3: ನಂತರ ನಿಮ್ಮ ಮೊಬೈಲ್ ನಂಬ‌ರ್ ಹಾಗೂ ಪಾಸ್ವರ್ಡ್ ಅನ್ನು ಹಾಕಿಕೊಂಡು ಲಾಗಿನ್ ಅನ್ನು ಮಾಡಬೇಕು.( ನೀವೇನಾದರೂ ಮೊದಲ ಬಾರಿಗೆ ಅರ್ಜಿಯನ್ನು ಸಲ್ಲಿಸುತ್ತಿದ್ದರೆ ವಿದ್ಯಾರ್ಥಿಯು ನೋಂದಣಿಯನ್ನು ಮಾಡಿಕೊಳ್ಳಬೇಕು)

ಹಂತ 4: ನಂತರ ಅಲ್ಲಿ ನೀಡಲಾದ ಸೂಕ್ತವಾದ ವಿಷಯಗಳನ್ನು ಓದಿಕೊಂಡು ನಿಮ್ಮ ವೈಯಕ್ತಿಕ ವಿಷಯಗಳನ್ನು ಅರ್ಜಿಯಲ್ಲಿ ಭರ್ತಿ ಮಾಡಿ.

ಹಂತ 5: ನಂತರ ಅಲ್ಲಿ ಕೇಳಲಾದ ದಾಖಲೆಗಳ ಅಪ್ಲೋಡ್ ಮಾಡಬೇಕು.

ಹಂತ 6: ನಂತರ ಸಲ್ಲಿಸು ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.

ಗಮನಿಸಿ (Notice) :

ಈ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಸಹಾಯ ಬೇಕಾದಲ್ಲಿ ಅರ್ಹ ವಿದ್ಯಾರ್ಥಿಗಳು ನಿಮ್ಮ ತಾಲೂಕಿನ ಕಾರ್ಮಿಕ 2 (Labour Department) ಹೆಚ್ಚಿನ ಮಾಹಿತಿ ಮತ್ತು ಸಹಾಯವನ್ನು ಪಡೆದುಕೊಳ್ಳಬಹುದು. ಅಥವಾ ಇದರ ಬಗ್ಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕಾರ್ಮಿಕ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಿ. ಅವರು ನಿಮಗೆ ಸಹಾಯ ಮಾಡುತ್ತಾರೆ. ಇನ್ನು ಅರ್ಜಿ ಸಲ್ಲಿಲು ಕೊನೆಯ ದಿನಾಂಕದವರೆಗೂ ಕಾಯಬೇಡಿ. ಈ ಶೈಕ್ಷಣಿಕ ಸಹಾಯ ಧನದ ಪ್ರಯೋಜನವನ್ನು ಅರ್ಹ ವಿದ್ಯಾರ್ಥಿಗಳೆಲ್ಲರೂ ಪಡೆದುಕೊಂಡು ನಿಮ್ಮ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಿ.

ಈ ಮಾಹಿತಿಗಳನ್ನು ಓದಿ


WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!